ಮೈಸೂರು ರೈಲ್ವೆ ನಿಲ್ದಾಣದಲ್ಲಿ ಏಕೈಕ ಮಹಿಳಾ ಪೋರ್ಟರ್; ಅಭಿಮಾನದ ಸುರಿಮಳೆ!

ಮೈಸೂರು ರೈಲು ನಿಲ್ದಾಣದಲ್ಲಿ ಪರವಾನಗಿ ಸಂಖ್ಯೆ 16 ವಿಶೇಷ ವ್ಯಕ್ತಿಯೊಬ್ಬರಿಗೆ ಸೇರಿದೆ. ಅವರೇ ನೈಋತ್ಯ ರೈಲ್ವೆ ವಲಯದ ಏಕೈಕ ಮಹಿಳಾ ಪೋರ್ಟರ್ ರಿಜ್ವಾನಾ ಬಾನು. ತನ್ನ ತಲೆ ಮೇಲೆ ಲಗೇಜ್ ಅನ್ನು ಹೊತ್ತುಕೊಳ್ಳುವ 39 ವರ್ಷ ವಯಸ್ಸಿನ ರಿಜ್ವಾನಾ ಅವರನ್ನು ಗುರುತಿಸುವ ಪ್ರಯಾಣಿಕರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ. 
ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುವ ರಿಜ್ವಾನಾ ಬಾನು
ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುವ ರಿಜ್ವಾನಾ ಬಾನು
Updated on

ಮೈಸೂರು: ಮೈಸೂರು ರೈಲು ನಿಲ್ದಾಣದಲ್ಲಿ ಪರವಾನಗಿ ಸಂಖ್ಯೆ 16 ವಿಶೇಷ ವ್ಯಕ್ತಿಯೊಬ್ಬರಿಗೆ ಸೇರಿದೆ. ಅವರೇ ನೈಋತ್ಯ ರೈಲ್ವೆ ವಲಯದ ಏಕೈಕ ಮಹಿಳಾ ಪೋರ್ಟರ್ ರಿಜ್ವಾನಾ ಬಾನು. ತನ್ನ ತಲೆ ಮೇಲೆ ಲಗೇಜ್ ಅನ್ನು ಹೊತ್ತುಕೊಳ್ಳುವ 39 ವರ್ಷ ವಯಸ್ಸಿನ ರಿಜ್ವಾನಾ ಅವರನ್ನು ಗುರುತಿಸುವ ಪ್ರಯಾಣಿಕರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ. ಅಲ್ಲದೆ, ಅವರೊಂದಿಗೆ ಮಾತಿಗೆ ಇಳಿಯುತ್ತಾರೆ ಮತ್ತು ತನ್ನ ಕೆಲಸವನ್ನು ಪೂರ್ಣಗೊಳಿಸಿದ ನಂತರ ಅನೇಕರು ಸ್ವಯಂಪ್ರೇರಣೆಯಿಂದ ಹೆಚ್ಚುವರಿ ಹಣವನ್ನು ನೀಡುತ್ತಾರೆ.

ರಿಜ್ವಾನಾ ಬಾನು ಅವರು ಪೋರ್ಟರ್‌ ಆಗಿದ್ದ ತನ್ನ ಪತಿ ಮರಣದ ನಂತರ ಈ ಕೆಲಸಕ್ಕೆ ತಾನೇ ಸೇರಿಕೊಳ್ಳಲು ಯೋಚಿಸಿದರು. ಕಳೆದ ಹನ್ನೊಂದು ವರ್ಷಗಳಿಂದ ಮಾಡುತ್ತಿರುವ ಈ ಕೆಲಸವು ಅವರಿಗೆ ಬದುಕಿಗೆ ಆಸರೆಯಾಗಿದೆ ಮತ್ತು ಆಕೆಯ ಮೂವರು ಮಕ್ಕಳಿಗೆ ಮದುವೆ ಮಾಡಲು ಕೂಡ ಸಹಾಯ ಮಾಡಿದೆ. ಜೊತೆಗೆ ಆಕೆಗೆ ರಾಷ್ಟ್ರ ಮಟ್ಟದ ಜನಪ್ರಿಯತೆಯನ್ನೂ ನೀಡಿದೆ.

ಶಾಂತಿನಗರದ ನಿವಾಸಿಯಾಗಿರುವ ಬಾನು, ಬೆಳಗ್ಗೆ 5 ಗಂಟೆಯ ಮೊದಲು ರೈಲ್ವೆ ನಿಲ್ದಾಣಕ್ಕೆ ಬರುತ್ತಾರೆ. 'ಈ ಕೆಲಸ ಮಾಡುವುದನ್ನು ಬಿಟ್ಟು ನನಗೆ ಬೇರೆ ದಾರಿಯೇ ಇರಲಿಲ್ಲ. ನನ್ನ ಪತಿ 12 ವರ್ಷಗಳ ಹಿಂದೆ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ನಾನು ರೈಲ್ವೆ ನಿಲ್ದಾಣಕ್ಕೆ ಭೇಟಿದೆ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೆಲಸ ಮಾಡಲು ಅವಕಾಶ ನೀಡುವಂತೆ ಕೇಳಿದೆ. ಅಂತಿಮವಾಗಿ, ಒಂದು ವರ್ಷದ ನಂತರ, ನಾನು ಪೋರ್ಟರ್ ಪರವಾನಗಿ ಸಂಖ್ಯೆಯನ್ನು ಪಡೆದುಕೊಂಡೆ' ಎಂದು ಅವರು ಟಿಎನ್ಐಇಗೆ ತಿಳಿಸಿದರು.

ಆರಂಭದಲ್ಲಿ ಸಾರ್ವಜನಿಕರು ನನಗೆ ಕೆಲಸ ನೀಡುತ್ತಿರಲಿಲ್ಲ. ಏಕೆಂದರೆ, ನಾನು ತೂಕವನ್ನು ಹೊರುವ ಸಾಮರ್ಥ್ಯದ ಬಗ್ಗೆ ಸಂಶಯವಿತ್ತು. 'ಈಗ, ನಾನು ಪರಿಚಿತ ಮುಖ. ಸಾರ್ವಜನಿಕರು ಸಾಮಾನ್ಯವಾಗಿ ನನ್ನೊಂದಿಗೆ ಚೌಕಾಸಿ ಮಾಡುವುದಿಲ್ಲ. ವಾಸ್ತವವಾಗಿ, ಅವರಲ್ಲಿ ಅನೇಕರು ನನಗೆ ಶ್ಲಾಘನೆಯ ಸೂಚಕವಾಗಿ ನಾನು ವಿಧಿಸುವುದಕ್ಕಿಂತ 100 ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನನಗೆ ನೀಡುತ್ತಾರೆ. ಅನೇಕ ಪ್ರಯಾಣಿಕರು ನನ್ನೊಂದಿಗೆ ಸೆಲ್ಫಿಗಾಗಿ ವಿನಂತಿಸುತ್ತಾರೆ' ಎಂದು ಅವರು ಹೇಳಿದರು.

'ನಿಲ್ದಾಣದಲ್ಲಿರುವ ಇತರೆ 60 ಪುರುಷ ಪೋರ್ಟರ್‌ಗಳು ನನಗೆ ಬೆಂಬಲ ನೀಡುತ್ತಾರೆ. ಲಗೇಜ್ ಭಾರವಾಗಿದ್ದರೆ ಯಾರಾದರೂ ನನ್ನೊಂದಿಗೆ ಬರುತ್ತಾರೆ ಮತ್ತು ನಾವು ಗಳಿಕೆಯನ್ನು ಹಂಚಿಕೊಳ್ಳುತ್ತೇವೆ' ಎನ್ನುವ ಅವರು, ಈ ಅವಕಾಶ ನೀಡಿದ್ದಕ್ಕಾಗಿ ರೈಲ್ವೆಗೆ ಕೃತಜ್ಞತೆ ತಿಳಿಸುತ್ತಾರೆ. 'ನಾನು ನನ್ನ ಮಕ್ಕಳಿಗೆ ಮೂಲಭೂತ ಶಿಕ್ಷಣವನ್ನು ನೀಡಿದ್ದೇನೆ. ಈ ಕೆಲಸದಿಂದಾಗಿ ನನ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನಿಗೆ ಮದುವೆ ಮಾಡಲು ಸಾಧ್ಯವಾಯಿತು' ಎಂದು ಅವರು ಹೇಳಿದರು.

ಎಸ್ಕಲೇಟರ್‌ಗಳು ಈಗ ನನ್ನ ಗಳಿಕೆಯನ್ನು ತಿಂದಿವೆ. ಈ ಹಿಂದೆ 500-600 ರೂ. ಗಳಿಸುತ್ತಿದ್ದೆ. ಆದರೆ, ಈಗ ನಾನು ಸರಾಸರಿ 300-400 ರೂ. ಗಳಿಸುತ್ತೇನೆ ಎನ್ನುತ್ತಾರೆ. 

ಕಳೆದ ವರ್ಷ ಮುಂಬೈನಲ್ಲಿ ನಡೆದ ಇಂಡಿಯನ್ ಐಡಲ್ ಶೋನಲ್ಲಿ ನಟಿಸಲು ಬಾನು ಆಯ್ಕೆಯಾದರು. ಇದು 1.5 ಲಕ್ಷ ರೂಪಾಯಿ ಗಳಿಸಲು ಸಹಾಯ ಮಾಡಿತು. ರಾಷ್ಟ್ರೀಯ ಪ್ರಚಾರದ ಹೊರತಾಗಿ, ಇದು ಆಕೆಗೆ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು ನೀಡಿತು. ಅವರು ವೆಲ್ಡರ್ ಆಗಿ ಕೆಲಸ ಮಾಡುವ ತನ್ನ 17 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದಾರೆ. 

'ಅವನು ಕೆಲಸ ಮಾಡುವುದನ್ನು ನಿಲ್ಲಿಸಲು ಹೇಳುತ್ತಾನೆ. ಮುಂದೆ ಅವನ ಮದುವೆಗೆ ಹಣವನ್ನು ಉಳಿಸಲು ನಾನು ಬಯಸುತ್ತೇನೆ. ನಾನು ಫಿಟ್ ಆಗಿದ್ದೇನೆ ಮತ್ತು ಈಗ ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅಲ್ಲಾಹನು ನನಗೆ ಶಕ್ತಿ ಕೊಡುವವರೆಗೂ ನಾನು ಈ ಕೆಲಸವನ್ನು ಮಾಡುತ್ತೇನೆ' ಎಂದು ಬಾನು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com