Inspirational Story: ರಸ್ತೆಗಳೇ ಇಲ್ಲದ ಗ್ರಾಮದಿಂದ ಬಂದು ಪೈಲಟ್ ಸ್ಥಾನಕ್ಕೇರಿದ ಬುಡಕಟ್ಟು ಸಮುದಾಯದ ಮಹಿಳೆ!

ಈಕೆಯ ಕನಸು ಆಕಾಶದೆತ್ತರಕ್ಕಿತ್ತು. ಹಾಗೆಂದು ಆಕೆ ಕೇವಲ ಕನಸು ಕಾಣುತ್ತಾ ಕುಳಿತುಕೊಳ್ಳಲಿಲ್ಲ, ಬದಲಿಗೆ ತಾನು ಸತತ ಪ್ರಯತ್ನ ಪಟ್ಟು ಕನಸು ನನಸಾಗಿಸಿಕೊಂಡಳು. ಪುರುಷ ಪ್ರಧಾನವಾಗಿದ್ದ ವಿಮಾನ ಪೈಲಟ್ ಕ್ಷೇತ್ರಕ್ಕೆ ತಾನೂ ಪಾದಾರ್ಪಣೆ ಮಾಡಬೇಕೆಂದುಕೊಂಡಿದ್ದ ಒಡಿಶಾದ ಬುಡಕಟ್ಟು ಸಮುದಾಯದ ಯುವತಿ ತಾನು ಕಡೆಗೂ ಅದನ್ನು ಸಾಧಿಸಿ ತೋರಿಸಿದ್ದಾರೆ.
ಅನುಪ್ರಿಯಾ ಲಕ್ರಾ
ಅನುಪ್ರಿಯಾ ಲಕ್ರಾ

ಮಲ್ಕಂಗಿರಿ: ಈಕೆಯ ಕನಸು ಆಕಾಶದೆತ್ತರಕ್ಕಿತ್ತು. ಹಾಗೆಂದು ಆಕೆ ಕೇವಲ ಕನಸು ಕಾಣುತ್ತಾ ಕುಳಿತುಕೊಳ್ಳಲಿಲ್ಲ, ಬದಲಿಗೆ ತಾನು ಸತತ ಪ್ರಯತ್ನ ಪಟ್ಟು ಕನಸು ನನಸಾಗಿಸಿಕೊಂಡಳು. ಪುರುಷ ಪ್ರಧಾನವಾಗಿದ್ದ ವಿಮಾನ ಪೈಲಟ್ ಕ್ಷೇತ್ರಕ್ಕೆ ತಾನೂ ಪಾದಾರ್ಪಣೆ ಮಾಡಬೇಕೆಂದುಕೊಂಡಿದ್ದ ಒಡಿಶಾದ ಬುಡಕಟ್ಟು ಸಮುದಾಯದ ಯುವತಿ ತಾನು ಕಡೆಗೂ ಅದನ್ನು ಸಾಧಿಸಿ ತೋರಿಸಿದ್ದಾರೆ.

ಅನುಪ್ರಿಯಾ ಲಕ್ರಾ- ಇನ್ನೂ ಇಪ್ಪತ್ತಮೂರರ ಹರೆಯದ ಯುವತಿ ಕೆಲ ವರ್ಷಗಳ ಹಿಂದೆ ಸರಿಯಾದ ರಸ್ತೆ ಸಂಪರ್ಕವೂ ಇಲ್ಲದ ನಕ್ಸಲ್ ಬಾಂಧಿತ ಪ್ರದೇಶವಾಗಿದ್ದ ಮಲ್ಕಂಗಿರಿ ಜಿಲ್ಲೆಯವರಾಗಿರುವ ಅನುಪ್ರಿಯಾ ಅವರೀಗ ವಾಣಿಜ್ಯ ವಿಮಾನವೊಂದರ ಪೈಲಟ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಈ ಸಾಧನೆ ಮಾಡಿರುವ ಮೊದಲ ಬುಡಕಟ್ಟು ಮಹಿಳೆಯೆಂದು ಗುರುತಿಸಿಕೊಂಡಿದ್ದಾರೆ.

ಒಡಿಶಾ ಪೊಲೀಸ್ ಮತ್ತು ಜೆಮ್ನಾಶಿಯನ್ ಲಕ್ರಾ ಹಾಗೂ ಕಾನ್‌ಸ್ಟೆಬಲ್ ಆಗಿದ್ದ ಮಾರಿನಿಯಸ್ ಲಕ್ರಾ ಅವರ ಪುತ್ರಿ ಅನುಪ್ರಿಯಾ ಡಿಇಪಿಟಿಐ ಕಾನ್ವೆಂಟ್ ಶಾಲೆಯಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸಿದ್ದರು.ಅಲ್ಲದೆ ನೆರೆಯ ಜಿಲ್ಲೆ ಕೋರಾಪಟ್ ನ ಸೆಮಿಲಿಗುಡಾ ಮೂಲದ ಜೀವನ್ ಜ್ಯೋತಿ ಶಾಲೆಯಲ್ಲಿ ಎಚ್‌ಎಸ್‌ಸಿ ಪರೀಕ್ಷೆ ಬರೆದು ಉತೀರ್ಣರಾದರು. ಪಿಯು ವಿದ್ಯಾಭ್ಯಾಸದಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿದ್ದ ಇವರು ಸುಂದರ್ ಭಾಗ್ ನ ವಿಕಾಶ್ ಇನ್‌ಸ್ಟಿಟ್ಯೂಟ್‌ನಲ್ಲಿ ಪಿಯು ವ್ಯಾಸಂಗ ಮಾಡಿದ್ದರು.ಇದಾದ ನಂತರ ತಮ್ಮ ಬಾಲ್ಯದ ಕನಸಿನಂತೆ ಪೈಲಟ್ ಆಗನ್ಬೇಕೆಂದು ಹೊರಟ ಅನುಪ್ರಿಯಾ ಅದಕ್ಕಾಗಿ ಪ್ರವೇಶ ಪರೀಕ್ಷೆಯನ್ನು ಎದುರಿಸಿ  2012 ರಲ್ಲಿ ಭುವನೇಶ್ವರದಲ್ಲಿರುವ ಸರ್ಕಾರಿ ವಾಯುಯಾನ ತರಬೇತಿ ಸಂಸ್ಥೆಯಲ್ಲಿ ಪ್ರವೇಶ ಗಿಟ್ಟಿಸಿಕೊಂಡರು.

ಜಿಎಟಿಐಯಲ್ಲಿ ಪೈಲಟ್ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಅವರು ಆರು ವರ್ಷಗಳ ಕಾಲ ಬೆಂಗಳೂರು, ಮುಂಬೈ ಮತ್ತು ದೆಹಲಿಯ ವಿವಿಧ ತರಬೇತಿ ಸಂಸ್ಥೆಗಳಲ್ಲಿ ವಾಣಿಜ್ಯ ಪೈಲಟ್ ತರಬೇತಿ ಕೋರ್ಸ್‌ಗೆ ಸೇರಿ ತರಬೇತಿ ಹೊಂದಿದರು.ಇದಾಗಿ ಸುಮಾರು 200 ವೈಮಾನಿಕ ಗಂಟೆಗಳ ತರಬೇತಿ ಬಳಿಕ ವರು ಅಂತಿಮವಾಗಿ ಕಳೆದ ತಿಂಗಳು ವಾಣಿಜ್ಯ ಪೈಲಟ್‌ನ ಪ್ರಮಾಣಪತ್ರವನ್ನು ಪಡೆದರು. ಶೀಘ್ರದಲ್ಲೇ ಇಂಡಿಗೊ ವಿಮಾನಯಾನ ಸಂಸ್ಥೆಯಲ್ಲಿ  ಸಹ ಪೈಲಟ್ ಆಗಿ ಸೇರಲು ಆಕೆ ಸಿದ್ದವಾಗಿದ್ದಾರೆ. ಇನ್ನು ಅನುಪ್ರಿಯಾ ತನ್ನ ಪೈಲಟ್ ತರಬೇತಿಗಾಗಿ ಕೇಂದ್ರ ಸರ್ಕಾರದಿಂದ ನೆರವು ಪಡೆಇದ್ದರು.

"ನನ್ನ ಮಗಳ ಕನಸು ನನಸಾಗಿದೆ. ನನ್ನ ಜೀವನದಲ್ಲಿ ನಾನು ವಿಮಾನವನ್ನು ನೋಡಿಲ್ಲ ಆದರೆ ಅನುಪ್ರಿಯಾ ತನ್ನ ಗುರಿಯತ್ತ ರೆಕ್ಕೆ ಕಟ್ಟಿಕೊಂಡು ಹಾರಿದ್ದಾಳೆ.ಇದು ನನಗೆ ಸಂತೋಷ ಮತ್ತು ಹೆಮ್ಮ" ಜಿಮ್ನಾಶಿಯನ್ ಆಗಿರುವ ತಾಯಿ ಲಕ್ರಾ ಹೇಳಿದ್ದಾರೆ.

 “ನನ್ನ ಮಗಳು ನನ್ನ ಹೆಮ್ಮೆಯಲ್ಲ ಆದರೆ ಇಡೀ ಜಿಲ್ಲೆಯ ಹೆಮ್ಮೆ. ನಾನು ಸರಳ ಕಾನ್‌ಸ್ಟೆಬಲ್ ಆಗಿದ್ದರೂ, ನನ್ನ ಮಗಳು ತನ್ನ ಆಯ್ಕೆಯ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುವುದನ್ನು ಕಂಡು ನನಗೆ ಖುಷಿಯಾಗಿದೆ. ಇದಕ್ಕೆ ನಾನು ಅಗತ್ಯ ಪ್ರೋತ್ಸಾಅ ನೀಡಿದ್ದೆ. ಇನ್ನು ಮಗಳ ಈ ಸಾಧನೆಗಾಗಿ ಆಕೆಯನ್ನು ಹಿರಿದುಂಬಿಸಿದ ನನ್ನ ಪತ್ನಿಗೆ ಇದರ ಕ್ರೆಡಿಟ್ ಸಲ್ಲಬೇಕು" ಮಾರಿನಿಯಸ್ ಲಕ್ರಾ ಹೇಳಿದ್ದಾರೆ.

ಇದೀಗ ಅಂತರರಾಷ್ಟ್ರೀಯ ವಿಮಾನದ ಪ್ರಾಯೋಗಿಕ ತರಬೇತಿಗಾಗಿ ಅನುಪ್ರಿಯಾ ಸ್ಪೇನ್‌ಗೆ ಹೋಗಲು ಯೋಜಿಸಿದ್ದು ಇದಕ್ಕಾಗಿ  ಸುಮಾರು 20 ಲಕ್ಷ ರೂ. ಹಣ ಅಗತ್ಯವಿದೆ.ಆಕೆಯ ಕುಟುಂಬವು ಆಕೆಗಾಗಿ ಎಲ್ಲಾ ಉಳಿತಾಯಗಳನ್ನು ಉಪಯೋಗಿಸಿರುವ ಕಾರಣ , ರಾಜ್ಯದಲ್ಲಿ ಮಹಿಳೆಯರ ಸಬಲೀಕರಣವನ್ನು ಖಾತ್ರಿಪಡಿಸಿಕೊಳ್ಳುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಸಹಾಯ ಹಸ್ತ ನೀಡಬೇಕೆಂದು ಅನುಪ್ರಿಯಾ ಪೋಷಕರು ಮನವಿ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com