9 ವರ್ಷಗಳಿಂದ ಉಚಿತ ಯೋಗ ತರಬೇತಿ ನೀಡುತ್ತಿರುವ ಉಡುಪಿ ದಂಪತಿಗಳು; ಎಲ್ಲವೂ ಆತ್ಮತೃಪ್ತಿಗಾಗಿ!

ಸಮಾಜ ತಮಗೆ ಎಲ್ಲವೂ ನೀಡಿದ್ದು, ಸಮಾಜಕ್ಕೆ ಕೊಡುಗೆ ನೀಡುವ ಸಲುವಾಗಿ ಉಡುಪಿಯ ಈ ದಂಪತಿಗಳು ಕಳೆದ 9 ವರ್ಷಗಳಿಂದ ಜನರಿಗೆ ಉಚಿತ ಯೋಗ ತರಬೇತಿ ನೀಡಿ, ಆತ್ಮತೃಪ್ತಿ ಪಡೆದುಕೊಳ್ಳುತ್ತಿದ್ದಾರೆ.
ಅಮಿತ್ ಕುಮಾರ್ ಶೆಟ್ಟಿ ಹಾಗೂ ಅಖಿಲಾ ಶೆಟ್ಟಿ
ಅಮಿತ್ ಕುಮಾರ್ ಶೆಟ್ಟಿ ಹಾಗೂ ಅಖಿಲಾ ಶೆಟ್ಟಿ

ಸಮಾಜ ತಮಗೆ ಎಲ್ಲವೂ ನೀಡಿದ್ದು, ಸಮಾಜಕ್ಕೆ ಕೊಡುಗೆ ನೀಡುವ ಸಲುವಾಗಿ ಉಡುಪಿಯ ಈ ದಂಪತಿಗಳು ಕಳೆದ 9 ವರ್ಷಗಳಿಂದ ಜನರಿಗೆ ಉಚಿತ ಯೋಗ ತರಬೇತಿ ನೀಡಿ, ಆತ್ಮತೃಪ್ತಿ ಪಡೆದುಕೊಳ್ಳುತ್ತಿದ್ದಾರೆ. 

ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅಮಿತ್ ಕುಮಾರ್ ಶೆಟ್ಟಿ (66) ಮತ್ತು ಅವರ ಪತ್ನಿ ಅಖಿಲಾ ಶೆಟ್ಟಿ (57) ಅವರು ಕಳೆದ 9 ವರ್ಷಗಳಿಂದ ಜನರಿಗೆ ಉಚಿತ ಯೋಗ ತರಬೇತಿ ನೀಡುತ್ತಿದ್ದಾರೆ. ಈ ದಂಪತಿಗಳು ಭೌತಿಕ ಮತ್ತು ಒತ್ತಡದ ಪ್ರಪಂಚದ ಆಕರ್ಷಣೆಗಳಿಗೆ ಮಣಿಯದೆ, ಆನಂದದಿಂದ ಬದುಕುವ ಸಮಾಜವನ್ನು ರಚಿಸುವ ಧ್ಯೇಯವನ್ನು ಹೊಂದಿದ್ದಾರೆ. 

ಕಳೆದ 9 ವರ್ಷಗಳಿಂದಲೂ ಈ ದಂಪತಿಗಳು ಪ್ರತೀನಿತ್ಯ 3 ಬ್ಯಾಚ್ ಗಳಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದಾರೆ. ದಿನ ಬೆಳಗಾಗುತ್ತಿದ್ದಂತೆಯೇ  ಈ ದಂಪತಿಗಳು ಉಡುಪಿ ನಗರದ ಬ್ರಹ್ಮಗಿರಿಯ ಲಯನ್ಸ್ ಭವನಕ್ಕೆ ಬೇಟಿ ನೀಡಿ ಪ್ರತಿದಿನ ಬೆಳಿಗ್ಗೆ 5.30 ರಿಂದ 6.45 ರವರೆಗೆ ಯೋಗ ಕಲಿಸುತ್ತಾರೆ. ಇದಾದ ಬಳಿಕ ಮಣಿಪಾಲದ ಮನ್ನಪಳ್ಳ ಕೆರೆ ಬಳಿಯ ರೋಟರಿ ಭವನದಲ್ಲಿ ಯೋಗ ಕಲಿಸುತ್ತಿದ್ದಾರೆ. ಸುಮಾರು 60 ಮಂದಿ ವಿದ್ಯಾರ್ಥಿಗಳಿರುವ ಬ್ಯಾಚ್ ದಂಪತಿಗಳು ನೀಡುವ ಸೂಚನೆಗಳನ್ನು ಬಹಳ ಉತ್ಸಾಹದಿಂದ ಪಾಲನೆ ಮಾಡುತ್ತಾರೆ. 

ಬಳಿಕ ಸಂಜೆ 4.45ಕ್ಕೆ ದಂಪತಿಗಳು ಅಜ್ಜರಕಾಡ್‌ನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಹಿರಿಯ ನಾಗರಿಕರ ವೇದಿಕೆ ಹೋಗಿ ಸಂಜೆ 6.45ರವರೆಗೂ ಯೋಗ ಹೇಳಿಕೊಡುತ್ತಾರೆ. ಇದೇ ರೀತಿ ಕಳೆದ 9 ವರ್ಷಗಳಿಂದ ಈ ದಂಪತಿಗಳು ಎಲ್ಲಾ ವಯೋಮಾನದ 1,500ಕ್ಕೂ ಹೆಚ್ಚು ಜನರಿಗೆ ಯೋಗ ಹೇಳಿಕೊಡುತ್ತಿದ್ದಾರೆ. 

ವಿದ್ಯಾರ್ಥಿಗಳಿಗೆ ಉಚಿತವಾಗಿ ಯೋಗ ಹೇಳಿಕೊಡಲು ಹೇಗೆ ನಿರ್ಧರಿಸಿದಿರಿ ಎಂದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅಮಿತ್ ಶೆಟ್ಟಿಯವರು, 38 ವರ್ಷಗಳ ಕಾಲ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಕೆಲಸ ಮಾಡಿದ್ದೇನೆ. ಆ ದಿನಗಳಲ್ಲಿ ಸಮಾಜವು ನನಗೆ ಎಲ್ಲವನ್ನೂ ನೀಡಿದೆ. ಹೀಗಾಗಿ 2015ರಲ್ಲಿ ನಿವೃತ್ತಿ ಹೊಂದುವ ಸಮಯದಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಬಯಸಿದ್ದೆ. ಇದರಂತೆ ಪತ್ನಿಯೊಂದಿಗೆ ಸೇರಿ ಉಚಿತವಾಗಿ ಯೋಗ ತರಬೇತಿ ನೀಡಲು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ. 

ಯೋಗ ತರಬೇತಿ ಎಲ್ಲರಿಗೂ ಪ್ರಯೋಜನವಾಗುತ್ತದೆ. ಸಮಾಜಕ್ಕೆ ಇದಕ್ಕಿಂತ ಉತ್ತಮ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

ಇದಲ್ಲದೆ, ಅಮಿತ್ ಶೆಟ್ಟಿ ಉಚಿತ ಯೋಗ ತರಬೇತಿ ನೀಡಲು ಮತ್ತೊಂದು ಕಾರಣವಿದೆ. 22 ವರ್ಷಗಳ ಹಿಂದೆ ತೀರ್ಥಹಳ್ಳಿಯಲ್ಲಿ ಸಮಿತಿ ಉಚಿತವಾಗಿ ನಡೆಸಿದ ಯೋಗ ತರಬೇತಿಯನ್ನು ತಮ್ಮ ಗುರು ಎಚ್ ಎಂ ಕೃಷ್ಣಮೂರ್ತಿ ಅವರಿಂದ ಪಡೆದುಕೊಂಡಿದ್ದರು. ತಾವೂ ಉಚಿತವಾಗಿ ಯೋಗ ತರಬೇತಿ ಪಡೆದುಕೊಂಡ ಹಿನ್ನೆಲೆಯಲ್ಲಿ ತಮ್ಮ ಬಳಿ ಕಲಿಯುವ ವಿದ್ಯಾರ್ಥಿಗಳಿಂದಲೂ ಸಂಭಾವನೆ ನಿರೀಕ್ಷಿಸದಿರಲು ಅಮಿತ್ ನಿರ್ಧರಿಸಿದ್ದರು. 

ಉಡುಪಿಯಲ್ಲಿ ಯುಎಇಯಲ್ಲಿ ನೆಲೆಸಿದ್ದ ಹಿರಿಯ ನಾಗರೀಕರೊಬ್ಬರು ನನ್ನನ್ನು ಭೇಟಿ ಮಾಡಿದ್ದರು. ಈ ವೇಳೆ ತಮ್ಮ ಬೆನ್ನು ನೋವಿನ ಬಗ್ಗೆ ಹೇಳಿಕೊಂಡಿದ್ದರು. ಅವರ ಮಗಳು ಹಾಗೂ ಅಳಿಯ ಇಬ್ಬರೂ ವೈದ್ಯರಾಗಿದ್ದರೂ, ಬೆನ್ನು ನೋವು ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ನನ್ನನ್ನು ಭೇಟಿ ಮಾಡಿದಾಗ ಯೋಗ ತರಬೇತಿ ಪಡೆದುಕೊಳ್ಳಲು ಸೂಚಿಸಿದ್ದೆ. 6 ತಿಂಗಳು ಕಾಲ ಯೋಗ ಮಾಡಿದರು, ಬಳಿಕ ಬೆನ್ನು ನೋವಿನ ಕುರುಹುಗಳು ಇಲ್ಲದಂತೆ ನೋವು ಮಾಯವಾಗಿತ್ತು ಎಂದು ಅಮಿತ್ ಹೇಳಿದರು. 

ಮಧುಮೇಹದಿಂದ ಬಳಲುತ್ತಿದ್ದ 30 ವರ್ಷದ ಎಂಜಿನಿಯರಿಂಗ್ ವೃತ್ತಿಪರರೊಬ್ಬರು ನನ್ನನ್ನು ಭೇಟಿ ಮಾಡಿದ್ದರು. ಬಳಿಕ ಸಾಮಾನ್ಯ ವಿದ್ಯಾರ್ಥಿಯಾಗಿ ಯೋಗ ತರಬೇತಿ ಪಡೆದುಕೊಂಡಿದ್ದರು. 6 ತಿಂಗಳುಗಳಲ್ಲಿ ಅವರ ಆರೋಗ್ಯ ಸಾಮಾನ್ಯಕ್ಕೆ ಬಂದಿತ್ತು. ಈಗ ಕೋಲ್ಕತ್ತಾದಲ್ಲಿ ಅವರು ಇತರರಿಗೆ ಯೋಗ ಹೇಳಿಕೊಡುತ್ತಿದ್ದಾರೆ. 

ದಂಪತಿಗಳು ಯೋಗ ತರಬೇತಿ ವೇಳೆ ವಿವಿಧ ಆಸನಗಳಾದ ತ್ರಿಕೋನಾಸನ, ಪಾರ್ಶ್ವ ಕೋನಾಸನ, ವೀರಭದ್ರಾಸನ, ಉತ್ಕಟಾಸನ, ಪಾರ್ಶ್ವೋತ್ತನಾಸನ, ಭಾರದ್ವಾಜಾಸನ, ಅರ್ಧ ಮತ್ಸ್ಯೇಂದ್ರಾಸನ, ಮಾರೀಚಾಸನ, ಮಂಡೂಕಾಸನ, ಪಶ್ಚಿಮೋತ್ತಾಸನ, ಶೀರ್ಷಾಸನ, ಸರ್ವಾಂಗಾಸನ, ಚಕ್ರಸಾನ ಮುಂತಾದ ವಿವಿಧ ಆಸನಗಳನ್ನು ಕಲಿಸುತ್ತಾರೆ. 

ತರಗತಿಯು ವಿಶ್ರಾಂತಿ ವ್ಯಾಯಾಮಗಳೊಂದಿಗೆ ಪ್ರಾರಂಭವಾಗುತ್ತದೆ, ನಂತರ ಸೂರ್ಯ ನಮಸ್ಕಾರ, ನಂತರ ನಿಂತಿರುವ ಮತ್ತು ಕುಳಿತುಕೊಳ್ಳುವ ಆಸನಗಳು, ನಂತರ ಹೊಟ್ಟೆಗೆ ಸಂಬಂಧಿಸಿದ ಆಸನಗಳು ಮತ್ತು ಶವಾಸನದೊಂದಿಗೆ ಕೊನೆಗೊಳ್ಳುತ್ತದೆ. ಈ ವೇಳೆ ದಂಪತಿಗಳು ಪ್ರಾಣಾಯಾಮವನ್ನೂ ಕೂಡ ಕಲಿಸುತ್ತಾರೆ. ಇಡೀ ಯೋಗ ತರಬೇತಿಯು ಧ್ಯಾನದೊಂದಿಗೆ ಕೊನೆಗೊಳ್ಳುತ್ತದೆ.

‘ಔಷಧಿ ಇಲ್ಲದ ಜೀವನ’ ಎಂಬ ಧ್ಯೇಯವಾಕ್ಯದೊಂದಿಗೆ ಉಚಿತ ಯೋಗ ತರಗತಿಗಳನ್ನು ನಡೆಸುವುದಲ್ಲದೆ, ಈ ದಂಪತಿಗಳು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು, ಕ್ಯಾನ್ಸರ್ ರೋಗಿಗಳಿಗೆ ಮತ್ತು ಮೂತ್ರಪಿಂಡದ ಕಾಯಿಲೆಗೆ ಡಯಾಲಿಸಿಸ್ ಮಾಡುವವರಿಗೆ ಸಹಾಯ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಯೋಗವನ್ನು ಆರೋಗ್ಯಕರ ಜೀವನ ನಡೆಸಲು ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತಿದೆ ಎಂದು ಅಮಿತ್ ಶೆಟ್ಟಿ TNSE ಗೆ ತಿಳಿಸಿದರು. ಮೂರು ನಿಯಮಿತ ಅವಧಿಗಳ ಹೊರತಾಗಿ, ದಂಪತಿಗಳು ನಗರದ ಹೊರಗಿನ ಜನರನ್ನು ತಲುಪಲು ವಿವಿಧ ಸ್ಥಳಗಳಲ್ಲಿ ತಿಂಗಳ ಅವಧಿಯ ಶಿಬಿರಗಳನ್ನು ಸಹ ನಡೆಸುತ್ತಾರೆ. ಅಖಿಲಾ ಶೆಟ್ಟಿ ಹೇಳುವಂತೆ, ನಮ್ಮ ಜೀವನಶೈಲಿ ನಾಟಕೀಯವಾಗಿ ಬದಲಾಗಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಯೋಗವನ್ನು ಅಭ್ಯಾಸ ಮಾಡುವ ಅವಶ್ಯಕತೆಯಿದೆ.

‘ಔಷಧಿ ಇಲ್ಲದ ಜೀವನ’ ಎಂಬ ಧ್ಯೇಯವಾಕ್ಯದೊಂದಿಗೆ ದಂಪತಿಗಳು ಉಚಿತ ಯೋಗ ತರಬೇತಿಗಳನ್ನು ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ಕ್ಯಾನ್ಸರ್ ರೋಗಿಗಳಿಗೆ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಈ ದಂಪತಿಗಳು ತಮ್ಮ ಯೋಗ ತರಬೇತಿ ಮೂಲಕ ನೆರವು ನೀಡುತ್ತಿದ್ದಾರೆ. 

ಕಳೆದ ಕೆಲವು ವರ್ಷಗಳಿಂದ ಯೋಗವನ್ನು ಆರೋಗ್ಯಕರ ಜೀವನ ನಡೆಸಲು ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತಿದೆ. ಮೂರು ಬ್ಯಾಚ್ ಯೋಗ ತರಬೇತಿಗಳಷ್ಟೇ ಅಲ್ಲದೆ, ತಿಂಗಳ ಅವಧಿಯವರೆಗೆ ನಗರದ ಹೊರಗಿನ ಜನರನ್ನು ತಲುಪಲು ವಿವಿಧ ಸ್ಥಳಗಳಲ್ಲಿ ಯೋಗ ಹೇಳಿಕೊಡಲಾಗುತ್ತದೆ ಎಂದು ಅಮಿತ್ ಶೆಟ್ಟಿಯವರು ಹೇಳಿದ್ದಾರೆ. 

ನಮ್ಮ ಜೀವನಶೈಲಿ ನಾಟಕೀಯವಾಗಿ ಬದಲಾಗಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಯೋಗವನ್ನು ಅಭ್ಯಾಸ ಮಾಡುವ ಅವಶ್ಯಕತೆಯಿದೆ ಎಂದು ಅಖಿಲಾ ಶೆಟ್ಟಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com