ವಿಶೇಷInspirational Story: ರಸ್ತೆಗಳೇ ಇಲ್ಲದ ಗ್ರಾಮದಿಂದ ಬಂದು ಪೈಲಟ್ ಸ್ಥಾನಕ್ಕೇರಿದ ಬುಡಕಟ್ಟು ಸಮುದಾಯದ ಮಹಿಳೆ!
ಈಕೆಯ ಕನಸು ಆಕಾಶದೆತ್ತರಕ್ಕಿತ್ತು. ಹಾಗೆಂದು ಆಕೆ ಕೇವಲ ಕನಸು ಕಾಣುತ್ತಾ ಕುಳಿತುಕೊಳ್ಳಲಿಲ್ಲ, ಬದಲಿಗೆ ತಾನು ಸತತ ಪ್ರಯತ್ನ ಪಟ್ಟು ಕನಸು ನನಸಾಗಿಸಿಕೊಂಡಳು. ಪುರುಷ ಪ್ರಧಾನವಾಗಿದ್ದ ವಿಮಾನ ಪೈಲಟ್ ಕ್ಷೇತ್ರಕ್ಕೆ ತಾನೂ ಪಾದಾರ್ಪಣೆ ಮಾಡಬೇಕೆಂದುಕೊಂಡಿದ್ದ ಒಡಿಶಾದ ಬುಡಕಟ್ಟು ಸಮುದಾಯದ ಯುವತಿ ತಾನು ಕಡೆಗೂ ಅದನ್ನು ಸಾಧಿಸಿ ತೋರಿಸಿದ್ದಾರೆ.