
ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ವಜ್ರವೆಂದರೆ ಅದು ಭಾರತ ಮೂಲದ ಕೋಹಿನೂರ್. ಸುಮಾರು 105.6 ಕ್ಯಾರೆಟ್ ತೂಕದ ಈ ವಜ್ರಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲದಿದ್ದರೂ, ಇಂದಿನ ಆಧುನಿಕ ಹರಾಜು ಮಾರುಕಟ್ಟೆಯಲ್ಲಿ ಇದರ ಮೌಲ್ಯವನ್ನು ಮೀರಿಸುವಂತಹ ಅಪರೂಪದ ರತ್ನಗಳು ಸದ್ದು ಮಾಡುತ್ತಿವೆ. ಇತಿಹಾಸ, ರಾಜಮನೆತನ ಮತ್ತು ಅಪರೂಪತೆಯಿಂದಾಗಿ ಸಾವಿರಾರು ಕೋಟಿ ಬೆಲೆ ಬಾಳುವ ಅಂತಹ ಕೆಲವು ವಜ್ರಗಳ ಬೆಲೆ ಕೇಳಿದರೆ ತಲೆ ತಿರುಗುತ್ತದೆ. ಕಲ್ಪನೆಗೂ ನಿಲುಕದ ಭವ್ಯತೆಯನ್ನು ಹೊಂದಿರುವ ಕೋಟಿ ಕೋಟಿ ಬೆಲೆಯ ವಜ್ರಗಳ ಬಗ್ಗೆ ಗೊತ್ತಾ? ಇಲ್ಲಿದೆ ನೋಡಿ ವಿಶ್ವದ ಟಾಪ್ ವಜ್ರಗಳು...
ಸುಮಾರು $2 ಬಿಲಿಯನ್ ಅಂದರೆ 16,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ದಿ ಕಲ್ಲಿನನ್ ಡೈಮಂಡ್, ಇದುವರೆಗೆ ಪತ್ತೆಯಾದ ಅತಿ ದೊಡ್ಡ ಕಚ್ಚಾ ವಜ್ರ ಆಗಿದೆ. 1905 ರಲ್ಲಿ ಸಿಕ್ಕಿದ ಈ ವಜ್ರವು 3,106 ಕ್ಯಾರೆಟ್ ತೂಕ ಹೊಂದಿತ್ತು. ಇದನ್ನು 9 ದೊಡ್ಡ ವಜ್ರಗಳಾಗಿ ಕತ್ತರಿಸಲಾಯಿತು. ಇದರಲ್ಲಿ ಪ್ರಮುಖವಾದದ್ದು ಬ್ರಿಟಿಷ್ ರಾಜದಂಡದಲ್ಲಿದೆ.
ಸುಮಾರು $250 ಬಿಲಿಯನ್ ಅಂದರೆ ಅಂದರೆ 2,000 ಕೋಟಿ ರೂಪಾಯಿಗೂ ಮೌಲ್ಯದ 45.52 ಕ್ಯಾರೆಟ್ ತೂಕದ ಈ ಗಾಢ ನೀಲಿ ವಜ್ರವು ಭಾರತದ ಗೋಲ್ಕಂಡ ಗಣಿಗಳಿಂದ ಸಿಕ್ಕಿದ್ದು. ಆದ್ರೆ, ಒಂದು ನಿಗೂಢ ಶಾಪದ ಇತಿಹಾಸವನ್ನು ಹೊಂದಿದೆ ಎಂದು ನಂಬಲಾಗಿರುವ ಇದು ಪ್ರಸ್ತುತ ವಾಷಿಂಗ್ಟನ್‌ನ ಸ್ಮಿತ್ಸೋನಿಯನ್ ಮ್ಯೂಸಿಯಂನಲ್ಲಿದೆ.
ಸುಮಾರು $100 ಮಿಲಿಯನ್ ಅಂದರೆ ₹950 ಕೋಟಿ ರೂಪಾಯಿ ಮೌಲ್ಯದ ಇದು 273.85 ಕ್ಯಾರೆಟ್ ತೂಕವಿದ್ದು, 1988 ರಲ್ಲಿ ಡಿ ಬೀರ್ಸ್ ಕಂಪನಿಯ 100ನೇ ವಾರ್ಷಿಕೋತ್ಸವದಲ್ಲಿ ಪ್ರದರ್ಶಿಸಲಾಯಿತು. ಅದರಲ್ಲೂ, ಯಾವುದೇ ಕಲೆಗಳಿಲ್ಲದ ಬಣ್ಣರಹಿತ ವಜ್ರ ಇದಾಗಿದೆ.
ಸುಮಾರು $100 ಮಿಲಿಯನ್ ಅಂದರೆ ₹950 ಕೋಟಿ ರೂಪಾಯಿ ಮೌಲ್ಯದ ನವಿಲಿನ ಆಕಾರದಲ್ಲಿ ವಿನ್ಯಾಸಗೊಳಿಸಲಾದ ಅದ್ಭುತ ಆಭರಣ ಇದಾಗಿದೆ. ಇದರಲ್ಲಿ ಒಟ್ಟು 120.81 ಕ್ಯಾರೆಟ್ ತೂಕದ 1,305 ಸಣ್ಣ ವಜ್ರಗಳಿವೆ. ಜೊತೆಗೆ ಇದರ ಮಧ್ಯದಲ್ಲಿ ಅಪರೂಪದ 20.02 ಕ್ಯಾರೆಟ್‌ನ ನೀಲಿ ವಜ್ರವಿದೆ.
ಸುಮಾರು $80 ಮಿಲಿಯನ್ ಅಂದರೆ ₹762 ಕೋಟಿ ರೂಪಾಯಿ ಮೌಲ್ಯದ, 31.06 ಕ್ಯಾರೆಟ್ ತೂಕದ ಐತಿಹಾಸಿಕ ಗಾಢ ನೀಲಿ ವಜ್ರವು ಆಸ್ಟ್ರಿಯಾ ಮತ್ತು ಬವೇರಿಯಾದ ರಾಜಮನೆತನದ ಕಿರೀಟಗಳನ್ನು ಅಲಂಕರಿಸಿತ್ತು. ನಂತರ ಇದರ ಹೊಳಪನ್ನು ಹೆಚ್ಚಿಸಲು ಮರು-ಕತ್ತರಿಸಲಾಯಿತು.
ಸುಮಾರು $71.2 ಮಿಲಿಯನ್ ಅಂದರೆ ₹590 ಕೋಟಿ ರೂಪಾಯಿ ಮೌಲ್ಯದ ಇದು ಜಗತ್ತಿನ ಅತಿ ದೊಡ್ಡ ಇಂಟೆನ್ಸ್ ಪಿಂಕ್ ವಜ್ರವಾಗಿದೆ. ಅದರಲ್ಲೂ, 59.60 ಕ್ಯಾರೆಟ್ ತೂಕದ ಈ ವಜ್ರವನ್ನು ಹಾಂಗ್ ಕಾಂಗ್ ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟ ಮಾಡಲಾಗಿತ್ತು.