
ಬೆಂಗಳೂರು: ಹಾವಿನ ವಿಷ ಕುರಿತಾದ ಅಧ್ಯಯನ ಮತ್ತು ವಿಷ ನಿರೋಧಕ (Anti Venom) ಸಂಶೋಧನೆ ಸಲುವಾಗಿ ಸರ್ಕಾರಿ ಅನುದಾನಿತ ಪ್ರಯೋಗಾಲಯವೊಂದು ಉರಗ ಉದ್ಯಾನ (serpentarium/ Reptile park) ಸ್ಥಾಪನೆಗೆ ಮುಂದಾಗಿದೆ.
ಇದನ್ನೂ ಓದಿ: ಬೆಂಗಳೂರು: ಅರ್ಕಾವತಿ ಬಡಾವಣೆ ನಿವಾಸಿಗಳಿಗೆ ಹಾವುಗಳ ಕಾಟ
ರಾಜ್ಯಸರ್ಕಾರದ ಐಟಿ ಬಿಟಿ ಇಲಾಖೆಯಿಂದ ಅನುದಾನಿತ ಎವಲ್ಯೂಷನರಿ ವೆನೋಮಿಕ್ಸ್ ಲ್ಯಾಬ್ ಈ ಕಾರ್ಯಕ್ಕೆ ಮುಂದಾಗಿದೆ. ಉರಗ ಉದ್ಯಾನದಲ್ಲಿ ಮುಖ್ಯವಾಗಿ ಹಾವುಗಳನ್ನು ಕೇಂದ್ರೀಕರಿಸಲಾಗಿದೆ.
ಈ ಉರಗ ಉದ್ಯಾನ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 23 ಪ್ರಬೇದಗಳ 500ಕ್ಕೂ ಹೆಚ್ಚು ಹಾವುಗಳನ್ನು ಹೊಂದಿದೆ. ಹಾವುಗಳನ್ನು ಹೊರತುಪಡಿಸಿ, ಚೇಳು ಮತ್ತು ಜೇಡಗಳೂ ಈ ಉರಗ ಉದ್ಯಾನದಲ್ಲಿವೆ.
ಸದ್ಯ ಲಭ್ಯವಿರುವ ವಿಷ ನಿರೋಧಕ ಔಷಧಗಳು ಪ್ರಭಾವಶಾಲಿಯಾಗಿಲ್ಲದ ಕಾರಣ ಈ ಹೊಸ ಸಂಶೋಧನೆ ಮಹತ್ತರ ಪಾತ್ರ ವಹಿಸಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
Advertisement