ದೃಷ್ಟಿಹೀನ ಯುವಕನಿಗೆ ಮೈಕ್ರೋಸಾಫ್ಟ್‌ನಿಂದ ವಾರ್ಷಿಕ 45 ಲಕ್ಷ ರೂಪಾಯಿಯ ಉದ್ಯೋಗದ ಆಫರ್!

ಇಂದೋರ್‌ನ ಯುವ ಸಾಫ್ಟ್‌ವೇರ್ ಇಂಜಿನಿಯರ್, ಹುಟ್ಟಿನಿಂದಲೇ ಹೊಂದಿದ್ದ ಕುರುಡುತನವನ್ನು ಜಯಿಸಿ, ಜಾಗತಿಕ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಸಂಸ್ಥೆ ಮೈಕ್ರೋಸಾಫ್ಟ್‌ನಿಂದ ಅಮೂಲ್ಯವಾದ ಕೆಲಸದ ಆಫರ್ ಅನ್ನು ಪಡೆದಿದ್ದಾರೆ.
ಯಶ್ ಸೋನಾಕಿಯಾ
ಯಶ್ ಸೋನಾಕಿಯಾ

ಭೋಪಾಲ್: 'ವೈಕಲ್ಯವು ಯಶಸ್ಸಿಗೆ ಅಡ್ಡಿಯಾಗಬಾರದು' ಎಂಬ ಸ್ಟೀಫನ್ ಹಾಕಿಂಗ್ ಅವರ ಪ್ರಸಿದ್ಧ ಮಾತುಗಳನ್ನು 25 ವರ್ಷದ ಯಶ್ ಸೋನಾಕಿಯಾ ಅವರು ಸರಿ ಎಂದು ಸಾಬೀತುಪಡಿಸಿದ್ದಾರೆ. ಇದೇ ಕಾರಣಕ್ಕೆ ಅವರು ಇದೀಗ ಬಹುತೇಕರಿಗೆ ಮಾದರಿಯಾಗಿದ್ದಾರೆ.

ಇಂದೋರ್‌ನ ಯುವ ಸಾಫ್ಟ್‌ವೇರ್ ಇಂಜಿನಿಯರ್, ಹುಟ್ಟಿನಿಂದಲೇ ಹೊಂದಿದ್ದ ಕುರುಡುತನವನ್ನು ಜಯಿಸಿ, ಜಾಗತಿಕ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಸಂಸ್ಥೆ ಮೈಕ್ರೋಸಾಫ್ಟ್‌ನಿಂದ ಅಮೂಲ್ಯವಾದ ಕೆಲಸದ ಆಫರ್ ಅನ್ನು ಪಡೆದಿದ್ದಾರೆ. ಈ ವರ್ಷದ ಮಾರ್ಚ್ ಮತ್ತು ಜೂನ್‌ ನಡುವೆ ಆನ್‌ಲೈನ್ ಪರೀಕ್ಷೆ ಮತ್ತು ಮೂರು ಸುತ್ತಿನ ಸಂದರ್ಶನಗಳಲ್ಲಿ ತೇರ್ಗಡೆಯಾದ ನಂತರ ಅವರು ವಾರ್ಷಿಕ 45 ಲಕ್ಷ ರೂಪಾಯಿಯ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ.

ಜಿಲ್ಲಾ ನ್ಯಾಯಾಲಯದ ಕ್ಯಾಂಟೀನ್ ಮುಖ್ಯಸ್ಥ ಯಶಪಾಲ್ ಸೋನಾಕಿಯಾ ಮತ್ತು ಗೃಹಿಣಿ ಯೋಗಿತಾ ಸೋಂಕಿಯಾ ಅವರ ಮೂವರು ಮಕ್ಕಳಲ್ಲಿ ಹಿರಿಯವರಾದ ಯಶ್ ಈಗ ಮೈಕ್ರೋಸಾಫ್ಟ್‌ನ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಶೀಘ್ರದಲ್ಲೇ ಸೇರಲು ಸಿದ್ಧರಾಗಿದ್ದಾರೆ. ಅವರು ತಮ್ಮ ದೀರ್ಘಕಾಲದ ಸಹಾಯಕ ಸ್ಕ್ರೀನ್ ರೀಡರ್ ಸಾಫ್ಟ್‌ವೇರ್‌ನೊಂದಿಗೆ ಮನೆಯಿಂದಲೇ ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ.

<strong>ಯಶ್ ಸೋನಾಕಿಯಾ</strong>
ಯಶ್ ಸೋನಾಕಿಯಾ

ಯಶ್ ಅವರು ಸ್ವತಃ ಮೈಕ್ರೋಸಾಫ್ಟ್‌ನೊಂದಿಗೆ ಕೆಲಸ ಮಾಡಲು ಅರ್ಜಿ ಸಲ್ಲಿಸಿದ್ದರು. ನಂತರ ಕೋಡಿಂಗ್ ಮೂಲಕ ತಮ್ಮ ವಿಶ್ಲೇಷಣಾತ್ಮಕ ಕೌಶಲ್ಯಗಳ ಮೂಲಕ ಅವರು ಆನ್‌ಲೈನ್ ಪರೀಕ್ಷೆ ಮತ್ತು ಮೂರು ಸುತ್ತಿನ ಸಂದರ್ಶನಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

'ಬಾಲ್ಯದಿಂದಲೂ ಯಶಸ್ವಿ ಇಂಜಿನಿಯರ್ ಆಗುವುದು ನನ್ನ ಕನಸಾಗಿತ್ತು. ಆದರೆ ಗ್ಲುಕೋಮಾದ (ಬಾಲ್ಯದಿಂದಲೇ ಕುರುಡುತನ ತರುವ ರೋಗ) ಮಿತಿಗಳಿಂದಾಗಿ, ನಾನು ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್, ಮೆಟಲರ್ಜಿಕಲ್ ಅಥವಾ ಮೈನಿಂಗ್ ಎಂಜಿನಿಯರಿಂಗ್‌ನಂತಹ ಬ್ರಾಂಚಸ್‌ಗಳಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ ಎಂದು ನನಗೆ ತಿಳಿದಿತ್ತು. ಇದಾದ ಬಳಿಕ ಇಂದೋರ್‌ನ ಶ್ರೀ ಗೋವಿಂದರಾಮ್ ಸೆಕ್ಸಾರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಳೆದ ವರ್ಷ ಬಿ.ಟೆಕ್ ಅನ್ನು ಪೂರ್ಣಗೊಳಿಸಿದೆ' ಎಂದು ಯಶ್ TNIE ಗೆ ತಿಳಿಸಿದರು.

ಹಿರಿಯ ಮಗನ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ತಂದೆ ಯಶಪಾಲ್ ಮತ್ತು ತಾಯಿ ಯೋಗಿತಾ ಸೋನಾಕಿಯಾ, 'ಯಶ್ ಯಾವಾಗಲು ಎಂಜಿನಿಯರ್ ಆಗಬೇಕೆಂದು ಬಯಸಿದ್ದನು. ಏಳು ವರ್ಷಗಳಲ್ಲಿ ಆತನಿಗೆ 8 ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರೂ, ಜನಿಸುತ್ತಲೇ ಬಂದ ದೃಷ್ಟಿ ದೋಷವನ್ನು ನಿವಾರಿಸಲು ಆಗಿಲ್ಲ. ಹೀಗಾಗಿಯೇ ಆತ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಸಹಜ ಭಾವನೆಯಿಂದಲೇ ಆತನನ್ನು ಬೆಳೆಸಿದ್ದೆವು. ಆದರೆ, ಆತ ಬೆಳೆದಂತೆ ಎಲೆಕ್ಟ್ರಾನಿಕ್ಸ್ ಮೇಲಿನ ಮೋಹವು ಅವನಿಗೆ 'ಚಲ್ತಾ ಫಿತ್ರಾ ಕಂಪ್ಯೂಟರ್' (Chief Performance Officer) ಎಂಬ ಹೊಸ ಹೆಸರನ್ನು ನೀಡಿತು. ಆತನ ಸಂಪೂರ್ಣ ಪರಿಶ್ರಮ ಮತ್ತು ದೇವರು ನೀಡಿದ ವಿಶ್ಲೇಷಣಾತ್ಮಕ ಕೌಶಲ್ಯದಿಂದ ಆತ ಬಯಸಿದ್ದನ್ನೇ ಸಾಧಿಸಿದ್ದಾನೆ' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com