Percy Bunny Cop: ಇದು ಮಾಮೂಲಿ ಮೊಲ ಅಲ್ಲ, ಪೊಲೀಸ್ ಇಲಾಖೆಯ ಮೋಸ್ಟ್ ಬ್ಯೂಟಿಫುಲ್ 'ಪೊಲೀಸ್'
ಅಮೆರಿಕದ ಪರ್ಸಿ ಎಂಬ ಪುಟ್ಟ ಮೊಲವೊಂದು ಜಗತ್ತೀನಾದ್ಯಂತ ವ್ಯಾಪಕ ಸುದ್ದಿಯಲ್ಲಿದೆ. ಇಷ್ಟಕ್ಕೂ ಇದು ಮೊಲ ಎಂಬ ಕಾರಣಕ್ಕೆ ಸುದ್ದಿಯಲ್ಲಿಲ್ಲ.. ಬದಲಿಗೆ ಇದೊಂದು 'SPECIAL POLICE'..
Published: 10th April 2023 08:23 PM | Last Updated: 10th April 2023 08:30 PM | A+A A-

ಪರ್ಸಿ ಮೊಲ
ಅಮೆರಿಕದ ಪರ್ಸಿ ಎಂಬ ಪುಟ್ಟ ಮೊಲವೊಂದು ಜಗತ್ತೀನಾದ್ಯಂತ ವ್ಯಾಪಕ ಸುದ್ದಿಯಲ್ಲಿದೆ. ಇಷ್ಟಕ್ಕೂ ಇದು ಮೊಲ ಎಂಬ ಕಾರಣಕ್ಕೆ ಸುದ್ದಿಯಲ್ಲಿಲ್ಲ.. ಬದಲಿಗೆ ಇದೊಂದು 'SPECIAL POLICE'..
ಅಚ್ಚರಿಯಾದರೂ.. ಇದು ನಿಜ..ಇದು ಸಾಮಾನ್ಯ ಸಾಕು ಮೊಲವಲ್ಲ. ಕ್ಯಾಲಿಫೋರ್ನಿಯಾದ ಯುಬಾ ಸಿಟಿ ಪೊಲೀಸ್ ಇಲಾಖೆಯಲ್ಲಿ ಈ ಪರ್ಸಿ ವಿಶಿಷ್ಟ ಪೊಲೀಸ್ ಅಧಿಕಾರಿಯಾಗಿದೆ. ಈ ಪರ್ಸಿ ಮೊಲಕ್ಕೆ ಪೊಲೀಸ್ ಇಲಾಖೆಯಲ್ಲಿ "wellness officer" ಆಗಿ ಕಾರ್ಯ ನಿರ್ವಹಿಸುತ್ತಿದೆ.
ನಿತ್ಯ ವಿವಿಧ ಪ್ರಕರಣಗಳಲ್ಲಿ ದಣಿದು ಬರುವ ಪೊಲೀಸ್ ಸಿಬ್ಬಂದಿಗಳ ಒತ್ತಡ ನಿವಾರಿಸುವ ಕಾರ್ಯವನ್ನು ಈ ಪರ್ಸಿ ಮೊಲ ಮಾಡುತ್ತದೆ. ಕಚೇರಿಗೆ ಬರುವ ಪೊಲೀಸ್ ಸಿಬ್ಬಂದಿ ಈ ಮೊಲವನ್ನು ತೆಗೆದುಕೊಂಡು ಮುದ್ದಾಡಿ ಅದರೊಂದಿಗೆ ಕೆಲ ಸಮಯ ಕಾಲ ಕಳೆಯುತ್ತಾರೆ. ಇದರಿಂದ ಅವರ ಒತ್ತಡ ನಿವಾರಣೆಯಾಗುತ್ತದೆ ಎಂದು ಕೆಲ ಅಧಿಕಾರಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಮೊಲ ಓರ್ವ ಅಧಿಕಾರಿಗೆ ರಸ್ತೆ ಬದಿಯಲ್ಲಿ ಸಿಕ್ಕಿತಂತೆ.. ಅದನ್ನು ಅವರು ಠಾಣೆಗೆ ತಂದಿದ್ದರು. ಬಳಿಕ ಅದರ ಕುಟುಂಬಕ್ಕಾಗಿ ಪೊಲೀಸರು ಶೋಧ ನಡೆಸಿದರಾದರೂ ಅದರ ಕುಟುಂಬ ದೊರೆಯಲಿಲ್ಲ. ಹೀಗಾಗಿ ಠಾಣೆಯಲ್ಲೇ ಅದನ್ನು ಸಾಕುತ್ತಿದ್ದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಈ ಮೊಲವನ್ನು ದತ್ತು ತೆಗೆದುಕೊಂಡು ಅದಕ್ಕೆ ಇಲಾಖೆಯಲ್ಲಿ ಒಂದು ಹುದ್ದೆ ಕೂಡ ಸೃಷ್ಟಿಸಿ ಜವಾಬ್ದಾರಿ ನೀಡಿದ್ದಾರೆ. ಇಲಾಖೆಯಲ್ಲಿ ಒತ್ತಡದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗಾಗಿ 'Staff Wellness Program' ಯೋಜನೆಯಡಿ ಈ ಮೊಲಕ್ಕೆ ಹುದ್ದೆ ನೀಡಲಾಗಿದೆ.
ಇದೀಗ ಈ ವಿಶೇಷ ಅಧಿಕಾರಿ ಕಚೇರಿಗೆ ಬರುವ ಎಲ್ಲ ಪೊಲೀಸ್ ಸಿಬ್ಬಂದಿಗಳ ಒತ್ತಡ ನಿವಾರಿಸುವ ಕೆಲಸ ಮಾಡುತ್ತಿದ್ದು, ಕೆಲವರಿಗಂತೂ ಈ ಪರ್ಸಿ ಅಚ್ಚುಮೆಚ್ಚಿನ Friend ಆಗಿ ಹೋಗಿದೆ.