ಅಂಗವಿಕಲ ಮಗಳಿಗೆ ಆಹಾರ ನೀಡಲು ರೋಬೋಟ್ ನಿರ್ಮಿಸಿದ ಗೋವಾದ ದಿನಗೂಲಿ ಕಾರ್ಮಿಕ

ಅಸ್ವಸ್ಥಳಾಗಿರುವ ಪತ್ನಿ ತನ್ನ ಅಂಗವಿಕಲ ಮಗಳಿಗೆ ಆಹಾರ ನೀಡಲಾಗುತ್ತಿರಲಿಲ್ಲ. ಇದರಿಂದ ಬೇಸರಗೊಂಡ ದಿನಗೂಲಿ ಕಾರ್ಮಿಕನೊಬ್ಬರು ಮಗಳಿಗೆ ಆಹಾರ ನೀಡುವುದಕ್ಕಾಗಿ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಅಂಗವಿಕಲ ಮಗಳಿಗೆ ಆಹಾರ ನೀಡಲು ರೋಬೋಟ್ ನಿರ್ಮಿಸಿದ ಗೋವಾದ ದಿನಗೂಲಿ ನೌಕರ
ಅಂಗವಿಕಲ ಮಗಳಿಗೆ ಆಹಾರ ನೀಡಲು ರೋಬೋಟ್ ನಿರ್ಮಿಸಿದ ಗೋವಾದ ದಿನಗೂಲಿ ನೌಕರ

ಪಣಜಿ: ಅಸ್ವಸ್ಥಳಾಗಿರುವ ಪತ್ನಿ ತನ್ನ ಅಂಗವಿಕಲ ಮಗಳಿಗೆ ಆಹಾರ ನೀಡಲಾಗುತ್ತಿರಲಿಲ್ಲ. ಇದರಿಂದ ಬೇಸರಗೊಂಡ ದಿನಗೂಲಿ ಕಾರ್ಮಿಕನೊಬ್ಬರು ಮಗಳಿಗೆ ಆಹಾರ ನೀಡುವುದಕ್ಕಾಗಿ ರೋಬೋಟ್ ಅನ್ನು ಕಂಡುಹಿಡಿದಿದ್ದಾರೆ.

ಗೋವಾ ಸ್ಟೇಟ್ ಇನೋವೇಶನ್ ಕೌನ್ಸಿಲ್, ಬಿಪಿನ್ ಕದಮ್ ಅವರ ಆವಿಷ್ಕಾರಕ್ಕಾಗಿ ಅವರನ್ನು ಶ್ಲಾಘಿಸಿದೆ ಮತ್ತು ಯಂತ್ರದಲ್ಲಿ ಮತ್ತಷ್ಟು ಕೆಲಸ ಮಾಡಲು ಮತ್ತು ಅದರ ವಾಣಿಜ್ಯ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಅವರಿಗೆ ಹಣಕಾಸಿನ ನೆರವು ನೀಡುತ್ತಿದ್ದಾರೆ.

ಬಿಪಿನ್ ತಮ್ಮ ರೋಬೋಟ್‌ಗೆ 'ಮಾ ರೋಬೋಟ್' ಎಂದು ಹೆಸರಿಟ್ಟಿದ್ದಾರೆ. ಬಿಪಿನ್ ಅವರ ಮಗಳಿಗೆ ಕೈಗಳನ್ನು ಎತ್ತಲು ಸಹ ಶಕ್ತಿಯಿಲ್ಲ. ಹೀಗಾಗಿ ಆಕೆಗೆ ಬೇಕಾದ ಆಹಾರವನ್ನು ರೋಬೋಟ್‌ನ ಭಾಗವಾದ ತಟ್ಟೆಯಲ್ಲಿಟ್ಟರೆ, ಅದನ್ನು ಬಾಯಿಗೆ ಕೊಡುವ ಕೆಲಸವನ್ನು ‘ಧ್ವನಿ ಕಮಾಂಡ್’ ತಂತ್ರಜ್ಞಾನವನ್ನು ಆಧರಿಸಿ ರೋಬೋಟ್ ಮಾಡುತ್ತದೆ.

ದಕ್ಷಿಣ ಗೋವಾದ ಪೊಂಡಾ ತಾಲೂಕಿನ ಬೇಥೋರಾ ಗ್ರಾಮದ ನಿವಾಸಿಯಾಗಿರುವ ಕದಂ ಅವರು 40 ವರ್ಷದವರಾಗಿದ್ದು, ಯಾವುದೇ ತಾಂತ್ರಿಕ ಜ್ಞಾನವನ್ನು ಹೊಂದಿಲ್ಲ. ಇವರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

'ತನ್ನ 14 ವರ್ಷದ ಮಗಳು ಅಂಗವಿಕಲಳು ಮತ್ತು ಸ್ವಂತವಾಗಿ ತಿನ್ನಲು ಸಾಧ್ಯವಿಲ್ಲ. ಹೀಗಾಗಿ ಆಕೆ ಊಟಕ್ಕಾಗಿ ತನ್ನ ತಾಯಿಯ ಮೇಲೆ ಅವಲಂಬಿತಳಾಗಿದ್ದಳು. ಎರಡು ವರ್ಷಗಳ ಹಿಂದೆ ನನ್ನ ಹೆಂಡತಿ ಹಾಸಿಗೆ ಹಿಡಿದಿದ್ದಳು. ನಮ್ಮ ಮಗಳಿಗೆ ಊಟ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ನಾನು ಏನಾದರೂ ಮಾಡಬೇಕಾಯಿತು' ಎನ್ನುತ್ತಾರೆ ಬಿಪಿನ್ ಕದಂ.

ಯಾರ ಮೇಲೂ ಅವಲಂಬಿತರಾಗದೆ ತಮ್ಮ ಮಗಳು ಸಮಯಕ್ಕೆ ಸರಿಯಾಗಿ ಊಟ ಮಾಡುವಂತೆ ಏನಾದರೂ ಮಾಡಬೇಕು ಎಂದು ನನ್ನ ಪತ್ನಿ ಒತ್ತಾಯಿಸಿದರು. ಹೀಗಾಗಿ ರೋಬೋಟ್‌ಗಾಗಿ ಕಳೆದ ಒಂದು ವರ್ಷದ ಹಿಂದೆ ಹುಡುಕಾಟ ನಡೆಸಿದ್ದೆ. ಈ ರೀತಿಯ ರೋಬೋಟ್ ಎಲ್ಲಿಯೂ ದೊರಕದ ಕಾರಣ ನಾನೇ ವಿನ್ಯಾಸಗೊಳಿಸಲು ತೀರ್ಮಾನಿಸಿದೆ. ಸಾಫ್ಟ್‌ವೇರ್‌ನ ಮೂಲಭೂತ ಅಂಶಗಳನ್ನು ಕಲಿಯಲು ಆನ್‌ಲೈನ್‌ನಲ್ಲಿ ಮಾಹಿತಿ ಸಂಗ್ರಹಿಸಿದೆ ಎಂದು ಬಿಪಿನ್ ತಿಳಿಸಿದ್ದಾರೆ.

'ಇದಕ್ಕಾಗಿ ನಾನು ವಿರಾಮವಿಲ್ಲದೆ ದಿನದ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಉಳಿದ ಸಮಯದಲ್ಲಿ ಸಂಶೋಧನೆ ಮತ್ತು ರೋಬೋಟ್ ಅನ್ನು ಹೇಗೆ ತಯಾರಿಸಬೇಕೆಂದು ಕಲಿಯುತ್ತಿದ್ದೆ. ನಾನು ನಾಲ್ಕು ತಿಂಗಳ ಕಾಲ ನಿರಂತರ ಸಂಶೋಧನೆ ಮಾಡಿ ನಂತರ ಈ ರೋಬೋಟ್ ಅನ್ನು ವಿನ್ಯಾಸಗೊಳಿಸಿದೆ. ಈಗ ನಾನು ಕೆಲಸದಿಂದ ಹಿಂತಿರುಗುವಾಗ ನನ್ನ ಮಗಳು ನನ್ನತ್ತ ನೋಡಿ ನಗುವುದನ್ನು ನೋಡಿದಾಗ ನನಗೂ ಸಂತೋಷವಾಗುತ್ತದೆ' ಎಂದು ಅವರು ಹೇಳಿದರು.

'ಮಾ ರೋಬೋಟ್' ತನ್ನ ಮಗಳಿಗೆ ಆಕೆಯ ವಾಯ್ಸ್ ಕಮಾಂಡ್ ಮೇಲೆ ಆಹಾರವನ್ನು ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತವನ್ನು ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ನಾನು ನನ್ನ ಮಗುವನ್ನು ಆತ್ಮನಿರ್ಭರ್ (ಸ್ವಾವಲಂಬಿ) ಮಾಡಲು ಬಯಸಿದ್ದೆ ಮತ್ತು ಈಗ ಆಕೆ ಯಾರ ಮೇಲೂ ಅವಲಂಬಿತವಾಗಿಲ್ಲ' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com