ವಿಶೇಷಚೇತನರಿಂದ ನಡೆಸಲ್ಪಡುವ ಅಸಾಮಾನ್ಯ ಕೆಫೆ ಈ ಮಿಟ್ಟಿ ಕೆಫೆ: ಶೀಘ್ರದಲ್ಲೇ ಕೆಐಎಎಲ್'ನಲ್ಲೂ ಆರಂಭ!
ವಿಶೇಷಚೇತನರಿಂದ ನಡೆಸಲ್ಪಡುವ ಅಸಾಮಾನ್ಯ ಕೆಫೆ ಈ ಮಿಟ್ಟಿ ಕೆಫೆ. ಈ ಮಿಟ್ಟಿ ಕೆಫೆ ಇದೀಗ ಹಲವು ಜನರ ಫೇವರೇಟ್ ಸ್ಥಳವಾಗಿದೆ. ಈಗಾಗಲೇ ಜಯನಗರ ಮತ್ತು ಕೋರಮಂಗಲದಲ್ಲಿರುವ ಈ ಕೆಫೆಗಳಿದ್ದು, ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಆರಂಭವಾಗುತ್ತಿದೆ.
Published: 31st October 2022 12:09 PM | Last Updated: 31st October 2022 03:32 PM | A+A A-

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಿಟ್ಟಿ ಕೆಫೆಯನ್ನು ತೆರೆಯುವುದಾಗಿ ಹಾಕಲಾಗಿರುವ ಬ್ಯಾನರ್.
ಬೆಂಗಳೂರು: ವಿಶೇಷಚೇತನರಿಂದ ನಡೆಸಲ್ಪಡುವ ಅಸಾಮಾನ್ಯ ಕೆಫೆ ಈ ಮಿಟ್ಟಿ ಕೆಫೆ. ಈ ಮಿಟ್ಟಿ ಕೆಫೆ ಇದೀಗ ಹಲವು ಜನರ ಫೇವರೇಟ್ ಸ್ಥಳವಾಗಿದೆ. ಈಗಾಗಲೇ ಜಯನಗರ ಮತ್ತು ಕೋರಮಂಗಲದಲ್ಲಿರುವ ಈ ಕೆಫೆಗಳಿದ್ದು, ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಆರಂಭವಾಗುತ್ತಿದೆ.
ಮಿಟ್ಟಿ ಸೋಶಿಯಲ್ ಇನಿಶಿಯೇಟಿವ್ಸ್ ಫೌಂಡೇಶನ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಕಡಿಮೆ-ಆದಾಯದ ಕುಟುಂಬಗಳಿಂದ ಬಂದಿರುವ, ದೈಹಿಕ, ಬೌದ್ಧಿಕ ಮತ್ತು ಮನೋವೈದ್ಯಕೀಯ ಅಸಾಮರ್ಥ್ಯಗಳೊಂದಿಗೆ ಹೋರಾಡುವ ವಿಶೇಷ ಸಾಮರ್ಥ್ಯವುಳ್ಳ ಜನರಿಂದ ಕೆಫೆಯನ್ನು ನಡೆಸುತ್ತಿದೆ. ಮಿಟ್ಟಿ ಸೋಶಿಯಲ್ ಇನಿಶಿಯೇಟಿವ್ಸ್ ಫೌಂಡೇಶನ್ ದೇಶದಾದ್ಯಂತ 23 ಮಿಟ್ಟಿ ಕೆಫೆಗಳನ್ನು ನಡೆಸುತ್ತಿದೆ.
ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯೂ ಎರಡು ಮಿಟ್ಟಿ ಕೆಫೆಗಳನ್ನು ತೆರೆಯಲು ಫೌಂಡೇಶನ್ ಮುಂದಾಗಿದೆ.
ಇದನ್ನೂ ಓದಿ: ಬೆಳಗಾವಿಯ 'ಹಾಫ್ ಐರನ್ ಮ್ಯಾನ್' ಶ್ರೀಶೈಲ್ ಬ್ಯಾಕೋಡ್ ಯುವ ಸಮುದಾಯಕ್ಕೆ ಮಾದರಿ!
ವಿಶೇಷಚೇತನರಿಂದ ನಡೆಸಲ್ಪಡುವ ಅಸಾಮಾನ್ಯ ಕೆಫೆಯೇ ಮಿಟ್ಟಿ ಕೆಫೆಯಾಗಿದೆ. ಮಿಟ್ಟಿ ಎಂದರೆ ಮಣ್ಣು , ಹಾಗಾಗಿ ಇದಕ್ಕೆ ಮಿಟ್ಟಿ ಕೆಫೆ ಎಂಬ ಹೆಸರು ಇಡಲಾಗಿದೆ. ಪ್ರತಿಯೊಬ್ಬರೂ ಮಣ್ಣಿನಿಂದ ಬಂದವರು ಮತ್ತು ಅಂತಿಮವಾಗಿ ಮಣ್ಣಿನ ಕಡೆಗೆ ಮರಳುತ್ತಾರೆ ಎಂಬ ಸರಳ ಕಲ್ಪನೆಯಿಂದ ಕೆಫೆಗೆ ಈ ಹೆಸರು ಇಡಲಾಗಿದೆ. ವಿವಿಧ ಧರ್ಮ, ಜನಾಂಗ, ಜಾತಿ, ಪಂಥ ಯಾರೇ ಆದರೂ ಎಲ್ಲರ ಅಸ್ತಿತ್ವ, ಅಂತ್ಯವು ಅಂತಿಮವಾಗಿ ಒಂದೇ ಆಗಿರುತ್ತದೆ. ಹೀಗಾಗಿ ಮಿಟ್ಟಿ ಕೆಫೆಯು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದೆ.
ಕೆಫೆ ಬಗ್ಗೆ ಮಾಹಿತಿ ನೀಡಿರುವ ಸಂಸ್ಥಾಪಕಿ ಅಲಿಮಾ ಆಲಂ ಅವರು, ಎರಡೂ ಕೆಫೆಗಳು ವಿಮಾನ ನಿಲ್ದಾಣದ ಟರ್ಮಿನಲ್‌ನ ಹೊರಗೆ ಆರಂಭವಾಗಲಿದೆ. ನವೆಂಬರ್ ಅಂತ್ಯದ ವೇಳೆಗೆ ಆರಂಭವಾಗಲಿದೆ. ಇಲ್ಲಿ ವಿಶೇಷಚೇತನರು ಕಾರ್ಯನಿರ್ವಹಿಸುತ್ತಾರೆ. ಪ್ರತಿ ಕೆಫೆಯಲ್ಲಿ 10-13 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಎಲೆಕ್ಟ್ರಿಕ್ ಗಾಲಿಕುರ್ಚಿಗಳು, ಆಹಾರ, ವಸತಿ ಹಾಗೂ ಇನ್ನಿತರೆ ಅವಶ್ಯಕತೆಗಳನ್ನು ಸಿಬ್ಬಂದಿಗಳಿಗೆ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಸಕ್ತಿಯನ್ನೇ ಉದ್ಯಮವನ್ನಾಗಿಸಿಕೊಂಡ ಮಂಗಳೂರು ಯುವಕ; ನರ್ಸರಿ ಉದ್ಯಮದ ಯಶಸ್ಸಿನ ಕಥೆ ಇದು....
ಪ್ರತಿ ಕೆಫೆ ನಿರ್ಮಾಣಕ್ಕೆ ರೂ.20 ಲಕ್ಷ ವೆಚ್ಚವಾಗುತ್ತಿದೆ. ಬಹುರಾಷ್ಟ್ರೀಯ ಸಂಸ್ಥೆಯಾಗಿರುವ IQVIA ಕೆಫೆ ಪ್ರಾಯೋಜಿಸಲು ಮುಂದಕ್ಕೆ ಬಂದಿದೆ. ಇತರೆ ಕೆಫೆ ನಿರ್ಮಾಣಕ್ಕೆ ಕಾರ್ಪೊರೇಟ್ ಸಂಸ್ಥೆಗಳ ಬೆಂಬಲವನ್ನು ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಶೇಷಚೇತನರಿಗೆ ಜೀವನೋಪಾಯ ಸೃಷ್ಟಿಸುವುದು ಮತ್ತು ವಿಶೇಷಚೇತನರು ಪ್ರತಿದಿನ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕೆಫೆಗಳನ್ನು ಆರಂಭಿಸಲಾಗಿದೆ. ಮಿಟ್ಟಿ ಕೆಫೆಯಲ್ಲಿ ಕಾಫಿ, ಟೀ, ತಂಪು ಪಾನೀಯಗಳು, ಸ್ಯಾಂಡ್ ವಿಚ್, ಚಾಟ್ ಐಟಂಗಳನ್ನು ಜನರಿಗೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.