
'organic' ಎಂಬ ಪದ ಇತ್ತೀಚಿನ ದಿನಗಳಲ್ಲಿ ಬಿಸಿನೆಸ್ ಆಗಿ ಹೋಗಿದೆ. ರಾಸಾಯನಿಕ ಕಲಬೆರಕೆಯಿಂದ ದೂರ ಇರಲು ಸಾಕಷ್ಟು ಮಂದು ಆರ್ಗಾನಿಕ್ (ಸಾವಯವ) ಪದಾರ್ಥಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಇದನ್ನೇ ಬಡವಾಳ ಮಾಡಿಕೊಳ್ಳುತ್ತಿರುವ ಹಲವು ವ್ಯಾಪಾರಸ್ಥರು, ರಸಾಯನಿಕ ವಸ್ತುಗಳನ್ನು ಬಳಕೆ ಮಾಡಿದ್ದರೂ, organic ಎಂಬ ಪದ ಬಳಕೆ ಮಾಡಿ, ದುಡ್ಡು ಮಾಡುತ್ತಿದ್ದಾರೆ.
ವ್ಯಾಪಾರಸ್ಥರ ಗಿಮಿಕ್ ಗಳನ್ನು ಅರಿತ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳು, ವೋಕಲ್ ಫಾರ್ ಲೋಕಲ್ ಮಂತ್ರ ಪಠಿಸಿದ್ದು, ತಮ್ಮ ಉದ್ಯೋಗಗಳ ತ್ಯಜಿಸಿ organic ಚಾಕೋಲೇಟ್ ಉದ್ಯಮ ಪ್ರಾರಂಭಿಸಿ ಯಶಸ್ಸು ಕಂಡಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ಪದವೀಧರೆ ಸ್ವಾತಿ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಬಾಲಸುಬ್ರಹ್ಮಣ್ಯ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಗಳಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ್ದರು.
ಇದರಂತೆ ಇವರೂ ಕೂಡ ಆರ್ಗಾನಿಕ್ ಲೇಬಲ್ ಮಾಡಿದ್ದ ಆಹಾರ ಪದಾರ್ಥಗಳನ್ನು ಖರೀದಿ ಮಾಡುತ್ತಿದ್ದರು. ಕಾಲಾನಂತರ ಅವುಗಳ ಗುಣಮಟ್ಟವನ್ನು ಪರಿಶೀಲಿಸಿದಾಗ, ನಿಜ ಬಣ್ಣ ತಿಳಿದಿದೆ.
ಈ ನಡುವೆ ಕೋವಿಡ್-19 ಲಾಕ್'ಡೌನ್ ಸಮಯದಲ್ಲಿ ಮಾರುಕಟ್ಟೆಗಳು ಬಂದ್ ಆದಾಗ, ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡಿದ್ದಾರೆ. ಬಳಿಕ ಐಟಿ ಉದ್ಯೋಗ ತೊರೆದ ದಂಪತಿಗಳು, ತಮ್ಮೂರು ದಕ್ಷಿಣ ಕನ್ನಡದ ಪುತ್ತೂರಿಗೆ ಮರಳಿ, ಕುಟುಂಬದ ಕೃಷಿ ಭೂಮಿಯಲ್ಲಿ ಬೆಳೆದ ಕೋಕೋವನ್ನು ಬಳಸಿ ಚಾಕೋಲೇಟ್ ಉದ್ಯಮ ಆರಂಭಿಸಲು ಮುಂದಾಗಿದ್ದಾರೆ.
ತಮ್ಮ ಕೃಷಿ ಭೂಮಿಯಲ್ಲಿ ಬೆಳೆದ ಕೋಕೋ, ಖರ್ಜೂರ ಹಾಗೂ ಬೆಲ್ಲ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಸಣ್ಣದಾಗಿ ಉದ್ಯಮ ಪ್ರಾರಂಭಿಸಿದ್ದಾರೆ. ಇದೀಗ ಅದೇ ದೊಡ್ಡ ಬ್ರ್ಯಾಂಡ್ ಆಗಿ ಬೆಳೆದಿದೆ.
ಈ ಉದ್ಯಮದ ಮೂಲಕ ಸ್ಥಳೀಯ ಮಹಿಳೆಯರಿಗೂ ಉದ್ಯೋಗಾವಕಾಶಗಳನ್ನು ದಂಪತಿಗಳು ಸೃಷ್ಟಿಸಿದ್ದಾರೆ. ದಂಪತಿಗಳು ಪ್ರತಿದಿನ 300-500 ಕಿಲೋ ಗ್ರಾಂಗಳಷ್ಟು ಚಾಕೋಲೇಟ್ ಉತ್ಪಾದಿಸುತ್ತಿದ್ದಾರೆ.
ನಮ್ಮ ಬ್ರ್ಯಾಂಡ್'ಗೆ ಅನುತ್ತಮ ಚಾಕೋಲೇಟ್ ಎಂದು ಹೆಸರಿಟ್ಟಿದ್ದೇವೆ. ಸಂಸ್ಕೃತದಲ್ಲಿ ಅನುತ್ತಮ ಎಂದರೆ 'ಅತ್ಯುತ್ತಮ ಅಥವಾ ಯಾವುದೂ ಉತ್ತಮವಲ್ಲ' ಎಂದರ್ಥ, ಸ್ಥಳೀಯ ಪದಾರ್ಥಗಳಿಂದ ತಯಾರಿಸಿದ ಶುದ್ಧ ಚಾಕೊಲೇಟ್‌ನ ಮೇಲಿನ ಗಮನವನ್ನು ಪ್ರತಿಬಿಂಬಿಸಲು ನಾವು ಈ ಹೆಸರನ್ನು ಆರಿಸಿಕೊಂಡೆವು ಎಂದು ಬಾಲಸುಬ್ರಹ್ಮಣ್ಯ ಅವರು ಹೇಳಿದ್ದಾರೆ.
ಬ್ರ್ಯಾಂಡ್ ಬೆಳೆದಂತೆ, ಕರ್ನಾಟಕದ ಪರಿಚಿತ ಅಭಿರುಚಿಗಳಿಂದ ಪ್ರೇರಿತವಾದ ಆಹಾರ ಪದಾರ್ಥಗಳನ್ನೂ ಅಭಿವೃದ್ಧಿಪಡಿಸಲು ಪ್ರಾರಂಭಿಸಿದ್ದೇವೆ. ಸ್ಪೈಸಿ ಟ್ಯಾಂಗ್ ಹೆಸರಿನಲ್ಲಿ ಉತ್ಪವನ್ನವೊಂದನ್ನು ಸಿದ್ಧಪಡಿಸಲಾಗಿದೆ. ಇದು ಬೆಲ್ಲ, ಶುಂಠಿ ಹಾಗೂ ಮೆಣಸಿನಿಂದ ತಯಾರಿದ ಡಾರ್ಕ್ ಚಾಕೊಲೇಟ್ ಆಗಿದೆ.
ರಾಜ್ಯದಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಮನೆಮದ್ದು ಕಷಾಯದಿಂದ ಬಂದಿದೆ ಈ ಕಲ್ಪನೆ ಬಂದಿತ್ತು. ದನ್ನು ಶುಂಠಿ ಮತ್ತು ಮೆಣಸಿನಂತಹ ಮಸಾಲೆಗಳಿಂದ ತಯಾರಿಸಲಾಗುತ್ತದೆ ಮತ್ತು ಬೆಲ್ಲದೊಂದಿಗೆ ಸಿಹಿಗೊಳಿಸಲಾಗುತ್ತದೆ. ಇದನ್ನು ಹೆಚ್ಚಾಗಿ ಕೆಮ್ಮು ಮತ್ತು ಶೀತಕ್ಕೆ ನೀಡಲಾಗುತ್ತದೆ. ಸ್ಪೈಸಿ ಟ್ಯಾಂಗ್ ಫ್ಲೇವರ್'ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಏಷ್ಯಾ ಪೆಸಿಫಿಕ್‌ನಲ್ಲಿ ಕಂಚಿನ ಪದಕ ಬಂದಿದೆ ಎಂದು ಸ್ವಾತಿಯವರು ಹೇಳಿದ್ದಾರೆ.
ಮತ್ತೊಂದು ಜನಪ್ರಿಯ ತಿನಿಸು ಎಂದರೆ, ಬೆಲ್ಲಾ ಥರೈ, ಇದನ್ನು ತೆಂಗಿನ ಹಾಲು ಮತ್ತು ಬೆಲ್ಲದಿಂದ ತಯಾರಿಸಲಾಗುತ್ತದೆ. ಇದು ಕರಾವಳಿ ಪ್ರದೇಶದ ಅಡುಗೆ ಸಂಪ್ರದಾಯಗಳಿಗೆ ನೀಡಿದ ಗೌರವವಾಗಿದೆ.
ನಾವು ಕೇವಲ ವೈವಿಧ್ಯತೆಗಾಗಿ ರುಚಿಗಳನ್ನು ಸೇರಿಸಲು ಬಯಸಲಿಲ್ಲ. ಏನನ್ನಾದರೂ ಅರ್ಥೈಸುವ ಮತ್ತು ಇಲ್ಲಿನ ಜನರನ್ನು ಏನನ್ನು ಸೇವಿಸುತ್ತಾರೆಂಬುದನ್ನು ತಿಳಿಸಲು ನಾವು ಬಯಸಿದ್ದೆವು. ದಿನ ಕಳೆದಂತೆ ಬೇಡಿಕೆಗಳು ಹೆಚ್ಚಾಗಿದ್ದು, ಇದೀಗ ನಮ್ಮ ಕೃಷಿಯಲ್ಲಷ್ಟೇ ಅಲ್ಲದೆ, ನೆರೆಹೊರೆಯ ಜಮೀನುಗಳಲ್ಲೂ ಕೊಕೋ ಬೀಜಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ.
ಒದ್ದೆ ಬೀಜಗಳನ್ನು ಖರೀಸಿ, ಸ್ಥಿರತೆಯನ್ನು ಕಾಪಾಡಿಕೊಳ್ಳಲು ಹುದುಗಿಸಿ, ಒಣಗಿಸುತ್ತೇವೆ. ನಂತರ ಬೀಜಗಳನ್ನು ರುಬ್ಬಿ, ಹದಗೊಳಿಸುತ್ತೇವೆ. ಅಚ್ಚೊತ್ತುವುದು ಮತ್ತು ಪ್ಯಾಕೇಜಿಂಗ್ ಸೇರಿದಂತೆ ಇತರೆ ಸಂಪೂರ್ಣ ಪ್ರಕ್ರಿಯೆಯನ್ನು ಪುತ್ತೂರಿನ ಬೆಟ್ಟಂಪಾಡಿಯಲ್ಲಿರುವ ಘಟಕದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಉದ್ಯಮಕ್ಕೆ ಹತ್ತಿರದ ಹಳ್ಳಿಗಳ ಒಂಬತ್ತು ಮಹಿಳೆಯರನ್ನು ನೇಮಿಸಿಕೊಳ್ಳಲಾಗಿದೆ. ಶುದ್ಧ ಹಾಗೂ ಸ್ಥಳೀಯ ಉತ್ಪನ್ನವನ್ನು ನಿರ್ಮಿಸುವುದು ಮತ್ತು ಸ್ಥಳೀಯ ಉದ್ಯೋಗವನ್ನು ಸೃಷ್ಟಿಸುವುದು, ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ದೊರಕಿಸುವ ಉದ್ದೇಶದಿಂದ ಉದ್ಯಮ ಪ್ರಾರಂಭಿಸಿದ್ದೇವೆಂದು ಸ್ವಾತಿಯವರು ಹೇಳಿದ್ದಾರೆ.
Advertisement