600 ಮಕ್ಕಳ ತಂದೆಗೆ 'ಕೆಲಸ ನಿಲ್ಲಿಸು' ಎಂದು ತಡೆ ನೀಡಿದ ಕೋರ್ಟ್; ಇಷ್ಟಕ್ಕೂ ಈತ ಮಾಡಿದ್ದೇನು ಗೊತ್ತಾ?

ಒಬ್ಬ ವ್ಯಕ್ತಿಗೆ ಎಷ್ಟು ಜನ ಮಕ್ಕಳಿರಬಹುದು.. 2, 5 ಅಥವಾ 10.. ಅಲ್ಲ.. ಇಲ್ಲೋರ್ವ ವ್ಯಕ್ತಿ ಬರೊಬ್ಬರಿ 600 ಜನ ಮಕ್ಕಳಿಗೆ ತಂದೆಯಂತೆ... ಈತನ ಪ್ರಕರಣ ಕೇಳಿ ಸ್ವತಃ ನ್ಯಾಯಾಲವೇ ಈತನ 'ಕೆಲಸ ನಿಲ್ಲಿಸುವಂತೆ' ತಡೆ ನೀಡಿದ್ದು,  ಮಾತ್ರವಲ್ಲದೇ ಕೆಲಸ ಮುಂದುವರೆಸಿದರೆ ಶಿಕ್ಷೆ ನೀಡುವ ಎಚ್ಚರಿಕೆಯನ್ನೂ ನೀಡಿದೆ.
ವೀರ್ಯದಾನ (ಸಾಂದರ್ಭಿಕ ಚಿತ್ರ)
ವೀರ್ಯದಾನ (ಸಾಂದರ್ಭಿಕ ಚಿತ್ರ)

ಹೇಗ್: ಒಬ್ಬ ವ್ಯಕ್ತಿಗೆ ಎಷ್ಟು ಜನ ಮಕ್ಕಳಿರಬಹುದು.. 2, 5 ಅಥವಾ 10.. ಅಲ್ಲ.. ಇಲ್ಲೋರ್ವ ವ್ಯಕ್ತಿ ಬರೊಬ್ಬರಿ 600 ಜನ ಮಕ್ಕಳಿಗೆ ತಂದೆಯಂತೆ... ಈತನ ಪ್ರಕರಣ ಕೇಳಿ ಸ್ವತಃ ನ್ಯಾಯಾಲವೇ ಈತನ 'ಕೆಲಸ ನಿಲ್ಲಿಸುವಂತೆ' ತಡೆ ನೀಡಿದ್ದು,  ಮಾತ್ರವಲ್ಲದೇ ಕೆಲಸ ಮುಂದುವರೆಸಿದರೆ ಶಿಕ್ಷೆ ನೀಡುವ ಎಚ್ಚರಿಕೆಯನ್ನೂ ನೀಡಿದೆ.

ಸ್ವಿಜರ್ಲೆಂಡ್‌ ಮೂಲದ ಜೊನಾಥನ್‌ ಮೈಜರ್‌ ಗೆ ನ್ಯಾಯಾಲಯ ಇಂತಹ ವಿಚಿತ್ರ ಎಚ್ಚರಿಕೆ ನೀಡಿದೆ. ಈ ವ್ಯಕ್ತಿ 500-600 ಮಕ್ಕಳಿಗೆ ತಂದೆಯಾಗಲು ಹೇಗೆ ಸಾಧ್ಯ ಎಂಬುದು ನಿಮ್ಮ ಪ್ರಶ್ನೆಯಾದರೆ, ಇದಕ್ಕೆ ಉತ್ತರ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ. ಹೌದು.. ಈತ ಇಷ್ಟೊಂದು ಸಂಖ್ಯೆಯ ಮಕ್ಕಳಿಗೆ ತಂದೆಯಾಗಿರುವುದು ವೀರ್ಯದಾನದ ಮೂಲಕ. ಜಗತ್ತಿನಾದ್ಯಂತ ಈತನ ವೀರ್ಯಕ್ಕೆ ಜನಿಸಿದ ಸಂಖ್ಯೆ 500-600ರಷ್ಟಿದೆ ಎಂದು ಹೇಳಲಾಗಿದೆ.

ಮಕ್ಕಳಿಲ್ಲದ ದಂಪತಿಗಳು ಈತನ ''ದಾನದಿಂದ' ಮಕ್ಕಳನ್ನು ಪಡೆದಿದ್ದಾರೆಯಾದರೂ, ಈತನ ದಾನ ಮುಂದುವರೆದ ಪರಿಣಾಮ ಮಕ್ಕಳು ಪಡೆದ ದಂಪತಿಗಳಿಗೆ ಹೊಸ ತಲೆನೋವು ಆರಂಭವಾಗಿದೆ. ಈ ಸಮಸ್ಯೆ ಗಂಭೀರವಾಗಿರುವುದರಿಂದಲೇ ಹೇಗ್ ನ್ಯಾಯಾಲಯ ಈತನ ಕಾರ್ಯಕ್ಕೆ ತಡೆ ನೀಡಿದೆ.  ಅಷ್ಟು ಮಾತ್ರವಲ್ಲದೇ ಡಚ್‌ನ 41 ವರ್ಷದ ಜೊನಾಥನ್‌ ಮೈಜರ್‌ ಇನ್ನು ಮುಂದೆ ಕ್ಲಿನಿಕ್‌ಗಳಿಗೆ ವೀರ್ಯದಾನ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ. ಎಲ್ಲಾದರೂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ವೀರ್ಯ ದಾನ ಮಾಡಿದರೆ ಪ್ರತಿ ಉಲ್ಲಂಘನೆಗೆ 100,000 ಯುರೋ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದೆ.

ಈಗಾಗಲೇ ಈತನ ದಾನಿ ವೀರ್ಯವನ್ನು ಬಳಸುತ್ತಿರುವ ಪೋಷಕರಿಗೆ ಮೀಸಲಾದ ಡೋಸ್‌ಗಳನ್ನು ಹೊರತುಪಡಿಸಿ, ಕ್ಲಿನಿಕ್‌ಗಳಲ್ಲಿ ಸಂಗ್ರಹದಲ್ಲಿರುವ ಈತನ ಎಲ್ಲಾ ವೀರ್ಯವನ್ನು ನಾಶ ಮಾಡಲು ವಿದೇಶದಲ್ಲಿರುವ ಕ್ಲೀನಿಕ್‌ಗಳಿಗೆ ಪತ್ರ ಬರೆಯುವಂತೆ ಕೋರ್ಟ್‌ ಆದೇಶಿಸಿದೆ.

ವೀರ್ಯದಾನದಿಂದ ಪೋಷಕರಿಗೆ ಆಗುತ್ತಿರುವ ಸಮಸ್ಯೆಯಾದರೂ ಏನು?
ಮೈಜರ್‌ನ ವೀರ್ಯವನ್ನು ಬಳಸಲು ಮುಂದಾಗುತ್ತಿರುವ ಡಚ್‌ ಪೋಷಕರ ಹಿತಾಸಕ್ತಿಗಳನ್ನು ಮತ್ತು ದಾನಿ ಮಕ್ಕಳ ಭವಿಷ್ಯವನ್ನು ಉದ್ದೇಶದಲ್ಲಿಟ್ಟುಕೊಂಡು ನಾಗರಿಕ ಪ್ರತಿಷ್ಠಾನವೊಂದು ಈ ಕುರಿತು ಪ್ರಕರಣ ದಾಖಲಿಸಿತ್ತು. "ಮೈಜರ್‌ನ ಮುಂದುವರೆದ ವೀರ್ಯ ದಾನವು ದಾನಿ ಮಕ್ಕಳ ಖಾಸಗಿ ಜೀವನದ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಆಕಸ್ಮಿಕ ಮಿಲನ ಮತ್ತು ಸಂತಾನೋತ್ಪತಿಯ ಭಯದಿಂದ ಪ್ರಣಯ ಸಂಬಂಧ ಹಾಳುಗೆಡಹುತ್ತದೆ ಎಂದು ಪ್ರತಿಷ್ಠಾನ ವಾದಿಸಿದೆ.

ಮೈಜರ್‌ ಈ ರೀತಿ ಸಾಮೂಹಿಕ ವೀರ್ಯ ದೇಣಿಗೆ ಮಾಡುವ ಪ್ರಕರಣ ಮೊದಲ ಬಾರಿಗೆ 2017ರಲ್ಲಿ ಬೆಳಕಿಗೆ ಬಂದಿತ್ತು. ಡಚ್‌ನ ಫರ್ಟಿಲಿಟಿ ಕ್ಲಿನಿಕ್‌ಗಳಿಗೆ ಆಗಲೇ ಈತ ವೀರ್ಯ ದಾನ ಮಾಡುವುದನ್ನು ನಿಷೇಧಿಸಲಾಗಿತ್ತು. ಆ ಸಂದರ್ಭದಲ್ಲಿ ಈತನ ವೀರ್ಯ ದಾನದ ಮೂಲಕ ನೂರಕ್ಕೂ ಹೆಚ್ಚು ಮಕ್ಕಳು ಜನಿಸಿದ್ದವು.

ಡಚ್‌ನಲ್ಲಿ ನಿಷೇಧ ಹೇರಿದರೂ ಆತ ತನ್ನ ಕೆಲಸ ನಿಲ್ಲಿಸಲಿಲ್ಲ. ಡ್ಯಾನಿಷ್‌ ಸ್ಪರ್ಮ್ ಬ್ಯಾಂಕ್‌ ಕ್ರಯೊಸ್‌ ಸೇರಿದಂತೆ ವಿದೇಶಿ ಕ್ಲಿನಿಕ್‌ಗಳಿಗೆ ಈತ ವೀರ್ಯದಾನ ಮಾಡಲು ಆರಂಭಿಸಿದ. ಇಷ್ಟು ಮಾತ್ರವಲ್ಲದೆ ವೀರ್ಯದಾನಕ್ಕೆ ಸಂಬಂಧಪಟ್ಟ ವೆಬ್‌ಸೈಟ್‌ಗಳ ಮೂಲಕವೂ ಡೊನೆಟ್‌ ಮಾಡುತ್ತಿದ್ದ. ಕೆಲವೊಮ್ಮೆ ಈತ ಬೇರೆಬೇರೆ ಹೆಸರುಗಳಲ್ಲಿ ವೀರ್ಯದಾನ ಮಾಡುತ್ತಿದ್ದ ಎಂದು ಆಲ್ಗಿಮೀನ್‌ ಡಾಗ್ಲಾಡ್‌ ಡೈಲಿ ಪತ್ರಿಕೆ ವರದಿ ಮಾಡಿದೆ.

ಪೋಷಕರ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಕೋರ್ಟ್ ತಡೆ
ವೀರ್ಯದಾನವನ್ನು ವ್ಯವಹಾರದಂತೆ ನಡೆಸಿ ಹಣ ಸಂಪಾದಿಸುತ್ತಿದ್ದ ಈತನ ಕೆಲಸಕ್ಕೆ ಇದೀಗ ಡಚ್‌ ಕೋರ್ಟ್‌ ತಡೆ ನೀಡಿದೆ. ಎಲ್ಲಾದರೂ ಕೋರ್ಟ್‌ ಆದೇಶ ಮೀರಿ ದಾನ ಮಾಡಿದರೆ ಪ್ರತಿಪ್ರಕರಣಕ್ಕೆ ಈತ ಒಂದು ಲಕ್ಷ ಯುರೋದಷ್ಟು ದಂಡ ತೆರಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com