ಕಲ್ಲುಗಳ ಕಥೆ ಹೇಳುವ ಧನಪಾಲ್; ಶಿಲಾ ಶಾಸನಗಳ ಪತ್ತೆಯಲ್ಲಿ ಅತೀವ ಆಸಕ್ತಿ!

ಈ ಹಿಂದೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಿಗೆ ಬಸ್ಸಿನಲ್ಲಿ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಈ ವ್ಯಕ್ತಿ, ಈಗ ನಗರದ ಐತಿಹಾಸಿಕ ಶಿಲಾ ಶಾಸನಗಳನ್ನು ಹುಡುಕುವ ಮೂಲಕ ನಗರದ ಮರೆತುಹೋದ ದಂತಕಥೆಗಳನ್ನು ಬಹಿರಂಗಪಡಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.  
ಬಿಎಂಟಿಸಿ ನಿವೃತ್ತ ಚಾಲಕ ಕೆ. ಧನಪಾಲ್
ಬಿಎಂಟಿಸಿ ನಿವೃತ್ತ ಚಾಲಕ ಕೆ. ಧನಪಾಲ್

ಬೆಂಗಳೂರು: ಕಲ್ಲುಗಳು ಕಥೆಗಳನ್ನು ಹೇಳುತ್ತವೆ ಮತ್ತು ಅವುಗಳು ಮನುಷ್ಯರಲ್ಲಿ ಕುತೂಹಲ ಹೆಚ್ಚಿಸುವ ಮೂಲಕ ಐತಿಹಾಸಿಕ ಘಟನಾವಳಿಗಳ ಬಗ್ಗೆ ತಿಳಿಯಲು ಮನಸ್ಸು ಹಾತೂರೆಯುತ್ತದೆ. ಈ ಹಿಂದೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಿಗೆ ಬಸ್ಸಿನಲ್ಲಿ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಈ ವ್ಯಕ್ತಿ, ಈಗ ನಗರದ ಐತಿಹಾಸಿಕ ಶಿಲಾ ಶಾಸನಗಳನ್ನು ಹುಡುಕುವ ಮೂಲಕ ನಗರದ ಮರೆತುಹೋದ ದಂತಕಥೆಗಳನ್ನು ಬಹಿರಂಗಪಡಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. 17 ವರ್ಷಗಳ ಹಿಂದೆಯೇ ಇದನ್ನು ಆರಂಭಿಸಿದ್ದ ಕೆ.ಧನಪಾಲ್ ಕಿರು ಪರಿಚಯ ಇಲ್ಲಿದೆ. 

ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಸ್ ಚಾಲಕ ಧನಪಾಲ್ ಅವರನ್ನು 2006ರಲ್ಲಿ ಅದರ ದೃಶ್ಯವೀಕ್ಷಣೆಯ ವಿಭಾಗಕ್ಕೆ ವರ್ಗಾಯಿಸಲಾಗುತ್ತದೆ. ಈ ವಿಭಾಗವನ್ನು ಈಗ 'ಬೆಂಗಳೂರು ದರ್ಶಿನಿ' ಎಂದು ಕರೆಯಲಾಗುತ್ತದೆ. ನಗರದ ವಿವಿಧ ಸ್ಥಳಗಳನ್ನು ಒಳಗೊಂಡ ಪ್ರವಾಸಿ ಬಸ್ ಚಾಲನೆ ಅವರ ಕೆಲಸಲಾಗಿತ್ತು.  

ಶಿಲಾ ಶಾಸನ ಪತ್ತೆ ಕಾರ್ಯ ಹೇಗೆ ಆರಂಭವಾಯಿತು ಎಂಬ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಒಂದು ದಿನ ಮಲ್ಲೇಶ್ವರಂನ ಸ್ಯಾಂಕಿ ಕೆರೆ ಸುತ್ತ ಕೆಲವು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾಗ ‘ಇದಕ್ಕೆ ‘ಸ್ಯಾಂಕಿ’ ಎಂದು ಏಕೆ ಕರೆಯುತ್ತಾರೆ?’ ಎಂದು ಪ್ರವಾಸಿಗರೊಬ್ಬರು ಕೇಳಿದಾಗ ನನ್ನಲ್ಲಿ ಉತ್ತರವಿರಲಿಲ್ಲ. ನಮ್ಮ ಸುತ್ತಲಿನ ಇತಿಹಾಸ ತಿಳಿಯದೆ ನನಗೆ ಕೊಂಚ ಮುಜುಗರವಾಯಿತು. ಅದು ಕೆರೆಯ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಲು ಪ್ರಚೋದಿಸಿತು. ನಂತರ ಅದಕ್ಕೆ ಎಂಜಿನಿಯರ್ ರಿಚರ್ಡ್ ಹೈರಾಮ್ ಸ್ಯಾಂಕಿಯ ಹೆಸರಿಡಲಾಗಿದೆ ಎಂದು ತಿಳಿದುಕೊಂಡೆ. ಅದರಂತೆ ಇತಿಹಾಸದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಇಂದು ಬೆಂಗಳೂರಿನ ಪ್ರತಿಯೊಂದು ಸ್ಥಳದ ಹಿಂದಿನ ಕಥೆಯನ್ನು ತಿಳಿದಿದ್ದೇನೆ ಎಂದು ಧನಪಾಲ್ ಹೇಳಿದರು. 

<strong>ಮಾರ್ಗದರ್ಶಕ ಪ್ರೊ. ಕೆ.ಆರ್.ನರಸಿಂಹನ್ ಅವರೊಂದಿಗೆ ಕೆ.ಧನಪಾಲ್</strong>
ಮಾರ್ಗದರ್ಶಕ ಪ್ರೊ. ಕೆ.ಆರ್.ನರಸಿಂಹನ್ ಅವರೊಂದಿಗೆ ಕೆ.ಧನಪಾಲ್

ಇತಿಹಾಸದ ಮೇಲಿನ ಅವರ ಪ್ರೀತಿ ಎಷ್ಟಿತ್ತೆಂದರೆ, ಧನಪಾಲ್ ಬಿಎಂಟಿಸಿಯಲ್ಲಿ ದೈನಂದಿನ ಪಾಳಿಯ ಕೆಲಸದ ನಂತರ ಬೆಂಗಳೂರಿನ ಪರಂಪರೆ ಅನ್ವೇಷಿಸಲು ಸಮಯವನ್ನು ವಿನಿಯೋಗಿಸಲು ಪ್ರಾರಂಭಿಸಿದರು. ತಮ್ಮ ಸ್ನೇಹಿತ ಮತ್ತು ಮಾರ್ಗದರ್ಶಕ ಪ್ರೊ. ಕೆ.ಆರ್.ನರಸಿಂಹನ್ ಅವರ ಸಹಾಯದಿಂದ ವಿವಿಧ ಕಾಲಕ್ಕೆ ಸೇರಿದ 100 ಕ್ಕೂ ಹೆಚ್ಚು ಶಿಲಾ ಶಾಸನಗಳನ್ನು ಪತ್ತೆ ಹಚ್ಚಿರುವುದಾಗಿ ಎಂದು ಅವರು ಹೇಳುತ್ತಾರೆ. ಇನ್ನಷ್ಟು ತಿಳಿಯುವ ನಿಟ್ಟಿನಲ್ಲಿ ಧನಪಾಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಜೆ ಕಾಲೇಜ್ ಸೇರಿಕೊಂಡು 2020 ರಲ್ಲಿ ಎಪಿಗ್ರಫಿಯಲ್ಲಿ ಡಿಪ್ಲೊಮಾ ಪಡೆದರು. ಮೂರು ತಿಂಗಳ ಹಿಂದೆ ಬಿಎಂಟಿಸಿಯಿಂದ ಯಿಂದ ನಿವೃತ್ತರಾದ ಅವರು ಈಗ ತಮ್ಮ ಸಂಪೂರ್ಣ ಸಮಯವನ್ನು ಬೆಂಗಳೂರಿನ ಅನ್ವೇಷಣೆಯಲ್ಲಿ ಕಳೆಯುತ್ತಿದ್ದಾರೆ.

ವೀರಗಲ್ಲುಗಳ ಪತ್ತೆ:  ಬೆಂಗಳೂರಿನೊಳಗೆ ಅಡಗಿರುವ ಹಲವಾರು ಕಲ್ಲುಗಳಲ್ಲಿ 'ವೀರಗಲ್ಲುಗಳಿದ್ದು, ಅವುಗಳನ್ನು ಕೆಲವನ್ನು ಧನಪಾಲ್ ಪತ್ತೆ ಹಚ್ಚಿದ್ದಾರೆ. ಇತ್ತೀಚಿನ ಪರಿಶೋಧನೆಯ ಸಂದರ್ಭದಲ್ಲಿ, ನಗರದ ಹೊರವಲಯದಲ್ಲಿರುವ ದಾಸನಪುರ ಹೋಬಳಿಯ ನಗರೂರು ಗ್ರಾಮದಲ್ಲಿ ವೀರಗಲ್ಲು ಕಂಡುಬಂದಿದೆ ಎಂದು ಅವರು ಹೇಳಿದರು. ಈ ಕಲ್ಲಿನಲ್ಲಿ ರಾಷ್ಟ್ರಕೂಟರ ಕಾಲಕ್ಕೆ ಸೇರಿದ ಕನ್ನಡ ಮತ್ತು ಸಿಂಧಿ ಭಾಷೆಯ ಶಾಸನವಿದೆ. ಇದು ಕ್ರಿ.ಪೂ 967 ಹಿಂದಿನದು ಎಂದು ಅವರು ಹೇಳುತ್ತಾರೆ. ಇದರಲ್ಲಿ ಒಬ್ಬ ಮನುಷ್ಯನು ತನ್ನ ಪ್ರಾಣವನ್ನು ಪಣಕ್ಕಿಟ್ಟು ಹಸುಗಳನ್ನು ಉಳಿಸುವ ವೀರರ ಚಿತ್ರಣವಿದೆ.

ಬೆಂಗಳೂರಿನ ಉತ್ತರ ಭಾಗಗಳನ್ನು ಅನ್ವೇಷಿಸುವಾಗ, 7 ಅಡಿ ಉದ್ದ ಮತ್ತು 4 ಅಡಿ ಅಗಲದ ವೀರಗಲ್ಲು ಸಿಕ್ಕಿತು. ಅದರ ಮೇಲೆ ಕನ್ನಡ ಮತ್ತು ಸಿಂಧಿ ಭಾಷೆಯಲ್ಲಿ 30 ಸಾಲುಗಳ ಶಾಸನವು ರಾಷ್ಟ್ರಕೂಟ ರಾಜವಂಶದ ಮೂರನೇ ಕೃಷ್ಣ ಗೆ ಸೇರಿದ (ಕುಕ್ಕನಾಡು) ಸೀಮೆಯ ‘ತುರುಗಲು’ ಬೃಹತ್ ಸಂಖ್ಯೆಯ ಪ್ರಾಣಿಗಳನ್ನು ಉಳಿಸುವ ವೀರನ ಕಥೆಯನ್ನು ಅದು ಹೇಳುತ್ತದೆ ಎಂದು ಅವರು ತಿಳಿಸಿದರು. 

<strong>ಶಿಲಾ ಶಾಸನಗಳೊಂದಿಗೆ ಕೆ.ಧನಪಾಲ್</strong>
ಶಿಲಾ ಶಾಸನಗಳೊಂದಿಗೆ ಕೆ.ಧನಪಾಲ್

“ಹಿಂದೆ, ಹಸುಗಳಂತಹ ಪ್ರಾಣಿಗಳನ್ನು ಮೌಲ್ಯಯುತವೆಂದು ಪರಿಗಣಿಸಿ, ಕಾಪಾಡಲಾಗುತ್ತಿತ್ತು. ಗೋವುಗಳನ್ನು ಕದಿಯಲು ಬಂದವರ ವಿರುದ್ಧ ವೀರನು ನಡೆಸಿದ ಕೆಚ್ಚೆದೆಯ ಹೋರಾಟವನ್ನು ಈ ಶಾಸನ ವಿವರಿಸುತ್ತದೆ. ನಾಯಕನು ಬಿಲ್ಲು ಮತ್ತು ಬಾಣಗಳನ್ನು ಬಳಸಿ ಎದುರಾಳಿಗಳ ವಿರುದ್ಧ ಹೋರಾಡುವುದನ್ನು ಚಿತ್ರಿಸಲಾಗಿದೆ. ನಾವು ನಾಯಕನ ಹಿಂದೆ ನಾಲ್ಕು ಹಸುಗಳನ್ನು ನೋಡಬಹುದು ಎಂದು ಧನಪಾಲ್ ತಿಳಿಸಿದರು. ಹಸುಗಳನ್ನು ತೆಗೆದುಕೊಂಡು ಹೋಗುವುದನ್ನು ತಡೆಯುವಾಗ ವೀರನ ಎದೆ, ಹೊಟ್ಟೆ ಮತ್ತು ಕಾಲುಗಳಿಗೆ ಮೂರು ಬಾಣಗಳು ನಾಟುತ್ತವೆ. ವೀರ ಮರಣವನ್ನಪ್ಪಿದ ಅವನನ್ನು ದೇವತೆಗಳು ಸ್ವಾಗತಿಸಿದ್ದರು. ವೀರನ ತ್ಯಾಗವನ್ನು ಸರಿದೂಗಿಸಲು ಅವನ ಕುಟುಂಬಕ್ಕೆ ತುಂಡು ಭೂಮಿಯನ್ನು ನೀಡಲಾಯಿತು ಎಂದು ಶಾಸನವು ಉಲ್ಲೇಖಿಸುತ್ತದೆ ಎಂದು ಧನಪಾಲ್ ಹೇಳಿದರು.

ಧನಪಾಲ್ ಅವರು ಮಹಿಳೆಯರನ್ನು ರಕ್ಷಿಸಲು ವೀರರು ಯುದ್ಧ ಮಾಡುತ್ತಿರುವ ಕಲ್ಲುಗಳನ್ನು ಸಹ ಪತ್ತೆ ಹಚ್ಚಿದ್ದಾರೆ. "ಅಂತಹ ಶಾಸನಗಳಲ್ಲಿ, ನಾಯಕನ ಹಿಂದೆ ನಿಂತಿರುವ ಮಹಿಳೆಯರ ಕೆತ್ತನೆಗಳನ್ನು ನಾವು ನೋಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.ಇತ್ತೀಚಿನ ಪರಿಶೋಧನೆಗಳಲ್ಲಿ, ಒಬ್ಬ ಮನುಷ್ಯನು ತನ್ನ ರಾಜನ ಏಳಿಗೆಗಾಗಿ ತನ್ನ ಜೀವನವನ್ನು ತ್ಯಾಗ ಮಾಡಿದ 10 ನೇ ಶತಮಾನದ ಕಲ್ಲಿನ ಶಾಸನವನ್ನು ಪತ್ತೆ ಹಚ್ಚಿದೆ. ಹಲಸೂರಿನ ಮನೆಯೊಂದರ ಮುಂದೆ ಕಲ್ಲು ಬಿದ್ದಿತ್ತು. ಆ  ಶಾಸನವನ್ನು ಓದಿ ಅದನ್ನು ಡಿಕೋಡ್ ಮಾಡಿದ ನಂತರವೇ ಸ್ಥಳೀಯರಿಗೆ ಅದರ ಮೌಲ್ಯವು ಅರ್ಥವಾಯಿತು. ನಮ್ಮ ಸುತ್ತಲೂ ಇಂತಹ ಅನೇಕ ಕಲ್ಲುಗಳು ಮತ್ತು ಇತಿಹಾಸಗಳಿವೆ, ಅವುಗಳನ್ನು ನಾವು ಅನ್ವೇಷಿಸಬೇಕು, ದಾಖಲಿಸಬೇಕು ಮತ್ತು ಸಂರಕ್ಷಿಸಬೇಕು”ಎಂದು ಅವರು ಹೇಳುತ್ತಾರೆ.

ಬೆಂಗಳೂರಿನ ಸುತ್ತಲಿನ ಧನಪಾಲ್ ಅವರ ಪ್ರಯಾಣವು ಅವರಿಗೆ ಮೂಲಭೂತ ಪಾಠವನ್ನು ಬಹಿರಂಗಪಡಿಸಿದೆ. “ನಾವು ಎಷ್ಟೇ ಮುಂದುವರಿದರೂ, ಪಾರಂಪರಿಕ ಕಟ್ಟಡಗಳು, ತಾಣಗಳು, ವಸ್ತುಗಳು ಮತ್ತು ರಚನೆಗಳ ಸಂರಕ್ಷಣೆ ನಿರ್ಣಾಯಕವಾಗಿದೆ, ಏಕೆಂದರೆ ಅವು ನಮ್ಮನ್ನು ಸಮಯ, ಸ್ಥಳಗಳು ಮತ್ತು ಘಟನೆಗಳೊಂದಿಗೆ ಸಂಪರ್ಕಿಸುತ್ತವೆ ಮತ್ತುನಮ್ಮ ಪ್ರಸ್ತುತಕ್ಕೆ.  ಹಿಂದಿನ ನಿರಂತರತೆಯನ್ನು ಕಾಪಾಡಿಕೊಳ್ಳುತ್ತವೆ. ನಾವು ಎಲ್ಲಿಂದ ಬಂದಿದ್ದೇವೆ ಮತ್ತು ಇಂದು ನಾವು ಎಲ್ಲಿದ್ದೇವೆ ಎಂದು ನಾವೆಲ್ಲರೂ ಕಲಿಯಬಹುದು ಧನಪಾಲ್ ವಿವರಿಸಿದರು. 

ಬೆಂಗಳೂರು ಹಿನ್ನೆಲೆಯ ಶಾಸನಗಳು: ಬೆಂಗಳೂರನ್ನು 1ನೇ ಕೆಂಪೇಗೌಡ ಸ್ಥಾಪಿಸಿದರು, ಅವರು ಕ್ರಿ.ಶ 1537 ರಲ್ಲಿ ಇಲ್ಲಿ ಮಣ್ಣಿನ ಕೋಟೆಯನ್ನು ನಿರ್ಮಿಸಿದರು. ಆದರೆ ಇಂದಿನ ಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ಶಾಸನ (ವೀರಗಲ್ಲು) ಗಂಗರ ಕಾಲದ ಕ್ರಿ.ಶ 750 ರ ಹೆಬ್ಬಾಳ-ಕಿಟ್ಟಯ್ಯ ಶಾಸನವಾಗಿದೆ. ರಾಜ ಶ್ರೀಪುರುಷನ ಆಳ್ವಿಕೆಯಲ್ಲಿ ತನ್ನ ಭೂಮಿಯನ್ನು ರಕ್ಷಿಸಲು ಹುತಾತ್ಮರಾದ ಕಿಟ್ಟಯ್ಯ ಅವರಿಗೆ ಈ ವೀರಗಲ್ಲು ಗೌರವ ಸಲ್ಲಿಸುತ್ತದೆ.

ಆದಾಗ್ಯೂ, 'ಬೆಂಗಳೂರು' ಎಂಬ ಹೆಸರಿನ ಮೊದಲ ಉಲ್ಲೇಖವು 9 ನೇ ಶತಮಾನದ ದಿನಾಂಕದ ಹಳೆಗನ್ನಡ ಶಾಸನದಿಂದ ತಿಳಿದುಬರುತ್ತದೆ. ಅದರಲ್ಲಿ ಬೆಂಗಳೂರು ಕದನ ಎಂದು ಉಲ್ಲೇಖಿಸಲಾಗಿದೆ. ಬೇಗೂರಿನ ಬಳಿ ಕಂಡುಬರುವ ಶಾಸನವು ಜಿಲ್ಲೆಯನ್ನು ಗಂಗ ಸಾಮ್ರಾಜ್ಯದ ಭಾಗವಾಗಿತ್ತು ಮತ್ತು ಇದನ್ನು 'ಬೆಂಗವಲ್-ಒರು' (ಹಳೆಗನ್ನಡದಲ್ಲಿ ಕಾವಲುಗಾರರ ನಗರ) ಎಂದು ಕರೆಯಲಾಗುತ್ತಿತ್ತು ಎಂದು ತಿಳಿಸುತ್ತದೆ. ಈ ಮಧ್ಯೆ ಹಲವಾರು ಸಂಶೋಧನೆಗಳು ಮತ್ತು ದಂತಕಥೆಗಳು ಅಸ್ತಿತ್ವದಲ್ಲಿದ್ದು, ಪ್ರತಿಯೊಂದೂ ನಗರದ ಹೆಸರಿಗೆ ನಾಮಸೂಚಕವೆಂದು ಹೇಳಿಕೊಳ್ಳುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com