ರಾಜಮನೆತನ vs ಸರ್ಕಾರ: ಮೈಸೂರು ಅರಮನೆ, ಚಿನ್ನದ ಅಂಬಾರಿ, ಸಿಂಹಾಸನ ಯಾರದ್ದು? ಇಲ್ಲಿದೆ ಅಸಲಿ ಸತ್ಯ!

ಮೈಸೂರು ಅರಮನೆ, ರತ್ನಖಚಿತ ಸಿಂಹಾಸನ ಮತ್ತು ಚಿನ್ನದ ಅಂಬಾರಿಯ ಮಾಲೀಕತ್ವದ ವಿಚಾರವು ಮೈಸೂರು ರಾಜಮನೆತನ (ಒಡೆಯರ್ ವಂಶಸ್ಥರು) ಮತ್ತು ಕರ್ನಾಟಕ ಸರ್ಕಾರದ ನಡುವೆ ದಶಕಗಳಿಂದ ಕಾನೂನು ಹೋರಾಟದಲ್ಲಿದೆ. ಆ ಕುರಿತ ವರದಿ ಇಲ್ಲಿದೆ:
Who Owns the Mysuru Palace, Golden Howdah, and Royal Throne? Inside the Decades-Long Legal Battle
ಮೈಸೂರು ಅರಮನೆ, ಚಿನ್ನದ ಅಂಬಾರಿ, ಸಿಂಹಾಸನ ಯಾರದ್ದು?Online Desk
Updated on: 

ಮೈಸೂರು: ದಸರಾ ಹಬ್ಬ ಬಂತೆಂದರೆ ನಾಡಿನ ಕಣ್ಣು ಮೈಸೂರಿನತ್ತಲೇ ನೆಟ್ಟಿರುತ್ತದೆ. ಚಿನ್ನದ ಅಂಬಾರಿಯಲ್ಲಿ ಜಗನ್ಮಾತೆ ಚಾಮುಂಡೇಶ್ವರಿಯ ಭವ್ಯ ಮೆರವಣಿಗೆ, ದರ್ಬಾರಿನಲ್ಲಿ ಕಣ್ಮನ ಸೆಳೆಯುವ ರತ್ನಖಚಿತ ಸಿಂಹಾಸನ ಮತ್ತು ದೀಪಾಲಂಕಾರದಿಂದ ಕಂಗೊಳಿಸುವ ಐತಿಹಾಸಿಕ ಅರಮನೆ ಇಡೀ ವಿಶ್ವದ ಗಮನ ಸೆಳೆಯುತ್ತವೆ. ಆದರೆ, ಶತಮಾನಗಳ ಪರಂಪರೆಯನ್ನು ಹೊತ್ತಿರುವ ಈ ಅದ್ಭುತ ಸಂಪತ್ತು ನಿಜಕ್ಕೂ ಯಾರದ್ದು? ಇದು ಮೈಸೂರು ಒಡೆಯರ್ ವಂಶಸ್ಥರ ಖಾಸಗಿ ಸ್ವತ್ತಾ ಅಥವಾ ಸರ್ಕಾರದ ಆಸ್ತಿಯೇ? ಇತ್ತೀಚೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಸರ್ಕಾರದ ನಡುವೆ ನಡೆದ ವಾಕ್ಸಮರವು ಈ ದಶಕಗಳ ಸುದೀರ್ಘ ಕಾನೂನು ಸಮರವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

2026ರ ದಸರಾ ಮಹೋತ್ಸವದ ಸಂದರ್ಭದಲ್ಲಿ ಅಧಿಕಾರಿಗಳು ಬೇಕಾಬಿಟ್ಟಿ ಆಗಿ ನಡೆದುಕೊಂಡು ರಾಜಮನೆತನದ ಧಾರ್ಮಿಕ ವಿಧಿವಿಧಾನಗಳಿಗೆ ಅಡ್ಡಿಪಡಿಸಿದ್ದಾರೆ ಹಾಗೂ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಆನೆಯ ಆಯ್ಕೆಯ ಬಗ್ಗೆ ಕೊನೆಯ ಕ್ಷಣದವರೆಗೂ ರಾಜಮನೆತನಕ್ಕೆ ಮಾಹಿತಿ ನೀಡಿರಲಿಲ್ಲ ಎನ್ನುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, "ಮುಂದಿನ ವರ್ಷ ಜಂಬೂಸವಾರಿಗೆ ಚಿನ್ನದ ಅಂಬಾರಿ ನೀಡುವುದನ್ನು ಮರುಪರಿಶೀಲಿಸಬೇಕಾಗುತ್ತದೆ" ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, "ಅರಮನೆ ಮತ್ತು ಅದರ ಆವರಣ ಸರ್ಕಾರಕ್ಕೆ ಸೇರಿದ್ದು, ರಾಜಮನೆತನಕ್ಕೆ ಅಲ್ಲಿ ವಾಸಿಸಲು ಮಾತ್ರ ಜಾಗ ನೀಡಲಾಗಿದೆ. ಆನೆಗಳ ಬಗ್ಗೆ ಅವರಿಗೆ ಮಾಹಿತಿ ನೀಡುವ ಅಗತ್ಯವಿಲ್ಲ" ಎಂದು ಉತ್ತರಿಸಿದ್ದಾರೆ. ಈ ಬೆನ್ನಲ್ಲೇ, ಮೈಸೂರು ಅರಮನೆ, ಸಿಂಹಾಸನ ಹಾಗೂ ಅಂಬಾರಿಯ ಒಡೆತನ ಯಾರಿಗೆ ಸೇರಬೇಕು ಎಂಬ ಪ್ರಶ್ನೆಯ ಸುತ್ತ ಸುದೀರ್ಘ ಕಾನೂನು ಸಮರದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾದ್ರೆ, ನಿಜವಾಗಿಯೂ, ಮೈಸೂರು ಅರಮನೆ, ರತ್ನಖಚಿತ ಸಿಂಹಾಸನ ಮತ್ತು ಚಿನ್ನದ ಅಂಬಾರಿಯ ಮಾಲೀಕತ್ವ ಯಾರದ್ದು?

ರತ್ನಖಚಿತ ಸಿಂಹಾಸನ ಮತ್ತು ಚಿನ್ನದ ಅಂಬಾರಿ

ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿ (85 ಕೆಜಿ ಚಿನ್ನದ ಲೇಪನ) ಮತ್ತು ಐತಿಹಾಸಿಕ ರತ್ನಖಚಿತ ಸಿಂಹಾಸನಗಳು ಮೈಸೂರು ರಾಜಮನೆತನದ ಖಾಸಗಿ ಚರಾಸ್ತಿಗಳಾಗಿವೆ. ಇವು ಸರ್ಕಾರದ ಸ್ವತ್ತಲ್ಲ. ಆದರೆ, ಪ್ರತಿ ವರ್ಷ ದಸರಾ ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಹೊರಲು ಚಿನ್ನದ ಅಂಬಾರಿಯನ್ನು ಹಾಗೂ ಖಾಸಗಿ ದರ್ಬಾರ್‌ಗಾಗಿ ಸಿಂಹಾಸನವನ್ನು ಬಳಸಲಾಗುತ್ತದೆ. ಇದಕ್ಕಾಗಿ ಕರ್ನಾಟಕ ಸರ್ಕಾರವು ರಾಜಮನೆತನಕ್ಕೆ ಪ್ರತಿ ವರ್ಷ ರಾಯಲ್ಟಿ (ಗೌರವಧನ) ಪಾವತಿಸುತ್ತದೆ. ಇನ್ನು, ಈ ಗೌರವಧನವು ಅಂದಾಜು 50 ಲಕ್ಷ ಇರಬಹುದು ಎನ್ನಲಾಗಿದೆ.

A gem-studded throne and a golden howdah
ರತ್ನಖಚಿತ ಸಿಂಹಾಸನ ಮತ್ತು ಚಿನ್ನದ ಅಂಬಾರಿOnline Desk
Who Owns the Mysuru Palace, Golden Howdah, and Royal Throne? Inside the Decades-Long Legal Battle
ಜಯಮಾರ್ತಾಂಡನಿಂದ ಪ್ರಶಾಂತನವರೆಗೆ! ಮೈಸೂರು ದಸರಾದಲ್ಲಿ 750 ಕೆಜಿ ಚಿನ್ನದ ಅಂಬಾರಿ ಹೊತ್ತ ಗಜರಾಜರ ರೋಚಕ ಇತಿಹಾಸ

ಮೈಸೂರು ಅರಮನೆ

1950ರಲ್ಲಿ ಮೈಸೂರು ಸಂಸ್ಥಾನವು ಭಾರತ ಒಕ್ಕೂಟಕ್ಕೆ ಸೇರಿದಾಗ ಮೈಸೂರಿನ ಕೊನೆಯ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಮತ್ತು ಭಾರತ ಸರ್ಕಾರದ ನಡುವೆ ನಡೆದ ಒಪ್ಪಂದದ ಅನುಸಾರ ಅರಮನೆಯನ್ನು ಮಹಾರಾಜರ 'ಖಾಸಗಿ ಆಸ್ತಿ' ಎಂದು ಅಂಗೀಕಾರವಾಗಿತ್ತು. ಆದ್ದರಿಂದ ಇದು ತಮಗೆ ಸೇರಬೇಕು ಎಂಬುದು ಒಡೆಯರ್ ಮನೆತನದ ನಿಲುವಾಗಿದೆ. ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ 1976 ರಲ್ಲಿ ಅರಮನೆಯನ್ನು ತನ್ನ ಸುಪರ್ದಿಗೆ ಪಡೆದ ಸರ್ಕಾರ, 1998 ರಲ್ಲಿ ಕರ್ನಾಟಕ ಸರ್ಕಾರವು "ಮೈಸೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ" ಜಾರಿಗೆ ತಂದು, ಸಾರ್ವಜನಿಕ ಹಿತಾಸಕ್ತಿ ಹಾಗೂ ಸಂರಕ್ಷಣೆಗಾಗಿ ಅರಮನೆಯನ್ನು ತನ್ನ ಸುಪರ್ದಿಗೆ ಪಡೆಯಲು ಮುಂದಾಯಿತು.

Mysuru Palace
ಮೈಸೂರು ಅರಮನೆOnline Desk

ಈ ಬೆನ್ನಲ್ಲೇ, ರಾಜಮನೆತನವು ಈ ಕಾಯ್ದೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಕರ್ನಾಟಕ ಹೈಕೋರ್ಟ್ ಸರ್ಕಾರದ ಈ ಕಾಯ್ದೆಯನ್ನು ಅಸಿಂಧು ಎಂದು ತೀರ್ಪು ನೀಡಿತು. ಆದರೆ,  ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಅದರಂತೆ, ಪ್ರಸ್ತುತ ಅರಮನೆಯ ಮಾಲೀಕತ್ವದ ಕುರಿತಾದ ಈ ಇಡೀ ವಿವಾದವು ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ಸರ್ಕಾರಿ ಸಂಸ್ಥೆಯಾದ ಮೈಸೂರು ಅರಮನೆ ಮಂಡಳಿ ಅರಮನೆಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದು, ರಾಜಕುಟುಂಬದವರು ಅರಮನೆಯ ಒಂದು ನಿರ್ದಿಷ್ಟ ಭಾಗದಲ್ಲಿ ವಾಸಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com