ಕೈದಿಗಳೇ ಮಾಡಿದ ಗಣೇಶ ಮೂರ್ತಿಗಳು ಭರ್ಜರಿ ಮಾರಾಟ: ಐದೇ ನಿಮಿಷಗಳಲ್ಲಿ ಎಲ್ಲಾ ಸೇಲ್
ಪುದುಚೆರಿ: ಗಣೇಶ ಚತುರ್ಥಿಯ ದಿನ ಸಕಲರಿಗೂ ಒಳ್ಳೆಯದನ್ನು ಮಾಡುವುದೆಂಬ ನಂಬಿಕೆ ಪುದುಚೆರಿ ಕೈದಿಗಳ ವಿಚಾರದಲ್ಲಿ ನಿಜವಾಗಿದೆ. ಅವರು ತಯಾರಿಸಿದ್ದ 51 ಮೂರ್ತಿಗಳು ಕೇವಲ ಐದೇ ನಿಮಿಷಗಳಲ್ಲಿ ಸೇಲಾಗಿರುವುದು ಅದಕ್ಕೆ ಸಾಕ್ಷಿ. ಕೈದಿಗಳ ಸುಧಾರಣಾ ಕಾರ್ಯಕ್ರಮದ ಅಂಗವಾಗಿ ಕಾರಾಗೃಹ ಅಧಿಕಾರಿಗಳು ಕೈದಿಗಳ ಕೈಲಿ ವಿಗ್ರಹಗಳನ್ನು ಮಾಡಿಸಿದ್ದರು.
ಪುದುಚೆರಿ ಜೈಲಿನಲ್ಲಿ ವಿಗ್ರಹ ರಚನೆ ಸೇರಿದಂತೆ ಬಟ್ಟೆ ಹೊಲಿಯುವುದು, ಯೋಗ ಮತ್ತಿತರ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಅರಬಿಂದೊ ಸೊಸೈಟಿ ಸಹಯೋಗದಲ್ಲಿ ಜೈಲು ಸುಧಾರಣಾ ಕಾರ್ಯಕ್ರಮ ನಡೆಸಲಾಗುತ್ತಿದೆ.
ಗಣೇಶ ವಿಗ್ರಹ ಮಾರಾಟದಿಂದ ಸಂತುಷ್ಟರಾಗಿರುವ ಅಧಿಕಾರಿ ವರ್ಗ ವಿಗ್ರಹಗಳಿಗೆ ಇನ್ನೂ ಬೇಡಿಕೆ ಬರುತ್ತಲೇ ಇದೆ ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಾವಯವ ಕೃಷಿ ಉತ್ಪನ್ನ, ಬೇಕರಿ, ಕ್ಯಾಂಟೀನ್ ಮತ್ತು ಗೋಶಾಲೆ ನಿರ್ಮಾಣ ಯೋಜನೆಯನ್ನು ಕಾರಾಗೃಹ ಅಧಿಕಾರಿಗಳು ಹೊಂದಿದ್ದಾರೆ.
Related Article
ಪೆರೋಲ್ ಅವಧಿ ಮುಗಿದರೂ ಬೆಳಗಾವಿಯ ಹಿಂಡಲಗಾ ಜೈಲಿಗೆ ಮರಳದ ಇಬ್ಬರು ಕೈದಿಗಳು!
ಸಾಂತ್ವನ ಕೇಂದ್ರದಿಂದ ಐವರು ವಿದೇಶಿ ಮಹಿಳಾ ಕೈದಿಗಳು ಪರಾರಿ
ಒಳಗಿನವರಿಂದಲ್ಲ, ಹೊರಗಿನಿಂದ ಬರುತ್ತಿರುವ ಕೈದಿಗಳಿಂದ ಕಾರಾಗೃಹದಲ್ಲಿ ಕೊರೋನಾ ಹೆಚ್ಚುತ್ತಿದೆ!
ಜೈಲನ್ನೂ ಬಿಡದ ಲವ್ ಸೆಕ್ಸ್ ಔರ್ ಧೋಖಾ; ತಿತಿಲಾಘಡ್ ಜೈಲಲ್ಲಿ ಮಹಿಳಾ ಕೈದಿ ಆರೋಪ!
70 ವರ್ಷಕ್ಕಿಂತ ಮೇಲ್ಪಟ್ಟ ಕೈದಿಗಳ ಬಿಡುಗಡೆಗೆ ಸುಪ್ರೀಂ ಮೆಟ್ಟಿಲೇರಿದ ಹೋರಾಟಗಾರ್ತಿ ಮೇಧಾ ಪಾಟ್ಕರ್
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ