ವಿಶ್ವ ದೂರದರ್ಶನ ದಿನ 2022: ಈ ದಿನದ ಇತಿಹಾಸ, ಮಹತ್ವ ಬಗ್ಗೆ ಮಾಹಿತಿ ಇಲ್ಲಿದೆ...

ಪ್ರತಿ ವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಜೀವನದಲ್ಲಿ ದೂರದರ್ಶನದ ಮಹತ್ವ ಮತ್ತು ಪ್ರಭಾವವನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ದೂರದರ್ಶನವು ಸಮಾಜಕ್ಕೆ ಮತ್ತು ವ್ಯಕ್ತಿಯ ಜೀವನಕ್ಕೆ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ.

Published: 21st November 2022 01:29 PM  |   Last Updated: 22nd November 2022 04:53 PM   |  A+A-


File photo

ಸಂಗ್ರಹ ಚಿತ್ರ

The New Indian Express

ಪ್ರತಿ ವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಜೀವನದಲ್ಲಿ ದೂರದರ್ಶನದ ಮಹತ್ವ ಮತ್ತು ಪ್ರಭಾವವನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ದೂರದರ್ಶನವು ಸಮಾಜಕ್ಕೆ ಮತ್ತು ವ್ಯಕ್ತಿಯ ಜೀವನಕ್ಕೆ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ.

ಸಮಾಜ ಮತ್ತು ವ್ಯಕ್ತಿಗಳ ಜೀವನ ಎರಡರಲ್ಲೂ ದೂರದರ್ಶನವು ವಹಿಸುವ ಮಹತ್ವದ ಪಾತ್ರದ ಬಗ್ಗೆ ತಿಳಿದೇ ಇದೆ.  ಇದು ನಮಗೆ ಮಾಹಿತಿ ಮತ್ತು ಮನರಂಜನೆಯ ಮೂಲವಾಗಿದೆ. ಈ ವಿದ್ಯುನ್ಮಾನ ಮಾಧ್ಯಮವು ಜಗತ್ತಿನಲ್ಲಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ಮಾಹಿತಿ ನೀಡುತ್ತಿರುತ್ತದೆ.

ದೂರದರ್ಶನದ ಆವಿಷ್ಕಾರವು ಜಗತ್ತನ್ನು ಕ್ರಾಂತಿಗೊಳಿಸುವುದರ ಜೊತೆಗೆ ಮನರಂಜನೆ, ಶಿಕ್ಷಣ, ದೂರದ ಸುದ್ದಿ ಮತ್ತು ರಾಜಕೀಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆಯುವ ಸಮೂಹ ಸಂವಹನದ ಪ್ರಬಲ ಮಾಧ್ಯಮವಾಗಿ ಬೆಳೆದುನಿಂತಿದೆ.

ಈ ಮಹತ್ವದ ದಿನದಂದು ಪ್ರತಿಯೊಬ್ಬರು ದೂರದರ್ಶನ ದಿನದ ಇತಿಹಾಸ ಮತ್ತು ಸತ್ಯಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಇದನ್ನೂ ಓದಿ: ಬಿಹಾರದ ಮಾವೋವಾದಿ ಪೀಡಿತ ಬುಡಕಟ್ಟು ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಟಿವಿ ಆಗಮನ, ಗ್ರಾಮಸ್ಥರಲ್ಲಿ ಸಂಭ್ರಮ!

1927 ರಲ್ಲಿ ಅಮೇರಿಕನ್ ಸಂಶೋಧಕ ಫಿಲೋ ಟೇಲರ್ ಫಾರ್ನ್ಸ್ವರ್ತ್ ವಿಶ್ವದ ಮೊದಲ ಎಲೆಕ್ಟ್ರಾನಿಕ್ ದೂರದರ್ಶನವನ್ನು ಕಂಡುಹಿಡಿದರು. ಒಂದು ವರ್ಷದ ನಂತರ ಚಾರ್ಲ್ಸ್ ಫ್ರಾನ್ಸಿಸ್ ಜೆಂಕಿನ್ಸ್ ರಚಿಸಿದ ಮೊದಲ ಮೆಕ್ಯಾನಿಕಲ್ ಟಿವಿ ಸ್ಟೇಷನ್ W3XK ತನ್ನ ಮೊದಲ ಪ್ರಸಾರವನ್ನು ಪ್ರಸಾರ ಮಾಡಿತು. ಇದು ಮಾಹಿತಿಯನ್ನು ತಲುಪಿಸುವಲ್ಲಿ ಟಿವಿಯ ಪ್ರಾಮುಖ್ಯತೆ ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಅದು ಹೇಗೆ ಭಾಗವಹಿಸುತ್ತದೆ ಎಂಬುದನ್ನು ಚರ್ಚಿಸಲು 1996 ರಲ್ಲಿ 51/205 ನಿರ್ಣಯದ ಮೂಲಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 21 ಅನ್ನು ವಿಶ್ವ ದೂರದರ್ಶನ ದಿನವೆಂದು ಘೋಷಿಸಿತು.

ಮುದ್ರಣ ಮಾಧ್ಯಮ, ಪ್ರಸಾರ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ದೂರದರ್ಶನದ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹರಡುವ ಮತ್ತು ಹಂಚಿಕೊಳ್ಳುವ ಪತ್ರಕರ್ತರು, ಬರಹಗಾರರು ಮತ್ತು ಬ್ಲಾಗಿಗರು ಸೇರಿದಂತೆ ವಿವಿಧ ಜನರು ಒಟ್ಟಾಗಿ ಸೇರಿ ಈ ದಿನವನ್ನು ಆಚರಿಸುತ್ತಾರೆ.

ಶಾಲೆಗಳಲ್ಲಿ, ಮಾಧ್ಯಮ ಮತ್ತು ಸಂವಹನ ಸಮಸ್ಯೆಗಳ ಬಗ್ಗೆ ಮಾತನಾಡಲು ಹಲವಾರು ಅತಿಥಿ ಭಾಷಣಕಾರರನ್ನು ಆಹ್ವಾನಿಸಲಾಗುತ್ತದೆ. ನಮ್ಮ ಜೀವನದಲ್ಲಿ ದೂರದರ್ಶನದ ಪಾತ್ರವೇನು, ದೂರದರ್ಶನವು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಮಾನ್ಯ ತಿಳುವಳಿಕೆಯನ್ನು ಹೇಗೆ ಉತ್ತೇಜಿಸುತ್ತದೆ.

ಇದನ್ನೂ ಓದಿ: ಸುತ್ತ ಮರಾಠಿ ವಾತಾವರಣ, ಆದರೆ ಇಲ್ಲಿನ ಜನರಿಗೆ ಕನ್ನಡದ ಮೇಲೆ ಪ್ರೀತಿ: ಬೀದರ್ ನ ಚೋಂಡಿ ಮುಖೇಡ್ ಗ್ರಾಮಸ್ಥರ ಹೃದಯಲ್ಲಿದೆ ಕನ್ನಡತನ!

ಇದು ಪ್ರಜಾಪ್ರಭುತ್ವ ಮತ್ತು ದೂರದರ್ಶನದ ನಡುವೆ ಸಂಪರ್ಕವನ್ನು ಹೇಗೆ ಒದಗಿಸುತ್ತದೆ ಮತ್ತು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳಲ್ಲಿ ದೂರದರ್ಶನದ ಪಾತ್ರದಂತಹ ವಿಷಯಗಳನ್ನು ಅವರು ಚರ್ಚಿಸುತ್ತಾರೆ.

ದೂರದರ್ಶನದ ಸೃಷ್ಟಿ ಮತ್ತು ಆಧುನಿಕ ಜೀವನದಲ್ಲಿ ಅದರ ಪ್ರಾಮುಖ್ಯತೆಯನ್ನು ವಿಶ್ವ ದೂರದರ್ಶನ ದಿನದಂದು ಆಚರಿಸಲಾಗುತ್ತದೆ. ದೂರದರ್ಶನಗಳು ನಮ್ಮ ಜೀವನದ ಅತ್ಯಗತ್ಯ ಭಾಗವಾಗುತ್ತಿವೆ, ನೈಜ ಸಮಯದಲ್ಲಿ ನಮಗೆ ಮನರಂಜನೆ ಮತ್ತು ಬ್ರೇಕಿಂಗ್ ನ್ಯೂಸ್‌ನ ಮೂಲವನ್ನು ಒದಗಿಸುತ್ತವೆ. ಒಟಿಟಿ ಸೇವೆಗಳ ಬಳಕೆಯಲ್ಲಿ ಹೆಚ್ಚಳದ ಹೊರತಾಗಿಯೂ, ದೂರದರ್ಶನಗಳು ನಮ್ಮ ಹೃದಯದಲ್ಲಿ ಇನ್ನೂ ವಿಶೇಷ ಸ್ಥಾನವನ್ನು ಹೊಂದಿವೆ.


Stay up to date on all the latest ವಿಶೇಷ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp