ಮೂರು ಲಕ್ಷ ರೂಪಾಯಿ ಸಾಲ ಮಾಡಿದ ಮರುದಿನವೇ 25 ಕೋಟಿ ರೂ. ಮೊತ್ತದ ಓಣಂ ಬಂಪರ್ ಲಾಟರಿ ಗೆದ್ದ ಆಟೋ ಚಾಲಕ!

ಅದೃಷ್ಟ ಎಂದರೆ ಹೀಗಿರಬೇಕು....  ಆತ ಓರ್ವ ಆಟೋ ಚಾಲಕ, ತನ್ನ ಜೀವನೋಪಾಯಕ್ಕಾಗಿ ಮಲೇಷ್ಯಾಗೆ ಹೋಗಲು 3 ಲಕ್ಷ ರೂಪಾಯಿ ಸಾಲ ಮಾಡಿದ ಮರುದಿನವೇ ಆತನಿಗೆ 25 ಕೋಟಿ ರೂಪಾಯಿ ಮೌಲ್ಯದ ಲಾಟರಿ ಬಹುಮಾನ ಬಂದಿದೆ!
ವಿಜೇತ ಲಾಟರಿ ಟಿಕೆಟ್‌ನೊಂದಿಗೆ ಅನೂಪ್ ಬಿ ಮತ್ತು ಅವರ ಪತ್ನಿ ಮಾಯಾ | ಬಿ ಪಿ ದೀಪು
ವಿಜೇತ ಲಾಟರಿ ಟಿಕೆಟ್‌ನೊಂದಿಗೆ ಅನೂಪ್ ಬಿ ಮತ್ತು ಅವರ ಪತ್ನಿ ಮಾಯಾ | ಬಿ ಪಿ ದೀಪು

ತಿರುವನಂತಪುರಂ: ಅದೃಷ್ಟ ಎಂದರೆ ಹೀಗಿರಬೇಕು....  ಆತ ಓರ್ವ ಆಟೋ ಚಾಲಕ, ತನ್ನ ಜೀವನೋಪಾಯಕ್ಕಾಗಿ ಮಲೇಷ್ಯಾಗೆ ಹೋಗಲು 3 ಲಕ್ಷ ರೂಪಾಯಿ ಸಾಲ ಮಾಡಿದ ಮರುದಿನವೇ ಆತನಿಗೆ 25 ಕೋಟಿ ರೂಪಾಯಿ ಮೌಲ್ಯದ ಲಾಟರಿ ಬಹುಮಾನ ಬಂದಿದೆ! 

ಅಚ್ಚರಿಯ ಸಂಗತಿಯೇನೆಂದರೆ, ಲಾಟರಿ ಗೆದ್ದ ಅನೂಪ್, ತಾನು ಖರೀದಿಸಿದ್ದ ಮೊದಲ ಟಿಕೆಟ್ ನ್ನು ಬಿಟ್ಟು ಅದರ ಬದಲಿಗೆ ಮತ್ತೊಂದನ್ನು ಬದಲಿಸಿದ, ಹೀಗೆ ಎರಡನೇ ಬಾರಿ ಆಯ್ಕೆ ಮಾಡಿದ ಟಿಕೆಟ್ ಟಿಜೆ750605 ಗೆ ಬಹುಮಾನ ಬಂದಿದೆ.

ಬಹುಮಾನ ಗೆದ್ದ ಸಂತಸದಲ್ಲಿ ಮಾತನಾಡಿರುವ ಅನೂಪ್, ನಾನು ಬ್ಯಾಂಕ್ ನಿಂದ ಲೋನ್ ಪಡೆಯುವುದಿಲ್ಲ, ಬ್ಯಾಂಕ್ ನವರಿಗೆ ಲೋನ್ ಬೇಡ ಎಂದು ಹೇಳುತ್ತೇನೆ ಹಾಗೂ ಮಲೇಷ್ಯಾಗೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಅನೂಪ್ ಕಳೆದ 22 ವರ್ಷಗಳಿಂದ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದರು ಹಾಗೂ ಕೆಲವೊಮ್ಮೆ ನೂರು ರೂಪಾಯಿ, ಇನ್ನೂ ಕೆಲವೊಮ್ಮೆ 5,000 ರೂಪಾಯಿ ಹಣ ಬಹುಮಾನವಾಗಿ ಗೆದ್ದ ಉದಾಹರಣೆಯೂ ಇದೆ.

ನಾನು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದ ಕಾರಣ ನಾನು ಲಾಟರಿ ರಿಸಲ್ಟ್ ಗಳನ್ನು ಟಿವಿಯಲ್ಲಿ ನೋಡಲಿಲ್ಲ. ಆದರೆ ನನ್ನ ಫೋನ್ ನ್ನು ಪರಿಶೀಲಿಸಿದಾಗ ಬಹುಮಾನ ಗೆದ್ದಿರುವ ಮಾಹಿತಿ ದೃಢಪಟ್ಟಿತು.

ನಾನೂ ಮೊದಲು ನಂಬಲಿಲ್ಲ, ಆ ಬಳಿಕ ಅದನ್ನು ಪತ್ನಿಗೆ ತೋರಿಸಿದೆ, ಅದನ್ನು ಆಕೆ ಗೆದ್ದಿರುವ ಸಂಖ್ಯೆಯೇ ಎಂದು ದೃಢಪಡಿಸಿದಳು. ತೆರಿಗೆ ಹಾಗೂ ಇನ್ನಿತರ ಕಡಿತಗಳನ್ನು ಹೊರತುಪಡಿಸಿದರೆ ಅನೂಪ್ ಗೆ ಬಹುಶಃ 15 ಕೋಟಿ ರೂಪಾಯಿ ಹಣ ಸಿಗಲಿದೆ.

ಈ ಹಣದಲ್ಲಿ ಮನೆ ಕಟ್ಟಿಸುವುದು ಹಾಗೂ ಸಾಲ ತೀರಿಸುವುದು ನನ್ನ ಆದ್ಯತೆ ಎಂದು ಅನೂಪ್ ಹೇಳಿದ್ದಾರೆ. ಇದಾದ ಬಳಿಕ ಸಂಬಂಧಿಕರಿಗೆ ಒಂದಷ್ಟು ಸಹಾಯ ಮಾಡುವುದು ಹಾಗೂ ದಾನ ಮಾಡುವುದು, ಕೇರಳದಲ್ಲಿ ಹೊಟೇಲ್ ಉದ್ಯಮದಲ್ಲಿ ಹೂಡಿಕೆ ಮಾಡುವ ಯೋಚನೆಯನ್ನೂ ಅನೂಪ್ ಹೊಂದಿದ್ದಾರೆ.

ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಅನೂಪ್, ತಾನು ಮತ್ತೆ ಲಾಟರಿ ಟಿಕೆಟ್ ಖರೀದಿಸುವುದಾಗಿ ಹೇಳಿದ್ದಾರೆ. ಅಚ್ಚರಿ ಎಂದರೆ ಕಳೆದ ವರ್ಷ 12 ಕೋಟಿ ರೂಪಾಯಿ ಮೌಲ್ಯದ ಓಣಂ ಬಂಪರ್ ಲಾಟರಿಯನ್ನೂ ಓರ್ವ ಆಟೋ ರಿಕ್ಷಾ ಚಾಲಕ ಜಯಪಾಲನ್ ಗೆದ್ದಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com