ಕೊರೋನಾದಿಂದ ರಕ್ಷಿಸಿಕೊಳ್ಳಲು ಹಾವನ್ನು ತಿಂದ ಭೂಪ: ವಿಡಿಯೋ ವೈರಲ್!

ಕೊರೋನಾ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರ ಎಲ್ಲರಿಗೂ ಲಸಿಕೆ ನೀಡುವ ಅಭಿಯಾನ ನಡೆಸುತ್ತಿದ್ದರೆ ಇತ್ತ ವ್ಯಕ್ತಿಯೋರ್ವ ಕೊರೋನಾದಿಂದ ದೂರವಿರಲು ಹಾವನ್ನು ತಿಂದಿದ್ದಾನೆ. ಅಷ್ಟೇ ಅಲ್ಲದೆ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ. 
ವಡಿವೇಲ್
ವಡಿವೇಲ್

ಚೆನ್ನೈ: ಕೊರೋನಾ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರ ಎಲ್ಲರಿಗೂ ಲಸಿಕೆ ನೀಡುವ ಅಭಿಯಾನ ನಡೆಸುತ್ತಿದ್ದರೆ ಇತ್ತ ವ್ಯಕ್ತಿಯೋರ್ವ ಕೊರೋನಾದಿಂದ ದೂರವಿರಲು ಹಾವನ್ನು ತಿಂದಿದ್ದಾನೆ. ಅಷ್ಟೇ ಅಲ್ಲದೆ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ. 

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪೆರುಮಲ್ಪತ್ತಿ ಗ್ರಾಮದ ವಡಿವೇಲ್ ಹಾವನ್ನು ತಿಂದಿರುವ ಭೂಪ. ಇನ್ನು ವಡವೇಲ್ ಹಾವನ್ನು ತಿಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಾಣಿ ಪ್ರೇಮಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಇನ್ನು ವಡಿವೇಲ್ ನನ್ನು ಪತ್ತೆ ಮಾಡಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಲ್ಲದೆ 7,500 ರೂಪಾಯಿ ದಂಡವನ್ನು ಹಾಕಿದ್ದಾರೆ. ವಿಡಿಯೋದಲ್ಲಿ ವಡಿವೇಲ್ ಸರಿಸೃಪಗಳನ್ನು ತಿಂದರೆ ಕೊರೋನಾದಿಂದ ದೂರವಿರಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com