ಲಾಕ್ ಡೌನ್: ಮಂಗಳೂರಿನಿಂದ ಕೇರಳಕ್ಕೆ ಅಗತ್ಯ ಔಷಧ ಸಾಗಾಟಕ್ಕೆ ಸಾಮಾಜಿಕ ಕಾರ್ಯಕರ್ತರ ಸಹಾಯಹಸ್ತ

ನಾಡಾಪುರಂ ಬಳಿಯ ಎಡಚೇರಿಯಲ್ಲಿ 50 ವರ್ಷದ ಗೃಹಿಣಿಯೊಬ್ಬಳು ತನಗೆ ಅಗತ್ಯವಾದ ಜೀವರಕ್ಷಕ ಔಷಧ ಖಾಲಿಯಾದಾಗ ಗಾಬರಿಯಾಗುತ್ತಾಳೆ.ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದ ಆಕೆ ಮಣಿಪಾಲ್‌ನ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಯ ಚಿಕಿತ್ಸೆಯಲ್ಲಿದ್ದಾರೆ. ಔಷಧವನ್ನು  ಒಂದು ದಿನವೂ ಬಿಟ್ಟಿರಲು ಸಾಧ್ಯವಿಲ್ಲದ ಆಕೆಗೆ ಇದೀಗ ದೇಶಾದ್ಯಂತ ಲಾಕ್ ಡೌನ್ ಕಾರಣ ಕಣ್ಣೂರು

Published: 08th April 2020 12:27 PM  |   Last Updated: 08th April 2020 12:27 PM   |  A+A-


ಲಾಕ್ ಡೌನ್: ಮಂಗಳೂರಿನಿಂದ ಕೇರಳಕ್ಕೆ ಅಗತ್ಯ ಔಷಧ ಸಾಗಾಟಕ್ಕೆ ಸಾಮಾಜಿಕ ಕಾರ್ಯಕರ್ತರ ಸಹಾಯಹಸ್ತ

Posted By : raghavendra
Source : The New Indian Express

ಕೋಳಿಕ್ಕೋಡ್: ನಾಡಾಪುರಂ ಬಳಿಯ ಎಡಚೇರಿಯಲ್ಲಿ 50 ವರ್ಷದ ಗೃಹಿಣಿಯೊಬ್ಬಳು ತನಗೆ ಅಗತ್ಯವಾದ ಜೀವರಕ್ಷಕ ಔಷಧ ಖಾಲಿಯಾದಾಗ ಗಾಬರಿಯಾಗುತ್ತಾಳೆ.ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದ ಆಕೆ ಮಣಿಪಾಲ್‌ನ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಯ ಚಿಕಿತ್ಸೆಯಲ್ಲಿದ್ದಾರೆ. ಔಷಧವನ್ನು  ಒಂದು ದಿನವೂ ಬಿಟ್ಟಿರಲು ಸಾಧ್ಯವಿಲ್ಲದ ಆಕೆಗೆ ಇದೀಗ ದೇಶಾದ್ಯಂತ ಲಾಕ್ ಡೌನ್ ಕಾರಣ ಕಣ್ಣೂರು, ಕೋಳಿಕ್ಕೋಡ್ ಗಳೆಲ್ಲಿಯೂ ಆ ಔಷಧಿ ಸಿಗುತ್ತಿಲ್ಲ.ಆದರೆ ಕರ್ನಾಟಕದಿಂದ ತರಿಸಿಕೊಳ್ಳುವುದಕ್ಕೆ ಸಾರಿಗೆ ವ್ಯವಸ್ಥೆಯೂ ಇಲ್ಲ. ಇದರಿಂದ ಆಕೆ ನಿನ್ನೆ ಮೊನ್ನೆಯವರೆಗೆ ಹತಾಶಳಾಗಿದ್ದಳು. ಗಡಿಯಲ್ಲಿ ಕರ್ನಾಟಕ ಬಂದ್ ಮಾಡಿರುವ ಕಾರಣ  ಅವಳ ಹತಾಶೆಇನ್ನಷ್ಟು ಹೆಚ್ಚಿತ್ತು.ಆದರೆ ಕೆಲ ದಿನಗಳ ಬಳಿಕ ಮಂಗಳೂರಿನಿಂದ ಸಾಮಾಜಿಕ ಒಳಿತಿಗಾಗಿ ದುಡಿಯುವ ಕೆಲ ಕಾರ್ಯಕರ್ತರು ಎಡಚೇರಿಯವರೆಗೆ ಆಗಮಿಸಿ ಅಗತ್ಯ ಔಷಧಿ ಸರಬರಾಜು ಮಾಡಿದ್ದಾರೆ.

ಈ ವಿಷಯ ಮೊದಲಿಗೆ) ವಡಕಾರ ತಾಲ್ಲೂಕು ರಕ್ತದಾನಿಗಳ ಸಂಘದ ಅಧ್ಯಕ್ಷ ಹಾಗೂ ಯುವ ಜನತಾದಳ ಮುಖಂಡ  ವಲ್ಸರಾಜ್ ಮನಲಾತ್ ಅವರ ಗಮನಕ್ಕೆ ಬಂದಿತು. ಅವರು ಸಾಮಾಜಿಕ ಕಾರ್ಯಕರ್ತ ಮತ್ತು ಕಡವತೂರ್‌ನ ಕಾಂಗ್ರೆಸ್ ಮುಖಂಡ ಸಾಜು ಕೆ.ಪಿ ಅವರನ್ನು ಸಂಪರ್ಕಿಸಿದರು. "ನಾನು ಈ ವಿಷಯವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದೇನೆ ಮತ್ತು ಮಣಿಪಾಲ್‌ನ ಕೆಎಂಸಿಯ ಆಡಳಿತ ವಿಭಾಗದಲ್ಲಿ ಉದ್ಯೋಗದಲ್ಲಿರುವ ಓರ್ವರೊಡನೆ ಸಂಪರ್ಕಿಸಿದ್ದೇನೆ"ಕಣ್ಣೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸಾಜು ಹೇಳಿದರು

ವೈದ್ಯರ ಪ್ರಿಸ್ಕ್ರಿಪ್ಷನ್ ಚಿತ್ರವನ್ನು ವಾಟ್ಸಾಪ್ ಮೂಲಕ ಕೆಎಂಸಿಯಲ್ಲಿ ಕಾರ್ಯನಿರ್ವಹಿಸುವ ಶೈಜಾ ಎಂಬ ವ್ಯಕ್ತಿಗೆ ಕಳಿಸಿದೆ. ಅವರು ಸಂಬಂಧಪಟ್ಟ ವೈದ್ಯರನ್ನು ಭೇಟಿಯಾದರು. ವೈದ್ಯರ ಸಲಹೆಯಂತೆ ಭಾನುವಾರವೇ ಮಂಗಳೂರಿನಿಂದ ಔಷಧಿಯನ್ನು ಖರೀದಿಸಿದ್ದಾರೆ. ಎಸ್‌ಡಿಪಿಐನ ಸ್ವಯಂಸೇವಕರ ಮೂಲಕ ತಲಶೇರಿಯಲ್ಲಿ ಯುವ ವ್ಯವಹಾರಸ್ಥ ಟಿಪಿ ಮನಶೂದ್ ಮಂಗಳೂರಿನಿಂದ ಔಷಧ ಸಾಗಣೆಗೆ ವ್ಯವಸ್ಥೆ ಮಾಡಿಕೊಟ್ತರು.“ಖಾದರ್ ಸಾಹಿಬ್ ಎಂಬ ಸ್ವಯಂಸೇವಕ ಕರ್ನಾಟಕ-ಕೇರಳ ಗಡಿಯ ತಲಪಾಡಿಗೆ ಈ ಔಷಧಿಯನ್ನು ತಂದಿದ್ದನು. . ಅಲ್ಲಿಂದ ಅದು ಕಾಸರಗೋಡು ಪೊಲೀಸ್ ಠಾಣೆಯ ನಾಗರಿಕ ಪೊಲೀಸ್ ಅಧಿಕಾರಿ ಸಂದೀಪ್ ಮತ್ತು ನಂತರ ಖಾದರ್ ಅರಾಫಾ ಮತ್ತು ಫೈಜಲ್ ಅರಾಫಾ ಅವರ ಕೈಗಳ ಮೂಲಕ ತಲಚೇರಿಯನ್ನು ತಲುಪಿದೆ. ಅದು ನನ್ನ ಕೈಗೆ ಬರುವ ಮೊದಲು,ಮನಶೂದ್ . ಕದವತೂರಿನಲ್ಲಿ ಸಾಜುಗೆ ಔಷದಿ ಹಸ್ತಾಂತರ ಮಾಡಿದ್ದರು.

ವಲ್ಸರಾಜ್ ಮನಲಾತ್ ಅವರು ಪೆರಿಂಗತೂರಿನಲ್ಲಿರುವ  ಸಾಜು ಅವರಿಂದ ಔಷಧಿಯನ್ನು ಪಡೆದರು ಮತ್ತು ಸೋಮವಾರ ಅದನ್ನು ಅಂತಿಮವಾಗಿ ರೋಗಿಗೆ ನೀಡಲಾಯಿತು. ಕುಟುಂಬವು ತಿರುವನಂತಪುರಂ ಮತ್ತು ಎರ್ನಾಕುಲಂನಲ್ಲಿ ಔಷಧಿಗಾಗಿ ಹುಡುಕಿದ್ದು ಸಹ ವ್ಯರ್ಥವಾಗಿತ್ತು. "ಮಾರ್ಚ್ 26 ರಿಂದ, ಜೀವರಕ್ಷಕ ಔಷಧಿಗಳನ್ನು ಸಿಗುವಂತೆ ಮಾಡಿರೆಂಬ ವಿಚಾರಕ್ಕೆ ಹೆಚ್ಚಿನ ಕರೆಗಳನ್ನು ನಾವು ಸ್ವೀಕರಿಸುತ್ತಿದ್ದೇವೆ. . "ನಾವು ಅವುಗಳನ್ನು ತರಕಾರಿ ಲಾರಿ ಚಾಲಕರು, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ವಯಂಸೇವಕರ ಮೂಲಕ ವ್ಯವಸ್ಥೆ ಮಾಡುತ್ತಿದ್ದೇವೆ." ಸಾಜು ಹೇಳಿದರು.. 


Stay up to date on all the latest ವಿಶೇಷ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp