Mysore Paints ಬ್ರಾಂಡ್ ಆಗಿ ಪರಿವರ್ತನೆ; ಸರ್ಕಾರಿ ಕಟ್ಟಡಗಳಿಗೂ ಇದೇ ಬಣ್ಣ ಬಳಕೆ: ಸಚಿವ ಎಂಬಿ ಪಾಟೀಲ್

ಸರ್ಕಾರಿ ಸ್ವಾಮ್ಯದ ಮೈಸೂರು ಪೇಂಟ್ಸ್ ಬ್ರಾಂಡ್ ಆಗಿ ಪರಿವರ್ತನೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಸಂಸ್ಥೆಯ ಉತ್ಪಾದನಾ ಸಾಮರ್ಥ್ಯ ಮತ್ತು ಆರ್ಥಿಕ ವಹಿವಾಟು ಹೆಚ್ಚಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಸಚಿವ ಎಂಬಿ ಪಾಟೀಲ್ ಸಭೆ
ಸಚಿವ ಎಂಬಿ ಪಾಟೀಲ್ ಸಭೆ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಮೈಸೂರು ಪೇಂಟ್ಸ್ ಬ್ರಾಂಡ್ ಆಗಿ ಪರಿವರ್ತನೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಸಂಸ್ಥೆಯ ಉತ್ಪಾದನಾ ಸಾಮರ್ಥ್ಯ ಮತ್ತು ಆರ್ಥಿಕ ವಹಿವಾಟು ಹೆಚ್ಚಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ಅಧ್ಯಕ್ಷತೆಯಲ್ಲಿ ಸರ್ಕಾರಿ ಸ್ವಾಮ್ಯದ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್‌ನ ಉತ್ಪಾದನಾ ಸಾಮರ್ಥ್ಯ ಮತ್ತು ಆರ್ಥಿಕ ವಹಿವಾಟು ಹೆಚ್ಚಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಮಂಡಳಿಯ ಸಭೆ ನಡೆಯಿತು.

ಸಚಿವ ಎಂಬಿ ಪಾಟೀಲ್ ಸಭೆ
2030ರ ವೇಳೆಗೆ ಕೆಎಸ್ ಡಿಎಲ್ 5,000 ಕೋಟಿ ವಹಿವಾಟಿನ ಗುರಿ- ಎಂಬಿ ಪಾಟೀಲ್

ಸಭೆಯ ನಂತರ ಮಾತನಾಡಿದ ಎಂ.ಬಿ.ಪಾಟೀಲ್, 'ಮೈಸೂರು ಮಹಾರಾಜರ ಆಡಳಿತಾವಧಿಯಲ್ಲಿ ಸ್ಥಾಪಿಸಲಾದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾಗಿರುವ ಉದ್ಯಮವು ಪ್ರಸ್ತುತ ವಾರ್ಷಿಕ ಸುಮಾರು 34-35 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಆದರೆ, ಈಗ ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಳಿಸಲಾಗದ ಶಾಯಿಯ ಅವಶ್ಯಕತೆ ಇದ್ದು, ಈ ವರ್ಷದ ವಹಿವಾಟು ರೂ. 77 ಕೋಟಿ ರೂಗಳಾಗುತ್ತದೆ ಎಂದು ಅವರು ಹೇಳಿದರು.

ಅಂತೆಯೇ ಸ್ಪರ್ಧಾತ್ಮಕ ಮಾರುಕಟ್ಟೆಗೆ ಹೊಂದಿಕೆಯಾಗುವಂತೆ ಉದ್ಯಮವನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಕಾರ್ಖಾನೆಯು ಮನೆಗೆ ಬಣ್ಣಗಳ ತಯಾರಿಕೆಗೆ ಶೀಘ್ರದಲ್ಲೇ ಪ್ರವೇಶಿಸಲಿದೆ. ಇದಲ್ಲದೆ, ಕಾರ್ಖಾನೆಯಲ್ಲಿ ಶಾಲಾ ಕಾಲೇಜುಗಳು, ಹಾಸ್ಟೆಲ್‌ಗಳು ಸೇರಿದಂತೆ ಸರ್ಕಾರಿ ಕಟ್ಟಡಗಳಿಗೆ ಅಗತ್ಯವಿರುವ ಬಣ್ಣಗಳು, ಎಮಲ್ಷನ್‌ಗಳನ್ನು ತಯಾರಿಸಲು ಚಿಂತನೆ ನಡೆಸಲಾಗಿದೆ. ಇದನ್ನು ಪರಿಗಣಿಸಿ ಬಣ್ಣ ಉದ್ಯಮದ ತಜ್ಞರನ್ನು ಸಲಹೆಗಾರರನ್ನಾಗಿ ನೇಮಿಸಲು ಅನುಮತಿ ನೀಡಲಾಗಿದೆ ಎಂದು ಸಚಿವರು ಹೇಳಿದರು.

'ನಾನು ಮನೆಯ ಗೋಡೆಯ ಬಣ್ಣಗಳನ್ನು ತಯಾರಿಸಲು ಸಲಹೆ ನೀಡಿದ್ದೇನೆ. ಮುಕ್ತ ಮಾರುಕಟ್ಟೆಯ ಹೊರತಾಗಿ, ನಿರ್ದಿಷ್ಟವಾಗಿ ಸರ್ಕಾರಿ ಕಟ್ಟಡಗಳು, ಶಾಲೆಗಳು, ಕಾಲೇಜುಗಳು ಮತ್ತು ಹಾಸ್ಟೆಲ್‌ಗಳಿಗೆ ಬಣ್ಣ, ಎಮಲ್ಷನ್ ಇತ್ಯಾದಿಗಳನ್ನು ತಯಾರಿಸುವುದನ್ನು ಪರಿಗಣಿಸಲಾಗುತ್ತದೆ. ಈ ವಿಸ್ತರಣಾ ಯೋಜನೆಯನ್ನು ಕಾರ್ಯಗತಗೊಳಿಸಲು ಪೇಂಟ್ ಉದ್ಯಮದಲ್ಲಿ ಪರಿಣಿತ ಸಲಹೆಗಾರರನ್ನು ನೇಮಿಸಲಾಗುವುದು, MPVL ಅನ್ನು ಪ್ರಮುಖ ಬ್ರಾಂಡ್ ಆಗಿ ಸ್ಥಾಪಿಸುವ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಪ್ರಯತ್ನಗಳೊಂದಿಗೆ ಹೊಂದಾಣಿಕೆ ಮಾಡಲಾಗುತ್ತದೆ ಎಂದರು.

'ಮೈಸೂರು ಪೇಂಟ್ಸ್' ಅನ್ನು ಬ್ರಾಂಡ್ ಆಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಖಾಸಗಿ ಕಂಪನಿಗಳೊಂದಿಗೆ ಪೈಪೋಟಿ ನಡೆಸುವ ಉದ್ದೇಶ ಹೊಂದಿದೆ. ಮಾರುಕಟ್ಟೆಯನ್ನು ತರ್ಕಬದ್ಧವಾಗಿ ವಿಸ್ತರಿಸಲಾಗುವುದು ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ಬಣ್ಣಗಳನ್ನು ಲಭ್ಯವಾಗುವಂತೆ ಮಾಡಲಾಗುವುದು. KSDL ಉತ್ಪನ್ನಗಳ ಯಶಸ್ವಿ ವಿಸ್ತರಣೆಯಂತೆಯೇ MPVL ಅನ್ನು ಹೊಸ ಎತ್ತರಕ್ಕೆ ಏರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಪಾಟೀಲ್ ವಿವರಿಸಿದರು.

ಸಚಿವ ಎಂಬಿ ಪಾಟೀಲ್ ಸಭೆ
ಇ.ವಿ ಕರಡು ನೀತಿ ಸಿದ್ಧ; 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಗುರಿ: ಸಚಿವ ಎಂಬಿ ಪಾಟೀಲ್

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಇರ್ಫಾನ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com