ಹಸುವಿನ ಸೆಗಣಿಯಿಂದ ತಯಾರಿಸಿದ ಬಣ್ಣದಿಂದ ಮನೆ ಕೂಲ್... ಕೂಲ್...; ಮಂಗಳೂರಿನಲ್ಲೊಂದು ಗುಡಿ ಕೈಗಾರಿಕೆ

ಮಂಗಳೂರಿನ ಸಮೀಪ ಹಳೆಯಂಗಡಿ ಗ್ರಾಮದ ಗುಡಿ ಕೈಗಾರಿಕೆಯಲ್ಲಿ ಗೋಮಯದಿಂದ(ಹಸುವಿನ ಸೆಗಣಿ) ತಯಾರಿಸುವ ಪರಿಸರ ಸ್ನೇಹಿ ಬಣ್ಣ ಜನಪ್ರಿಯವಾಗುತ್ತಿದೆ.
ತಮ್ಮ ಗುಡಿ ಕೈಗಾರಿಕೆಯಲ್ಲಿ ತಯಾರಾದ ಬಣ್ಣದೊಂದಿಗೆ ಅಕ್ಷತಾ
ತಮ್ಮ ಗುಡಿ ಕೈಗಾರಿಕೆಯಲ್ಲಿ ತಯಾರಾದ ಬಣ್ಣದೊಂದಿಗೆ ಅಕ್ಷತಾ
Updated on

ಮಂಗಳೂರು: ಈಗ ಎಲ್ಲೆಡೆ ಬಿರು ಬಿಸಿಲು, ಬೇಸಿಗೆಯ ವಿಪರೀತ ಬಿಸಿಲು ಮತ್ತು ಮುಂಗಾರಿನಲ್ಲಿ ಭಾರೀ ಮಳೆಗೆ ತತ್ತರಿಸುವ ಕರಾವಳಿ ಭಾಗದ ಮಂಗಳೂರಿನ ಸಮೀಪ ಹಳೆಯಂಗಡಿ ಗ್ರಾಮದ ಗುಡಿ ಕೈಗಾರಿಕೆಯಲ್ಲಿ ಗೋಮಯದಿಂದ(ಹಸುವಿನ ಸೆಗಣಿ) ತಯಾರಿಸುವ ಪರಿಸರ ಸ್ನೇಹಿ ಬಣ್ಣ ಜನಪ್ರಿಯವಾಗುತ್ತಿದೆ. "ಸನ್ನಿಧಿ ಪ್ರಕೃತಿ" ಎಂಬ ಬ್ರಾಂಡ್ ಹೆಸರಿನಲ್ಲಿ ಈ ಪರಿಸರ ಸ್ನೇಹಿ ಬಣ್ಣವು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಯಾವುದೇ ವಾಸನೆಯಿಲ್ಲದ ಮತ್ತು ಅಗ್ಗದ ವೆಚ್ಚದ್ದಾಗಿದೆ.

ಈಗ ಎಲ್ಲೆಡೆ ಇರುವ ಸುಡುವ ಬೇಸಿಗೆಯಲ್ಲಿ ಈ ಗುಡಿ ಕೈಗಾರಿಕೆ ಉದ್ಯಮಕ್ಕೆ ಕರ್ನಾಟಕದಾದ್ಯಂತ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದಲೂ ಸಾಕಷ್ಟು ಬೇಡಿಕೆ ಬರುತ್ತಿದೆ. ನೈಸರ್ಗಿಕ ಬಣ್ಣವು ಥರ್ಮಲ್ ಇನ್ಸುಲೇಟರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ವಿಕಿರಣವನ್ನು ತಡೆಯುತ್ತದೆ, ಇದರಿಂದಾಗಿ ಬೇಸಿಗೆಯಲ್ಲಿ ಮನೆ ತಂಪಾಗಿರುತ್ತದೆ ಎಂದು ಘಟಕದ ಮಾಲಕಿ ಅಕ್ಷತಾ ಎ ಹೇಳುತ್ತಾರೆ.

ತಮ್ಮ ಗುಡಿ ಕೈಗಾರಿಕೆಯಲ್ಲಿ ತಯಾರಾದ ಬಣ್ಣದೊಂದಿಗೆ ಅಕ್ಷತಾ
ಹಸುವಿನ ಸಗಣಿಯಿಂದ ಮಾಡಿದ ಮನೆಗಳ ಮೇಲೆ ಪರಮಾಣು ವಿಕಿರಣದ ಪರಿಣಾಮವಿಲ್ಲ: ಗುಜರಾತ್ ನ್ಯಾಯಾಲಯ

ಅಕ್ಷತಾ ಅವರು 2022 ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ಕುಮಾರಪ್ಪ ನ್ಯಾಷನಲ್ ಹ್ಯಾಂಡ್‌ಮೇಡ್ ಪೇಪರ್ ಇನ್‌ಸ್ಟಿಟ್ಯೂಟ್‌ನಲ್ಲಿ (KNHPI) ಉದ್ಯಮಶೀಲತಾ ತರಬೇತಿ ಅಧಿವೇಶನದಲ್ಲಿ ಭಾಗವಹಿಸಿದ ನಂತರ ಈ ಗುಡಿ ಕೈಗಾರಿಕೆಯನ್ನು ಪ್ರಾರಂಭಿಸಿದರು.

ಇದರ ಉತ್ಪಾದನಾ ಪ್ರಕ್ರಿಯೆಯಲ್ಲಿ, ಟ್ರೈ-ಡಿಸ್ಕ್ ರಿಫೈನರ್ ಅಥವಾ ಡಬಲ್-ಡಿಸ್ಕ್ ರಿಫೈನರ್ ಬಳಸಿ ಹಸುವಿನ ಸೆಗಣಿಯನ್ನು ಸಂಸ್ಕರಿಸಲಾಗುತ್ತದೆ. ನಂತರ, ಸೆಗಣಿಯನ್ನು ನೀರಿಗೆ ಸೇರಿಸಿ ಮತ್ತು ಸರಿಯಾಗಿ ಮಿಶ್ರಣ ಮಾಡಲಾಗುತ್ತದೆ. ನಂತರ ದ್ರವ ಮಿಶ್ರಣವು ಬಿಳಿಯಾಗಲು ಬ್ಲೀಚಿಂಗ್ ಗೆ ಒಳಪಡಿಸಲಾಗುತ್ತದೆ. ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ನ್ನು ಬ್ಲೀಚಿಂಗ್ ಗಾಗಿ ಬಳಸಲಾಗುತ್ತದೆ. ಬ್ಲೀಚಿಂಗ್ ನಂತರ, ಮಿಶ್ರಣವು ಸಿಎಂಸಿ ಅಥವಾ ಕಾರ್ಬಾಕ್ಸಿಮಿಥೈಲ್ ಸೆಲ್ಯುಲೋಸ್ ಆಗಿ ರೂಪಾಂತರಗೊಳ್ಳುತ್ತದೆ (ಬಣ್ಣಗಳ ತಯಾರಿಕೆಯಲ್ಲಿ ಕಡ್ಡಾಯ ಹಂತ).

ತಮ್ಮ ಗುಡಿ ಕೈಗಾರಿಕೆಯಲ್ಲಿ ತಯಾರಾದ ಬಣ್ಣದೊಂದಿಗೆ ಅಕ್ಷತಾ
Mysore Paints ಬ್ರಾಂಡ್ ಆಗಿ ಪರಿವರ್ತನೆ; ಸರ್ಕಾರಿ ಕಟ್ಟಡಗಳಿಗೂ ಇದೇ ಬಣ್ಣ ಬಳಕೆ: ಸಚಿವ ಎಂಬಿ ಪಾಟೀಲ್

ಇದರ ನಂತರ, ಕ್ಯಾಲ್ಸಿಯಂ ಕಾರ್ಬೋನೇಟ್ ಅಥವಾ ಸುಣ್ಣವನ್ನು ಮಿಶ್ರಣಕ್ಕೆ ಸೇರಿಸಲಾಗುತ್ತದೆ. ನಂತರ, ಎಲ್ಲಾ ಅಂಶಗಳನ್ನು ಬೆರೆಸಲು ಬೈಂಡರ್ ನ್ನು ಸೇರಿಸಲಾಗುತ್ತದೆ, ಅದರ ನಂತರ ಪರಿಸರ ಸ್ನೇಹಿ ಬಣ್ಣವು ಬಳಕೆಗೆ ಸಿದ್ಧವಾಗುತ್ತದೆ.

ಅಕ್ಷತಾ ಅವರು ಈ ಗುಡಿ ಕೈಗಾರಿಕೆ ಆರಂಭಿಸಲು 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಸ್ಥಳೀಯ ರೈತರಿಂದ ಪ್ರತಿ ಕೆಜಿಗೆ 5 ರೂಪಾಯಿಗಳಂತೆ ಸೆಗಣಿಯನ್ನು ಖರೀದಿಸುತ್ತಾರೆ. KNHPI ಒದಗಿಸಿದ ತಂತ್ರಜ್ಞಾನದ ಆಧಾರದ ಮೇಲೆ ಅವರು ಕೊಯಮತ್ತೂರಿನಿಂದ ಘಟಕಕ್ಕೆ ಎಲ್ಲಾ ಉಪಕರಣಗಳನ್ನು ಖರೀದಿಸಿದ್ದಾರೆ. ಒಂದು ಲೀಟರ್ ಸೆಗಣಿ ಪೇಂಟ್ ಗೆ ಜಿಎಸ್ ಟಿ ಸೇರಿ 190 ರೂಪಾಯಿ ಬೆಲೆಯಿದೆ.

ಆರಂಭದಲ್ಲಿ, ಅವರು ಈ ಪ್ರದೇಶದಲ್ಲಿ ಕೆಲವು ದೇವಾಲಯಗಳು ಮತ್ತು ಮನೆಗಳಿಗೆ ಉಚಿತವಾಗಿ ನೀಡಿದರು."ಸನ್ನಿಧಿ ಪ್ರಕೃತಿಕ್ ಬಳಸಿದ ನಂತರ ಜನರು ತಮ್ಮ ಮನೆಯೊಳಗೆ ಶಾಖದಲ್ಲಿ ತೀವ್ರ ಇಳಿಕೆ ಕಂಡರು, ಇದರಿಂದ ಬಳಕೆ ಹೆಚ್ಚಾಯಿತು ಎಂದು ಅಕ್ಷತಾ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com