ರಾಜ್ಯ

ಸಿದ್ದರಾಮಯ್ಯ ಅಹಿಂದ ಸಭೆ ಮಾಡಿದರೆ ತಪ್ಪೇನು? ಒಂದೇ ಪಕ್ಷದವರು ಚೆನ್ನಾಗಿಯೇ ಇದ್ದಾರೆ, ನೀವು ಯಾಕೆ ತಲೆಕೆಡಿಸಿಕೊಳ್ಳುತ್ತೀರಿ; ಡಿಕೆ ಶಿವಕುಮಾರ್

ಸಿದ್ದರಾಮಯ್ಯ ಅಹಿಂದ ಸಭೆ ಮಾಡಿದರೆ ತಪ್ಪೇನು? ಒಂದೇ ಪಕ್ಷದವರು ಚೆನ್ನಾಗಿಯೇ ಇದ್ದಾರೆ, ನೀವು ಯಾಕೆ ತಲೆಕೆಡಿಸಿಕೊಳ್ಳುತ್ತೀರಿ; ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ — Express photo: Nagaraja Gadekal
Published On :

ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟ, ಸ್ಥಳೀಯರ ಬೇಡಿಕೆ ಹಾಗೂ ಗವಿಸಿದ್ದೇಶ್ವರ ಶ್ರೀಗಳ ಒತ್ತಾಯದ ಹಿನ್ನೆಲೆಯಲ್ಲಿ ಕೆರೆ ನಿರ್ಮಾಣದ ಸಾಧ್ಯತೆ ಕುರಿತು ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಇದರ ಬಗ್ಗೆ ವರದಿ ಬಂದ ಬಳಿಕ ಚರ್ಚಿಸಲಾಗುವುದು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಕೊಪ್ಪಳದಲ್ಲಿ ಮಾತನಾಡಿದ ಅವರು, ಬಲ್ಡೋಟಾ ಕಾರ್ಖಾನೆ ಸ್ಥಗಿತಗೊಳಿಸಲು ಹೋರಾಟ ಹಾಗೂ ಶ್ರೀಗಳೂ ಈ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಕೇಳಿದಾಗ, "ನನಗೂ ಈ ವಿಚಾರ ಗೊತ್ತಿದೆ. ಸಿದ್ದರಾಮಯ್ಯ ಅವರು ಇದ್ದಾಗಲೂ ಈ ಸಮಸ್ಯೆ ಇತ್ತು. ಯಾವುದಾದರೂ ಒಂದು ಕಡೆ ಕೆರೆ ನಿರ್ಮಿಸಬೇಕು ಎಂಬ ಬೇಡಿಕೆಯಿದೆ. ವರದಿ ಬಂದ ನಂತರ ಮಾತನಾಡುತ್ತೇನೆ" ಎಂದರು.

ಸಂವಿಧಾನ ವಿಚಾರವಾಗಿ ನಿಮ್ಮ ಹೇಳಿಕೆಗೆ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, "ನಾನು ಹೇಳಿರುವ ಸಂವಿಧಾನ ಬದಲಾವಣೆ ಎಂದರೆ ಬಿಜೆಪಿಯವರು ಹೇಳುವ ರೀತಿಯ ಬದಲಾವಣೆಯಲ್ಲ. ಜನರ ಭಾವನೆ, ಪರಿಸ್ಥಿತಿ, ಸಮಸ್ಯೆ ಮತ್ತು ಅಭಿವೃದ್ಧಿಗೆ ಅನುಗುಣವಾಗಿ ಅಗತ್ಯ ತಿದ್ದುಪಡಿ ಮಾಡುವುದು" ಎಂದು ಹೇಳಿದರು.

"371 ಜೆ ಕಲಂ ಜಾರಿಯಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಈ ಭಾಗದ ಜನರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು 371ಜೆ ಜಾರಿಗೆ ತರಲಾಯಿತು. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾದವು. ಕಾಲೇಜುಗಳಲ್ಲಿ ಪ್ರವೇಶ ದೊರೆಯಿತು. ವೈದ್ಯರು, ಎಂಜಿನಿಯರ್‌ಗಳು ಹಾಗೂ ಎಸಿ, ಡಿಸಿ ಹುದ್ದೆಗಳನ್ನು ಪಡೆಯಲು ಈ ಭಾಗದವರಿಗೆ ಅವಕಾಶ ಸಿಕ್ಕಿದೆ. ಇಂತಹ ಬದಲಾವಣೆಗಳನ್ನೇ ನಾನು ತಿಳಿಸಿದ್ದು" ಎಂದು ಹೇಳಿದರು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಸಂವಿಧಾನಕ್ಕೆ ಜಾತ್ಯತೀತ ಎಂಬ ಪದವನ್ನು ಸೇರ್ಪಡೆ ಮಾಡಲಾಯಿತು" ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕರ ಸಭೆ ನಡೆಸಿರುವ ಬಗ್ಗೆ ಕೇಳಿದಾಗ, "ಅದರಲ್ಲಿ ತಪ್ಪೇನಿದೆ? ತಪ್ಪೇನೂ ಇಲ್ಲವಲ್ಲ" ಎಂದು ಹೇಳಿದರು‌. ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಒಟ್ಟಿಗೆ ಇದ್ದಾರೆ ಎಂಬ ಚರ್ಚೆಗೆ, "ಒಂದೇ ಪಕ್ಷದವರು ಚೆನ್ನಾಗಿಯೇ ಇದ್ದಾರೆ. ನೀವು ಯಾಕೆ ತಲೆಕೆಡಿಸಿಕೊಳ್ಳುತ್ತೀರಿ?" ಎಂದರು.

ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅನ್‌ಫಿಟ್ ಆಗಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಟೀಕೆಯ ಬಗ್ಗೆ ಕೇಳಿದಾಗ, "ಫಿಟ್ ಮಾಡಿಕೊಳ್ಳೋಣ. ಅವರೇ ಫಿಟ್ ಮಾಡಲಿ" ಎಂದು ತಿರುಗೇಟು ನೀಡಿದರು.

ಆಶಾ ಕಾರ್ಯಕರ್ತೆಯರಿಗೆ ಅಧಿವೇಶನದಲ್ಲಿ ಗುಡ್‌ನ್ಯೂಸ್ ನೀಡುವುದಾಗಿ ಹೇಳಿದ್ದೀರಿ ಎಂದು ಕೇಳಿದಾಗ, "ಅದೆಲ್ಲವನ್ನೂ ಚರ್ಚೆ ಮಾಡಬೇಕು. ಮಾಧ್ಯಮದವರು ಹೇಳುತ್ತಾರೆ ಎಂಬ ಕಾರಣಕ್ಕೆ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ನಾನು ಅವರೊಂದಿಗೆ ಮಾತನಾಡಿದ್ದೇನೆ" ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.