ಉನ್ನತ ಶಿಕ್ಷಣದ ಕನಸಿಗೆ ಕೊಳ್ಳಿ ಇಡಲು ಮುಂದಾದ ಪೋಷಕರು, ಬಾಲ್ಯ ವಿವಾಹ ಧಿಕ್ಕರಿಸಿ ಮನೆಬಿಟ್ಟು ತೆರಳಿದ 11ನೇ ತರಗತಿ ವಿದ್ಯಾರ್ಥಿನಿ!

ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದ್ದ 17 ವರ್ಷದ ಬಾಲಕಿ ತನ್ನ ಹೆತ್ತವರು ನಿಶ್ಚಯಿಸಿದ್ದ ಬಾಲ್ಯ ವಿವಾಹದಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು 2 ಕಿಲೋಮೀಟರ್ ಕತ್ತಲೆಯಲ್ಲಿ ಓಡಿ, ನಂತರ ಬಸ್‌ನಲ್ಲಿ 10 ಕಿಲೋಮೀಟರ್ ಪ್ರಯಾಣಿಸಿದ್ದಾಳೆ. ತನ್ನ ಅವಸ್ಥೆಯನ್ನು ವಿವರಿಸಲು ಪಶ್ಚಿಮ ಮಿಡ್ನಾಪುರದ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ (ಬಿಡಿಒ) ಕಚೇರಿಯನ್ನು ತಲುಪಿದ್ದಾಳೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಕೋಲ್ಕತ್ತಾ: ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದ್ದ 17 ವರ್ಷದ ಬಾಲಕಿ ತನ್ನ ಹೆತ್ತವರು ನಿಶ್ಚಯಿಸಿದ್ದ ಬಾಲ್ಯ ವಿವಾಹದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಮದುವೆಯಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು 2 ಕಿಲೋಮೀಟರ್ ಕತ್ತಲೆಯಲ್ಲಿ ಓಡಿ, ನಂತರ ಬಸ್‌ನಲ್ಲಿ 10 ಕಿಲೋಮೀಟರ್ ಪ್ರಯಾಣಿಸಿದ್ದಾಳೆ. ತನ್ನ ಅವಸ್ಥೆಯನ್ನು ವಿವರಿಸಲು ಪಶ್ಚಿಮ ಮಿಡ್ನಾಪುರದ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ (ಬಿಡಿಒ) ಕಚೇರಿಯನ್ನು ತಲುಪಿದ್ದಾಳೆ. 

ಆಕೆಯ ಪೋಷಕರ ಮನವೊಲಿಸಲು ಬಿಡಿಒ ಕೂಡಲೇ ಸ್ಥಳೀಯ ಅಧಿಕಾರಿಗಳನ್ನು ಬಾಲಕಿಯ ಮನೆಗೆ ಕಳುಹಿಸಿದ್ದಾರೆ. ಆಕೆಯ ಇಚ್ಛೆಗೆ ವಿರುದ್ಧವಾಗಿ ಮತ್ತು ಆಕೆಯ ಶಿಕ್ಷಣವನ್ನು ಪೂರ್ಣಗೊಳಿಸುವ ಮೊದಲು ಆಕೆಯ ಮದುವೆ ಮಾಡುವುದಿಲ್ಲ ಎಂದು ಬಾಲಕಿಯ ತಂದೆ ಲಿಖಿತ ಭರವಸೆ ನೀಡಿದ ನಂತರ ಹನ್ನೊಂದನೇ ತರಗತಿ ವಿದ್ಯಾರ್ಥಿನಿಯನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಪಶ್ಚಿಮ ಮಿಡ್ನಾಪುರದ ಚಂದ್ರಕೋನಾ-II ಬ್ಲಾಕ್‌ನ ಬಿಡಿಒ ಅಮಿತ್ ಕುಮಾರ್ ಘೋಷ್ ಮಾತನಾಡಿ, ಕಳೆದ ಶುಕ್ರವಾರದಂದು ನನಗೆ ಕರೆ ಬಂದಿತ್ತು. ಆಕಡೆಯಿಂದ ಬಾಲಕಿಯೊಬ್ಬಳು ಏನನ್ನೋ ಪಿಸುಗುಡುತ್ತಿದ್ದಳು. ಆಕೆ ಏನು ಹೇಳುತ್ತಿದ್ದಾಳೆಂದು ನನಗೆ ಅರ್ಥವಾಗಲಿಲ್ಲ. ಆದರೆ, ಆಕೆ ತೊಂದರೆಯಲ್ಲಿದ್ದಾಳೆಂದು ನಾನು ಅರಿತುಕೊಂಡೆ. ಫೋನ್ ಡಿಸ್ಕನೆಕ್ಟ್ ಆಯಿತು. ನಾನು ಆಕೆಯನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಅದು ಕೆಲಸ ಮಾಡಲಿಲ್ಲ. ಅವಳು ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ತೋರಿತು ಎಂದು ವಿವರಿಸಿದರು.

ಮರುದಿನ, ಹುಡುಗಿ ನನ್ನ ಕಚೇರಿಗೆ ಬಂದಳು. ಆಕೆ ಕಣ್ಣೀರು ಸುರಿಸಿದಳು. ತನ್ನ ಗುರಿಯನ್ನು ಸಾಧಿಸಲು ಸಹಾಯ ಮಾಡುವಂತೆ ವಿನಂತಿಸಿದಳು. 'ನನಗೆ ಮದುವೆ ಮಾಡುತ್ತಿರುವುದಾಗಿ ತಿಳಿದಾಗ ನಾನು ಪ್ರತಿಭಟನೆ ನಡೆಸಿದ್ದೇನೆ. ನನ್ನ ತಂದೆ ನನಗೆ ಮದುವೆಯ ಯೋಜನೆಯನ್ನು ಒಪ್ಪಿಕೊಳ್ಳಲು ಅಥವಾ ಮನೆ ಬಿಟ್ಟು ತೆರಳಲು ಹೇಳಿದರು. ನಾನು ಮನೆಬಿಟ್ಟು ಹೊರಡಲು ಬಯಸಿದ್ದೆ, ಆದರೆ ಅವರು ನನ್ನನ್ನು ಸೆರೆಯಲ್ಲಿಟ್ಟರು' ಎಂದು ಬಾಲಕಿ ತಿಳಿಸಿದ್ದಾಗಿ ಬಿಡಿಒ ತಿಳಿಸಿದ್ದಾರೆ.

ಶನಿವಾರ ವರನ ಕುಟುಂಬಸ್ಥರು ನಮ್ಮ ಮನೆಗೆ ಭೇಟಿ ನೀಡಿದರು ಮತ್ತು ಮದುವೆಗೆ ಒಪ್ಪಿಗೆ ಸೂಚಿಸಿದರು. ಆದರೆ, ನಾನು ಮನೆಯಿಂದ ಹೊರನಡೆಯುವಲ್ಲಿ ಯಶಸ್ವಿಯಾದೆ. ಅಲ್ಲಿಂದ 10 ಕಿಮೀ ದೂರದಲ್ಲಿರುವ ಬ್ಲಾಕ್ ಹೆಡ್‌ಕ್ವಾರ್ಟರ್ಸ್‌ಗೆ ಹೋಗಲು ನಾನು ಬಸ್ ಹತ್ತಿದೆ ಎಂದು ತಿಳಿಸಿದ್ದಾರೆ.

ಹುಡುಗಿಯ ತಂದೆಗೆ ಆರಂಭದಲ್ಲಿ ಇಷ್ಟವಿರಲಿಲ್ಲ. ಆದರೆ, ನಂತರ ಬಾಲಕಿಗೆ ಓದಲು ಅವಕಾಶ ನೀಡುವುದಾಗಿ ಲಿಖಿತ ಘೋಷಣೆಯನ್ನು ನೀಡಲು ಒಪ್ಪಿಕೊಂಡರು.

ಉತ್ತಮ ವಿದ್ಯಾರ್ಥಿ ಮತ್ತು ಬಾಲ್ಯ ವಿವಾಹದ ವಿರುದ್ಧ ಧ್ವನಿ

ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಚಂದ್ರಕೋನಾ-II ನ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ಅಮಿತ್ ಕುಮಾರ್ ಘೋಷ್ ಮಾತನಾಡಿ, ಬಾಲಕಿ ಉತ್ತಮ ವಿದ್ಯಾರ್ಥಿಯಾಗಿದ್ದು, ಈ ಪ್ರದೇಶದಲ್ಲಿ ಬಾಲಕಿಯರ ಅಪ್ರಾಪ್ತ ವಯಸ್ಸಿನ ವಿವಾಹದ ವಿರುದ್ಧ ಜಾಗೃತಿ ಮೂಡಿಸುವ ತನ್ನ ಶಾಲಾ ಕ್ಲಬ್‌ನ ಸದಸ್ಯೆಯಾಗಿದ್ದಾಳೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com