ಮಕ್ಕಳಲ್ಲಿ ಪ್ರಕೃತಿ ಮೇಲಿನ ಪ್ರೀತಿ ಹುಟ್ಟುಹಾಕಿದ ದಿನಗೂಲಿ ಕಾರ್ಮಿಕನಿಗೆ 'ಪರಿಸರ ಸಂರಕ್ಷಣೆ ಪ್ರಶಸ್ತಿ'!
ತಂಗಾಳಿಯಲ್ಲಿ ಹಾರಾಡುವ ಬಣ್ಣಬಣ್ಣದ ಹೂವುಗಳು ಇವರನ್ನು ಬಾಲ್ಯದಲ್ಲಿಯೇ ಪ್ರಕೃತಿ ಮಾತೆಯತ್ತ ಹತ್ತಿರವಾಗವಂತೆ ಮಾಡಿತ್ತು. ಪ್ರಕೃತಿ ಎಂಬ ಪ್ರೀತಿಗೆ ಬಿದ್ದಿದ್ದ ಇವರು, ರಸ್ತೆಬದಿ ಮತ್ತು ಖಾಲಿ ಭೂಮಿಯ ಉದ್ದಕ್ಕೂ ಬೀಜಗಳು ಮತ್ತು ಸಸಿಗಳನ್ನು ನೆಡಲು ಆರಂಭಿಸಿದ್ದರು. ಇದು ಇಂದಿಗೂ ಇವರ ಜೀವನದಲ್ಲಿ ಒಂದು ಅಭ್ಯಾಸವಾಗಿ ಹೋಗಿದೆ.
Published: 29th November 2022 01:53 PM | Last Updated: 29th November 2022 05:05 PM | A+A A-

ಮಕ್ಕಳಿಂದ ಸಸಿ ನೆಡಿಸುತ್ತಿರುವ ಕಣ್ಣನ್.
ಕೊಚ್ಚಿ: ತಂಗಾಳಿಯಲ್ಲಿ ಹಾರಾಡುವ ಬಣ್ಣಬಣ್ಣದ ಹೂವುಗಳು ಇವರನ್ನು ಬಾಲ್ಯದಲ್ಲಿಯೇ ಪ್ರಕೃತಿ ಮಾತೆಯತ್ತ ಹತ್ತಿರವಾಗವಂತೆ ಮಾಡಿತ್ತು. ಪ್ರಕೃತಿ ಎಂಬ ಪ್ರೀತಿಗೆ ಬಿದ್ದಿದ್ದ ಇವರು, ರಸ್ತೆಬದಿ ಮತ್ತು ಖಾಲಿ ಭೂಮಿಯ ಉದ್ದಕ್ಕೂ ಬೀಜಗಳು ಮತ್ತು ಸಸಿಗಳನ್ನು ನೆಡಲು ಆರಂಭಿಸಿದ್ದರು. ಇದು ಇಂದಿಗೂ ಇವರ ಜೀವನದಲ್ಲಿ ಒಂದು ಅಭ್ಯಾಸವಾಗಿ ಹೋಗಿದೆ.
ಅಂದು ಬಾಲ್ಯದಲ್ಲಿಯೇ ಪ್ರಕೃತಿ ಮಾತೆ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದ ಬಾಲಕ ಸಿ ಸಿ ಕಣ್ಣನ್ ಇಂದು ಹಸಿರು ಯೋಧ ಎಂದು ಗುರುತಿಸಲ್ಪಡುತ್ತಿದ್ದಾರೆ. 54 ವರ್ಷದ ಕಣ್ಣನ್ ಅವರು ಇತ್ತೀಚೆಗೆ ಪರಿಸರ ಸಂರಕ್ಷಣೆಗಾಗಿ 25ನೇ ಪಿವಿ ಥಂಪಿ ಸ್ಮಾರಕದ ದತ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪ್ರಕೃತಿ ಮೇಲೆ ತಮಗಷ್ಟೇ ಪ್ರೀತಿ ಇದ್ದರೆ ಸಾಲದು, ಇತರರಲ್ಲೂ ಆ ಪ್ರೀತಿ ಬೆಳೆಯುವಂತೆ ಮಾಡಬೇಕೆಂಬ ಇವರ ಆಲೋಚನೆ ಹಲವರ ಮನಸ್ಸು ಗೆಲ್ಲುವಂತೆ ಮಾಡಿದೆ. ಎರ್ನಾಕುಲಂನ ಪೂರ್ವ ಮರಡಿ ಪಂಚಾಯತ್‌ನ ಸಣ್ಣ ಪುಟ್ಟ ಪ್ರದೇಶಗಳಿಗೆ ತೆರಳುವ ಇವರು, ಅಲ್ಲಿ ಪುಟ್ಟ ಪುಟ್ಟ ಮಕ್ಕಳಿಗೆ ಮಾರ್ಗದರ್ಶನ ನೀಡಿ ಪರಿಸರ ಮೇಲೆ ಪ್ರೀತಿ ಬೆಳೆಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಪ್ರಕೃತಿಯ ಮೇಲಿನ ಪ್ರೀತಿಯನ್ನು ಹುಟ್ಟುಹಾಕಿದ್ದಕ್ಕೆ ಕಣ್ಣನ್ ಅವರು 'ಪರಿಸರ ಸಂರಕ್ಷಣೆ ಪ್ರಶಸ್ತಿ' ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಬಂಜರು ಭೂಮಿಯನ್ನು ನಿತ್ಯಹರಿದ್ವರ್ಣ ಕಿರು ಅರಣ್ಯವನ್ನಾಗಿ ಪರಿವರ್ತಿಸಿದ ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳಿಮಠ!
"ಬಾಲ್ಯದಲ್ಲಿ, ಒಮ್ಮೆ ಸುಂದರವಾದ ಹೂವುಗಳ ಉದ್ಯಾನವನ್ನು ನೋಡಿದೆ" ನಾನೂ ಉದ್ಯಾನವನ್ನು ಬೆಳೆಸಬೇಕೆಂದುಕೊಂಡೆ. ಎಂಸಿ ರಸ್ತೆಯ ಪಕ್ಕದ ಬಂಜರು ಜಾಗವನ್ನು ಸುಂದರ ಹೂವಿನ ಉದ್ಯಾನವನ್ನಾಗಿ ಮಾಡಬೇಕೆಂದು ನಿರ್ಧರಿಸಿದೆ. ಹೂವಿನ ಗಿಡಗಳ ಬೀಜಗಳನ್ನು ಸಂಗ್ರಹಿಸಿ ಅಲ್ಲಿ ಬಿತ್ತಿದ್ದೆ. ಬಳಿಕ ಸಸ್ಯಗಳು ಬೆಳೆಯಲು ಆರಂಭಿಸಿದವು. ಹೂವುಗಳು ಬೆಳೆದು, ಅರಳಿತು. ಇದು ನನ್ನಲ್ಲಿ ಬಹಳ ಸಂತಸವನ್ನು ತಂದಿತ್ತು. ಆದರೆ, ಈ ಸಂತೋಷ ತುಂಬಾ ದಿನಗಳು ಇರಲಿಲ್ಲ. ಎಂಸಿ ರಸ್ತೆ ಅಗಲೀಕರಣ ಮಾಡಬೇಕೆಂದು ಬಂದ ಅಧಿಕಾರಿಗಳು ಉದ್ಯಾನವನ್ನು ನಾಶಪಡಿಸಿದ್ದರು. ಬಳಿಕ ನಾನು ಹಣ್ಣಿನ ಮರಗಳನ್ನು ಬೆಳೆಸಬೇಕೆಂದು ನಿರ್ಧರಿಸಿದೆ. ಬಳಿಕ ಮಾವು, ಪೇರಳ, ಪಪ್ಪಾಯಿ ಸೇರಿದಂತೆ ಹಲವು ಸರಿಗಳ ಬೀಜಗಳನ್ನು ಸಂಗ್ರಸಿದೆ. ಅವುಗಳನ್ನು ರಸ್ತೆಯ ತೆರೆದ ಜಾಗದಲ್ಲಿ ಬಿತ್ತಲು ಆರಂಭಿಸಿದೆ ಎಂದು ಕಣ್ಣನ್ ಹೇಳಿದ್ದಾರೆ.
ದಿನಗೂಲಿ ಕಾರ್ಮಿಕರನಾಗಿದ್ದರೂ, ಕುಟುಂಬ ನಿರ್ವಹಿಸಲು ಕಷ್ಟಗಳು ಎದುರಾದರೂ ಕೂಡ ಕಣ್ಣನ್ ಅವರು ಪ್ರಕೃತಿ ಮಾತೆಯ ಮೇಲಿನ ಪ್ರೀತಿಯನ್ನು ಮಾತ್ರ ಕಡಿಮೆ ಮಾಡಿಕೊಳ್ಳಲಿಲ್ಲ.
ಸಸ್ಯಗಳು ನನಗೆ ನನ್ನ ಮಗುವಿದ್ದಂತೆ. ಪರಿಸದ ದಿನ ಬಂದಾಗ ಮಾತ್ರ ಗಿಡಗಳ ನೆಟ್ಟು ಮರೆತು ಹೋಗುವ ಜನರಂತೆ ನಾನಲ್ಲ. ನಾನು ಅವುಗಳನ್ನು ಪ್ರತಿದಿನ ಪೋಷಿಸುತ್ತೇನೆ. ಸಸ್ಯಗಳನ್ನು ನೋಡಿದ ಬಳಿಕವೇ ನನ್ನ ದಿನ ಆರಂಭವಾಗುವುದು. ರಸ್ತೆ ಬದಿಗಳಲ್ಲಿ ನಾನು ನೆಟ್ಟ ಗಿಡಗಳನ್ನು ರಾತ್ರೋರಾತ್ರಿ ಕಿತ್ತೆಸೆದಿದ್ದರು. ಅಂದು ನನ್ನ ಮನಸ್ಸಿಗೆ ಬಹಳ ನೋವಾಗಿತ್ತು. ನಂತರ ಮಕ್ಕಳ ಹಂತದಿಂದಲೇ ಅವರಿಗೆ ಪ್ರಕೃತಿ ಮೇಲೆ ಪ್ರೀತಿ ಬರುವಂತೆ ಮಾಡಬೇಕೆಂದು ನಿರ್ಧರಿಸಿದ್ದೆ. ಇದರಂತೆ ಶಾಲೆ ಕ್ಯಾಂಪಸ್ ಹಾಗೂ ಸರ್ಕಾರಿ ಕಚೇರಿಗಳ ಆವರಣದಲ್ಲಿ ಮರಗಳ ನೆಡುವ ಕುರಿತು ಚಿಂತನೆ ನಡೆಸಿದೆ.
ಇದನ್ನೂ ಓದಿ: ಈಗ, ಮಣ್ಣಿಲ್ಲದೆ ತರಕಾರಿ, ಹೂವು, ಹಣ್ಣು ಬೆಳೆಯಿರಿ: ಹೊಸ ತಂತ್ರಜ್ಞಾನ ಉತ್ತೇಜಿಸಲು ಐಐಎಚ್ಆರ್ ಮುಂದು!
ಮೊದಲ ಹಂತಾಗಿ ನಮ್ಮ ಪಂಚಾಯತ್ ನಲ್ಲಿರುವ 13 ಅಂಗನವಾಡಿಗಳ ಕ್ಯಾಂಪಸ್ ಗಳಲ್ಲಿ ಹಣ್ಣಿನ ಗಿಡಗಳ ನೆಡಲು ಆರಂಭಿಸಿದೆ. ಸಹೃದಯರಿಂದ ಸಸಿಗಳನ್ನು ಖರೀದಿ ಮಾಡಿ, ಅವುಗಳನ್ನು ಸಂಗ್ರಹಿಸುತ್ತಿದ್ದೇನೆ. ನಂತರ ಅವುಗಳನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಬಳಿ ತೆಗೆದುಕೊಂಡು ಹೋಗಿ ಸಸಿಗಳನ್ನು ಅವರಿಂದಲೇ ನೆಡುವಂತೆ ಮಾಡುತ್ತೇನೆ. ಆ ಸಸಿಗಳನ್ನು ಅವರೇ ನೋಡಿಕೊಳ್ಳುತ್ತಾರೆಂಬ ವಿಶ್ವಾಸ ನನಗಿರುತ್ತದೆ. ಅವುಗಳ ಯಾವ ರೀತಿ ಪಾಲನೆ ಮಾಡಬೇಕೆಂಬುದನ್ನು ಅವರಿಗೆ ಹೇಳಿಕೊಡುತ್ತೇನೆ.
ಮುಂದಿನ ದಿನಗಳಲ್ಲಿ ಹಸಿರು ಅಭಿಯಾನ ಆರಂಭಿಸಲು ಸರ್ಕಾರಿ ಕಚೇರಿಗಳ ಸಂಪರ್ಕಿಸಲು ಚಿಂತನೆ ನಡೆಸಿದ್ದೇನೆ. ಯಾವುದೇ ಹಣ ಅಥವಾ ಲಾಭಕ್ಕಾಗಿ ನಾನು ಇದನ್ನು ಮಾಡುತ್ತಿಲ್ಲ. ಸಸ್ಯಗಳು ನನಗೆ ಸಂತೋಷವನ್ನು ನೀಡಿದೆ. ಅವುಗಳ ಸಂತೋಷಕ್ಕಾಗಿ ನಾನು ಈ ಕಾರ್ಯವನ್ನು ಮಾಡುತ್ತಿದ್ದೇನೆ. ಸಸ್ಯಗಳ ಎಲೆಗಳು ಚಿಗುರುವುದನ್ನು ನೋಡಲು ನನಗೆ ಬಹಳ ಸಂತೋಷವಾಗುತ್ತದೆ. ಪ್ರತಿಯೊಬ್ಬರೂ ಕೂಡ ಈ ಸಂತೋಷವನ್ನು ಅನುಭವಿಸಬೇಕೆಂದು ಕಣ್ಣನ್ ತಿಳಿಸಿದ್ದಾರೆ.