ಹಳ್ಳಿಗೂ ಕಾಲಿಟ್ಟ ಐಟಿ ಕ್ಷೇತ್ರ: ಶಿರಸಿಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯಾದ 'ಆಲ್ಟ್ ಡಿಜಿಟಲ್ ಟೆಕ್ನಾಲಜಿ' ಕಂಪನಿ!

ಹಸಿರು ಪರಿಸರ ಹೊದ್ದ ಅರಣ್ಯ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಬೃಹತ್ ಕೈಗಾರಿಕೆಗಳು, ಐಟಿ–ಬಿಟಿಯಂಥ ಕಂಪನಿಗಳು ನೆಲೆಯೂರದ ಕಾರಣ ಉದ್ಯೋಗ ಅರಸಿ ಪರ ಸ್ಥಳಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವಲ್ಲೇ ಈ ಪರಿಸ್ಥಿತಿಯನ್ನು ತಡೆಯಲು ಐಟಿ ಕಂಪನಿಯೊಂದು ಹಳ್ಳಿಗೆ ಕಾಲಿಟ್ಟಿದೆ.
ಶಿರಸಿಯಲ್ಲಿರುವ ಆಲ್ಟ್ ಡಿಜಿಟಲ್ ಟೆಕ್ನಾಲಜೀಸ್ ಕಂಪನಿ
ಶಿರಸಿಯಲ್ಲಿರುವ ಆಲ್ಟ್ ಡಿಜಿಟಲ್ ಟೆಕ್ನಾಲಜೀಸ್ ಕಂಪನಿ
Updated on

ಹುಬ್ಬಳ್ಳಿ: ಹಸಿರು ಪರಿಸರ ಹೊದ್ದ ಅರಣ್ಯ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಬೃಹತ್ ಕೈಗಾರಿಕೆಗಳು, ಐಟಿ–ಬಿಟಿಯಂಥ ಕಂಪನಿಗಳು ನೆಲೆಯೂರದ ಕಾರಣ ಉದ್ಯೋಗ ಅರಸಿ ಪರ ಸ್ಥಳಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವಲ್ಲೇ ಈ ಪರಿಸ್ಥಿತಿಯನ್ನು ತಡೆಯಲು ಐಟಿ ಕಂಪನಿಯೊಂದು ಹಳ್ಳಿಗೆ ಕಾಲಿಟ್ಟಿದೆ.

ಅಲ್ಟ್ ಡಿಜಿಟಲ್ ಟೆಕ್ನಾಲಜೀಸ್ ಎಂಬ ಐಟಿ ಕಂಪನಿ ತಾಲ್ಲೂಕಿನ ಬೆಂಗಳೆ ಗ್ರಾಮದ ಒಡ್ಡಿನಕೊಪ್ಪದಲ್ಲಿ ತನ್ನ ಶಾಖೆಯನ್ನು ಆರಂಭಿಸಿದ್ದು, ಇದರಿಂದ ಉದ್ಯೋಗ ಅರಸಿ ವಲಸೆ ಹೋಗುವ ಬದಲು ಐಟಿ ಉದ್ಯೋಗಿಗಳು ತಾವಿರುವ ಪರಿಸರದ ನಡುವಲ್ಲೇ ಕೆಲಸ ಮಾಡುವಂತಾಗಿದೆ.

ಉತ್ತರ ಪ್ರದೇಶ ಮೂಲದ ವಿಕಾಸ ಗೋಯಲ್ ಈ ಕಂಪನಿಯ ಸಂಸ್ಥಾಪಕರಾಗಿದ್ದು, ಬೆಂಗಳೆ ಗ್ರಾಮದ ಗೌತಮ್ ಕಂಪನಿಯ ಸಹ ಸಂಸ್ಥಾಪಕರಾಗಿದ್ದಾರೆ. 8 ವರ್ಷಗಳ ಹಿಂದೆ ಪ್ರಾರಂಭವಾದ ಸಂಸ್ಥೆಯ ಮುಖ್ಯ ಕಚೇರಿ ಉತ್ತರ ಪ್ರದೇಶದ ನೋಯ್ಡಾದಲ್ಲಿದೆ.

ಈಗ ಸಾಮಾನ್ಯ ಹಳ್ಳಿಯೊಂದರಲ್ಲಿ ಕಂಪನಿ ತನ್ನ ಶಾಖೆ ಆರಂಭಿಸುವ ಸಾಹಸಕ್ಕೆ ಕೈಹಾಕಿದೆ. ಒಡ್ಡಿನಕೊಪ್ಪದಲ್ಲಿ ಈ ಹಿಂದೆ ರೆಸಾರ್ಟ್ ಆಗಿದ್ದ ಕಟ್ಟಡವನ್ನು ಖರೀದಿ ಮಾಡಲಾಗಿದ್ದು, ಅಲ್ಲಿ 50 ಜನ ಕಾರ್ಯನಿರ್ವಹಿಸಬಹುದಾದ ಸ್ಥಳಾವಕಾಶ, ಸೌಲಭ್ಯ ಕಲ್ಪಿಸಲಾಗಿದೆ.

ಶಿರಸಿಯ ಸಣ್ಣ ಗ್ರಾಮದಲ್ಲಿ ಹುಟ್ಟಿ ಬೆಳೆದ ಗೌತಮ್ ಅವರಿಗೆ ತಮ್ಮ ಊರಿಗಾಗಿ ಏನಾದರೂ ಮಾಡಬೇಕೆಂಬ ಹಂಬಲವಿತ್ತು. ಇದೀಗ ತಮ್ಮ ಊರಿನಲ್ಲೇ ಐಟಿ ಕಂಪನಿ ಸ್ಥಾಪನೆಯಾಗುವಂತೆ ಮಾಡಿದ್ದಾರೆ.

ಕಂಪನಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ 10 ಮಂದಿ ಪ್ರತಿಭೆಗಳು ಕೆಲಸ ಪ್ರಾರಂಭಿಸಿದ್ದಾರೆ. ಇದೀಗ ಈ 10 ಮಂದಿ ಸಿಬ್ಬಂದಿಗಳೊಂದಿಗೆ ಕೆಲಸ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ಯೋಗ ಮೇಳ ನಡೆಸಿ, ಮತ್ತಷ್ಟು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇನ್ನೂ 5 ಮಂದಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ನೊಯ್ಡಾದಲ್ಲಿ ಕೆಲಸ ಮಾಡುವ ಟೆಕ್ಕಿಗಳಂತೆಯೇ ಇಲ್ಲಿನ ಟೆಕ್ಕಿಗಳಿಗೂ ಸಮಾನ ವೇತನವನ್ನು ನೀಡಲಾಗುತ್ತದೆ ಎಂದು ಗೌತಮ್ ಅವರು ಹೇಳಿದ್ದಾರೆ.

ಇಲ್ಲಿನ ಯುವಕರು ಮೆಟ್ರೋ ನಗರ ಮತ್ತು ವಿದೇಶಗಳಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡುತ್ತಲೇ ಇರುತ್ತೇವೆ. ಇದರಿಂದಾಗಿ ವಯಸ್ಸಾದ ಪೋಷಕರು ಹಳ್ಳಿ ಮತ್ತು ನಗರಗಳಲ್ಲಿ ಉಳಿಯುತ್ತಾರೆ. ಕಂಪನಿಗಳನ್ನು ಹಳ್ಳಿಗಳಲ್ಲೇ ಸ್ಥಾಪನೆ ಮಾಡಿದರೆ, ಈ ಪರಿಸ್ಥಿತಿಯನ್ನು ದೂರಾಗಿಸಬಹುದು. ಕರ್ನಾಟಕದ ಹಲವಾರು ಎಂಜಿನಿಯರ್‌ಗಳು ವಿದೇಶದಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಅವರು ತಮ್ಮ ಹಳ್ಳಿಗಳಲ್ಲಿ ಉದ್ಯೋಗವನ್ನು ಸೃಷ್ಟಿಸುವ ಪ್ರಯತ್ನಗಳನ್ನು ಮಾಡಬಹುದು ಎಂದು ತಿಳಿಸಿದ್ದಾರೆ.

“ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಐಟಿ ಕಂಪನಿಯನ್ನು ಗ್ರಾಮಗಳಲ್ಲಿ ಸ್ಥಾಪನೆ ಮಾಡುವ ಕುರಿತ ಚಿಂತನೆಗಳು ಬಂದಿದ್ದವು. ನಮಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ನೀಡಲಾಗಿತ್ತು. ಈ ವೇಳೆ ಇಲ್ಲಿಯೇ ಶಾಖೆ ತೆರೆಯಲು ನಿರ್ಧರಿಸಿದ್ದೆ. ಇತ್ತೀಚಿನ ದಿನಗಳಲ್ಲಿ ಪ್ರತಿ ಗ್ರಾಮವು ಡಿಜಿಟಲ್ ಸಂಪರ್ಕವನ್ನು ಹೊಂದಿದೆ. ಇನ್ನೂ ಅನೇಕ ಪ್ರದೇಶಗಳು ಹೊಸ ಸಂಪರ್ಕಗಳನ್ನು ಪಡೆಯುತ್ತಿವೆ. ರಾಜ್ಯ ಸರ್ಕಾರವು ಪ್ರಚಾರ ಮಾಡುತ್ತಿರುವ ಬೆಂಗಳೂರು ಬಿಯಾಂಡ್ ಪರಿಕಲ್ಪನೆಯು ಶಿರಸಿಯಂತಹ ಸಣ್ಣ ಪಟ್ಟಣಗಳಲ್ಲಿ ಕಂಪನಿಗಳಿಗೆ ನೆಲೆಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com