ಕೇರಳದ ಹಳ್ಳಿ-ಹಳ್ಳಿಗೂ ರೋಗಿಗಳಿಗೆ ಹೋಮ್ ನರ್ಸ್‌ಗಳ ಸೇವೆ!

ದೂರ-ದೂರದ ಹಳ್ಳಿಗಳಲ್ಲೂ ವೈದ್ಯಕೀಯ ಸೇವೆ ವಿಸ್ತರಿಸುವ ಸಂಬಂಧ ಕೇರದಳಲ್ಲಿ ನೂತನ ಹೋಮ್ ನರ್ಸ್‌ಗಳ ಸೇವೆ ಆರಂಭಿಸಲಾಗಿದ್ದು, ರೋಗಿಗಳ ಮನೆಬಾಗಿಲಿಗೇ ಬಂದು ವೈದ್ಯಕೀಯ ಸಿಬ್ಬಂದಿ ವೈದ್ಯಕೀಯ ಸೇವೆ ನೀಡಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪತ್ತನಂತಿಟ್ಟ: ದೂರ-ದೂರದ ಹಳ್ಳಿಗಳಲ್ಲೂ ವೈದ್ಯಕೀಯ ಸೇವೆ ವಿಸ್ತರಿಸುವ ಸಂಬಂಧ ಕೇರದಳಲ್ಲಿ ನೂತನ ಹೋಮ್ ನರ್ಸ್‌ಗಳ ಸೇವೆ ಆರಂಭಿಸಲಾಗಿದ್ದು, ರೋಗಿಗಳ ಮನೆಬಾಗಿಲಿಗೇ ಬಂದು ವೈದ್ಯಕೀಯ ಸಿಬ್ಬಂದಿ ವೈದ್ಯಕೀಯ ಸೇವೆ ನೀಡಲಿದ್ದಾರೆ.

ಹೌದು.. ಮನೆಯಲ್ಲಿ ಮಲಗಿರುವ ರೋಗಿಗಳನ್ನು ಹೊಂದಿರುವ ಕುಟುಂಬಗಳ ಸಾಮಾನ್ಯ ಸಮಸ್ಯೆ ಎಂದರೆ, ಅನಾರೋಗ್ಯಕ್ಕೀಡಾಗಿರುವ ತಮ್ಮ ಪ್ರೀತಿಪಾತ್ರರಿಗೆ ಸುಲಭವಾಗಿ ನೋಡಿಕೊಳ್ಳುವ ವಿಶ್ವಾಸಾರ್ಹ, ತರಬೇತಿ ಪಡೆದ ಹೋಮ್ ನರ್ಸ್ ಅನ್ನು ಹುಡುಕುವುದು. ಅಂತಹ ಕುಟುಂಬಗಳು ಎದುರಿಸುತ್ತಿರುವ ಕಷ್ಟವನ್ನು ಮನಗಂಡ ಪತ್ತನಂತಿಟ್ಟದ ಕಡಂಪನಾಡು ಗ್ರಾ.ಪಂ. ಕೈಗೆಟಕುವ ದರದಲ್ಲಿ ಉಪಶಾಮಕ ಆರೈಕೆಯನ್ನು ಒದಗಿಸುವಲ್ಲಿ ತರಬೇತಿ ನೀಡಲಾಗುವ ಗ್ರಾಮಸ್ಥರ ತಂಡವನ್ನು ರಚಿಸಿದೆ. ಈ ತಂಡವನ್ನು ಹರಿತ ಕರ್ಮ ಸೇನೆಯ ಮಾದರಿಯಲ್ಲಿ ರೂಪಿಸಲಾಗಿದೆ.

ಈ ಕುರಿತು ಮಾತನಾಡಿರುವ ಪಂಚಾಯತ್ ಅಧ್ಯಕ್ಷೆ ಪ್ರಿಯಾಂಕಾ ಪ್ರತಾಪ್ ಅವರು, 'ಕುಟುಂಬದ ಕೆಲಸ ಮಾಡುವ ಸದಸ್ಯರು, ವಿಶೇಷವಾಗಿ ಚಿಕ್ಕವರು, ತಮ್ಮ ಹಿರಿಯರು ಹಾಸಿಗೆ ಹಿಡಿದರೆ ಅವರನ್ನು ಸರಿಯಾಗಿ ನೋಡಿಕೊಳ್ಳಲು ಕಷ್ಟಪಡುತ್ತಾರೆ. ಆದ್ದರಿಂದ, ಅವರು ಹೋಮ್ ನರ್ಸ್ ಅನ್ನು ಹುಡುಕುತ್ತಾರೆ. ಪ್ರತಿದಿನ, ನಮಗೆ ಪರಿಚಿತ ಮತ್ತು ವಿಶ್ವಾಸಾರ್ಹ ಹೋಮ್ ನರ್ಸ್‌ಗಳ ಲಭ್ಯತೆಯ ಬಗ್ಗೆ ವಿಚಾರಿಸುವ ಕರೆಗಳು ಬರುತ್ತವೆ ಎಂದು ತಮ್ಮ ಉಪಕ್ರಮದ ಹಿಂದಿನ ಕಥೆಯ ಕುರಿತು ಹೇಳಿದರು.

“ಆದಾಗ್ಯೂ, ಹಳ್ಳಿ ಪ್ರದೇಶಗಳಲ್ಲಿ ಅಂತಹ ವ್ಯಕ್ತಿಗಳನ್ನು ಕೈಗೆಟುಕುವ ದರದಲ್ಲಿ ಪಡೆಯುವುದು ಸುಲಭವಲ್ಲ. ಆದ್ದರಿಂದ, ನಾವು ಉಪಕ್ರಮದೊಂದಿಗೆ ಬಂದಿದ್ದೇವೆ ಎಂದು ಹೇಳಿದರು. ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದು ಪ್ರಾಯೋಗಿಕ ಆಧಾರದ ಮೇಲೆ ನಡೆಯಲಿದೆ. ಅದರ ಫಲಿತಾಂಶದ ಆಧಾರದ ಮೇಲೆ, ನಾವು ತಂಡವನ್ನು ವಿಸ್ತರಿಸುತ್ತೇವೆ ಮತ್ತು ಅದರ ಸೇವೆಗಳನ್ನು ವಿಸ್ತರಿಸುತ್ತೇವೆ ಎಂದು ಅವರು ಹೇಳಿದರು.

ಪಂಚಾಯತ್ 17 ವಾರ್ಡ್‌ಗಳನ್ನು ಹೊಂದಿದೆ. ನಾವು ಮೊದಲ ತಂಡಕ್ಕೆ 30 ರಿಂದ 35 ಸ್ವಯಂಸೇವಕರನ್ನು, ಎಲ್ಲಾ ಮಹಿಳೆ ಸಿಬ್ಬಂದಿಯನ್ನು ಆಯ್ಕೆ ಮಾಡುತ್ತೇವೆ. ಮೊದಲ ಹಂತದಲ್ಲಿ ಉಪಶಾಮಕ ಆರೈಕೆಯಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ವೈದ್ಯರು, ಶುಶ್ರೂಷಕರು ಮತ್ತು ಪಂಚಾಯತ್‌ನ ಅಸ್ತಿತ್ವದಲ್ಲಿರುವ ಉಪಶಾಮಕ ನಿಗಾ ತಂಡದ ಸಹಾಯದಿಂದ ನಾವು ಅವರಿಗೆ ತರಬೇತಿ ನೀಡುತ್ತೇವೆ. ಸ್ವಯಂಸೇವಕರನ್ನು ಹಾಸಿಗೆ ಹಿಡಿದಿರುವ ರೋಗಿಗಳಿರುವ ಮನೆಗಳಿಗೆ ಕರೆದೊಯ್ಯಲಾಗುತ್ತದೆ ಮತ್ತು ಅವರಿಗೆ ಸಹಾಯ ಮಾಡುವ ರೀತಿಯಲ್ಲಿ ತರಬೇತಿ ನೀಡಲಾಗುತ್ತದೆ. ಅವರು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ನಾವು ಅವರಿಗೆ ನೋಂದಣಿ ಸಂಖ್ಯೆ ಮತ್ತು ಗುರುತಿನ ಚೀಟಿಗಳನ್ನು ನೀಡಿ ಗ್ರಾಮ ಪಂಚಾಯಿತಿ ತಂಡಕ್ಕೆ ಸೇರಿಸುತ್ತೇವೆ ಎಂದು ಅವರು ಹೇಳಿದರು.

ಕುಟುಂಬಶ್ರೀ ಅನುಷ್ಠಾನ ಏಜೆನ್ಸಿಯಾಗಿರುತ್ತದೆ ಮತ್ತು ಹೋಮ್ ನರ್ಸ್‌ಗಳ ಸೇವೆಯ ಅಗತ್ಯವಿರುವವರು ಇದನ್ನು ಸಂಪರ್ಕಿಸಬಹುದು. ಇದು ಕುಟುಂಬದ ಅಗತ್ಯಗಳಿಗೆ ಸರಿಹೊಂದುವ ಹೋಮ್ ನರ್ಸ್‌ಗಳನ್ನು ಕಳುಹಿಸುತ್ತದೆ. ಹೋಮ್ ನರ್ಸ್ ಗಳಿಗೆ ಶೀಘ್ರವೇ ಸಂಭಾವನೆ ನಿಗದಿ ಮಾಡಲಾಗುವುದು. ಗ್ರಾಮ ಪಂಚಾಯತ್ ಹೋಮ್ ನರ್ಸ್‌ಗಳಿಗೆ ತರಬೇತಿ ಕಾರ್ಯಕ್ರಮವನ್ನು ಮುಂದುವರೆಸುತ್ತದೆ ಮತ್ತು ಅವರನ್ನು ಮೇಲ್ವಿಚಾರಣೆ ಮಾಡುತ್ತದೆ" ಎಂದು ಪ್ರಿಯಾಂಕಾ ಹೇಳಿದರು.

ಹೋಮ್ ನರ್ಸ್‌ಗಳು ಗ್ರಾಮ ಪಂಚಾಯಿತಿಯಿಂದಲೇ ಇರುತ್ತಾರೆ ಮತ್ತು ಆದ್ದರಿಂದ ನಿವಾಸಿಗಳಿಗೆ ಪರಿಚಿತರಾಗಿರುತ್ತಾರೆ. ಈ ಯೋಜನೆಯು ನಮ್ಮ ಮಹಿಳೆಯರಿಗೆ ಉದ್ಯೋಗವನ್ನು ಒದಗಿಸುತ್ತದೆ. ಖಾಸಗಿ ಏಜೆನ್ಸಿಗಳು ವಿಧಿಸುವಷ್ಟು ಸಂಭಾವನೆ ಇರುವುದಿಲ್ಲ. ಹಾಸಿಗೆ ಹಿಡಿದಿರುವ ರೋಗಿಗಳನ್ನು ಹೊಂದಿರುವ ಬಡ ಕುಟುಂಬಗಳಿಗೆ ರಿಯಾಯಿತಿಗಳನ್ನು ನೀಡಲಾಗುವುದು ಮತ್ತು ಅವರಿಗೆ ಸೇವೆ ಸಲ್ಲಿಸುವ ಹೋಮ್ ನರ್ಸ್‌ಗಳಿಗೆ ಪ್ರಾಯೋಜಕರ ಸಹಾಯದಿಂದ ಸಂಭಾವನೆ ನೀಡಲಾಗುವುದು ಎಂದು ಪ್ರಿಯಾಂಕ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com