ನಕ್ಸಲರಿಗೂ ಸಡ್ಡು ಹೊಡೆದು ಕೃಷಿ ಮಾಡಿ ಹಳ್ಳಿಯ ಹಣಕಾಸಿನ ವ್ಯವಸ್ಥೆಯನ್ನೇ ಬದಲಿಸಿದ ಜಾರ್ಖಂಡ್‌ ನ ದಿಟ್ಟ ಮಹಿಳೆ

ಅಕ್ಲಿ ತುಡು.. ಜಾರ್ಖಂಡ್ ಸೂಪರ್ ಮಹಿಳೆ ಎಂದರೆ ತಪ್ಪಾಗಲಾರದು. ತನ್ನ ಪತಿಯಿಂದ ದೂರ ಉಳಿದು ಮಾವೋವಾದಿಗಳಿಂದ ಬೆದರಿಕೆಗೂ ಬಗ್ಗದ 35 ವರ್ಷದ ಮಹಿಳೆ ಅಕ್ಲಿ ತುಡು ಅವರ ಜೀವನವು ಸೂಪರ್ ಹೀರೋ ಚಿತ್ರಕ್ಕಿಂತ ಕಡಿಮೆ ಏನಲ್ಲ. 
ಜಾರ್ಖಂಡ್‌ ನ ದಿಟ್ಟ ಮಹಿಳೆ ಅಕ್ಲಿ
ಜಾರ್ಖಂಡ್‌ ನ ದಿಟ್ಟ ಮಹಿಳೆ ಅಕ್ಲಿ

ಅಕ್ಲಿ ತುಡು.. ಜಾರ್ಖಂಡ್ ಸೂಪರ್ ಮಹಿಳೆ ಎಂದರೆ ತಪ್ಪಾಗಲಾರದು. ತನ್ನ ಪತಿಯಿಂದ ದೂರ ಉಳಿದು ಮಾವೋವಾದಿಗಳಿಂದ ಬೆದರಿಕೆಗೂ ಬಗ್ಗದ 35 ವರ್ಷದ ಮಹಿಳೆ ಅಕ್ಲಿ ತುಡು ಅವರ ಜೀವನವು ಸೂಪರ್ ಹೀರೋ ಚಿತ್ರಕ್ಕಿಂತ ಕಡಿಮೆ ಏನಲ್ಲ. 

ಜಾರ್ಖಂಡ್‌ನ ಪೂರ್ವ ಸಿಂಗ್‌ಬಮ್ ಜಿಲ್ಲೆಯ ಗುಡಾಬಂಧದ ಮಾವೋವಾದಿ ಪೀಡಿತ ತಾಣದಲ್ಲಿ ವಾಸಿಸುತ್ತಿದ್ದ ಅಕ್ಲಿ ಬಳಿಕ ಇಡೀ ದೇಶದ ಮಹಿಳೆಯರಿಗೆ ಸ್ಪೂರ್ತಿಯಾಗುವಂತೆ ಬದುಕಿ ತೋರಿಸುತ್ತಿದ್ದಾರೆ. 6 ನೇ ತರಗತಿಯನ್ನು ತೊರೆದ ಅಕ್ಲಿ ತನ್ನ ಹಳ್ಳಿಯಿಂದ 10 ಕಿಮೀ ದೂರದಲ್ಲಿರುವ ಮುಸಾಬಾನಿಯಲ್ಲಿ ತನ್ನ ಪತಿಯೊಂದಿಗೆ ಮದುವೆಯಾಗುವ ಮೊದಲು ತನ್ನ ತಾಯಿಯಿಂದ ಬಿದಿರಿನ ಬುಟ್ಟಿಗಳನ್ನು ಮಾಡಲು ಕಲಿತಿದ್ದರು. 

ತನ್ನ ಪತಿಯಿಂದ ದೂರವಾದ ನಂತರ, ಆಕೆ ಸ್ವಂತವಾಗಿ ಹೊರಡುವ ಮೊದಲು ತನ್ನ ತವರಿಗೆ ಮರಳಿದ್ದರು. ಅಂದಿನಿಂದ ಅವರು 120 ಹಳ್ಳಿಗಳ 2,000 ಕ್ಕೂ ಹೆಚ್ಚು ಮಹಿಳೆಯರನ್ನು ಸಂಯೋಜಿಸಿ ಅವರಿಗೆ ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯ ಮಾಡಿದ್ದಾರೆ. ಅಕ್ಲಿ ಅವರು ರೈತರಿಗೆ ತಾಂತ್ರಿಕ ಜ್ಞಾನವನ್ನು ನೀಡುವ ಮೂಲಕ ಸುಮಾರು 100 ಕೆರೆಗಳನ್ನು ನಿರ್ಮಿಸುವ ಮತ್ತು 1,159 ಕ್ಕೂ ಹೆಚ್ಚು ಕೆರೆಗಳನ್ನು ಪುನರುಜ್ಜೀವನಗೊಳಿಸುವ ಮಹತ್ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ ಮತ್ತು ಹಳ್ಳಿಯ ಮಹಿಳೆಯರನ್ನು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಬಲೀಕರಣಗೊಳಿಸಿದ್ದಾರೆ.

ತಮ್ಮ ಸಾಮಾಜಿಕ ಕಾರ್ಯಗಳಿಗಾಗಿ ನಬಾರ್ಡ್‌ನಿಂದ ಸಾಮಾಜಿಕ ಪ್ರಶಸ್ತಿ, ಮಹಿಳಾ ಉದ್ಯಮಿ ರೈತ ಪ್ರಶಸ್ತಿ, ವಾಟರ್ ಚಾಂಪಿಯನ್ ಪ್ರಶಸ್ತಿ ಮತ್ತು ಅತ್ಯುತ್ತಮ ಇಪಿಸಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅಕ್ಲಿ ಪಡೆದಿದ್ದಾರೆ. “2012 ರಲ್ಲಿ, ಟ್ಯಾಗೋರ್ ಸೊಸೈಟಿಯು ಸ್ವ-ಸಹಾಯ ಗುಂಪುಗಳನ್ನು ರಚಿಸಲು ನನ್ನ ಗ್ರಾಮಕ್ಕೆ ಬಂದಿತ್ತು. ನಾನು ಸಮಾಜವನ್ನು ಸೇರಿಕೊಂಡೆ ಮತ್ತು ನಂತರ ಅವರು ನೀರಿನ ಕೊರತೆ ಮತ್ತು ರೈತರ ಮೇಲೆ ಅದರ ಪರಿಣಾಮಗಳಿಂದ ನೀರಾವರಿಗೆ ಮುಂದಾದೆ ಎಂದು ಅಕ್ಲಿ ಹೇಳುತ್ತಾರೆ.

ಅಂತಹ ಒಂದು ಗುಂಪನ್ನು ಮುನ್ನಡೆಸುತ್ತಾ, ಈ ಪ್ರದೇಶದಲ್ಲಿ ಕೆಲಸ ಮಾಡುವ ಸೊಸೈಟಿಗಳು ನೀರಿನ ಕೊರತೆಯಿಂದ ರೈತರು ಬಳಲುತ್ತಿರುವ ಕಾರಣ ನೀರಾವರಿ ಸೌಲಭ್ಯಗಳೊಂದಿಗೆ ಸಹಾಯ ಮಾಡಲು ನಾನು ಕೇಳಿದೆ ಎಂದು ಅಕ್ಲಿ ಹೇಳುತ್ತಾರೆ. CINI ಮತ್ತು ಟಾಟಾ ಸ್ಟೀಲ್ ಫೌಂಡೇಶನ್ ಮುಂದೆ ಬಂದು ಕೆರೆಗಳನ್ನು ಅಗೆಯಲು ನಿಧಿಯನ್ನು ಅನುಮೋದಿಸಿತು. ಆದರೆ ಇದಕ್ಕೊಂದು ಷರತ್ತು ಇದ್ದು, ನೋಂದಾಯಿತ ಸಂಸ್ಥೆಗೆ ಮಾತ್ರ ಹಣವನ್ನು ವಿತರಿಸಬಹುದು ಎಂದು ಹೇಳಿದ್ದರು. ಆದ್ದರಿಂದ, ನಾನು ನವೆಂಬರ್ 11, 2014 ರಂದು ಜುಮಿತ್ ತಿರ್ಲಾ ಗಂವ್ಟಾ (ಏಕ್ತಾ ಮಹಿಳಾ ಸಮಿತಿ) ಟ್ರಸ್ಟ್ ಅನ್ನು ನೋಂದಾಯಿಸಿದೆ. ನನ್ನ ಮೊದಲ ಯೋಜನೆಯಲ್ಲಿ, ನನಗೆ ಮಾವೋವಾದಿಗಳು ಜೀವ ಬೆದರಿಕೆ ಹಾಕಿದರು. ಮಾತ್ರವಲ್ಲ ನನ್ನನ್ನು ಕೊಂದರೆ ಹಣ ಬಹುಮಾನ ನೀಡುವುದಾಗಿ ಪೋಸ್ಟರ್ ಗಳನ್ನೂ ಕೂಡ ಹಾಕಿದ್ದರು. ಆಗ ಮಹಿಳೆಯರು ಕೃಷಿಯಲ್ಲಿ ತೊಡಗುವುದರಿಂದ ವಿಮುಖರಾಗುತ್ತಾರೆ ಎಂದು ಅವರು ಭಾವಿಸಿದ್ದರು. ಆದರೆ, ಏನೂ ಆಗಲಿಲ್ಲ. ಈಗ, ನಾನು ತಿಂಗಳಿಗೆ 25000 ವರೆಗೆ ಗಳಿಸುತ್ತಿರುವ ಒಟ್ಟು 2,004 ಮಹಿಳೆಯರೊಂದಿಗೆ ಇಲ್ಲಿದ್ದೇನೆ" ಎಂದು ಅಕ್ಲಿ ಹೇಳಿದರು.

ಅಕ್ಲಿ ಅವರ ಟ್ರಸ್ಟ್‌ನಲ್ಲಿ ಕೆಲಸ ಮಾಡುವ ಏಳು ಅಧಿಕಾರಿಗಳನ್ನು ಹೊರತುಪಡಿಸಿ, 1,152 ರೈತರು ಮೀನು, ಬಾತುಕೋಳಿ, ತರಕಾರಿ ಮತ್ತು ಹಣ್ಣಿನ ಕೃಷಿಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಕ್ಲಿ ಅವರು, 'ಈಗಿನಂತೆ, ನಾನು ಬಾಡಿಗೆಗೆ ವಾಸಿಸುವ ನನ್ನ ಬ್ಲಾಕ್ ಧಲ್ಭೂಮ್‌ಗಢದಲ್ಲಿ ಮತ್ತು ಅದರ ಸುತ್ತಲೂ 93 ಕೊಳಗಳನ್ನು ತೋಡಿದ್ದೇನೆ. ರೈತರ ಒಡೆತನದ ಸುಮಾರು 1,500 ಬಳಕೆಯಾಗದ ಕೊಳಗಳನ್ನು ವಿವಿಧ ಯೋಜನೆಗಳೊಂದಿಗೆ ಸಂಪರ್ಕಿಸುವ ಮೂಲಕ ಮತ್ತು ವಿವಿಧ ರೀತಿಯ ಕೃಷಿಯಲ್ಲಿ ತಾಂತ್ರಿಕ ಜ್ಞಾನವನ್ನು ಒದಗಿಸುವ ಮೂಲಕ ನಾನು ಪುನರುಜ್ಜೀವನಗೊಳಿಸಿದ್ದೇನೆ ಎಂದು ಅಕ್ಲಿ ಹೇಳಿದರು.

'ನಾನು ಬುಡಕಟ್ಟು ಕುಟುಂಬದ ಮಗಳು. ನಾನು ಮುಸಾಬಾನಿಯಲ್ಲಿ ವಿವಾಹವಾದೆ, ಅಲ್ಲಿ ಸಾಂಪ್ರದಾಯಿಕ ಆಚರಣೆಯನ್ನು ಇನ್ನೂ ಅನುಸರಿಸಲಾಗುತ್ತಿದೆ. ಮನೆಯ ಹೊಸ್ತಿಲನ್ನು ಮೀರಿ ಏನನ್ನೂ ಮಾಡಲು ನನಗೆ ಅವಕಾಶವಿರಲಿಲ್ಲ. ಕೆಲವು ದಿನಗಳ ನಂತರ ನಾನು ಮನೆಗೆ ಬಂದೆ. ಆಗ ಗುಡಬಂಡಾವನ್ನು ಹೆಚ್ಚು ನಕ್ಸಲೀಯರ ಪೀಡಿತ ಪ್ರದೇಶವೆಂದು ಪರಿಗಣಿಸಲಾಗಿತ್ತು. ನಕ್ಸಲೀಯರು ಮಹಿಳೆಯರು ಕೃಷಿ ಮಾಡುವುದನ್ನು ನಿಷೇಧಿಸಿದ್ದರು. ಒಂದು ದಿನ ನಾನು ನನ್ನ ತಂದೆಗೆ ಸಹಾಯ ಮಾಡಲು ಜಮೀನಿಗೆ ಹೋಗಿದ್ದೆ. ಈ ವಿಷಯ ನಕ್ಸಲೀಯರಿಗೆ ತಿಳಿದಾಗ ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದರು. ಆದರೆ ನಾನು ಗಮನ ಕೊಡಲಿಲ್ಲ. ಅದರ ನಂತರ ನನಗೆ ಭಯವಾಯಿತು. ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಲಾಯಿತು. ನಕ್ಸಲೀಯರಿಗೆ ಹೆದರಿ ಪತಿ ಬಿಟ್ಟು ಹೋದ. ಇದಾದ ನಂತರ ಕೃಷಿಯನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದೆ. ನನ್ನ ಧೈರ್ಯ ನೋಡಿ ಟ್ಯಾಗೋರ್ ಸೊಸೈಟಿಯ ಜನ ನನಗೆ ಸಹಾಯ ಮಾಡಿದರು. 2012 ರಲ್ಲಿ ಸ್ವ-ಸಹಾಯ ಗುಂಪು ಸೇರಿದೆ. ಕೃಷಿ ಒಪ್ಪಂದ ಮಾಡಿಕೊಂಡರು. ನಂತರ ಗ್ರಾಮದ 10 ಮಹಿಳೆಯರನ್ನು ಸೇರಿಸಿದರು. ದೊಡ್ಡ ಸಮಸ್ಯೆ ನೀರಾವರಿ ಆಗಿತ್ತು. ಟಾಟಾ ಸ್ಟೀಲ್ ಫೌಂಡೇಶನ್ ಸಹಾಯದಿಂದ ಈ ಕೆರೆಗಳನ್ನು ನಿರ್ಮಿಸಲಾಗಿದೆ. ಇದಾದ ನಂತರ ಪ್ರತಿ ಗ್ರಾಮದಿಂದ ಮಹಿಳೆಯರು ಸೇರುತ್ತಿದ್ದರು. ಈಗ 1800 ಮಹಿಳೆಯರೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅಕ್ಲಿ ಹೇಳಿದ್ದಾರೆ.

ಹಳ್ಳಿಯ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವ ಉದ್ದೇಶದಿಂದ ಏಕಾಂಗಿಯಾಗಿ ಅವರು ಮಾವೋವಾದಿಗಳನ್ನು ಎದುರು ಹಾಕಿಕೊಂಡಿದ್ದಾರೆ.. ಆಕೆಯಿಂದಾಗಿ ಇಂದು ಈ ಭಾಗದ ಅನೇಕ ಮನೆಗಳಲ್ಲಿ ಸಮೃದ್ಧಿ ಇದೆ ಎಂದು ಸ್ಥಳೀಯ ಹರಿಶಂಕರ್ ತುಡು ಹೇಳಿದರು. 

ಈ ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಅಕ್ಲಿ ಅವರು ಎಪಿಸಿ ಘರಂಜ್ ಲಹಂತಿ ಮಹಿಳಾ ಉತ್ಪಾದನಾಕ್ ಪ್ರೊಡ್ಯೂಸರ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರೂ ಆಗಿದ್ದು, ಕಳೆದ ವರ್ಷ 6.5 ಲಕ್ಷ ಲಾಭದೊಂದಿಗೆ ಒಟ್ಟು 1.7 ಕೋಟಿ ವಹಿವಾಟು ನಡೆಸಿದ್ದರು. ಲಾಭವನ್ನು ಮಹಿಳೆಯರಲ್ಲಿ ಅವರ ಕೊಡುಗೆಗೆ ಅನುಗುಣವಾಗಿ ಹಂಚಲಾಗುತ್ತದೆ; ಸರಾಸರಿಯಾಗಿ, ಮಹಿಳೆಯರು ತಿಂಗಳಿಗೆ ಸುಮಾರು 15,000 ಗಳಿಸುತ್ತಿದ್ದಾರೆ. ಲಿಮಿಟೆಡ್ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿರುವ ಏಳು ಜನರಲ್ಲಿ ಒಬ್ಬರಾದ ಚುಮ್ಕಿ ಪ್ರಧಾನ್, ರೈತರ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ರಾಂಚಿಯ ಜಮ್ಶೆಡ್‌ಪುರದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. 

"ನಾನು 2020 ರಲ್ಲಿ ಕಂಪನಿಯನ್ನು ಸೇರಿಕೊಂಡೆ ಮತ್ತು ಅಂದಿನಿಂದ ನನ್ನ ಜೀವನೋಪಾಯವನ್ನು ಗಳಿಸುತ್ತಿದ್ದೇನೆ. ಬೀಜಗಳು ಮತ್ತು ಗೊಬ್ಬರಗಳನ್ನು ಉತ್ಪಾದಿಸಲು ನಮ್ಮಲ್ಲಿ ಮೂರು ನರ್ಸರಿಗಳಿವೆ, ಅದನ್ನು ರೈತರಿಗೆ ಕೈಗೆಟುಕುವ ದರದಲ್ಲಿ ನೀಡಲಾಗುತ್ತದೆ. ಕಂಪನಿಯ ಲಾಭಕ್ಕೆ ತಕ್ಕಂತೆ ನಮ್ಮ ಪಾಲು ಪಡೆಯುತ್ತಿದ್ದೇವೆ’ ಎಂದು ಚುಮ್ಕಿ ಪ್ರಧಾನ್ ಹೇಳಿದರು.

"ಅಕ್ಲಿ ತುಡು ಅವರ ಕೆಲಸವು ಗುಡಬಂಧದಲ್ಲಿ ಸಕಾರಾತ್ಮಕ ಪರಿಣಾಮ ಬೀರಿದೆ, ಅವರ ಕೆರೆ ಆಧಾರಿತ ಸಮಗ್ರ ಕೃಷಿ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲು ಮಾವೋವಾದಿ ಪೀಡಿತ ಪ್ರದೇಶವಾಗಿತ್ತು. ಅಂದಿನಿಂದ, ಈ ಪ್ರದೇಶದಲ್ಲಿ ನೀರಿನ ಮಟ್ಟವು ಗಮನಾರ್ಹವಾಗಿ ಹೆಚ್ಚಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡಿದ್ದಕ್ಕಾಗಿ ಅವರಿಗೆ CII ನಿಂದ ಮಹಿಳಾ ಮಾದರಿ ಪ್ರಶಸ್ತಿಯನ್ನು ಸಹ ನೀಡಲಾಗಿದೆ” ಎಂದು ಟಾಟಾ ಸ್ಟೀಲ್ ಫೌಂಡೇಶನ್‌ನ ವ್ಯವಸ್ಥಾಪಕ (ಕೃಷಿ ಮತ್ತು ಸಮುದಾಯ ಆಧಾರಿತ ಕೃಷಿ) ಪಾರ್ಥಸಾರಥಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com