ಸೃಷ್ಟಿಯ ವೈಚಿತ್ರ್ಯ: ಒಡಿಶಾದ ಬಾಲಸೂರ್‌ನಲ್ಲಿ ಹಳದಿ ಆಮೆ ಪತ್ತೆ 

ಕೆಲವು ಜಾತಿಯ ಆಮೆಗಳು 100 ವರ್ಷಗಳಿಗಿಂತ ಬಾಳುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇನ್ನು ಪ್ರತಿಯೊಬ್ಬರೂ ಈ ಸುಂದರ ಜೀವಿಗಳನ್ನು ನೋಡುವ  ಅದೃಷ್ಟವಂತರಲ್ಲ.  ಆದರೆ ಈಗ ಒಡಿಶಾದಲ್ಲಿಅತ್ಯ್ಂತ ಅಪರೂಪದ ಆಮೆ  ಪತ್ತೆಯಾಗಿದೆ.
ಹಳದಿ ಆಮೆ
ಹಳದಿ ಆಮೆ

ಬಾಲಸೂರ್: ಕೆಲವು ಜಾತಿಯ ಆಮೆಗಳು 100 ವರ್ಷಗಳಿಗಿಂತ ಬಾಳುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇನ್ನು ಪ್ರತಿಯೊಬ್ಬರೂ ಈ ಸುಂದರ ಜೀವಿಗಳನ್ನು ನೋಡುವ  ಅದೃಷ್ಟವಂತರಲ್ಲ.  ಆದರೆ ಈಗ ಒಡಿಶಾದಲ್ಲಿಅತ್ಯ್ಂತ ಅಪರೂಪದ ಆಮೆ  ಪತ್ತೆಯಾಗಿದೆ.

ಬಾಲಸೂರ್  ಜಿಲ್ಲೆಯ ಸೊರೊ ಬ್ಲಾಕ್‌ನ ಸುಜನ್‌ಪುರ ಗ್ರಾಮದ ಸ್ಥಳೀಯರು ಭಾನುವಾರ ವಿಶಿಷ್ಟವಾದ ಹಳದಿ ಬಣ್ಣದ ಆಮೆಯನ್ನು ಕಂಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆದು ಮಾಹಿತಿ ನೀಡಿದ್ದಾರೆ.

ಹಿರಿಯ ಐಎಫ್‌ಎಸ್ ಅಧಿಕಾರಿ ಸುಸಂತಾ ನಂದಾ ಹೇಳಿದಂತೆ , 'ಆಮೆ ಬಹುಶಃ ಅಲ್ಬಿನೋ ಆಗಿರಬಹುದು. ಅಂತಹ ಒಂದು ಜೀವಿಯನ್ನು ಕೆಲವು ವರ್ಷಗಳ ಹಿಂದೆ ಸಿಂಧ್‌ನ ಸ್ಥಳೀಯರು ಸಹ ಪತ್ತೆ ಮಾಡಿದ್ದಾರೆ.

ಈ ಆಮೆ ಇದು ಗುಲಾಬಿ ಕಣ್ಣುಗಳಿಂದ ಕೂಡಿದ್ದು ಒಂದು ವಿಶಿಷ್ಟ ಜೀವಿಯಾಗಿದೆ. ಎಂದು ಐಎಫ್‌ಎಸ್ ಅಧಿಕಾರಿ ಈ ಆಮೆಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಹೇಳಿದ್ದಾರೆ.  ರಕ್ಷಿಸಿದ ಆಮೆಯ ಬಗ್ಗೆ ಮಾತನಾಡಿದ ವನ್ಯಜೀವಿ ವಾರ್ಡನ್ ಭಾನುಮಿತ್ರ  ಆಚಾರ್ಯ," ಇದು ಒಂದು ಅನನ್ಯ ಸಂಶೋಧನೆಯಾಗಿದೆ.  ಈ ಮೊದಲು ಈ ರೀತಿಯ ಆಮೆಯನ್ನು ಯಾರೂ ಕಂಡಿಲ್ಲ  ಆಮೆಯ ಸಂಪೂರ್ಣ ಕವಚ ಮತ್ತು ದೇಹ ಹಳದಿ. ಬಣ್ಣದಲ್ಲಿದೆ. ಇದು ಅಪರೂಪದ ಆಮೆ, ನಾನು ಈ ಬಗೆಯ ಆಮೆಯನ್ನು ಈ ಹಿಂದೆ ನೋಡೇ ಇಲ್ಲ. " ಆಚಾರ್ಯ ಹೇಳಿದ್ದಾರೆ.

ಕಳೆದ ತಿಂಗಳು, ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಡಿಯುಲಿ ಅಣೆಕಟ್ಟಿನಲ್ಲಿ ಅಪರೂಪದ ಜಾತಿಯ ಆಮೆಯೊಂದುಮೀನುಗಾರರಿಂದ ಹಿಡಿಯಲ್ಪಟ್ಟಿತ್ತು.  ಇದನ್ನು ಡ್ಯೂಲಿ ಅಣೆಕಟ್ಟಿನ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ವಶಕ್ಕೆ ಪಡೆದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com