ಕಚ್ಚಾ ಬಾದಾಮ್ ಆಯ್ತು, ಈಗ ಮತ್ತೋರ್ವ ಬೀದಿ ಬದಿ ವ್ಯಾಪಾರಿಯ ವಿಭಿನ್ನ ಮಾರಾಟದ ಶೈಲಿ ವೈರಲ್!
ಈ ಹಿಂದೆ ಕಚ್ಚಾ ಬಾದಾಮ್ ಹಾಡಿನ ಮೂಲಕ ಬೀದಿ ಬದಿ ವ್ಯಾಪಾರಿ ಭುಬನ್ ಬಡ್ಯಾಕರ್ ವ್ಯಾಪಕ ವೈರಲ್ ಆಗಿ ಬಾಲಿವುಡ್ ಗೂ ಪ್ರವೇಶ ಮಾಡಿದ್ದು ಹಸಿರಾಗಿರುವಂತೆಯೇ ಇತ್ತ ಇತಹುದೇ ಶೈಲಿಯಲ್ಲಿ ಬೀದಿಬದಿ ಮಾರಾಟಗಾರರೊಬ್ಬರು ಮಿಕ್ಸ್ಚರ್ ಮಾರಾಟ ಮಾಡುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.
Published: 07th September 2022 12:16 PM | Last Updated: 07th September 2022 01:55 PM | A+A A-

ಬೀದಿ ಬದಿ ವ್ಯಾಪಾರಿ ನಸೀಮ್
ಭೋಪಾಲ್: ಈ ಹಿಂದೆ ಕಚ್ಚಾ ಬಾದಾಮ್ ಹಾಡಿನ ಮೂಲಕ ಬೀದಿ ಬದಿ ವ್ಯಾಪಾರಿ ಭುಬನ್ ಬಡ್ಯಾಕರ್ ವ್ಯಾಪಕ ವೈರಲ್ ಆಗಿ ಬಾಲಿವುಡ್ ಗೂ ಪ್ರವೇಶ ಮಾಡಿದ್ದು ಹಸಿರಾಗಿರುವಂತೆಯೇ ಇತ್ತ ಇತಹುದೇ ಶೈಲಿಯಲ್ಲಿ ಬೀದಿಬದಿ ಮಾರಾಟಗಾರರೊಬ್ಬರು ಮಿಕ್ಸ್ಚರ್ ಮಾರಾಟ ಮಾಡುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.
#भोपाली नमकीन वाला... #भोपाल में टैलेंट की कमी नहीं... आप ही देखिये किस गज़ब अंदाज से जनाब नमकीन बेच रहें हैं..#Bhopal pic.twitter.com/ONEiMgko60
— manishbpl (@manishbpl1) September 2, 2022
ಮದ್ಯ ಪ್ರದೇಶ ರಾಜಧಾನಿ ಭೋಪಾಲದಲ್ಲಿ ತಿಂಡಿವ್ಯಾಪಾರಿಯೊಬ್ಹರು ತಮ್ಮದೇ ವಿಶೇಷ ಶೈಲಿಯ ಹಾಡಿನ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಈ ಕುರಿತ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ನಸೀಮ್ ಅಹ್ಮದ್ ಎಂಬ ಬೀದಿ ಬದಿ ವ್ಯಾಪಾರಿ ತಮ್ಮ ದ್ವಿಚಕ್ರ ವಾಹನದಲ್ಲಿ ಮಿಕ್ಸ್ಚರ್ ಮಾರಾಟ ಮಾಡುತ್ತಿದ್ದಾರೆ. ತಮ್ಮ ಬಳಿ ಇರುವ ತರಹೇವಾರಿ ಪದಾರ್ಥಗಳನ್ನು ಹಾಡಿನ ಮೂಲಕ ಹೇಳಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಮನೀಶ್‌ಬಿಪಿಎಲ್ ಎಂಬ ಖಾತೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಭೂಪಾಲಿ ನಮಕೀನ್ವಾಲಾ; ಭೂಪಾಲದಲ್ಲಿ ಪ್ರತಿಭೆಗಳಿಗೇನು ಕೊರತೆ ಇಲ್ಲ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. 500 ಕ್ಕೂ ಹೆಚ್ಚು ರೀಟ್ವೀಟ್ ಆಗಿದೆ. ಈ ವಿಡಿಯೋ ಅನ್ನು 1,00,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
I've been selling spicy mixture for 6 yrs. Before that, I was a mechanic for 35 yrs. I sell in a unique manner. Children are happy to listen to me. People like this style. I've become viral on social media. It makes me happy too: Naseem Ahmed, a spicy mixture seller in Bhopal, MP pic.twitter.com/ZmhqaXguHN
— ANI MP/CG/Rajasthan (@ANI_MP_CG_RJ) September 7, 2022
ತಿಂಡಿಗಳ ಹೆಸರು, ವಿವರ ಮತ್ತು ಅವುಗಳ ಬೆಲೆಯೇ ಇವರ ಈ ಹಾಡಿನಲ್ಲಿರುವ ಸಾಹಿತ್ಯ. ಈ ರೀತಿಗೆ ಮನಸೋತ ಯಾರೋ ಒಬ್ಬರು ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಸಾಕಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ. ವ್ಯಾಪಾರವನ್ನು ಕುದುರಿಸಿಕೊಳ್ಳಲು ನಿತ್ಯವೂ ಹೀಗೆ ರಾಗಬದ್ಧವಾಗಿ, ಜಿಂಗಲ್ಸ್ ಮಾದರಿಯಲ್ಲಿ ಹಾಡಿ ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತಾರೆ.
ಇದನ್ನೂ ಓದಿ: ಕಚ್ಚಾ ಬಾದಾಮ್ ಖ್ಯಾತಿಯ ಗಾಯಕ ಬುಬನ್ ಬಡ್ಯಾಕರ್ಗೆ ಅಪಘಾತ: ಆಸ್ಪತ್ರೆಗೆ ದಾಖಲು
ಈ ಬಗ್ಗೆ ಮಾತನಾಡಿರುವ ನಸೀಂ ಅವರು, 'ನಾನು 6 ವರ್ಷಗಳಿಂದ ಮಸಾಲೆ ಮಿಶ್ರಣವನ್ನು ಮಾರಾಟ ಮಾಡುತ್ತಿದ್ದೇನೆ. ಅದಕ್ಕೂ ಮೊದಲು ನಾನು 35 ವರ್ಷ ಮೆಕ್ಯಾನಿಕ್ ಆಗಿದ್ದೆ. ನಾನು ವಿಶಿಷ್ಟ ರೀತಿಯಲ್ಲಿ ಮಾರಾಟ ಮಾಡುತ್ತೇನೆ. ಮಕ್ಕಳು ನನ್ನ ಮಾತನ್ನು ಕೇಳಲು ಸಂತೋಷ ಪಡುತ್ತಾರೆ. ಜನರು ಈ ಶೈಲಿಯನ್ನು ಇಷ್ಟಪಡುತ್ತಾರೆ. ನಾನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೇನೆ. ನನಗೂ ಈ ಬಗ್ಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ.