₹1 ರೂಪಾಯಿ ಕೊಡದೆ ಕೋರ್ಟ್‌ನಲ್ಲಿ ಲಾಯರ್ ಇಟ್ಟು ವಾದ ಮಾಡಬಹುದು; ಪ್ರತಿಯೊಬ್ಬ ಭಾರತೀಯನಿಗೂ ಸಿಗಲಿದೆ ಉಚಿತ ಕಾನೂನು ನೆರವು! ಹೇಗೆ ಗೊತ್ತಾ?

ಕೋರ್ಟ್ ಕೇಸ್ ಎಂದರೆ ಲಕ್ಷಗಟ್ಟಲೆ ದುಡ್ಡು ಬೇಕು! ಹಾಗಾಗಿ, ವಕೀಲರ ಫೀಸ್ ಕಟ್ಟಲು ಆಗಲ್ಲ ಎಂದು ಅನೇಕರು ನ್ಯಾಯಕ್ಕಾಗಿ ಹೋರಾಡದೆ ಸುಮ್ಮನಾಗುತ್ತಾರೆ. ಆದರೆ, ನೀವು 1 ರೂಪಾಯಿ ಕೂಡ ಖರ್ಚು ಮಾಡದೆ ಸರ್ಕಾರವೇ ನಿಮಗೆ ಉಚಿತವಾಗಿ ವಕೀಲರನ್ನು ಕೊಟ್ಟು ವಾದ ಮಾಡಿಸುತ್ತದೆ.
Law
ಕಾನೂನುAI Image
Updated on

Free Legal Help: ಕೋರ್ಟ್ ಮೆಟ್ಟಿಲೇರಬೇಕು ಎಂದರೆ ಸಾಕು, ಎಂಥವರಿಗೂ ಮೊದಲು ನೆನಪಾಗುವುದೇ ಲಕ್ಷಾಂತರ ರೂಪಾಯಿ ಶುಲ್ಕ ಮತ್ತು ಮುಗಿಯದ ಖರ್ಚು. ಅದರಲ್ಲೂ, ಈ ಹಣದ ಕೊರತೆಯಿಂದಲೇ ಎಷ್ಟೋ ಜನ ತಮಗೆ ಅನ್ಯಾಯವಾದರೂ ಮೌನವಾಗಿ ಸಹಿಸಿಕೊಳ್ಳುತ್ತಾರೆ. ಆದರೆ, ಭಾರತೀಯ ಸಂವಿಧಾನವು ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ನ್ಯಾಯದ ಹಕ್ಕನ್ನು ನೀಡಿದೆ ಎಂಬುದು ನಿಮಗೆ ತಿಳಿದಿದೆಯೇ? ಹಾಗಾಗಿ, ನೀವು ಒಂದು ರೂಪಾಯಿ ಕೂಡ ಖರ್ಚು ಮಾಡದೆ ಸರ್ಕಾರವೇ ನಿಮಗೆ ಉಚಿತವಾಗಿ ವಕೀಲರನ್ನು ಕೊಟ್ಟು ವಾದ ಮಾಡಿಸುತ್ತದೆ. ಹಾಗಾದ್ರೆ, ಈ ಸೇವೆ ಪಡೆಯುವುದು ಹೇಗೆ ಎಂದು ತಿಳಿಯೋಣ...

ಉಚಿತ ಕಾನೂನು ನೆರವು ಎಂದರೇನು?

ಕೇಂದ್ರ ಸರ್ಕಾರದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ NALSA ಮತ್ತು ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ DLSA ಈ ಸೇವೆಯನ್ನು ನೀಡುತ್ತದೆ. ಇದರ ಅಡಿಯಲ್ಲಿ ಬಡವರಿಗೆ, ದೌರ್ಬಲ್ಯ ವರ್ಗದವರಿಗೆ ಉಚಿತವಾಗಿ ವಕೀಲರು, ಕೋರ್ಟ್ ಫೀಸ್ ಮತ್ತು ಕಾನೂನು ಸಲಹೆ ನೀಡಲಾಗುತ್ತದೆ.

ಯಾರಿಗೆ ಈ ಸೇವೆ ಸಿಗುತ್ತದೆ?

ಈ ಸೇವೆ ಎಲ್ಲರಿಗೂ ಸಿಗುವುದಿಲ್ಲ, ಆದರೆ, ಈ ಕೆಳಗಿನವರಿಗೆ ಮಾತ್ರ ಸಿಗುತ್ತದೆ.

  • ಮಹಿಳೆಯರು ಮತ್ತು ಮಕ್ಕಳು

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು

  • ಕೈಗಾರಿಕಾ ಕಾರ್ಮಿಕರು

  • ವಿಪತ್ತು, ಹಿಂಸಾಚಾರಕ್ಕೆ ಒಳಗಾದವರು

  • ವಾರ್ಷಿಕ ಆದಾಯ 3 ಲಕ್ಷ ರೂಪಾಯಿಗಿಂತ ಕಡಿಮೆ ಇರುವವರು, ಕರ್ನಾಟಕದಲ್ಲಿ ಈ ಮಿತಿ 5 ಲಕ್ಷ ಇದೆ

  • ಜೈಲಿನಲ್ಲಿರುವ ಕೈದಿಗಳು

  • ವಿಕಲಚೇತನರು (ಅಂಧರು, ಕಿವುಡರು ಅಥವಾ ಇತರೆ ದೈಹಿಕ ದೌರ್ಬಲ್ಯ ಹೊಂದಿದವರು)

  • ಮಾನಸಿಕ ಅಸ್ವಸ್ಥರು

ಈ ಸೇವೆ ಪಡೆಯುವುದು ಹೇಗೆ?

ಇದನ್ನು ಪಡೆಯುವುದು ತುಂಬಾ ಸುಲಭ. ಇದಕ್ಕಾಗಿ ನೀವು ಕೋರ್ಟ್ ಗೆ ಅಲೆದಾಡಬೇಕಿಲ್ಲ.

  • ವಿಧಾನ 1: ನಿಮ್ಮ ಜಿಲ್ಲೆಯ ಜಿಲ್ಲಾ ನ್ಯಾಯಾಲಯಕ್ಕೆ ಹೋಗಿ ಅಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ DLSA ಕಚೇರಿಗೆ ಭೇಟಿ ನೀಡಿ. ಅಲ್ಲಿ ಉಚಿತ ಕಾನೂನು ನೆರವು ಬೇಕು ಎಂದು ಅರ್ಜಿ ನೀಡಿ.

  • ವಿಧಾನ 2: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. NALSA ಅಧಿಕೃತ ವೆಬ್ ಸೈಟ್ nalsa.gov.in ಗೆ ಹೋಗಿ Legal Aid Application ಮೇಲೆ ಕ್ಲಿಕ್ ಮಾಡಿ ನಿಮ್ಮ ವಿವರ ತುಂಬಿ.

  • ವಿಧಾನ 3: 15100 ಈ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಸಹಾಯ ಪಡೆಯಬಹುದು.

Law
ಪ್ರಕೃತಿಯ ಮುನಿಸೋ ಇಲ್ಲ ಮಾನವನ ತಪ್ಪೋ? ನೇಪಾಳದಲ್ಲಿ ಮತ್ತೆ ಮತ್ತೆ ಜಲಪ್ರಳಯ ಸಂಭವಿಸುವುದೇಕೆ? ಇಲ್ಲಿದೆ ಭೂಕುಸಿತದ ಹಿಂದಿನ ರಹಸ್ಯ!

ಬೇಕಾಗುವ ದಾಖಲೆಗಳು:

ನಿಮ್ಮ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿಮ್ಮ ಕೇಸ್ ಗೆ ಸಂಬಂಧಿಸಿದ ದಾಖಲೆಗಳು ಇದ್ದರೆ ಸಾಕು. ಅರ್ಜಿ ಸಲ್ಲಿಸಿದ 7 ರಿಂದ 10 ದಿನಗಳಲ್ಲಿ ಪ್ರಾಧಿಕಾರ ನಿಮ್ಮ ಅರ್ಜಿಯನ್ನು ಪರಿಶೀಲಿಸಿ ನಿಮಗೆ ಒಬ್ಬ ಅನುಭವಿ ವಕೀಲರನ್ನು ನೇಮಕ ಮಾಡುತ್ತದೆ. ಆ ವಕೀಲರಿಗೆ ಫೀಸ್ ಅನ್ನು ಸರ್ಕಾರವೇ ನೀಡುತ್ತದೆ, ನೀವು ಒಂದು ರೂಪಾಯಿ ಕೊಡಬೇಕಿಲ್ಲ.

ಈ ಸೇವೆಯ ಅಡಿಯಲ್ಲಿ ಏನೇನು ಸೌಲಭ್ಯ ಸಿಗುತ್ತದೆ?

  • ಕೋರ್ಟ್‌ನಲ್ಲಿ ನಿಮಗಾಗಿ ವಾದ ಮಾಡಲು ಉಚಿತ ಅರ್ಹ ವಕೀಲರ ನೇಮಕ.

  • ಕೋರ್ಟ್ ಕೇಸ್‌ಗೆ ಸಂಬಂಧಿಸಿದ ಕೋರ್ಟ್ ಫೀಸ್, ಪ್ರೊಸೆಸ್ ಫೀಸ್ ಮುಂತಾದ ಯಾವುದೇ ವೆಚ್ಚಗಳನ್ನು ನೀಡುವುದು ಬೇಕಾಗಿಲ್ಲ (ಸರ್ಕಾರವೇ ಭರಿಸುತ್ತದೆ).

  • ಅರ್ಜಿ ಸಿದ್ಧಪಡಿಸುವುದು, ದೂರು ಪತ್ರ ಬರೆಯುವುದು ಮತ್ತು ಮೇಲ್ಮನವಿ ಸಿದ್ಧಪಡಿಸುವ ಉಚಿತ ಸೇವೆ.

  • ಉಚಿತ ಕಾನೂನು ಸಲಹೆ ಮತ್ತು ಮಾರ್ಗದರ್ಶನ.

  • ತೀರ್ಪುಗಳು ಮತ್ತು ಕೋರ್ಟ್ ದಾಖಲೆಗಳ ಪ್ರಮಾಣೀಕೃತ ಪ್ರತಿಗಳನ್ನು ಉಚಿತವಾಗಿ ಒದಗಿಸುವುದು.

Law
ಕೋಟಿ ಗಳಿಸಿದ್ರೂ 1 ರೂಪಾಯಿ ತೆರಿಗೆ ಕಟ್ಟಂಗಿಲ್ಲ! ಭಾರತದಲ್ಲೇ ಇದೆ ಇಂಥದ್ದೊಂದು ಟ್ಯಾಕ್ಸ್ ಫ್ರೀ ರಾಜ್ಯ; ಯಾವುದು ಗೊತ್ತಾ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com