ಮಂಗಳೂರು: ಕರಾವಳಿಯ 'ಮದ್ಯ ಮುಕ್ತ' ಗ್ರಾಮ ಬೆಂಗರೆ; 3 ದಶಕಗಳಿಂದಲೂ ಮುಂದುವರಿದ ನಿಷೇಧ!

ಬೆಂಗ್ರೆ ಮಹಾಜನ ಸಭೆಯ ಮಾಜಿ ಅಧ್ಯಕ್ಷ ಮತ್ತು ಮೀನುಗಾರ ಸಮುದಾಯದ ಹಿರಿಯ ಸದಸ್ಯರಾದ ಧನಂಜಯ ಪುತ್ರನ್ ಬೆಂಗ್ರೆ ಅವರು 1994 ರಲ್ಲಿ ತಮ್ಮ ಗ್ರಾಮದಲ್ಲಿ ಮದ್ಯ ಮಾರಾಟದ ವಿರುದ್ಧ ಪ್ರತಿಜ್ಞೆ ತೆಗೆದುಕೊಂಡರು.
Bengre village
ಬೆಂಗರೆ ಗ್ರಾಮ
Updated on

ಮಂಗಳೂರು: ಮಹಾನಗರ ಮಂಗಳೂರಿನಲ್ಲಿರುವ ಪ್ರಕೃತಿದತ್ತ ಸೊಬಗಿನ ಪ್ರದೇಶ ಬೆಂಗರೆ. ಈ ಊರಲ್ಲಿ ಮೂರು ದಶಕಗಳಿಂದ ಒಂದೇ ಒಂದು ಮದ್ಯದಂಗಡಿ, ಬಾರ್‌ಗಳಿಲ್ಲ. ಅರೇಬಿಯನ್ ಸಮುದ್ರ ಮತ್ತು ಫಲ್ಗುಣಿ ನದಿಯ ನಡುವೆ ಇರುವ ಬೆಂಗ್ರೆ, ಮೂವತ್ತು ವರ್ಷಗಳಿಂದ ಮದ್ಯ ಮಾರಾಟದ ಮೇಲೆ ಸ್ವಯಂ ಹೇರಿದೆ.

ಬೆಂಗ್ರೆ ಮಹಾಜನ ಸಭೆಯ ಮಾಜಿ ಅಧ್ಯಕ್ಷ ಮತ್ತು ಮೀನುಗಾರ ಸಮುದಾಯದ ಹಿರಿಯ ಸದಸ್ಯರಾದ ಧನಂಜಯ ಪುತ್ರನ್ ಬೆಂಗ್ರೆ ಅವರು 1994 ರಲ್ಲಿ ತಮ್ಮ ಗ್ರಾಮದಲ್ಲಿ ಮದ್ಯ ಮಾರಾಟದ ವಿರುದ್ಧ ಪ್ರತಿಜ್ಞೆ ತೆಗೆದುಕೊಂಡರು. ಸರ್ಕಾರ ನಡೆಸುವ ಐದು ಮದ್ಯ ಮತ್ತು ಕಳ್ಳಭಟ್ಟಿ ಅಂಗಡಿಗಳನ್ನು ಮುಚ್ಚುವಲ್ಲಿ ಯಶಸ್ವಿಯಾದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮೊಗವೀರ ಮತ್ತು ಖಾರ್ವಿ ಸಮುದಾಯದ ಮಹಿಳೆಯರು ಆರಂಭದಲ್ಲಿ ಕರಾವಳಿ ಗ್ರಾಮದ ಮೀನುಗಾರ ಸಮುದಾಯದ ನಾಯಕರನ್ನು ಸಂಪರ್ಕಿಸಿ ತಮ್ಮ ಮನೆಗಳಲ್ಲಿ ಪುರುಷರು ಮದ್ಯದ ವ್ಯಸನಿಗಳಾಗಿರುವುದರಿಂದ ಹೆಚ್ಚುತ್ತಿರುವ ಕೌಟುಂಬಿಕ ಹಿಂಸಾಚಾರದ ಬಗ್ಗೆ ದೂರು ನೀಡಿದ್ದರು. ಎಲ್ಲಾ ವಯಸ್ಸಿನ ಅನೇಕ ಪುರುಷರು ಮದ್ಯದ ವ್ಯಸನಕ್ಕೆ ಒಳಗಾಗಿರುವುದರಿಂದ ಸಂಬಂಧಪಟ್ಟ ಮಹಿಳೆಯರು ಕನಿಷ್ಠ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಮತ್ತು ಕುಡಿತದ ಪಿಡುಗನ್ನು ಕೊನೆಗೊಳಿಸುವಂತೆ ನಾಯಕರಲ್ಲಿ ಮನವಿ ಮಾಡಿದ್ದರು.

ತೋಟ ಬೆಂಗ್ರೆಯಲ್ಲಿ 500 ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮಸ್ಥರನ್ನು ಮದ್ಯ ವಿರೋಧಿ ಅಭಿಯಾನಕ್ಕೆ ಸೇರುವಂತೆ ಮನವೊಲಿಸಲು, ಬೆಂಗ್ರೆ ಮಹಾಜನ ಸಭೆಯು ಗ್ರಾಮದಲ್ಲಿ ಮದ್ಯ ಮತ್ತು ಕಳ್ಳಭಟ್ಟಿ ಅಂಗಡಿಗಳನ್ನು ನಡೆಸುತ್ತಿರುವ ಎಲ್ಲರ ಸಭೆಯನ್ನು ನಡೆಸಿ ಮದ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅವರಿಗೆ ಅರಿವು ಮೂಡಿಸಿತು.

Bengre village
ಮಂಗಳೂರು: ದಕ್ಷಿಣ ಕನ್ನಡದ ಮೊದಲ ತಂಬಾಕು ಮುಕ್ತ ಗ್ರಾಮ ಪಡುಪೆರಾರ!

ನಾವು ಈ ಪ್ರತಿಜ್ಞೆಯನ್ನು ತೆಗೆದುಕೊಂಡಾಗ ನಾನು ಬೆಂಗ್ರೆ ಮಹಾಜನ ಸಭೆಯ ಅಧ್ಯಕ್ಷನಾಗಿದ್ದೆ. ಉಡುಪಿಯ ಮಾಜಿ ಶಾಸಕ ಶ್ರೀ ಮಹಾವಿಷ್ಣು ಶೇಷಶಯನ ಭಜನಾ ಮಂದಿರದಲ್ಲಿ ಎಸ್ ಕೆ ಅಮೀನ್ ಅವರ ಸಮ್ಮುಖದಲ್ಲಿ ಪ್ರತಿಜ್ಞೆ ತೆಗೆದುಕೊಂಡೆವು. ಆ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಐದು ಕಾನೂನುಬದ್ಧ ಮದ್ಯದ ಅಂಗಡಿಗಳು, ಹಳ್ಳಿಗಾಡಿನ ಮದ್ಯದ ಅಂಗಡಿಗಳು ಮತ್ತು ಕಳ್ಳಭಟ್ಟಿ ಅಂಗಡಿಗಳು ಇದ್ದವು.

ಕೆಲವು ನಿವಾಸಿಗಳು ಗ್ರಾಮದಲ್ಲಿ ಬಿಯರ್ ಮಾರಾಟ ಮಾಡುತ್ತಿದ್ದರು. ನಾವು ಮೀನುಗಾರ ಸಮುದಾಯದ ನಾಯಕರು ಮತ್ತು ನಿವಾಸಿಗಳು, ವಿಶೇಷವಾಗಿ ಮಹಿಳೆಯರು ತೋಟಾ ಬೆಂಗ್ರೆ, ಕಸ್ಬಾ ಬೆಂಗ್ರೆ, ಕುದ್ರೋಳಿ ಬೆಂಗ್ರೆ ಮತ್ತು ಬೊಕ್ಕಪಟ್ನ ಬೆಂಗ್ರೆಗಳಲ್ಲಿ ಮದ್ಯ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿದೆವು. ನಮ್ಮ ಸಾಮೂಹಿಕ ಸಂಕಲ್ಪದಿಂದಾಗಿ, ಇಂದಿಗೂ ನಮ್ಮ ಗ್ರಾಮದಲ್ಲಿ ಮದ್ಯ ಮಾರಾಟದ ನಿಷೇಧ ಮುಂದುವರೆದಿದೆ ಎಂದು ಧನಂಜಯ ತಿಳಿಸಿದ್ದಾರೆ.

"ಬೆಂಗ್ರೆಯಲ್ಲಿ, ಎಲ್ಲಾ ಕುಟುಂಬಗಳು ಮೀನುಗಾರಿಕೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿವೆ. ಮದ್ಯದ ಬಳಕೆ ಕಡಿಮೆಯಾದ ಕಾರಣ, ನಮ್ಮ ಗ್ರಾಮದಲ್ಲಿ ಶಿಕ್ಷಣ ಮಟ್ಟ ಸುಧಾರಿಸಿದೆ. ಇಲ್ಲಿ ಸಾಕ್ಷರತೆಯ ಪ್ರಮಾಣವು ಈಗ ಶೇ. 95 ಕ್ಕಿಂತ ಹೆಚ್ಚಾಗಿದೆ. ನಮ್ಮ ಗ್ರಾಮದಲ್ಲಿ ಡಬಲ್ ಪದವೀಧರರೂ ಇದ್ದಾರೆ" ಎಂದು ತೋಟಾ ಬೆಂಗ್ರೆಯ ಮೀನುಗಾರ ಸಮುದಾಯದ ಮಹಿಳೆಯೊಬ್ಬರು ಹೇಳಿದರು.

ಗ್ರಾಮಸ್ಥರು ಮದ್ಯ ಮತ್ತು ತಂಬಾಕು ಮಾರಾಟ ಎರಡನ್ನೂ ವಿರೋಧಿಸಿದ್ದಾರೆ, ತೋಟಾ ಬೆಂಗ್ರೆಯಲ್ಲಿನ ಹೆಚ್ಚಿನ ಅಂಗಡಿಗಳು ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಿವೆ. "ನಾವು ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ದಂಡ ವಿಧಿಸುತ್ತಿದ್ದೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com