ಗಿನ್ನಿಸ್ ವಿಶ್ವ ದಾಖಲೆ ಮುರಿಯಲು ಸಜ್ಜು: ಒಂದೆಡೆ ಸೇರಿದ ಕೊಡವ ಸಮಾಜದ ಸುಮಾರು 6,000 ಜನ!

ಗಿನ್ನಿಸ್ ವಿಶ್ವ ದಾಖಲೆ ಮಾಡಬೇಕೆಂಬ ಗುರಿಯೊಂದಿಗೆ ಕೊಡವ ಸಮಾಜದ ಸುಮಾರು 6,000 ಜನರು ಶನಿವಾರ ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಒಂದೆಡೆ ಸೇರಿದರು. ವಿಶ್ವದ ಅತ್ಯಂತ ದೊಡ್ಡ ಕುಟುಂಬದ ದಾಖಲೆಯನ್ನು ಮುರಿಯಲು ಅವರೆಲ್ಲರನ್ನೂ ಒಂದೇ ಸೂರಿನಡಿ ಕೊಡವ ಕ್ಲಾನ್ ಪೋರ್ಟಲ್ ಸೇರಿಸಿದ್ದು, ಇದಕ್ಕೆ ಒಕ್ಕೂಟ ಎಂದು ಹೆಸರಿಡಲಾಗಿತ್ತು.
ವಿಶ್ವ ದಾಖಲೆ ಮುರಿಯಲು ಸುಮಾರು 6,000 ಜನರು ಒಂದೆಡೆ ಸೇರಿರುವ ಚಿತ್ರ
ವಿಶ್ವ ದಾಖಲೆ ಮುರಿಯಲು ಸುಮಾರು 6,000 ಜನರು ಒಂದೆಡೆ ಸೇರಿರುವ ಚಿತ್ರ
Updated on

ಮಡಿಕೇರಿ: ಗಿನ್ನಿಸ್ ವಿಶ್ವ ದಾಖಲೆ ಮಾಡಬೇಕೆಂಬ ಗುರಿಯೊಂದಿಗೆ ಕೊಡವ ಸಮಾಜದ ಸುಮಾರು 6,000 ಜನರು ಶನಿವಾರ ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಒದೆಂಡೆ ಸೇರಿದರು. ವಿಶ್ವದ ಅತ್ಯಂತ ದೊಡ್ಡ ಕುಟುಂಬದ ದಾಖಲೆಯನ್ನು ಮುರಿಯಲು ಅವರೆಲ್ಲರನ್ನೂ ಒಂದೇ ಸೂರಿನಡಿ ಕೊಡವ ಕ್ಲಾನ್ ಪೋರ್ಟಲ್ ಸೇರಿಸಿದ್ದು, ಇದಕ್ಕೆ ಒಕ್ಕೂಟ ಎಂದು ಹೆಸರಿಡಲಾಗಿತ್ತು.

ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂಬುದನ್ನು ತೋರಿಸಲು ಸುಮಾರು 6,500 ಜನರು ಒಂದೇ ಕಡೆ ಸೇರಿರುವುದಾಗಿ ಕೊಡವ ಕ್ಲಾನ್ ಪೋರ್ಟಲ್‌ನ ಸಂಸ್ಥಾಪಕ ಜಿ ಕಿಶೂ ಉತ್ತಪ್ಪ ಹೇಳಿದರು. ಮೂರು ತಲೆಮಾರಿನ ಜನರು ಇಲ್ಲಿ ಜಮಾಯಿಸಿದ್ದು,  ವರ್ಲ್ಡ್ ರೆಕಾರ್ಡ್ ಅಸೋಸಿಯೇಷನ್‌ನ ಪ್ರತಿನಿಧಿಗಳು ಮೇಲ್ವಿಚಾರಣೆ ಮಾಡಿದರು ಎಂದು ಅವರು ವಿವರಿಸಿದರು. ಹಿಂದಿನ ವಿಶ್ವ ದಾಖಲೆಯನ್ನು ಮುರಿಯಲಾಗಿದೆಯೇ ಎಂಬುದರ ಖಚಿತತೆಗಾಗಿ ಪರಿಶೀಲನೆ ಪ್ರಕ್ರಿಯೆಯು ಇನ್ನೂ ನಡೆಯುತ್ತಿದೆ.

ಪೂರ್ವಜರ ವಂಶಾವಳಿಯೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲು ಕೊಡವ ಕ್ಲಾನ್ ಪೋರ್ಟಲ್ ನ್ನು ಕೊಡವ ಸಮುದಾಯ ಪ್ರಾರಂಭಿಸಿದ್ದು,  21,000 ಕ್ಕೂ ಹೆಚ್ಚು ಕೊಡವ ವ್ಯಕ್ತಿಗಳ ದೊಡ್ಡ ವಂಶ ವೃಕ್ಷವನ್ನು ರಚಿಸುವಲ್ಲಿ ಪೋರ್ಟಲ್ ಯಶಸ್ವಿಯಾಗಿದೆ. ಈ ಪೋರ್ಟಲ್ ಮೂಲಕ, ಅವರು ಎಫ್‌ಎಂಕೆಎಂ ಕಾರಿಯಪ್ಪ ಅಥವಾ ಸಮುದಾಯದ ಬೇರೆಯವರೊಂದಿಗೆ ಹೇಗೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ಸಹ ಕಂಡುಹಿಡಿಯಬಹುದು. ಪೋರ್ಟಲ್ ಅತಿದೊಡ್ಡ ವಂಶವೃಕ್ಷಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಗೆದಿದ್ದು, ಇದೀಗ ಗಿನ್ನಿಸ್ ವಿಶ್ವ ದಾಖಲೆ ಮುರಿಯಲು ಪ್ರಯತ್ನಿಸುತ್ತಿದೆ. 

ಈ ಹಿಂದೆ ಫ್ರಾನ್ಸ್ ನಲ್ಲಿ 4,514 ಜನರು ಒಂದೆಡೆ ಸೇರುವ ಮೂಲಕ ವಿಶ್ವದ ಅತ್ಯಂತ ದೊಡ್ಡ ಕುಟುಂಬವೆಂದು ವಿಶ್ವ ದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನು ಮುರಿಯುವ ಗುರಿಯನ್ನು ಕೊಡವ ಸಮುದಾಯ ಹೊಂದಿದೆ.  ಈ ಮಧ್ಯೆ ಕೊಡವ ಸಾಹಿತ್ಯಾಸಕ್ತರಿಗೆ ತಮ್ಮ ಕೃತಿಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿ ಅದರ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುತ್ತಮುತ್ತಲಿನ 30 ಕ್ಕೂ ಹೆಚ್ಚು ಮಳಿಗೆಗಳು ಕೊಡವ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತವೆ ಮತ್ತು ‘ವಾಲಗಥಾಟ್’ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು, ಗಾಯನ ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com