ಪ್ರಧಾನ ಕಸುಬು: ನಾರಾಯಣಪುರದಲ್ಲಿ ಸಾಂಪ್ರಾದಾಯಿಕ ಕುಂಬಾರಿಕೆ ಇನ್ನೂ ಜೀವಂತ!

ಮಹಾನಗರದಿಂದ ಸುಮಾರು 25 ಕಿಮೀ ದೂರದಲ್ಲಿರುವ ನಾರಾಯಣಪುರದಲ್ಲಿ ಇಂದಿಗೂ ಕುಂಬಾರಿಕೆ ಜೀವಂತವಾಗಿದೆ. ನಾರಾಯಣಪುರ ಮತ್ತು ಕುಂಬಾರಿಕೆಗೆ ಎಂಟು ದಶಕಗಳಿಗೂ ಹಿಂದಿನ ಅವಿನಾಭಾವ ಸಂಬಂಧವಿದೆ. ಇಂದು ಈ ಗ್ರಾಮವು ತನ್ನ ಮಣ್ಣಿನ ಕುಶಲಕರ್ಮಿಗಳಿಗಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ. 
ಕುಂಬಾರಿಕೆ
ಕುಂಬಾರಿಕೆ

ಬೆಂಗಳೂರು: ಮಹಾನಗರದಿಂದ ಸುಮಾರು 25 ಕಿಮೀ ದೂರದಲ್ಲಿರುವ ನಾರಾಯಣಪುರದಲ್ಲಿ ಇಂದಿಗೂ ಕುಂಬಾರಿಕೆ ಜೀವಂತವಾಗಿದೆ. ನಾರಾಯಣಪುರ ಮತ್ತು ಕುಂಬಾರಿಕೆಗೆ ಎಂಟು ದಶಕಗಳಿಗೂ ಹಿಂದಿನ ಅವಿನಾಭಾವ ಸಂಬಂಧವಿದೆ. 
ಇಂದು ಈ ಗ್ರಾಮವು ತನ್ನ ಮಣ್ಣಿನ ಕುಶಲಕರ್ಮಿಗಳಿಗಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ. 

ಸೂರ್ಯ ಉದಯದೊಂದಿಗೆ ಕೌಶಲ್ಯ, ಸೃಜನಶೀಲತೆ ಮತ್ತು ದೈಹಿಕ ಶ್ರಮ ಬೆರೆತ  ಕುಂಬಾರಿಕೆ ಕೆಲಸ ಮುಂಜಾನೆಯೇ ಪ್ರಾರಂಭವಾಗುತ್ತದೆ. ಇದು ಕುಂಬಾರರು ಚಕ್ರಗಳನ್ನು ಹಿಡಿಯಲು ಉತ್ತಮ ಸಮಯವಾಗಿರುತ್ತದೆ ಎಂದು ಇಲ್ಲಿನ ನಿವಾಸಿ ಕುಂಬಾರ ನಂದೀಶ್ ಕುಮಾರ್ ತಮ್ಮ ಗ್ರಾಮದ ಇತಿಹಾಸವನ್ನು ವಿವರಿಸುತ್ತಾರೆ. ನಾರಾಯಣಪುರದಲ್ಲಿ ಕುಂಬಾರಿಕೆ ಪ್ರಧಾನ ಕಸುಬು. ನಮ್ಮ ಪೂರ್ವಜರ ವ್ಯಾಪಾರವನ್ನು ಇನ್ನೂ ಕನಿಷ್ಠ 25 ಕುಟುಂಬಗಳು ಅನುಸರಿಸುತ್ತಿವೆ. ಮಹಿಳೆಯರು ಸೇರಿದಂತೆ ಎಲ್ಲಾ ಸದಸ್ಯರು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ನಾರಾಯಣಪುರದಲ್ಲಿನ ಬಹುತೇಕ ನಿವಾಸಿಗಳು ಕುಂಬಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾರಾಯಣಪುರದ ಬಹುತೇಕ ಮನೆಗಳಲ್ಲಿ ಮಡಿಕೆಗಳು ಕಂಡುಬರುತ್ತವೆ. ತಾಜಾ-ಶೈಲಿಯ ಮಡಕೆಗಳು, ಚಹಾ ಕುಲ್ಹಾಡ್‌ಗಳು, ಹುಂಡಿಗಳು, ದೀಪಗಳು, ಧೂಪ-ಸ್ಟ್ಯಾಂಡ್‌ಗಳು, ಪ್ಲೇಟ್‌ಗಳು ಮತ್ತು ಇತರ ಮಣ್ಣಿನ ಸೃಷ್ಟಿಗಳನ್ನು ಬಿಸಿಲಿನಲ್ಲಿ ಒಣಗಿಸಲು ಇಡಲಾಗುತ್ತದೆ. 

ಕುಲುಮೆ ಉರಿಸುವ ಕೆಲಸದಲ್ಲಿ ನಿರತರಾಗಿದ್ದ ಮತ್ತೋರ್ವ ಕುಂಬಾರ ಮುಂಚಿನಪ್ಪ, ಗೂಡು ಅಗತ್ಯವಾದ ತಾಪಮಾನಕ್ಕೆ ಬಿಸಿಯಾಗುವ ಮೊದಲು ಈ ಕೆಲಸ ಕನಿಷ್ಟ ಆರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ನಮ್ಮ ಸಾಮಾನುಗಳನ್ನು ಪರಿಪೂರ್ಣವಾಗಿ ಬೇಯಿಸುತ್ತದೆ ಎಂದು ಅವರು ಹೇಳಿದರು. ನೀಲಗಿರಿ ಎಲೆಗಳು ಮತ್ತು ಕೊಂಬೆಗಳ ನಿರಂತರ ಪೂರೈಕೆಯಿಂದ ಬೆಂಕಿಯ ತೀವ್ರವಾಗಿ ಉರಿಯುತ್ತದೆ ಎಂದು ಅವರು ತಿಳಿಸಿದರು. 

ಆಗಸ್ಟ್ ಮಾಸಾಂತ್ಯದವರೆಗೂ ಗಣೇಶ ಚತುರ್ಥಿಗೆ ಗಣೇಶ ಮತ್ತು ಗೌರಿ ವಿಗ್ರಹಗಳನ್ನು ನಿರ್ಮಿಸುತ್ತಾರೆ. ನಂತರ ದೀಪಾವಳಿಗಾಗಿ ಹಣತೆಗಳನ್ನು ತಯಾರಿಸುತ್ತಾರೆ. ಇಂದು ಹಬ್ಬಗಳಿಗೂ ಸಹ ಸಾವಯವ ಮತ್ತು ಮಣ್ಣಿನ ವಸ್ತುಗಳಲ್ಲಿ ಜನರ ಆಸಕ್ತಿಯನ್ನು ಬೆಳೆಸುತ್ತಿದೆ.  ನಾವು ಮಣ್ಣಿನ ಗಣೇಶ ಮೂರ್ತಿಗಳು ಮತ್ತಿತರ ವಸ್ತುಗಳನ್ನು ಸಾವಯವಾಗಿ ನಿರ್ಮಿಸಲು ಇದು ನಮಗೆ ವರದಾನವಾಗಿದೆ ಎಂದು ಅವರು ತಿಳಿಸಿದರು. 

ಇಂದು, ನಾರಾಯಣಪುರ ಕಲಾಭಿಮಾನಿಗಳು, ಗ್ರಾಹಕರು ಮತ್ತು ಕುಂಬಾರಿಕೆಯಿಂದ ಆಕರ್ಷಿತರಾದವರಿಂದ ಗಮನವನ್ನು ಸೆಳೆದಿದೆ. ಗ್ರಾಮದಲ್ಲಿ ತಯಾರಿಸುವ ಮಣ್ಣಿನ ವಸ್ತುಗಳನ್ನು ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಗಳಿಗೂ ರವಾನಿಸಲಾಗುತ್ತದೆ. ಕೆಲವು ಕುಟುಂಬಗಳು ತಮ್ಮ ಮನೆಗಳ ಬಳಿ ತಾತ್ಕಾಲಿಕ ಅಂಗಡಿಗಳನ್ನು ಸ್ಥಾಪಿಸಿದರೆ, ಕೆಲವರು ಬೆಂಗಳೂರಿಗೆ ಬಂದು ಕುಂಬಾರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ. 

ಇಂದು ಕುಂಬಾರಿಕೆಯಲ್ಲಿ ಜನರಲ್ಲಿ ಆಸಕ್ತಿ ಇದೆ. ಆದರೆ ಸಮುದಾಯವಾಗಿ, ನಮ್ಮ ಜೀವನ ವಿಧಾನ ಸಂರಕ್ಷಿಸಲು ಮತ್ತು ನಮ್ಮನ್ನು ಉಳಿಸಿಕೊಳ್ಳಲು ನಾವು ಹೆಚ್ಚಿನದನ್ನು ನಿರೀಕ್ಷಿಸುತ್ತೇವೆ. ನಮ್ಮ ಪೂರ್ವಜರ ವೃತ್ತಿಯನ್ನು ಮುಂದಿನ ಪೀಳಿಗೆ ತೆಗೆದುಕೊಳ್ಳಲು ಹೋಗಲು ಪ್ರೇರೇಪಿಸಲ್ಪಡುತ್ತವೆ ಎಂಬ ಭರವಸೆಯಿಲ್ಲ,  ಆದರೆ ನಾವು ಮಾಡುವ ಕೆಲಸದಲ್ಲಿ ನಾವು ತೃಪ್ತರಾಗಿದ್ದೇವೆ, ಅದು ಪರಿಸರದೊಂದಿಗೆ ನಂಟು ಹೊಂದಿರುತ್ತದೆ ಎಂದು ನಂದೀಶ್ ಹೇಳುತ್ತಾರೆ.

ನಾರಾಯಣಪುರದಲ್ಲಿಯೂ ಕೆಲವು ಮರದ ಚಕ್ರಗಳು ವಿದ್ಯುಚ್ಛಕ್ತಿಯಾಗಿ ಮಾರ್ಪಟ್ಟಿವೆ. ಗಣೇಶ ಚತುರ್ಥಿ ದೀಪಾವಳಿಯ ಆರಂಭವನ್ನು ಸೂಚಿಸುತ್ತದೆ.  ಮುಂಗಾರು ಕಣ್ಣಾಮುಚ್ಚಾಲೆ ಆಡುತ್ತದೆ. ಆದರೆ ಕುಂಬಾರರ ಚಕ್ರಗಳು ಸುತ್ತುತ್ತಲೇ ಇರುತ್ತವೆ, ಭೂಮಿಯ ಮುಷ್ಟಿಗಳಿಗೆ ಹೊಸ ಜೀವನ ಮತ್ತು ಭವಿಷ್ಯವನ್ನು ನೀಡುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com