ಡಿಕೆ ಶಿವಕುಮಾರ್

CM ಅಧಿಕೃತ ನಿವಾಸ 'ಗಂಗಾ' ನವೀಕರಣಕ್ಕೆ ₹100 ಕೋಟಿ ಖರ್ಚು!: ವಿಜಯೇಂದ್ರ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?
ಇದೀಗ 'ಗಂಗಾ' ನವೀಕರಣಕ್ಕೆ 100 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಗಂಭೀರ ಆರೋಪ ಮಾಡಿದ್ದಾರೆ.

CM ರಾಜಕೀಯ ಕಾರ್ಯದರ್ಶಿ ಹುದ್ದೆ ಬೇಡ; ಅದು ನನ್ನ ಹಿರಿತನಕ್ಕೆ ತಕ್ಕುದಲ್ಲ: ತನ್ವೀರ್ ಸೇಠ್ ಅಸಮಾಧಾನ
ಇಂದು ಒಟ್ಟು 12 ಶಾಸಕರು ಹಾಗೂ ಮೂವರು ಪಕ್ಷದ ಮುಖಂಡರಿಗೆ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ನೀಡಲಾಗಿದೆ. ಶಾಸಕ ತನ್ವೀರ್ ಸೇಠ್ ಅವರನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಸರಿಯಾಗಿ ಕೆಲಸ ಮಾಡಿಲ್ಲ ಅಂದ್ರೆ ಒಂದೇ ಗಂಟೆಯಲ್ಲಿ ಎತ್ತಂಗಡಿ: ನೂತನ ಕಮಿಷನರೇಟ್ಗಳಿಗೆ ಸಿಎಂ ವಾರ್ನಿಂಗ್!
ಸರಿಯಾಗಿ ಕೆಲಸ ಮಾಡಲಿಲ್ಲ ಅಂದ್ರೆ ಒಂದೇ ಗಂಟೆಯೊಳಗೆ ಎತ್ತಂಗಡಿ ಮಾಡುತ್ತೇವೆ ಎಂದು ನೂತನವಾಗಿ ಆಯ್ಕೆಯಾಗಿರುವ ಐವರು ಕಮಿಷನರೇಟ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.

ಸರ್ಕಾರದ ಯೋಜನೆ, ಅಭಿವೃದ್ಧಿ ಕಾಮಗಾರಿಗಳ ವಿವರ ಜನರಿಗೆ ಮುಕ್ತವಾಗಿ ಲಭ್ಯ: 'ಸಿಎಂ ಡ್ಯಾಶ್ಬೋರ್ಡ್' ಲೋಕಾರ್ಪಣೆ!
ಈ ಡ್ಯಾಶ್ಬೋರ್ಡ್ (cmdashboard.karnataka.gov.in) ಮುಖ್ಯಮಂತ್ರಿ ವಿವಿಧ ಇಲಾಖೆಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

'ಮನಮೋಹನ್ ಸಿಂಗ್-ಸೋನಿಯಾರಿಂದ ಆಹಾರ ಭದ್ರತಾ ಕಾಯ್ದೆ; SM ಕೃಷ್ಣರಿಂದ ಬಿಸಿಯೂಟ; ಇಂದಿರಾ ಅಂದರೆ ಹಸಿವು ದೂರ, ಬಡತನ ದೂರ'
ಮೈಸೂರು, ಬೆಳಗಾವಿಯಲ್ಲಿ ರಸ್ತೆಗಳು ವಿಶಾಲವಾಗಿವೆ. ಆದರೆ, ಬೆಂಗಳೂರಿನಲ್ಲಿ ಈ ರೀತಿ ಇಲ್ಲ. ಇವೆಲ್ಲ ಯೋಜಿತವಾಗಿ ನಗರವನ್ನು ಅಭಿವೃದ್ಧಿ ಪಡಿಸುವುದರಿಂದ ಮಾತ್ರ ಸಾಧ್ಯ. ಅಗತ್ಯವಿರುವ ಪ್ರಮಾಣ ಪತ್ರಗಳನ್ನು ನಗರಯೋಜನೆ ಇಲಾಖೆಯಲ್ಲಿ ಪಡೆದುಕೊಳ್ಳಿ.

ಮೇಕೆದಾಟು ಅಣೆಕಟ್ಟು: ಸಿಎಂ ನಿಲುವಿಗೆ ವಿರೋಧ; ಕಾವೇರಿ ನದಿಯ ಮರಳಿನಲ್ಲಿ ಹೂತುಕೊಂಡು ತಮಿಳುನಾಡು ರೈತರ ಪ್ರತಿಭಟನೆ!
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಲೇಬೇಕೆಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪದೇ ಪದೇ ನೀಡುತ್ತಿರುವ ಹೇಳಿಕೆಗಳ ವಿರುದ್ಧವೂ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸಂಧಾನ ಸಭೆ ವಿಫಲ: ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ, ಹೋರಾಟ ಕೈಬಿಡುವಂತೆ ಸಿಎಂ ಶಿವಕುಮಾರ್ ಮನವಿ! Video
ರಾಜ್ಯದ ಸುಮಾರು 41 ಸಾವಿರ ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ನಂಬಿಕೆ ಮತ್ತು ಸಹಾನುಭೂತಿ ಇದೆ. ನೀವು ಜನರ ಸೇವೆ ಮಾಡುತ್ತಿದ್ದೀರಿ. ಆದರೆ ಬೇಡಿಕೆಗಳ ಬಗ್ಗೆ ಒಂದೇ ದಿನಕ್ಕೆ ತೀರ್ಮಾನ ಮಾಡಲು ಸಾಧ್ಯವಿಲ್ಲ.

ಏರ್ಪೋರ್ಟ್ಗೆ ಹೆಬ್ಬಾಳ ಮಾದರಿಯಲ್ಲಿ ಹೊಸ ಫ್ಲೈಓವರ್; ಜಕ್ಕೂರು ವಿಮಾನ ನಿಲ್ದಾಣದ ಎದುರು ಪಾಲಿಕೆ ಕಚೇರಿ ನಿರ್ಮಾಣ: ಸಿಎಂ
522.23 ಕೋಟಿ ವೆಚ್ಚದಲ್ಲಿ ಬೆಂಗಳೂರು ನಗರದ ವಿವಿದ ಕಡೆಗಳಲ್ಲಿ ಹಮ್ಮಿಕೊಂಡಿದ್ದ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳನ್ನು ಸಿಎಂ ಡಿ ಕೆ ಶಿವಕುಮಾರ್ ಅವರು ಬುಧವಾರ ನೆರವೇರಿಸಿದರು.

ಡಿಕೆಶಿ ಸಮರ್ಥ ಸಿಎಂ, ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿ ಕೇವಲ ವದಂತಿ: ಪರಮೇಶ್ವರ್
ಕಾಂಗ್ರೆಸ್ನಲ್ಲಿ ಯಾವುದೇ ಅಸಮಾಧಾನವಿಲ್ಲ, ವಿರೋಧ ಪಕ್ಷಗಳು ತಮ್ಮ ಮನೆಯ ದೋಷ ಮುಚ್ಚಿಕೊಳ್ಳಲು ಇಂತಹ ವದಂತಿಗಳನ್ನು ಹಬ್ಬಿಸುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದರು.

