ಸರ್ಕಾರದ ಯೋಜನೆಗಳು ಎಂಎಸ್‌ಎಂಇಗಳಿಗೆ ಸಹಾಯ ಮಾಡುತ್ತಿಲ್ಲ: ಕಾಸಿಯಾ ಅಧ್ಯಕ್ಷ ಶಶಿಧರ ಶೆಟ್ಟಿ (ಸಂದರ್ಶನ)

ರಾಜ್ಯದ ಆಡಳಿತಾರೂಢ ಸರ್ಕಾರ ಜಾರಿಗೆ ತರುತ್ತಿರುವ ಯೋಜನೆಗಳು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳಿಗೆ ಸಹಾಯ ಮಾಡುತ್ತಿಲ್ಲ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಶಶಿಧರ ಶೆಟ್ಟಿ ಹೇಳಿದ್ದಾರೆ.
ಕಾಸಿಯಾ ಅಧ್ಯಕ್ಷ ಶಶಿಧರ ಶೆಟ್ಟಿ.
ಕಾಸಿಯಾ ಅಧ್ಯಕ್ಷ ಶಶಿಧರ ಶೆಟ್ಟಿ.

ಬೆಂಗಳೂರು: ರಾಜ್ಯದ ಆಡಳಿತಾರೂಢ ಸರ್ಕಾರ ಜಾರಿಗೆ ತರುತ್ತಿರುವ ಯೋಜನೆಗಳು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳಿಗೆ ಸಹಾಯ ಮಾಡುತ್ತಿಲ್ಲ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಶಶಿಧರ ಶೆಟ್ಟಿ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಶಶಿಧರ ಶೆಟ್ಟಿಯವರು ಎಂಎಸ್‌ಎಂಇ ಭವಿಷ್ಯ, ರಾಜ್ಯ ಸರ್ಕಾರದ ಮೇಲಿಟ್ಟಿರುವ ನಿರೀಕ್ಷೆಗಳು, ಎಂಎಸ್‌ಎಂಇ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಎಂಎಸ್‌ಎಂಇ ಪರಿಸ್ಥಿತಿ ಹೇಗಿದೆ?
ಕೋವಿಡ್ ಸಮಯದಲ್ಲಿ ಎಂಎಸ್‌ಎಂಇ ಸಂಕಷ್ಟಕ್ಕೆ ಸಿಲುಕಿದ್ದೆವು. ನಮ್ಮ ಎಲ್ಲಾ ಎಲ್ಲಾ ನಿರೀಕ್ಷೆಗಳು ದುರ್ಬಲಗೊಂಡಿದ್ದವು. ಎರಡನೇ ಲಾಕ್‌ಡೌನ್ ನಂತರ ಪರಿಸ್ಥಿತಿ ಸುಧಾರಿಸಿತ್ತು. ಆದರೆ ಆರ್‌ಬಿಐ ನಿರಂತರವಾಗಿ ರೆಪೋ ದರವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಎಂಎಸ್‌ಎಂಇಗಳು ಮರಳಿ ಸಂಕಷ್ಟಕ್ಕೆ ಸಿಲುಕಿವೆ. ಬ್ಯಾಂಕುಗಳು ತಮ್ಮ ಸಾಲದ ನಿಯಮಗಳನ್ನು ಬದಲಾಯಿಸುತ್ತಿವೆ. ಎರಡು ವರ್ಷಗಳ ಹಿಂದೆ ಶೇ.8 ಇದ್ದ ಬಡ್ಡಿ ದರ ಇಂದು ಶೇ.11 ರಷ್ಟಾಗಿದೆ. ಎಂಎಸ್‌ಎಂಇ  ವಲಯದ ಅಡಿಯಲ್ಲಿ ಸುಮಾರು ಶೇ.95 ರಷ್ಟು ಕೈಗಾರಿಕೆಗಳು ಸೂಕ್ಷ್ಮ ವರ್ಗದ ಅಡಿಯಲ್ಲಿ ಬರುತ್ತವೆ. ಕೇವಲ 20-25 ಜನರು ಮಾತ್ರ ವಾಣಿಜ್ಯೋದ್ಯಮಿ ಅಡಿಯಲ್ಲಿ ಕೆಲಸ ಮಾಡುತ್ತಾರೆ.

ಅವರಿಗೆ ಡಿಜಿಟಲೀಕರಣ ಸೇರಿದಂತೆ ಎಲ್ಲಾ ಸೌಲಭ್ಯಗಳ ಒದಗಿಸಬೇಕಾಗುತ್ತದೆ. ಕಚ್ಚಾ ವಸ್ತುಗಳ ಬೆಲೆಗಳು ಹೆಚ್ಚಾಗುವುದರಿಂದ, ಇತರ ಸೌಲಭ್ಯಗಳಲ್ಲಿ ಹೂಡಿಕೆಗಳು ಕಡಿಮೆಯಾಗಿದೆ. ರಾಜ್ಯ ಸರ್ಕಾರದ ವಿದ್ಯುತ್ ದರ ಏರಿಕೆಯು ಎಂಎಸ್‌ಎಂಇಗಳು ಸಂಕಷ್ಟ ಸಿಲುಕುವಂತೆ ಮಾಡಿದೆ.

ಕರ್ನಾಟಕ ಸಣ್ಣ ಕೈಗಾರಿಕೆ (ಕಾಸಿಯಾ) ಸಂಘಗಳ ಬೇಡಿಕೆ ಏನು?
ಎಂಎಸ್‌ಎಂಇಗಳು ವಿಶೇಷವಾಗಿ ಸೂಕ್ಷ್ಮ ಕೈಗಾರಿಕೆಗಳು, ದೊಡ್ಡ ತಯಾರಕರ ಅಡಿಯಲ್ಲಿರುತ್ತಾರೆ. ಇವರಲ್ಲಿ ಬಹುತೇಕರು ಉಪ ಗುತ್ತಿಗೆದಾರರಾಗಿದ್ದಾರೆ. ಅವರ ಒಪ್ಪಂದಗಳನ್ನು ಏಪ್ರಿಲ್‌ನಲ್ಲಿ ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ನಿಗದಿಪಡಿಸಲಾಗಿರುತ್ತದೆ. ವಿದ್ಯುತ್ ಹೆಚ್ಚಳದ ನಂತರ ನಾವು ಒಪ್ಪಂದವನ್ನು ಮರುಪರಿಶೀಲಿಸುತ್ತೇವೆಂದು ಎಂದು ಹೇಳಲು ಸಾಧ್ಯವಾಗುವುದಿಲ್ಲ.. ಎಂಎಸ್‌ಎಂಇ ಗಳು ಗ್ರಾಹಕರನ್ನು ನೇರವಾಗಿ ಸಂಪರ್ಕಿಸುವ ಸಾಮರ್ಥ್ಯವನ್ನು ಹೊಂದಿರದ ಕಾರಣ ಅನೇಕ ಸೂಕ್ಷ್ಮ ಘಟಕಗಳು ಒಬ್ಬ ಮಾರಾಟಗಾರ ಮತ್ತು ಒಬ್ಬ ಪೂರೈಕೆದಾರರನ್ನು ಅವಲಂಬಿಸಿರುತ್ತವೆ.

ಕಾಸಿಯಾ ಸೇರಿದಂತೆ ಕೈಗಾರಿಕಾ ಸಂಸ್ಥೆಗಳ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಇದರಿಂದಾ ಬಂದ ಫಲಿತಾಂಶವೇನು?
ನಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೆವು. ಅವರು ನಮ್ಮ ಸಮಸ್ಯೆಗಳನ್ನು ಆಲಿಸಿದರು. ಇನ್ನು ನ್ಯಾಯಾಧಿಕರಣದ ಮುಂದೆ ಮೇಲ್ಮನವಿ ಸಲ್ಲಿಸುವುದೊಂದೇ ನಮ್ಮ ಮುಂದಿರುವ ಆಯ್ಕೆಯಾಗಿದೆ ಎಂದರು. ಎಸ್ಕಾಂಗಳೊಂದಿಗೆ ನಮ್ಮನ್ನು ಪ್ರತಿನಿಧಿಸುತ್ತೇವೆಂದು ಸಿಎಂ ಹೇಳಿದರು. ಕೈಗಾರಿಕಾ ಗ್ರಾಹಕರಿಗೆ ಪ್ರತಿ ಯೂನಿಟ್ ಸಬ್ಸಿಡಿಯನ್ನು ಕಡಿಮೆ ಮಾಡಲು ನಾವು ಕೆಇಆರ್‌ಸಿಗೆ ಮನವಿ ಮಾಡಿದ್ದೇವೆ. ಸುಮಾರು ಶೇ.80-90ರಷ್ಟು ಎಂಎಸ್‌ಎಂಇಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಕೈಗಾರಿಕೆಗಳಿಗೆ ಸಬ್ಸಿಡಿಗಳ ನೀಡುವಂತೆ ಮನವಿ ಮಾಡಿಕೊಂಡಿದ್ದೇವೆ. RR ಸಂಖ್ಯೆಗಳು ಮತ್ತು ಇತರ ದಾಖಲೆಗಳು ಮಾಲೀಕರ ಹೆಸರಿನಲ್ಲಿವೆ, ಆದರೆ, ಎಸ್ಕಾಂ ಅದನ್ನು ತಿರಸ್ಕರಿಸಿದೆ.

ಕೋವಿಡ್ ನಂತರ ಪುನರಾರಂಭಗೊಳ್ಳದ ಕೈಗಾರಿಕೆಗಳ ಶೇಕಡಾವಾರು ಎಷ್ಟು?
ಶೇ.25ರಷ್ಟು ಕೈಗಾರಿಕೆಗಳು ಬಂದ್ ಆಗಿವೆ. ಆದರೆ, ಈ ಬಗ್ಗೆ ಸರ್ಕಾರದ ಬಳಿ ನಿಖರವಾದ ಮಾಹಿತಿ ಇಲ್ಲ. ಇದು ಕೇವಲ ಅಂದಾಜುಗಳಷ್ಟೇ. ರಾಜ್ಯದಲ್ಲಿ 5.65 ಲಕ್ಷ ಸಣ್ಣ ಕೈಗಾರಿಕೆಗಳಿವೆ ಎಂದು ಸರ್ಕಾರ ಹೇಳುತ್ತಿದೆಯ ಆದರೆ ಯಾರ ಬಳಿಯೂ ನಿಖರವಾದ ಮಾಹಿತಿ ಇಲ್ಲ.

ಎಂಎಸ್‌ಎಂಇ ವಲಯದಲ್ಲಿ ಕೋವಿಡ್‌ ಸಂದರ್ಭದಲ್ಲಿ ಉದ್ಯೋಗದ ಮೇಲಾದ ಪರಿಣಾಮವೆಷ್ಟು?
ಕೋವಿಡ್ ಸಮಯದಲ್ಲಿ ಲಕ್ಷಗಟ್ಟಲೆ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡರು. ತಮ್ಮ ಸ್ವಂತ ಊರುಗಳಿಗೆ ಹಿಂದಿರುಗಿದ ಹೆಚ್ಚಿನ ವಲಸಿಗ ಜನಸಂಖ್ಯೆಯು ಎಂದಿಗೂ ವಾಪಸ್ ಆಗಿಲ್ಲ. ಉದ್ಯೋಗ ಒದಗಿಸುವಲ್ಲಿ ಕೃಷಿ ನಂತರ ಸ್ಥಾನವನ್ನು ನಾವು ಪಡೆದುಕೊಂಡಿದ್ದೇವೆ. ರಾಷ್ಟ್ರೀಯ ಜಿಡಿಪಿಗೆ ಸುಮಾರು 33 ಪ್ರತಿಶತದಷ್ಟು ಕೊಡುಗೆ ನೀಡುತ್ತೇವೆ. ಉತ್ತಮ ವೇತನ ಬರುತ್ತಿರುವುದರಿಂದ ಸೇವಾ ಉದ್ಯೋಗಗಳಿಗೆ ಜನರು ಹೆಚ್ಚಿನ ಆದ್ಯತೆ ನೀಡಲು ಪ್ರಾರಂಭಿಸಿದ್ದಾರೆ. ಎಂಎಸ್‌ಎಂಇಗಳಲ್ಲಿ ಹೆಚ್ಚಿನ ಜನರು ಶ್ರಮದಾಯಕ ಕಾರ್ಯಗಳನ್ನು ನಿರ್ವಹಿಸುವುದರಿಂದ, ಹೆಚ್ಚಿನ ಮೊತ್ತವು ತರಬೇತಿಗೆ ಹೋಗುತ್ತದೆ. ರಾಜ್ಯ ಸರ್ಕಾರದಿಂದ ಪ್ರಶಿಕ್ಷಣಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಂತೆ ಒತ್ತಾಯಿಸಿದ್ದೇವೆ. ಆದರೆ. ಸರ್ಕಾರದ ಪ್ರಸ್ತುತ ಆರ್ಥಿಕ ಸ್ಥಿತಿಯು ಯಾವುದೇ ಸಬ್ಸಿಡಿ ನೀಡಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ.

ಕಾಸಿಯಾ ಸಮೀಕ್ಷೆಗೆ ಒತ್ತಾಯಿಸಿದೆಯೇ?
ಹೌದು, ಆದರೆ, ಅದಕ್ಕೆ ಹಣ ಖರ್ಚಾಗುತ್ತದೆ. ಸಮೀಕ್ಷೆಗೆ ಕನಿಷ್ಠ 3-5 ಕೋಟಿ ರೂಗಳ ಅಗತ್ಯವಿದೆ. ನಾವು ಸಮೀಕ್ಷೆಗಳನ್ನು ನಡೆಸಬಹುದು. ಸರ್ಕಾರಕ್ಕೆ ವರದಿಯನ್ನೂ ನೀಡಬಹುದು. ಅದಕ್ಕೆ ಯಾರಾದರೂ ಹಣ ನೀಡಬೇಕು. ಆದರೆ, ಸಮೀಕ್ಷೆಗಳ ಕೈಗೊಳ್ಳಲು ನಮ್ಮ ಬಳಿ ಯಾವುದೇ ಸಂಪನ್ಮೂಲಗಳಿಲ್ಲ.

ಎಂಎಸ್‌ಎಂಇಗಳಲ್ಲಿ ಇತರ ರಾಜ್ಯಗಳ ಪೈತಿ ಕರ್ನಾಟಕ ಯಾವ ಸ್ಥಾನದಲ್ಲಿದೆ? ನೀವು ಇತರ ರಾಜ್ಯಗಳೊಂದಿಗೆ ಹೇಗೆ ಹೋಲಿಕೆ ಮಾಡಿಕೊಳ್ಳುತ್ತೀರಿ? ಕರ್ನಾಟಕದಲ್ಲಿರುವ ಕೊರತೆಗಳೇನು?
ಕರ್ನಾಟಕವು ಗುಜರಾತ್ ಮತ್ತು ಮಹಾರಾಷ್ಟ್ರದಂತೆ 10ನೇ ಸ್ಥಾನಕ್ಕೆ ಕುಸಿದಿದೆ. ಕರ್ನಾಟಕದಲ್ಲಿ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿದೆ. ಬೆಂಬಲ ವ್ಯವಸ್ಥೆಯು ಉತ್ತಮವಾಗಿಲ್ಲ ಮತ್ತು ಎಂಎಸ್‌ಎಂಇಗಳು ಕರ್ನಾಟಕದಲ್ಲಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿವೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸರ್ಕಾರ ಆನ್‌ಲೈನ್‌ ಮೂಲಕ ನೆರವು ನೀಡುತ್ತಿದೆ. ಭೂಮಿ ಮಂಜೂರು ಮಾಡುತ್ತಿದೆ. ಇತರ ರಾಜ್ಯಗಳಲ್ಲಿ ಹಾಗಿಲ್ಲ. ತಮಿಳುನಾಡು ಸರ್ಕಾರವು ಕೋವಿಡ್ 19 ರ ನಂತರ ಶೇ.50ರಷ್ಟು ರಿಯಾಯಿತಿಯೊಂದಿಗೆ ಕೈಗಾರಿಕಾ ಭೂಮಿಯನ್ನು ಮಂಜೂರು ಮಾಡಿದೆ. ಅಂತಹ ಯೋಜನೆಗಳು ಇಲ್ಲಿ ಅಸ್ತಿತ್ವದಲ್ಲಿಲ್ಲ.

ಸಾಂಕ್ರಾಮಿಕ ರೋಗ ಸಮಯದಲ್ಲಿ ಬಂದ್ ಆದ ಕಂಪನಿಗಳು ಮತ್ತೆ ತೆರೆಯುವ ಅವಕಾಶವಿದೆಯೇ?
ಇಲ್ಲ, ಒಮ್ಮೆ ಬಂದ್ ಆದರೆ, ಅವುಗಳನ್ನು ತೆರೆಯುವುದು ಕಷ್ಟ. ಏಕೆಂದರೆ ನಮ್ಮ ಮನಸ್ಥಿತಿ ನಿಮಗೆ ತಿಳಿದೇ ಇದೆ. ಕಂಪನಿ ಮುಚ್ಚಿದಾಗ ಅದು 4ನೇ ಹಂತದ ಕ್ಯಾನ್ಸರ್'ಗೆ ಹೋದಂತೆ.

ಮಹಿಳಾ ಉದ್ಯಮಿಗಳಿಗೆ ನೆರವಾಗಲು ಮುದ್ರಾ ಮತ್ತಿತರ ಯೋಜನೆಗಳಿದ್ದರೂ ಇಂದು ಸಾಲ ಪಡೆಯುವುದು ಎಷ್ಟು ಕಷ್ಟ?
ಮುದ್ರಾದಂತಹ ಹಲವಾರು ಯೋಜನೆಗಳಿವೆ, ಆದರೆ, ಅವು ಹೆಚ್ಚು ಸಹಾಯಕವಾಗುವುದಿಲ್ಲ. ಬ್ಯಾಂಕ್‌ಗಳೂ ವ್ಯವಹಾರ ನಡೆಸುತ್ತಿದ್ದು, ಸುರಕ್ಷಿತವಾಗಿ ಆಟವಾಡುತ್ತಿವೆ. ಬ್ಯಾಂಕ್ ದರಗಳು ಹೆಚ್ಚು, ಕಾರ್ಯವಿಧಾನಗಳು ಬಹಳ ದೊಡ್ಡದು, ಇದರಿಂದಾಗಿ ಜನರು ಬೇಸತ್ತು ಹೋಗುತ್ತಾರೆ. ಸೌಲಭ್ಯಗಳನ್ನು ಪಡೆಯುವುದಿಲ್ಲ. ಉದಾಹರಣೆಗೆ, 6.67 ಕೋಟಿ ಎಂಎಸ್‌ಎಂಇಗಳ ಪೈಕಿ 1.67 ಕೋಟಿ ಮಾತ್ರ ಎಂಎಸ್‌ಎಂಇ ಪ್ರಮಾಣಪತ್ರಗಳ ಪಡೆದಿರುವುದಾಗಿದೆ. ಇದು ಸುಮಾರು 5 ಕೋಟಿ ಕಂಪನಿಗಳು ಹಣಕ್ಕಾಗಿ ಹೊರಗಿನ ಸೌಲಭ್ಯಗಳನ್ನು ಅವಲಂಬಿಸಿವೆ ಎಂಬುದನ್ನು ಸೂಚಿಸುತ್ತದೆ.

ಬಹುತೇಕ ಸಣ್ಣ ಪ್ರಮಾಣದ ಕೈಗಾರಿಕೆಗಳು ಗಡುವಿನೊಳಗೆ ಜಿಸ್'ಟಿ ಪಾವತಿ ಮಾಡಲಾಗದೆ, ಹೆಚ್ಚಿನ ಪ್ರಮಾಣದಲ್ಲಿ ದಂಡಗಳನ್ನು ಕಟ್ಟುತ್ತಿವೆ. ಈ ಸಮಸ್ಯೆಗಿರುವ ಪರಿಹಾರವಾದರೂ ಏನು?
ಹೆಚ್ಚಿನ ಪ್ರಮಾಣದ ದಂಡ ಕಟ್ಟಲು ಹೋಗಿ ಸಣ್ಣ ಪ್ರಮಾಣದ ಕೈಗಾರಿಕೆಗಳು ಹೊರಗಿನವರಿಂದ ನೆರವು ಪಡೆಯುತ್ತವೆ. ನಂತರ ಸಂಕಷ್ಟಕ್ಕೆ ಸಿಲುಕಿ, ಉದ್ಯಮವನ್ನೇ ಬಂದ್ ಮಾಡುತ್ತದೆ. ಹೀಗಾಗಿ ಎಂಎಸ್‌ಎಂಇಗಳ ಅಭಿವೃದ್ಧಿ ಆಯುಕ್ತರಿಗೆ ಕಚ್ಚಾ ವಸ್ತುಗಳಿಗೆ ಸಾಲ ಸೌಲಭ್ಯಗಳು ಲಭ್ಯವಾಗುವಂತೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇನೆ. ಬಲ್ಕ್ ಆರ್ಡರ್‌ಗಳನ್ನು ಖರೀದಿಸಲು ಸರ್ಕಾರ ಮುಂದಾದರೂ ಅದು ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ. ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಕೂಡ ನಮಗೆ ಹೆಚ್ಚು ಉಪಯೋಗವಾಗಿಲ್ಲ. ಕೇವಲ 5-10 ರಷ್ಟು ಜನರು ಮಾತ್ರ ಇದನ್ನು ಬಳಸುತ್ತಿದ್ದಾರೆ.

ಕ್ರೆಡಿಟ್ ಗ್ಯಾರಂಟಿ ಯೋಜನೆಯಂತೆ ಬ್ಯಾಂಕ್‌ಗಳು ಕೂಡ ಸಾಲ ಮರಳಿ ಪಡೆಯಲು ಆಸ್ತಿಗಳ ಮುಟ್ಟುಗೋಲು ಹಾಕಿಕೊಳ್ಳುತ್ತಿವೆ?
ಸಾಲ ಪಡೆಯಲು ಜನರು ಭದ್ರತೆಯಾಗಿ ಆಸ್ತಿ ಪ್ರಮಾಣ ಪತ್ರಗಳನ್ನು ನೀಡುತ್ತಾರೆ. ಆದರೆ, ಗಡುವಿನೊಳಗೆ ಸಾಲ ಮರುಪಾವತಿ ಮಾಡದಿದ್ದಾರೆ, ಬ್ಯಾಂಕ್ ಗಳೂ ಕಾನೂನು ಕ್ರಮಕ್ಕೆ ಮುಂದಾಗುತ್ತವೆ. ಆಗಲೂ ಆಗದಿದ್ದರೆ, ಆಸ್ತಿಗಳನ್ನು ವಶಪಡಿಸಿಕೊಳ್ಳುತ್ತವೆ. ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಬಳಿಕ ಉದ್ಯಮ ಕೂಡ ಬಂದ್ ಆಗುತ್ತದೆ. ಹೀಗಾಗಿಯೇ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದಿನಂತೆ ಬ್ಯಾಂಕ್‌ಗಳು 5-10 ವರ್ಷಗಳವರೆಗೆ ಕಾಯುವುದಿಲ್ಲ, ಎನ್‌ಪಿಎ ಆದ ಬಳಿಕ ಎರಡು ವರ್ಷಗಳೊಳಗೆ ಆಸ್ತಿಯನ್ನು ಸಾಲಗಳೊಂದಿಗೆ ಲಗತ್ತಿಸುತ್ತವೆ.

ಎಂಎಸ್‌ಎಂಇಗಳು ಎದುರಿಸುತ್ತಿರುವ ಐದು ಪ್ರಮುಖ ಸವಾಲುಗಳು ಯಾವುವು ಮತ್ತು ಮುಂಬರುವ ಬಜೆಟ್‌ನಲ್ಲಿ ನಿಮ್ಮ ನಿರೀಕ್ಷೆಗಳೇನು?
ಹಿಂದಿನ ಬಜೆಟ್‌ನಲ್ಲಿ ಸರ್ಕಾರ ನಮ್ಮ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತಿತ್ತು, ಆದರೆ ಈ ಬಾರಿ ನಮ್ಮನ್ನು ಸಂಪರ್ಕಿಸಿಲ್ಲ. ಸರ್ಕಾರವು ಗ್ಯಾರಂಟಿ ಯೋಜನೆಗಳ ಜಾರಿಗೆ ತರಲು ಹೆಣಗಾಡುತ್ತಿದೆ. ಹೀಗಾಗಿ ಸರ್ಕಾರದಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ. ಸೂಕ್ತ ಸಂಪರ್ಕದೊಂದಿಗೆ ಗೊತ್ತುಪಡಿಸಿದ ಕೈಗಾರಿಕಾ ಪ್ರದೇಶಗಳ ನೀಡಬೇಕೆಂದು ಬಯಸುತ್ತೇವೆ. ಶೇ.90ರಷ್ಟು ಗೊತ್ತುಪಡಿಸದ ಪ್ರದೇಶಗಳಲ್ಲಿ ನೆಲೆಗೊಂಡಿರುವುದರಿಂದ, ಇದು ಅಸಮರ್ಪಕ ರಸ್ತೆ ಸಂಪರ್ಕ ಮತ್ತು ಕಳಪೆ ರಸ್ತೆ ಗುಣಮಟ್ಟದಿಂದಾಗಿ ಪೂರೈಕೆ ಮತ್ತು ವಾಹನ ಚಲನೆಯಲ್ಲಿ ಸಮಸ್ಯೆಗಳಾಗುತ್ತಿವೆ.

ವಿದ್ಯುತ್ ದರ ಹೆಚ್ಚಳ ಹೊರತು ಪಡಿಸಿ ಇರುವ ಸಮಸ್ಯೆಗಳೇನು?
ಇತ್ತೀಚೆಗಂತೂ ಗುಣಮಟ್ಟದ ಕೂಲಿ ಸಿಗದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ ಎಂಎಸ್‌ಎಂಇಗಳಲ್ಲಿ ಕೆಲಸ ಮಾಡಲು ಜನರು ಆದ್ಯತೆ ನೀಡುತ್ತಿಲ್ಲ. ಮೊದಲು ನಾವು ಯುಪಿ, ಬಿಹಾರ ಮತ್ತು ಒಡಿಶಾವನ್ನು ಅವಲಂಬಿಸಿದ್ದೆವು. ಆದರೆ, ಈಗ ಅಲ್ಲಿ ಉತ್ತಮ ಅವಕಾಶಗಳು ಸಿಕ್ಕಿದ್ದರಿಂದ ರಾಜ್ಯದತ್ತ ತಿರುಗಿ ನೋಡುತ್ತಿಲ್ಲ. ನಾವೀಗ ಈಶಾನ್ಯ ರಾಜ್ಯಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಆದರೆ, ಅವರು ಅಷ್ಟೊಂದು ನುರಿತವರಲ್ಲ ಮತ್ತು ಅವರ ದಕ್ಷತೆಯೂ ಕಡಿಮೆಯಿರುವುದರಿಂದ ಕಾರ್ಮಿಕರ ವೆಚ್ಚ ಶೇ.30 ಹೆಚ್ಚಾಗುವಂತೆ ಮಾಡಿದೆ.

ಕೋವಿಡ್ ನಂತರ, ವಿದ್ಯುತ್ ದರ ಹೆಚ್ಚಳ ಎಂಎಸ್‌ಎಂಇಗಳಿಗೆ ಬಿದ್ದ ದೊಡ್ಡ ಹೊಡೆತವೇ?
ಇನ್‌ಪುಟ್ ವೆಚ್ಚ ಮತ್ತು ಇಂಧನ ಹೆಚ್ಚಳವು ದೊಡ್ಡ ಸಮಸ್ಯೆಗಳಾಗಿವೆ, ಕೋವಿಡ್ ನಂತರದ ಅನೇಕ ಕಂಪನಿಗಳು ಮುಚ್ಚಿರುವುದರಿಂದ ಸರಕು ಸಾಗಣೆ ದರಗಳು ಹೆಚ್ಚಾಗಿವೆ. ಒಮ್ಮೆ ಪೆಟ್ರೋಲ್ ಬೆಲೆ ಅಥವಾ ರಸ್ತೆ ತೆರಿಗೆಯನ್ನು ಹೆಚ್ಚಿಸಿದರೆ, ಎಲ್ಲಾ ಕಂಪನಿಗಳು ತಮ್ಮ ಬೆಲೆಗಳನ್ನು ಹೆಚ್ಚಿಸುತ್ತವೆ. ಉದ್ಯಮ-ಸ್ನೇಹಿ ಕ್ರಮಗಳು ಕೇವಲ ಕಾಗದದ ಮೇಲಷ್ಟೇ ಇದೆ. ಆದರೆ, ವಾಸ್ತವಿಕತೆಯೇ ಬೇರೆಯಾಗಿದೆ.

ಭವಿಷ್ಯದಲ್ಲಿ ಇನ್ನಷ್ಟು ಕೈಗಾರಿಕೆಗಳು ಮುಚ್ಚುವ ಸಾಧ್ಯತೆ ಇದೆಯೇ?
ಇತ್ತೀಚಿನ ದಿನಗಳಲ್ಲಿ ಐಟಿಯಂತಹ ಇತರ ಕ್ಷೇತ್ರಗಳಲ್ಲಿ ಹೆಚ್ಚಿನ ವೇತನ ನೀಡುವ ಉದ್ಯೋಗಗಳಿಗೆ ಜನರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಹೈಟೆಕ್ ಸೌಲಭ್ಯಗಳನ್ನು ಹೊರತುಪಡಿಸಿ ಒಂದು ತಿಂಗಳಲ್ಲಿ ಒಂದೇ ಒಂದು ಎಂಎಸ್‌ಎಂಇ ಕೂಡ ತೆರೆಯುತ್ತಿಲ್ಲ. IoT ಹೊರತುಪಡಿಸಿ, ಎಲೆಕ್ಟ್ರಾನಿಕ್ಸ್ ಬಂದಿವೆ, ಆದರೆ ಯಾವುದೇ ಸಾಂಪ್ರದಾಯಿಕ ಕೈಗಾರಿಕೆಗಳು ಪ್ರಾರಂಭವಾಗಿಲ್ಲ. ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮವು ದೊಡ್ಡ ಪ್ರಮಾಣದ ಕೈಗಾರಿಕೆಗಳು ಮತ್ತು ಹೊಸ ಸ್ಟಾರ್ಟ್‌ಅಪ್‌ಗಳಿಗೆ ಪ್ರಯೋಜನವನ್ನು ನೀಡಿದೆ. ಕೆಲವರು ಗೌರವಾನ್ವಿತ ನಿರ್ಗಮನಗಳನ್ನು ಹೊಂದಿದ್ದಾರೆ, ಆದರೆ ಹಲವರಿಗೆ ಮುಚ್ಚುವುದನ್ನು ಹೊರತುಪಡಿಸಿ ಬೇರೆ ಆಯ್ಕೆಗಳಿಲ್ಲ. 5 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಪೀಣ್ಯ ಕೈಗಾರಿಕಾ ಪ್ರದೇಶವನ್ನು ಗಮನಿಸಿದರೆ ಶೇ.10ರಷ್ಟು ಜನರುತಮಗೆ ಮಂಜೂರಾಗಿದ್ದ ಭೂಮಿಯನ್ನು ಮಾರಾಟ ಮಾಡಿದ್ದಾರೆ ಅಥವಾ ಬಾಡಿಗೆಗೆ ನೀಡಿದ್ದಾರೆ.

ಪ್ರಸ್ತುತದ ಗಮನ ದೊಡ್ಡ ಕೈಗಾರಿಕೆಗಳು, ಅವುಗಳ ಹೂಡಿಕೆ ಮೇಲಿದ್ದು, ಸರ್ಕಾರವು ಎಸ್‌ಎಂಇಗಳ ಹಿತಾಸಕ್ತಿಗಳನ್ನು ರಕ್ಷಿಸದಿರಲು ಇದೇ ಕಾರಣವೇ?
ಸರ್ಕಾರಕ್ಕೆ ಕೃಷಿಯಂತಹ ಎಸ್‌ಎಂಇಗಳ ಅಗತ್ಯವಿದೆ, ಏಕೆಂದರೆ ನಾವು ಸಂಪೂರ್ಣವಾಗಿ ಯಾಂತ್ರೀಕರಣಗೊಳ್ಳಲು ಸಾಧ್ಯವಿಲ್ಲ. ನಾವು ಉದ್ಯೋಗವನ್ನು ಸೃಷ್ಟಿಸುತ್ತೇವೆ. ಆದರೆ. ಸರ್ಕಾರಕ್ಕೆ ನಮ್ಮ ಅವಶ್ಯಕತೆ ಇರುವುದು ಉದ್ಯೋಗಾವಕಾಶಕ್ಕಾಗಿಯೇ ಹೊರತು ಬೇರೆ ಉದ್ದೇಶಕ್ಕಾಗಿ ಅಲ್ಲ. ಅವರು ನಮ್ಮ ನಿಜವಾದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಉದ್ಯಮವನ್ನು ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆ ಗಮನ ಹರಿಸುವುದಿಲ್ಲ.

ಕೆಐಎಡಿಬಿ ಆಸ್ತಿ ಕುರಿತ ಬಾಕಿ ಉಳಿದಿರುವ ಪ್ರಕರಣಗಳ ಸಂಬಂಧ ಇತ್ತೀಚೆಗೆ ಕೈಗಾರಿಕಾ ಸಚಿವರು ಸಭೆ ನಡೆಸಿದ್ದರು, ಕೈಗಾರಿಕೆಗಳಿಗೆ ಭೂಮಿ ಮಂಜೂರು ಪ್ರಕ್ರಿಯೆ ಹೇಗಿದೆ?
ಇಂದು ಕೆಐಎಡಿಬಿಯಿಂದ ನೇರವಾಗಿ ಮಂಜೂರು ಮಾಡಿದ ಒಂದು ಎಕರೆ ಜಮೀನನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ. ನೀವು ಮಧ್ಯವರ್ತಿಗಳ ಮೂಲಕ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಭೂಮಿ ಎರಡು ಎಕರೆಗಿಂತ ಹೆಚ್ಚಿದ್ದರೆ ಇಲಾಖೆಯಿಂದ ಅನುಮತಿ ಪಡೆಯಬೇಕು. ಇದನ್ನು ಹಿಂದಿನ ಸರಕಾರ ಕಡ್ಡಾಯಗೊಳಿಸಿತ್ತು. ಭೂಮಿಗಳ ಮೇಲೆ ಕಾನೂನು ಸೇರಿದಂತೆ ಇತರ ಸಮಸ್ಯೆಗಳೂ ಇವೆ. ಸರ್ಕಾರದಿಂದ ಭೂಮಿ ಮಂಜೂರು ಮಾಡಿಕೊಂಡರೂ, ಭೂಮಿ ಬಳಿ ತೆರಳಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಜಮೀನು ತಮಗೇ ಸೇರಿದ್ದು ಎಂದು ರೈತರು ಹೋರಾಟ ನಡೆಸುತ್ತಾರೆ. ಅಂತಿಮ ಅಧಿಸೂಚನೆ ಹೊರಡಿಸದಿರುವುದು ಇದಕ್ಕೆ ಕಾರಣವಾಗುತ್ತಿದೆ. ಕೆಲವು ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com