ಲಾಕ್ಡೌನ್ ಸಮಯ ಸದ್ಭಳಕೆ: 61 ಕವಿತೆಗಳ ಪುಸ್ತಕ ಬರೆದು 'ಅತಿ ಕಿರಿಯ ಕವಯಿತ್ರಿ' ಎಂಬ ಹೆಗ್ಗಳಿಕೆ ಪಡೆದ ವಿದ್ಯಾರ್ಥಿನಿ ಅಮಾನಾ!

ನಗರದ ಬಿಷಪ್ ಕಾಟನ್ ಬಾಲಕಿಯರ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಅಮಾನಾ ಕೂಡ ಲಾಕ್ಡೌನ್ ಅವಧಿಯನ್ನು ಸದ್ಭಳಕೆ ಮಾಡಿಕೊಂಡಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಅತ್ಯಂತ ಕಿರಿಯ ಕವಯಿತ್ರಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. 
ಅಮಾನಾ
ಅಮಾನಾ
Updated on

ಬೆಂಗಳೂರು: ಸಾಂಕ್ರಾಮಿಕ ರೋಗದಿಂದಾಗಿ ಆರಂಭವಾದ ಲಾಕ್ಡೌನ್ ಅವಧಿ ಸಾಕಷ್ಟು ಮಕ್ಕಳಿಗೆ ತಮ್ಮ ಸೃಜನಶೀಲ ಕೌಶಲ್ಯಗಳ ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ ನೀಡಿದೆ. ಇದೇ ರೀತಿ ನಗರದ ಬಿಷಪ್ ಕಾಟನ್ ಬಾಲಕಿಯರ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಅಮಾನಾ ಕೂಡ ಈ ಅವಧಿಯನ್ನು ಸದ್ಭಳಕೆ ಮಾಡಿಕೊಂಡಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಅತ್ಯಂತ ಕಿರಿಯ ಕವಯಿತ್ರಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. 

ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಕವಿತೆಗಳನ್ನು ಬರೆದಿರುವುದಕ್ಕೆ - ಏಷ್ಯಾ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ 'ಗ್ರ್ಯಾಂಡ್ ಮಾಸ್ಟರ್' ಎಂದು ದಾಖಲೆಗೆ ಸೇರ್ಪಡೆಗೊಂಡಿದ್ದಾಳೆ. ವಿದ್ಯಾರ್ಥಿನಿ ಅಮಾನಾ ತನ್ನ ಪದಗಳನ್ನು ಪದ್ಯಗಳನ್ನಾಗಿ ಹೇಳುವ ಸೃಜನಶೀಲತೆಯನ್ನು ಹೊಂದಿದ್ದಾಳೆ. ಈಕೆಯ ಈ ಪ್ರತಿಭೆಯನ್ನು 6ನೇ ತರಗತಿಯಲ್ಲಿ ಆಕೆಯ ಶಿಕ್ಷಕರು ಗುರುತಿಸಿದ್ದರು. ಬಳಿಕ ಹಲವಾರು ವಿಷಯಗಳನ್ನು ನೀಡಿ ಕವನಗಳನ್ನು ಬರೆಯಲು ಅವಕಾಶ ನೀಡುತ್ತಿದ್ದರು. 

2020ರ ಏಪ್ರಿಲ್ ತಿಂಗಳಿನಲ್ಲಿ ಮಾಡಲಾದ ಲಾಕ್ಡೌನ್ ಸಮಯ ಬಹಳ ಬೇಸರ ತರಿಸಿತ್ತು. ಈ ವೇಳೆ ಕೋವಿಡ್-19 ಬಗ್ಗೆಯೇ ಕವಿತೆಗಳ ಬರೆಯಲು ಆರಂಭಿಸಿದ್ದೆ. ಜನರ ನೋವು, ಅವರ ಆಕ್ರಂದನಗಳನ್ನು ನಾನು ನೋಡಿದ್ದೆ. ಇದು ಭಯ ಹುಟ್ಟಿಸಿತ್ತು. ಋಣಾತ್ಮಕತೆಯನ್ನು ತೊಡೆದುಹಾಕಲು ಮತ್ತು ಓದುಗರಲ್ಲಿ ಭರವಸೆಯ ಭಾವವನ್ನು ವ್ಯಕ್ತಪಡಿಸಲು ನಾನು ಕವಿತೆಯನ್ನು ಬರೆದಿದ್ದೆ. 60ಕ್ಕೂ ಹೆಚ್ಚು ಕವಿತೆಗಳ ಬಳಿಕ ಎಲ್ಲವನ್ನು ಒಟ್ಟಾಗಿಸಿ ಪುಸ್ತಕವಾಗಿ ಪ್ರಕಟಿಸಲಾಯಿತು ಎಂದು ವಿದ್ಯಾರ್ಥಿನಿ ಅಮಾನಾ ಹೇಳಿದ್ದಾರೆ. 

ಅಮಾನಾ ಈವರೆಗೂ ಒಟ್ಟು 275 ಕವಿತೆಗಳನ್ನು ಬರೆದಿದ್ದು, ಇದರಲ್ಲಿ 25 ಕವಿತೆಗಳು ಹಿಂದಿಯಲ್ಲಿವೆ. ವಿದ್ಯಾರ್ಥಿನಿಯ ಸಾಕಷ್ಟು ಕವಿತೆಗಳು ಶಾಂತಿ, ಕೃತಜ್ಞತೆ, ಬಡತನ, ಪರಿಸರ, ವನ್ಯಜೀವಿ, ಬಾಲ್ಯದ ಕನಸುಗಳು, ರೈತರು, ಕುಟುಂಬ ಕುರಿತಾಗಿಯೇ ಇವೆ. 

ಆರಂಭದಲ್ಲಿ ಒಂದು ವಿಷಯವನ್ನು ತೆಗೆದುಕೊಂಡು ಕವಿತೆಗಳ ಬರೆಯುತ್ತಿದ್ದೆ. ಮತ್ತೆ ಕವಿತೆಗಳ ಸಂಗ್ರಹವಾಗಿದ್ದು, ಎರಡನೇ ಪುಸ್ತಕ ಬಿಡುಗಡೆ ಮಾಡಲು ಸಿದ್ಧತೆ ಆರಂಭಿಸಿದ್ದೇನೆ. ಆದರೆ, ಈ ಕಥೆಗಳೆಲ್ಲವೂ ನೈಜ ಘಟನೆಗಳು, ವೈಯಕ್ತಿಕ ಅನುಭವಗಳೇ ಆಗಿವೆ. ಮೂರನೇ ಪುಸ್ತಕದ ಯೋಜನೆಗಳಿದ್ದು, ಅದರಲ್ಲಿನ ಕವಿತೆಗಳು ಕಾಲ್ಪನಿಕವಾಗಿರುತ್ತವೆ. ಇದರಲ್ಲಿ ಕೆಲ ಹಿಂದಿ ಕವಿತೆಗಳೂ ಕೂಡ ಸೇರಿರುತ್ತವೆ ಎಂದು ಹೇಳಿದ್ದಾರೆ. 

ವಿದ್ಯಾರ್ಥಿನಿ ಅಮಾನಾ ಅವರ ತಾಯಿ ಡಾ.ಲತಾ ಟಿಎಸ್ ಅವರು ಕೆಎಸ್ಆರ್'ಟಿಸಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಮಗಳ ಈ ಸಾಧನೆ ಕುರಿತು ಮಾತನಾಡಿರುವ ಅವರು, ಅಮಾನಾ ಅತ್ಯಾಸಕ್ತಿಯ ಓದುಗಾರಳಾಗಿದ್ದು, ಸ್ಮಾರ್ಟ್‌ ಫೋನ್‌'ಗಳಷ್ಟು ಮೌಲ್ಯವುಳ್ಳ ಪುಸ್ತಕಗಳನ್ನು ಖರೀದಿಸಲು ನಮ್ಮನ್ನು ಕೇಳುತ್ತಿರುತ್ತಾಳೆ. ತನ್ನಷ್ಟಕ್ಕೆ ತಾನೇ ಮತ್ತು ಬರವಣಿಗೆಯ ಮೂಲಕ ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುತ್ತಾಳೆ. ಆಕೆ ಕವಿಯಾಗಿರುವುದು ನಿಜಕ್ಕೂ ಆಶ್ಚರ್ಯ ತರಿಸಿದೆ ಎಂದು ಹೇಳಿದ್ದಾರೆ. 

ದಾಖಲೆ ಅನಿರೀಕ್ಷಿತವಾಗಿ ಬಂದಿರಬಹುದು. ಇನ್ನೂ ಸಾಕಷ್ಟು ದಾಖಲೆ ಮಾಡಬೇಕಿದೆ. ಈ ಎಲ್ಲಾ ಯಶಸ್ಸು ನನ್ನ ತಲೆಗೆ ಹೊಕ್ಕುವುದನ್ನು ನಾನು ಬಯಸುವುದಿಲ್ಲ. ಏನೇ ಆಗಿದ್ದರೂ ಅದಕ್ಕೆ ನಾನು ಸಂತೋಷಗೊಂಡಿದ್ದಾನೆ. ಮತ್ತಷ್ಟು ಕಠಿಣ ಶ್ರಮ ಪಡುತ್ತೇನೆಂದು ಅಮಾನಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com