'ವಿಶ್ವ ಯೂತ್ ಸ್ಕ್ರ್ಯಾಬಲ್ ಚಾಂಪಿಯನ್'ನಲ್ಲಿ ಸಾಧನೆಗೈದ ಬೆಂಗಳೂರಿನ ಪುಟ್ಟ ಬಾಲಕ ಸಮರ್ಥ್ ಮಂಚಾಲಿ!

ಪದ ಜೋಡಣೆ ಆಟಗಳಲ್ಲಿ ಭಾರತೀಯರು ನಿಸ್ಸೀಮರು ಎಂಬುದು ಇಡೀ ವಿಶ್ವಕ್ಕೆ ಗೊತ್ತಿರುವ ವಿಚಾರ. ಭಾರತದ ಮಕ್ಕಳು ಮತ್ತು ಹದಿಹರೆಯದವರು ಹಲವಾರು ಸ್ಪೆಲ್ಲಿಂಗ್ ಬೀ ಸ್ಪರ್ಧೆಗಳಲ್ಲಿ ನಿರಂತರವಾಗಿ ಪ್ರಾಬಲ್ಯ ಸಾಧಿಸಿರುವುದೇ ಇದಕ್ಕೆ ಉದಾಹರಣೆ. ಇದೀಗ ಈ ಪಟ್ಟಿಗೆ ಸ್ಕ್ರ್ಯಾಬಲ್ ಆಟ ಕೂಡ ಸೇರಿಕೊಂಡಿದೆ.
ಸಮರ್ಥ ಮಂಚಾಲಿ ಅಣ್ಣ ಸುಯಶ್ ಜೊತೆ.
ಸಮರ್ಥ ಮಂಚಾಲಿ ಅಣ್ಣ ಸುಯಶ್ ಜೊತೆ.

ಪದ ಜೋಡಣೆ ಆಟಗಳಲ್ಲಿ ಭಾರತೀಯರು ನಿಸ್ಸೀಮರು ಎಂಬುದು ಇಡೀ ವಿಶ್ವಕ್ಕೆ ಗೊತ್ತಿರುವ ವಿಚಾರ. ಭಾರತದ ಮಕ್ಕಳು ಮತ್ತು ಹದಿಹರೆಯದವರು ಹಲವಾರು ಸ್ಪೆಲ್ಲಿಂಗ್ ಬೀ ಸ್ಪರ್ಧೆಗಳಲ್ಲಿ ನಿರಂತರವಾಗಿ ಪ್ರಾಬಲ್ಯ ಸಾಧಿಸಿರುವುದೇ ಇದಕ್ಕೆ ಉದಾಹರಣೆ. ಇದೀಗ ಈ ಪಟ್ಟಿಗೆ ಸ್ಕ್ರ್ಯಾಬಲ್ ಆಟ ಕೂಡ ಸೇರಿಕೊಂಡಿದೆ.

ಇತ್ತೀಚೆಗೆ ನಡೆದ 2022 ರ ವಿಶ್ವ ಯೂತ್ ಸ್ಕ್ರ್ಯಾಬಲ್ ಚಾಂಪಿಯನ್‌ಶಿಪ್‌ನಲ್ಲಿ, ಭಾರತದ ಇಬ್ಬರು ಯುವಕರು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಈ ಇಬ್ಬರ ಕುರಿತಾಗಿ ಇಂದು ನಾವು ನಿಮಗೆ ಮಾಹಿತಿ ನೀಡುತ್ತಿಲ್ಲ. ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅತ್ಯಂತ ಕಿರಿಯ ಆಟಗಾರರಲ್ಲಿ ಒಬ್ಬರಾಗಿದ್ದ ಬೆಂಗಳೂರಿನ ಸಮರ್ಥ್ ಮಂಚಾಲಿ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಸಮರ್ಥ್ ಮಂಚಾಲಿ ಚಾಂಪಿಯನ್‌ಶಿಪ್‌ನ 10 ವರ್ಷದೊಳಗಿನವರಲ್ಲಿ ಅತ್ಯುತ್ತಮ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಸಮರ್ಥ್ ಮಂಚಾಲಿ ಮೂಲತಃ ಬೆಂಗಳೂರಿನವರಾಗಿದ್ದು, ಕೇವಲ 9 ವರ್ಷದ ಈ ಬಾಲಕ ಇಂತಹ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಾಯಿ ಶುಭಾ ಮಂಚಾಲಿಯಿಂದ ಪ್ರೇರಣೆ ಪಡೆದುಕೊಂಡಿರುವ ಸಮರ್ಥ್ ಮಂಚಾಲಿ ಈ ಸಾಧನೆ ಮಾಡಿದ್ದಾರೆ. 7 ವರ್ಷದ ಪುಟ್ಟ ಬಾಲಕನಾಗಿರುವಾಗಲೇ ಸಮರ್ಥ್ ಸ್ಕ್ರ್ಯಾಬಲ್ ಆಡಲು ಆರಂಭಿಸಿದ್ದು, ಸ್ಕ್ರ್ಯಾಬಲ್ ಆಡಲು ಆರಂಭಿಸಿದ ಕೇವಲ ಎರಡು ವರ್ಷಗಳಲ್ಲಿ ಸಾಧನೆಯತ್ತ ಹೆಜ್ಜೆ ಹಾಕಿದ್ದಾನೆ.

<strong>ಸಮರ್ಥ ಮಂಚಾಲಿ</strong>
ಸಮರ್ಥ ಮಂಚಾಲಿ

ನಾನು ಚಿಕ್ಕವಳಾಗಿದ್ದಾಗಿನಿಂದಲೂ ಸ್ಕ್ರ್ಯಾಬಲ್ ಆಡುತ್ತಿದ್ದೆ. ಆದರೆ, ಸ್ಪರ್ಧೆಗಳ ಕುರಿತು ನನಗೆ ಅರಿವಿರಲಿಲ್ಲ. 2017 ರಲ್ಲಿ ನನ್ನ ಹಿರಿಯ ಮಗ ಸುಯಶ್ ಸ್ಕ್ರ್ಯಾಬಲ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದ. ಆಗಲೇ ನನಗೆ ಸ್ಪರ್ಧೆ ಹಾಗೂ ಕ್ಲಬ್ ಗಳಿರುವ ಬಗ್ಗೆ ಮಾಹಿತಿ ತಿಳಿದಿದ್ದು ಎಂದು ಸಮರ್ಥ್ ಮಂಚಾಲಿ ತಾಯಿ ಶುಭಾ ಮಂಚಾಲಿ ಹೇಳಿದ್ದಾರೆ.

ಸಮರ್ಥ್ ಅವರ ಹಿರಿಯ ಸಹೋದರ ಸುಯಶ್ ಅವರು, ವಿಶ್ವ ಯೂತ್ ಸ್ಕ್ರ್ಯಾಬಲ್ ಚಾಂಪಿಯನ್‌ಶಿಪ್‌ನಲ್ಲಿ ಇದೂವರೆಗೆ ಒಟ್ಟು ಐದು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ತಾಯಿ ಹಾಗೂ ಸಹೋದರನ ಬೆಂಬಲದೊಂದಿಗೆ ಸಮರ್ಥ್ ಇದೇ ಮೊದಲ ಬಾರಿಗೆ ಜಾಗತಿಕ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದು, ಇದೇ ಅವರ ಮೊದಲ ಸಾಧನೆಯಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಮಕ್ಕಳು ಹೊರಗೆ ಹೋಗಿ ಆಟವಾಡುವುದು ಸ್ಥಗಿತಗೊಂಡಿದ್ದು, ಮನೆಯಲ್ಲಿಯೇ ಇದ್ದ ಸಮರ್ಥ್ ಸ್ಕ್ರ್ಯಾಬಲ್ ಆಡುವತ್ತ ಆಸಕ್ತಿ ಬೆಳೆಸಿಕೊಂಡಿದ್ದ.

ಲಾಕ್ಡೌನ್ ಸಮಯದಲ್ಲಿ ಕಾಲ ಕಳೆಯಲು ನಾನು ಹಾಗೂ ಸುಯಾಶ್ ಸ್ಕ್ರ್ಯಾಬಲ್ ಆಡುತ್ತಿದ್ದೆವು. ಈ ವೇಳೆ ಸಮರ್ಥ್ ನಮ್ಮ ಜೊತೆಗೂಡಿದ್ದ. ಇದರಿಂದ ಹೆಚ್ಚು ಪದ ಕಲಿಯಲು ಆತನಿಗೆ ಸಹಾಯವಾಯಿತು. ನಂತರ ಇದರಲ್ಲಿಯೇ ಆಸಕ್ತಿ ಬೆಳೆಸಿಕೊಂಡ. ನಂತರ ಆನ್'ಲೈನ್ ಸ್ಪರ್ಧೆಗಳಲ್ಲಿ ಭಾಗವಿಹಿಸುವ ಮೂಲಕ ಸ್ಪರ್ಧೆಯಲ್ಲಿ ಆಸಕ್ತಿ ಬೆಳೆಸಿಕೊಂಡ.

2020ರಲ್ಲಿ ಎಲ್ಲವೂ ವರ್ಚುವಲ್ ಆಗಿದ್ದರಿಂದ ಆನ್'ಲೈನ್ ನಲ್ಲಿಯೇ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ. ಕೊರೋನಾ ಸೋಂಕು ಇಳಿಕೆಯಾಗಿ ಎಲ್ಲಾ ಚಟುವಟಿಕೆಗಳು ಆರಂಭವಾದ ಬಳಿಕ ಮು ಸಿಗ್ಮಾ ಇಂಟರ್ನ್ಯಾಷನಲ್ ಸ್ಕ್ರ್ಯಾಬಲ್ ಟೂರ್ನಮೆಂಟ್ ಮತ್ತು ಕರ್ನಾಟಕ ರಾಜ್ಯ ಸ್ಕ್ರ್ಯಾಬಲ್ ಅಸೋಸಿಯೇಷನ್ ​​ಆಯೋಜಿಸಿದ ಕೆಲವು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ. ಆದರೆ, ಈ ಎಲ್ಲಾ ಸ್ಪರ್ಧೆಗಳಿಗಿಂತಲೂ ಕಠಿಣವಾದ ಸ್ಪರ್ಧೆ ವಿಶ್ವ ಯೂತ್ ಸ್ಕ್ರ್ಯಾಬಲ್ ಚಾಂಪಿಯನ್‌ಶಿಪ್‌ ಆಗಿತ್ತು. ಅರ್ಹತಾ ಪಂದ್ಯಗಳ ಮೂಲಕ ಚಾಂಪಿಯನ್ ಶಿಪ್'ಗೆ ಸ್ಪರ್ಧಿಸಬೇಕು. ಅರ್ಹತಾ ಪಂದ್ಯದಲ್ಲಿಯೇ ಸಮರ್ಥ್ ಮೊದಲು ಬಂದಿದ್ದ ಎಂದು ಶುಭಾ ಅವರು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಜಾಗತಿಕ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದೆ. ಆರಂಭದಲ್ಲಿ ಭಯವಾಗಿತ್ತು. ಅರ್ಹತೆ ಪಡೆಯಲು ನಾವೆಲ್ಲರೂ 36 ಪಂದ್ಯಗಳನ್ನು ಆಡಬೇಕಿತ್ತು. ಟಾಪ್ 10 ನಲ್ಲಿ ಸ್ಥಾನ ಪಡೆದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆ. ಆದರೆ ನನಗೆ ಸಾಧ್ಯವಾಗಲಿಲ್ಲ. ಒಂದು ಆಟದಲ್ಲಿ ನಾನು 512 ಅಂಕ ಗಳಿಸಿದ್ದೆ. 'ಥಿನ್ನರ್ಸ್' ಪದದಲ್ಲಿ 97 ಅಂಕಗಳನ್ನು ಪಡೆದಿದ್ದೆ. ಒಂದೇ ಪದದಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ್ದು ಇದೇ ಮೊದಲಾಗಿತ್ತು ಎಂದು ಸಮರ್ಥ್ ತಿಳಿಸಿದ್ದಾನೆ.

ಸಮರ್ಥ್ ಮತ್ತು ಸುಯಶ್ ಇಬ್ಬರೂ ಈ ವಾರಾಂತ್ಯದಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಕಾಲಿನ್ಸ್ ನ್ಯಾಷನಲ್ ಸ್ಕ್ರ್ಯಾಬಲ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆದಿದ್ದು, ಮುಂದಿನ ವರ್ಷ ನಡೆಯುವ ವಿಶ್ವ ಯೂತ್ ಸ್ಕ್ರ್ಯಾಬಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಕಾದು ಕುಳಿತಿದ್ದಾರೆ.

ಸ್ಕ್ರ್ಯಾಬಲ್‌ ಆಟ ಎಂದರೇನು?
ಸ್ಕ್ರ್ಯಾಬಲ್‌ ಅನ್ನುವುದು ಒಂದು ಪದ ಆಟ. ಇದರಲ್ಲಿ 15-ರಿಂದ-15 ಚೌಕಗಳಿಂದ ಆಟದ ಫಲಕದಲ್ಲಿ ಗುರುತಿಸಿದ ಪ್ರತ್ಯಾಕ ಅಕ್ಷರದ ಅಂಚುಗಳಿಂದ ಪದಗಳನ್ನು ರಚಿಸಬೇಕು. ಇದರಿಂದ ಎರಡರಿಂದ ನಾಲ್ಕುಜನ ಆಟಗಾರರು ಪಾಯಿಂಟ್‌ಗಳನ್ನು ಪಡೆಯುತ್ತಾರೆ. ಪದಗಳನ್ನು ಅಡ್ಡವಾಗಿ ಮತ್ತು ಕೆಳಮುಖವಾಗಿ ಕ್ರಾಸ್‌ವೊರ್ಡ್ ಪದ್ಧತಿಯಲ್ಲಿ ರಚಿಸಲಾಗುತ್ತದೆ. ಅವು ಕಡ್ಡಾಯವಾಗಿ ನಿರ್ದಿಷ್ಟಮಾನದ ಪದಕೋಶದಲ್ಲಿ ಆವಿರ್ಭವಿಸಬೇಕು. ಅಧಿಕೃತ ಪ್ರಮಾಣಕೆಲಸಗಳು ಅನುಮೋದಿತ ಪದಗಳ ಪಟ್ಟಿಯನ್ನು ಒದಗಿಸುತ್ತವೆ. ಕೊಲಿನ್‌ರ ಸ್ಕ್ರ್ಯಾಬಲ್‌ ಚೆಕ್ಕರನ್ನು ಸಹ ಆ ಪದವು ಅನುಮೋದಿಸಲಾಗಿದೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚಲು ಉಪಯೋಗಿಸಬಹುದು.

ಈ ಆಟವನ್ನು ಇಬ್ಬರು ಅಥವಾ ನಾಲ್ಕು ಆಟಗಾರರಿಂದ 15-ರಿಂದ-15 ಚೌಕಟ್ಟಿನ ಕೋಣೆಗಳನ್ನೊಂದಿದ ಚದರದ ಫಲಕದಲ್ಲಿ ಆಡಲಾಗುತ್ತದೆ, ಪ್ರತಿಯೊಂದು ಚೌಕಗಳು ಒಂದೊಂದು ಅಕ್ಷರ ಅಂಚುಗಳನ್ನೊಂದಿರುತ್ತವೆ. ಅಧಿಕೃತ ಕ್ಲಬ್ ಮತ್ತು ಪಂದ್ಯಾಟದ ಆಟಗಳಲ್ಲಿ ಯಾವಾಗಲು ಇಬ್ಬರ ಆಟಗಾರರ ನಡುವೆಯೇ ಸ್ಪರ್ಧೆ ಏರ್ಪಡಿಸಲಾಗುತ್ತದೆ.

ಆಟವು 100 ಅಂಚುಗಳನ್ನೊಂದಿರುತ್ತದೆ, ಅವುಗಳಲ್ಲಿ 98 ಅಕ್ಷರಗಳಿಂದ ಮತ್ತು 1 ರಿಂದ 10ರ ಪಾಯಿಂಟ್‌ನಂತೆ ಶ್ರೇಣಿಯಿಂದ ಗುರುತಿಸಿರುತ್ತವೆ. ಪ್ರತಿಯೊಂದು ಅಕ್ಷರದ ಪಾಯಿಂಟ್‌ಗಳು ನಿರ್ದಿಷ್ಟಮಾನದ ಆಂಗ್ಲದ ಬರವಣಿಗೆಯಲ್ಲಿ ಅಕ್ಷರಗಳ ಸಂಭವಿಸುವಿಕೆಯನ್ನು ಆಧಾರಿಸಿರುತ್ತದೆ. ಇ ಅಥವಾ ಒ ಗಳಂತಹ ಸಾಮಾನ್ಯವಾಗಿ ಉಪಯೊಗಿಸುವ ಅಕ್ಷರಗಳು ಒಂದು ಪಾಯಿಂಟ್‌ಗೆ ಸಮ, ಆದರೆ ಅಪರೂಪದ ಅಕ್ಷರಗಳು ಹೆಚ್ಚಿನ ಪಾಯಿಂಟ್‌ಗಳನ್ನು ಪಡೆಯುತ್ತವೆ,  ಕ್ಯೂ ಮತ್ತು ಝೆಡ್ ಪ್ರತಿಯೊಂದು 10 ಪಾಯಿಂಟ್‌ಗಳಿಗೆ ಸಮ. ಆಟವು ಎರಡು ಖಾಲಿ ಅಂಚುಗಳನ್ನು ಕೂಡ ಹೊಂದಿರುತ್ತದೆ. ಆದರೆ, ಅವುದನ್ನು ಗುರುತಿಸಲಾಗುವುದಿಲ್ಲ. ಇದಕ್ಕೆ ಅಂಕಗಳೂ ಇರುವುದಿಲ್ಲ. ಖಾಲಿ ಅಂಚುಗಳನ್ನು ಯಾವುದೇ ಅಕ್ಷರಗಳ ಬದಲಿಗಳಾಗಿ ಉಪಯೋಗಿಸಬಹುದು; ಏನೇಯಾಗಲಿ, ಒಂದುಸಲ ಫಲಕದಲ್ಲಿ ಇಟ್ಟ ನಂತರ ಆಯ್ಕೆಯು ಸ್ಥಿರವಾಗುತ್ತದೆ. ಫಲಕವು "ಪ್ರಿಮಿಯಮ್" ಚದುರಗಳಿಂದ ಗುರುತಿಸಿರುತ್ತದೆ, ಇವು ಪಡೆದ ಪಾಯಿಂಟ್‌ಗಳ ಸಂಖ್ಯೆಯನ್ನು ಗುಣಿಸುತ್ತವೆ: ಡಾರ್ಕ್ ಕೆಂಪು "ತ್ರಿಗುಣ-ಪದ" ಚದುರಗಳು, ಗುಲಾಬಿ "ದ್ವಿಗುಣ-ಪದ" ಚದುರಗಳು , ಡಾರ್ಕ್ ನೀಲಿ "ದ್ವಿಗುಣ-ಅಕ್ಷರ" ಚದುರಗಳು ಮತ್ತು ತಿಳಿ ನೀಲಿ "ದ್ವಿಗುಣ-ಅಕ್ಷರ" ಚದುರಗಳು. ಹೆಚ್ಚಾಗಿ ಮಧ್ಯದ ಚದುರವಾದ ನಕ್ಷತ್ರ ಅಥವಾ ಲೊಗೊದಿಂದ ಗುರುತಿಸಿರುತ್ತದೆ, ಮತ್ತು ಇದು ದ್ವಿಗುಣ-ಪದ ಚದುರವಾಗಿ ಎಣಿಕೆಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com