ಮಂಗಳೂರಿನ ಹುಲಿ ವೇಷದ ನೃತ್ಯ ಈಗ ದೇಶಾದ್ಯಂತ ಪ್ರಮುಖ ಆಕರ್ಷಣೆ!

ಪಿಲಿ ವೇಷ ಅಥವಾ ಹುಲಿ ವೇಷ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನವರಾತ್ರಿಯ ಆಚರಣೆಯ ಪ್ರಮುಖ ಆಕರ್ಷಣೆ. ದೇವಿ ದುರ್ಗೆಗೆ ಸಮರ್ಪಣೆ ಮಾಡುವ ಈ ಸಾಂಪ್ರದಾಯಿಕ ಕಲೆ ಇಂದಿನ ದಿನಗಳಲ್ಲಿ ಹಲವು ಯುವಕರನ್ನು ಆಕರ್ಷಿಸುತ್ತಿದೆ.
ಹುಲಿ ವೇಷ
ಹುಲಿ ವೇಷ
Updated on

ಮಂಗಳೂರು: ಪಿಲಿ ವೇಷ ಅಥವಾ ಹುಲಿ ವೇಷ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನವರಾತ್ರಿಯ ಆಚರಣೆಯ ಪ್ರಮುಖ ಆಕರ್ಷಣೆ. ದೇವಿ ದುರ್ಗೆಗೆ ಸಮರ್ಪಣೆ ಮಾಡುವ ಈ ಸಾಂಪ್ರದಾಯಿಕ ಕಲೆ ಇಂದಿನ ದಿನಗಳಲ್ಲಿ ಹಲವು ಯುವಕರನ್ನು ಆಕರ್ಷಿಸುತ್ತಿದೆ.

ಹಬ್ಬದ ದಿನಗಳಲ್ಲಿ, ಹುಲಿಯ ವೇಷ ಧರಿಸಿ, ನಾನಾ ರೀತಿಯ ಸಾಂಪ್ರದಾಯಿಕ ಹಲಗೆ ತಮಟೆ ವಾದ್ಯಗಳೊಂದಿಗೆ ದೇವಾಲಯ ಹಾಗೂ ಮನೆಗಳ ಎದುರು ನೃತ್ಯಗಾರರ ತಂಡ ನೃತ್ಯ ಮಾಡುವುದು ವಿಶೇಷ. ಚಮತ್ಕಾರಿಕ ಚಲನೆಗಳು, ಬೆಂಕಿ ಜೊತೆ ಆಟ ಪ್ರದರ್ಶನ ಹುಲಿ ನೃತ್ಯದ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ನವರಾತ್ರಿಯ ಹಬ್ಬದ ಸಂಭದಲ್ಲಿ ಆಯೋಜಿಸಲಾಗುವ ನೃತ್ಯ ಸ್ಪರ್ಧೆಗಳಲ್ಲಿ  ಉದಯೋನ್ಮುಖ ಹುಲಿ ನೃತ್ಯಗಾರಿಗೆ ತಮ್ಮ ಕಲೆ ಪ್ರದರ್ಶಿಸಲು ಅವಕಾಶ ಲಭಿಸಲಿದೆ. 

ಉತ್ಸವದ ಭಾಗವಾಗಿರುವ ಹಾಗೂ ಹುಲಿ ನೃತ್ಯಕ್ಕೆ ಸ್ತಬ್ಧ ಚಿತ್ರಗಳನ್ನು ತಯಾರಿಸುವ ಆಕಾಂಕ್ಷ್ ಕುಠಾರ್, 7 ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ಮಿಥುನ್ ರೈ ಪಿಲಿ ನಾಲಿಕೆ ಎಂಬ ನೃತ್ಯ ಸ್ಪರ್ಧೆಯನ್ನು ಆಯೋಜಿಸಿದ ಬಳಿಕ ಹಾಗೂ ಉಳಿದವರು ಕಂಡಂತೆ ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಹುಲಿ ನೃತ್ಯದ ದೃಶ್ಯಗಳಿದ್ದದ್ದು ಇದನ್ನು ದೇಶಾದ್ಯಂತ ಜನಪ್ರಿಯಗೊಳ್ಳುವಂತೆ ಮಾಡಿರುವ ಪ್ರಮುಖ ಅಂಶ ಎಂದು ಹೇಳುತ್ತಾರೆ. 

ಅ.23 ರಂದು ಮಂಗಳೂರಿನ ಉರ್ವ ಸ್ಟೋರ್ ಮೈದಾನದಲ್ಲಿ ನಡೆಯಲಿರುವ ಪಿಲಿ ನಾಲಿಕೆಯಲ್ಲಿ ಜಾರ್ಖಂಡ್ ನ ಕಲಾವಿದರೂ ಸಹ ಪ್ರದರ್ಶನ ನೀಡಲ್ಪಿದ್ದಾರೆ. ಈ ಸ್ಪರ್ಧೆ ಪ್ರತಿ ವರ್ಷವೂ ಹೊಸ ಹುಲಿ ನೃತ್ಯ ತಂಡಗಳ ಉದಯಕ್ಕೆ ಕಾರಣವಾಗುತ್ತಿದೆ. ಮಂಗಳೂರು ಒಂದರಲ್ಲೇ 50 ಹುಲಿ ನೃತ್ಯ ತಂಡಗಳಿವೆ. 

ಕಲೆಯು ಹೊಸ ಹೆಜ್ಜೆಗಳನ್ನು ಅಳವಡಿಸಿಕೊಂಡಿದ್ದರೂ, ತಂಡಗಳು ಸಾಂಪ್ರದಾಯಿಕ ಹೆಜ್ಜೆಗಳು ಅಥವಾ 'ಪೌಲಾ' ಅಥವಾ 'ಪಿಲಿ' ಮತ್ತು ಚಿತ್ರಕಲೆ ವಿಧಾನಗಳನ್ನು ಉಳಿಸಿಕೊಂಡಿರುವುದನ್ನು ಮರೆತಿಲ್ಲ' ಎಂದು 'ಶಿವ ಫ್ರೆಂಡ್ಸ್ ಬರ್ಕೆ' ಹುಲಿ ಭಾಗವಾಗಿರುವ ಬಂಟ್ವಾಳದ ಯುವ ಹುಲಿ ನೃತ್ಯ ತಂಡದ ನೃತ್ಯಗಾರ ಕೃತಿಕ್ ಶೆಟ್ಟಿ ಹೇಳಿದ್ದಾರೆ. 

“ಹುಲಿಯು ದುರ್ಗಾದೇವಿಯ ವಾಹನವಾಗಿದೆ ಮತ್ತು ಪಿಲಿ ವೇಷವು ದೇವಿಗೆ ಅರ್ಪಣೆಯಾಗಿದೆ. ಹಿಂದಿನ ದಿನಗಳಲ್ಲಿ, ನವರಾತ್ರಿಯ ಮೂರು ದಿನಗಳ ಮೊದಲು ಮಾತ್ರ ಹುಲಿ ಕುಣಿತವನ್ನು ನಡೆಸಲಾಗುತ್ತಿತ್ತು, ಈಗ ಇದನ್ನು ಗಣೇಶ ಚತುರ್ಥಿ ಮತ್ತು ಅಷ್ಟಮಿ ಸಮಯದಲ್ಲಿ ನಡೆಸಲಾಗುತ್ತದೆ. ಮೊದಲು, ಪ್ರತಿ ತಂಡವು ಗರಿಷ್ಠ ಏಳು ಹುಲಿಗಳನ್ನು ಹೊಂದಿತ್ತು ಆದರೆ ಈಗ 50 ಕ್ಕೂ ಹೆಚ್ಚು ನೃತ್ಯಗಾರರಿದ್ದಾರೆ. ನಾವು ಅರಿಶಿನ ಪುಡಿ, ಮೊಟ್ಟೆಯ ಹಳದಿ ಲೋಳೆ, ಮೆಹೆಂದಿ ಮಿಶ್ರಣವನ್ನು ಬಣ್ಣವಾಗಿ ಬಳಸಿದ್ದೇವೆ, ಒಬ್ಬ ವ್ಯಕ್ತಿಯನ್ನು ಚಿತ್ರಿಸಲು ಏಳು ಗಂಟೆ ತೆಗೆದುಕೊಳ್ಳುತ್ತದೆ ಎಂದು ಮಂಜೇಶ್ವರದ ಮಾಧವ ಶೆಟ್ಟಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com