ಮರುಬಳಕೆ ಪ್ಲಾಸ್ಟಿಕ್‌ ನಿಂದ ಮನೆ ನಿರ್ಮಾಣ: ಮಂಗಳೂರಿನ ತ್ಯಾಜ್ಯ ಸಂಗ್ರಹಕಾರ ವ್ಯಕ್ತಿಯ ಮಹತ್ ಸಾಧನೆ!

ದಕ್ಷಿಣ ಕನ್ನಡ ಜಿಲ್ಲೆಯ ಪಚ್ಚಾಂಡಿಯಲ್ಲಿನ ತ್ಯಾಜ್ಯ ವಸ್ತು ಸಂಗ್ರಹಕಾರರೊಬ್ಬರು 'ಪ್ಲಾಸ್ಟಿಕ್‍ ಫಾರ್ ಚೇಂಜ್‍ ಇಂಡಿಯಾ' ಪ್ರತಿಷ್ಠಾನದ ಸಹಯೋಗದಲ್ಲಿ ಮರುಬಳಕೆ ಪ್ಲಾಸ್ಟಿಕ್‍ ನಿಂದಲೇ ಮನೆ ನಿರ್ಮಿಸಿ ಸ್ವಚ್ಛ ಪರಿಸರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ.
ಮರುಬಳಕೆಯ ಪ್ಲಾಸ್ಟಿಕ್ ಬಳಸಿ ತಯಾರಾದ ಮನೆ
ಮರುಬಳಕೆಯ ಪ್ಲಾಸ್ಟಿಕ್ ಬಳಸಿ ತಯಾರಾದ ಮನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪಚ್ಚಾಂಡಿಯಲ್ಲಿನ ತ್ಯಾಜ್ಯ ವಸ್ತು ಸಂಗ್ರಹಕಾರರೊಬ್ಬರು 'ಪ್ಲಾಸ್ಟಿಕ್‍ ಫಾರ್ ಚೇಂಜ್‍ ಇಂಡಿಯಾ' ಪ್ರತಿಷ್ಠಾನದ ಸಹಯೋಗದಲ್ಲಿ ಮರುಬಳಕೆ ಪ್ಲಾಸ್ಟಿಕ್‍ ನಿಂದಲೇ ಮನೆ ನಿರ್ಮಿಸಿ ಸ್ವಚ್ಛ ಪರಿಸರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ.

ಕರ್ನಾಟಕದ ಕರಾವಳಿ ತೀರದಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರ ಜೀವನ ಮಟ್ಟ ಸುಧಾರಿಸಲು ಶ್ರಮಿಸುತ್ತಿರುವ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಪ್ರತಿಷ್ಠಾನವು ಪಚ್ಚನಾಡಿಯಲ್ಲಿ ಮರುಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕಾರರೊಬ್ಬರಿಗೆ 4.50 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಿದೆ.

ಪ್ರತಿಷ್ಠಾನದ ಅಧಿಕಾರಿ ಶಿಫ್ರಾ ಜೇಕಬ್ಸ್ ಸುದ್ದಿಗಾರರೊಂದಿಗೆ ಮಾತನಾಡಿ, ಫಲಾನುಭವಿಗಳಲ್ಲಿ ಒಬ್ಬರಾದ ಕಮಲಾ ಅವರ ಮನೆಯ ನಿರ್ಮಾಣಕ್ಕೆ 1,500 ಕೆಜಿ ಮರುಬಳಕೆ ಪ್ಲಾಸ್ಟಿಕ್ ಅನ್ನು ಬಳಸಲಾಗಿದೆ. ಇದು ನವೀನ ಮತ್ತು ಪರಿಸರ ಸ್ನೇಹಿ ಯೋಜನೆಯಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕಟ್ಟಡ ಸಾಮಗ್ರಿಗಳಾಗಿ ಬಳಸಿ, ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸುವುದಕ್ಕೆ ಇದು ನಿದರ್ಶನವಾಗಿದೆ ಎಂದು ಹೇಳಿದ್ದಾರೆ.

ಹೈದರಾಬಾದ್‌ನ ಕನ್ ಸ್ಟ್ರಕ್ಟರ್ ಪಾರ್ಟ್ನರ್ ಸಹಾಯದಿಂದ ಈ ಮನೆಯನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಒಂದೇ ಸಮಯದಲ್ಲಿ ಅನೇಕ ಮನೆ ನಿರ್ಮಾಣ ಮಾಡುವುದರಿಂದ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡಬಹುದು. "ಎರಡನೇ ಹಂತದಲ್ಲಿ, ನಾವು ಅಂತಹ 20 ಮನೆಗಳನ್ನು ನಿರ್ಮಿಸಲು ಯೋಜಿಸಿದ್ದೇವೆ. 20 ಟನ್ ಗಿಂತ ಹೆಚ್ಚು ಪ್ಲಾಸ್ಟಿಕ್ ಅನ್ನು ಅದಕ್ಕಾಗಿ ಬಳಕೆ ಮಾಡಲಾಗುತ್ತದೆ. ಶೌಚಾಲಯಗಳ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳಿಗೆ ಇದನ್ನು ಬಳಸಬಹುದು,” ಎಂದು ಶಿಫ್ರಾ ಹೇಳಿದ್ದಾರೆ.

ಪ್ರತಿಷ್ಠಾನವು ಮಂಗಳೂರಿನ ಪಚ್ಚಾಂಡಿ ಮತ್ತು ಕುರಿಕಟ್ಟದಲ್ಲಿರುವ ಸಮುದಾಯದ ಜನರೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com