ರೈಲು ನಿಲ್ದಾಣಗಳ ಹೆಸರಿನ ಕೊನೆಯಲ್ಲಿ Junction, Road, Halt ಯಾಕೆ ಇರುತ್ತವೆ?

ರೈಲಿನಲ್ಲಿ ಪ್ರಯಾಣದ ವೇಳೆ, ನಿಲ್ದಾಣಗಳ ಹೆಸರುಗಳ ಜೊತೆಗೆ ಜಂಕ್ಷನ್, ಟರ್ಮಿನಲ್, ಕಂಟೋನ್ಮೆಂಟ್, ಮತ್ತು ರೋಡ್ ಎಂಬ ಪದಗಳು ಸೇರಿಕೊಂಡಿರುವುದನ್ನು ನೋಡಿರಬಹುದು. ಇವು ಕೇವಲ ಹೆಸರುಗಳಲ್ಲ, ಹಾಗಾದ್ರೆ, ಮತ್ತೇನು? ಆ ಕುರಿತ ವರದಿ ಇಲ್ಲಿದೆ:
Types of Indian Railway Stations
Online Desk
Updated on

Types of Indian Railway Stations: ಭಾರತೀಯ ರೈಲ್ವೆ ಪ್ರಪಂಚದಲ್ಲೇ ಅತಿ ದೊಡ್ಡ ಸಾರಿಗೆ ಜಾಲಗಳಲ್ಲಿ ಒಂದಾಗಿದೆ. ಅದರಂತೆ, ದೇಶದಲ್ಲಿ ಪ್ರತಿದಿನವೂ 2 ಕೋಟಿಗೂ ಅಧಿಕ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಅದರಂತೆ, ನೀವೂ ಹೀಗೆ ಪ್ರಯಾಣ ಮಾಡುವ ವೇಳೆಯಲ್ಲಿ, ನಿಲ್ದಾಣಗಳ ಹೆಸರುಗಳ ಜೊತೆಗೆ ಜಂಕ್ಷನ್, ಟರ್ಮಿನಲ್, ಕಂಟೋನ್ಮೆಂಟ್, ಮತ್ತು ರೋಡ್ ಎಂಬ ಪದಗಳು ಸೇರಿಕೊಂಡಿರುವುದನ್ನು ನೋಡಿರಬಹುದು. ಇವು ಕೇವಲ ಹೆಸರುಗಳಲ್ಲ, ಬದಲಿಗೆ ಆಯಾ ನಿಲ್ದಾಣದ ಕಾರ್ಯವೈಖರಿ, ಭೌಗೋಳಿಕ ತಾಣ ಮತ್ತು ಇತಿಹಾಸವನ್ನು ಸೂಚಿಸುವ ಶೀರ್ಷಿಕೆಗಳಾಗಿವೆ. ಆ ಕುರಿತ ವರದಿ ಇಲ್ಲಿದೆ:

ಜಂಕ್ಷನ್ ಅಂದ್ರೇನು?

ಯಾವುದೇ ಒಂದು ರೈಲು ನಿಲ್ದಾಣಕ್ಕೆ ಕನಿಷ್ಠ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಭಿನ್ನ ಮಾರ್ಗಗಳು ಬಂದು ಸೇರುತ್ತಿದ್ದರೆ ಅದನ್ನು ಜಂಕ್ಷನ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ: ಹುಬ್ಬಳ್ಳಿ ಜಂಕ್ಷನ್ ಮತ್ತು ಮೈಸೂರು ಜಂಕ್ಷನ್.

ಸೆಂಟ್ರಲ್ ಅಂದ್ರೇನು?

ಒಂದು ದೊಡ್ಡ ನಗರದ ಅತ್ಯಂತ ಹಳೆಯ, ದೊಡ್ಡದಾದ ಮತ್ತು ಪ್ರಮುಖವಾದ ರೈಲು ನಿಲ್ದಾಣವಾಗಿರುತ್ತದೆ. ಅದ್ರಂತೆ, ಒಂದೇ ನಗರದಲ್ಲಿ ಹಲವು ನಿಲ್ದಾಣಗಳಿದ್ದಾಗ, ಅತ್ಯಂತ ಹೆಚ್ಚು ಜನನಿಬಿಡ ಹಾಗೂ ದೇಶದ ಹಲವು ಭಾಗಗಳಿಗೆ ನೇರ ಸಂಪರ್ಕ ಕಲ್ಪಿಸುವ ಮುಖ್ಯ ನಿಲ್ದಾಣಕ್ಕೆ ಈ ಹೆಸರು ಇಡಲಾಗುತ್ತದೆ. ಉದಾಹರಣೆಗೆ: ಮಂಗಳೂರು ಸೆಂಟ್ರಲ್, ಚೆನ್ನೈ ಸೆಂಟ್ರಲ್.

ಟರ್ಮಿನಲ್ ಅಂದ್ರೇನು?

ಮಾರ್ಗದ ಕೊನೆಯಲ್ಲಿರುವ ನಿಲ್ದಾಣವೇ ಟರ್ಮಿನಲ್. ಇಲ್ಲಿಂದ ಮುಂದೆ ರೈಲು ಹಳಿಗಳು ಇರುವುದಿಲ್ಲ. ರೈಲುಗಳು ಈ ನಿಲ್ದಾಣ ತಲುಪಿದ ನಂತರ ಬಂದ ದಾರಿಯಲ್ಲೇ ವಾಪಸ್ ಹೋಗಬೇಕಾಗುತ್ತದೆ. ಉದಾಹರಣೆಗೆ: ಕೆಎಸ್ಆರ್ ಬೆಂಗಳೂರು ಸಿಟಿ ಟರ್ಮಿನಲ್. ಉದಾಹರಣೆಗೆ: ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಬೈಯಪ್ಪನಹಳ್ಳಿ-ಬೆಂಗಳೂರು), ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಮುಂಬೈ)

Types of Indian Railway Stations
ಡೆತ್ ವ್ಯಾಲಿಯಿಂದ ಆಫ್ರಿಕಾದ ಕಣ್ಣಿನವರೆಗೆ.. ಇಂದಿಗೂ ವಿಜ್ಞಾನಿಗಳಿಗೆ ಉತ್ತರ ಸಿಗದ ಭೂಮಿಯ ಡೆಡ್ಲಿ ಜಾಗಗಳು!

ಕಂಟೋನ್ಮೆಂಟ್ ಅಂದ್ರೇನು?

ಸೇನಾ ಕ್ಯಾಂಪ್‌ಗಳು ಇರುವ ಪ್ರದೇಶದ ಬಳಿ ನಿರ್ಮಿಸಲಾದ ನಿಲ್ದಾಣಗಳನ್ನು ಕಂಟೋನ್ಮೆಂಟ್ ಎಂದು ಕರೆಯಲಾಗುತ್ತದೆ. ಬ್ರಿಟಿಷರ ಕಾಲದಲ್ಲಿ ಸೈನಿಕರು ಮತ್ತು ಯುದ್ಧ ಸಾಮಗ್ರಿಗಳನ್ನು ಸುಲಭವಾಗಿ ಸಾಗಿಸಲು ಇವುಗಳನ್ನು ಬಳಸಲಾಗುತ್ತಿತ್ತು. ಉದಾಹರಣೆಗೆ: ಬೆಂಗಳೂರು ಕಂಟೋನ್ಮೆಂಟ್.

ರೋಡ್ ಅಂದ್ರೇನು?

ಯಾವುದೇ ಒಂದು ಪ್ರಮುಖ ನಗರ ಅಥವಾ ಪ್ರವಾಸಿ ತಾಣಕ್ಕೆ ನೇರ ರೈಲು ಸಂಪರ್ಕವಿಲ್ಲದಿದ್ದಾಗ, ಹತ್ತಿರದ ಮಾರ್ಗದಲ್ಲಿ ನಿಲ್ದಾಣ ನಿರ್ಮಿಸಿ ಆ ಊರಿನ ಹೆಸರಿನೊಂದಿಗೆ 'ರೋಡ್' ಎಂದು ಸೇರಿಸಲಾಗುತ್ತದೆ. ಉದಾಹರಣೆಗೆ: ಗೋಕರ್ಣ ರೋಡ್. ಇದು ಪ್ರಮುಖ ನಗರಕ್ಕೆ ಈ ನಿಲ್ದಾಣದಿಂದ ರಸ್ತೆ ಮಾರ್ಗವಿದೆ ಎಂಬುದನ್ನು ಸೂಚಿಸುತ್ತದೆ.

ಹಾಲ್ಟ್ ಅಂದ್ರೇನು?

ಇದು ಅತ್ಯಂತ ಸಣ್ಣ ಅಥವಾ ತಾತ್ಕಾಲಿಕ ರೈಲು ನಿಲ್ದಾಣ. ಇಲ್ಲಿ ಕೇವಲ ಪ್ಯಾಸೆಂಜರ್ ಅಥವಾ ಡೆಮು (DEMU) ರೈಲುಗಳು ಮಾತ್ರ 1 ರಿಂದ 2 ನಿಮಿಷಗಳ ಕಾಲ ನಿಲ್ಲುತ್ತವೆ. ಇಲ್ಲಿ ಯಾವುದೇ ದೊಡ್ಡ ಸಿಗ್ನಲಿಂಗ್ ವ್ಯವಸ್ಥೆ ಇರುವುದಿಲ್ಲ. ಉದಾಹರಣೆಗೆ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಲ್ಟ್.

Types of Indian Railway Stations
Online Desk
Types of Indian Railway Stations
ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ದೇಶದ ಮೊದಲ ಮಾಲಿನ್ಯರಹಿತ Hydrogen ಚಾಲಿತ ರೈಲಿಗೆ ಪ್ರಧಾನಿ ಮೋದಿ ಚಾಲನೆ! Video

ಫ್ಲ್ಯಾಗ್ ಸ್ಟೇಷನ್ ಅಂದ್ರೇನು?

ಕೇವಲ ರೈಲುಗಳ ದಾಟುವಿಕೆಗೆ (Crossing) ಪ್ರಾಮುಖ್ಯತೆ ಕೊಡುವ ನಿಲ್ದಾಣ. ಸಿಂಗಲ್ ಲೈನ್ (ಒಂದೇ ಹಳಿ) ಇರುವ ಮಾರ್ಗಗಳಲ್ಲಿ ಎದುರುಗಡೆಯಿಂದ ಬರುವ ರೈಲಿಗೆ ದಾರಿ ಮಾಡಿಕೊಡಲು ಇದನ್ನು ಬಳಸಲಾಗುತ್ತದೆ.

ಟೌನ್ / ಸಿಟಿ ಅಂದ್ರೇನು?

ಮುಖ್ಯ ರೈಲು ನಿಲ್ದಾಣವು (ಜಂಕ್ಷನ್) ನಗರದ ಹೊರವಲಯದಲ್ಲಿದ್ದಾಗ, ನಗರದ ಒಳಗಿನ ಜನರ ಸುಲಭ ಸಂಚಾರಕ್ಕಾಗಿ ನಿರ್ಮಿಸುವ ಸಣ್ಣ ನಿಲ್ದಾಣ.

ಸಬರ್ಬನ್ / ಉಪನಗರ ನಿಲ್ದಾಣ ಅಂದ್ರೇನು?

ದಿನನಿತ್ಯ ಉದ್ಯೋಗಕ್ಕೆ ತೆರಳುವ ಪ್ರಯಾಣಿಕರಿಗಾಗಿ ನಗರ ಪ್ರದೇಶಗಳಲ್ಲಿ ನಿರ್ಮಿಸಲಾದ ಸ್ಥಳೀಯ (Local) ರೈಲು ನಿಲ್ದಾಣಗಳು. ಇಲ್ಲಿ ಎಕ್ಸ್‌ಪ್ರೆಸ್ ರೈಲುಗಳು ನಿಲ್ಲುವುದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com