ಫಾರ್ಮ್ ಕಂಡುಕೊಳ್ಳಲು ಸೈನಾ ಪರದಾಟ: ರಶೀದ್ ಸಿಡೆಕ್
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತಮ್ಮ ಫಾರ್ಮ್ ಕಂಡುಕೊಳ್ಳಲು ಒದ್ದಾಡುತ್ತಿದ್ದಾರೆ ಎಂದು ಮಲೇಷ್ಯಾದ ಬ್ಯಾಡ್ಮಿಂಟನ್ ದಂತಕತೆ ರಶೀದ್ ಸಿಡೆಕ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ 8ನೇ ರ್ಯಾಂಕಿಂಗ್ನ ಸೈನಾ 15 ತಿಂಗಳ ನಂತರ ಇಂಡಿಯಾ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಟೂರ್ನಿಯನ್ನು ಜನವರಿಯಲ್ಲಿ ಗೆದ್ದುಕೊಂಡಿದ್ದರೂ, ನಂತರದ ಪಂದ್ಯಾವಳಿಗಳಾದ ಆಲ್ ಇಂಗ್ಲೆಂಡ್ ಮತ್ತು ಸ್ವಿಸ್ ಓಪನ್ನ ಕ್ವಾರ್ಟರ್ಫೈನಲ್ನಲ್ಲಿ ಮುಖಭಂಗ ಅನುಭವಿಸಿದ್ದಾರೆ. ಅಲ್ಲದೆ ಪ್ರಮುಖ ಆಟಗಾರ್ತಿಯರಿಗೆ ಪ್ರಬಲ ಪೈಪೋಟಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಸಿಡೆಕ್ ಅಭಿಪ್ರಾಯಪಟ್ಟಿದ್ದಾರೆ.
ಸೈನಾ ನೆಹ್ವಾಲ್ ಈಗಲೂ ತಮ್ಮ ಫಾರ್ಮ್ ಕಂಡುಕೊಳ್ಳಲು ಒದ್ದಾಡುತ್ತಿದ್ದಾರೆ. ಆಕೆ ಸಂಪೂರ್ಣವಾಗಿ ಫಿಟ್ ಆಗಬೇಕು. ನಂತರ ಹೆಚ್ಚಿನ ಪರಿಶ್ರಮ ಹಾಕಬೇಕಿದೆ ಎಂದು ತಿಳಿಸಿದ್ದಾರೆ. ಅದೇರೀತಿ ಪಿ. ಸಿಂಧು ಸಹ ಚೀನಾದ ಆಟಗಾರ್ತಿಯರ ವಿರುದ್ಧ ಪ್ರಬಲ ಹೋರಾಟ ನೀಡಬೇಕಾದರೆ ತಮ್ಮ ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಇನ್ನು ಕೆ.ಶ್ರೀಕಾಂತ್ ಹೆಚ್ಚು ಗಮನ ಸೆಳೆದ ಆಟಗಾರ. ಆತ ವಿಶ್ವದ 22ನೇ ಆಟಗಾರನಾಗಿದ್ದರೂ ಆತನ ಸ್ಮ್ಯಾಷ್ ಹಾಗೂ ಕ್ಷಮತೆ ಉತ್ತಮವಾಗಿದೆ. ಮಲೇಷ್ಯಾ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಸೌರಬ್ ವರ್ಮಾ ಸಹ ಉತ್ತಮ ಆಟಗಾರನಾಗಿದ್ದಾನೆ. ಇವರ ಜತೆಗೆ ಗುರುಸಾಯಿದತ್ ಹಾಗೂ ಪಿ.ಕಶ್ಯಪ್ ಸೇರಿದಂತೆ ಭಾರತ ಉತ್ತಮ ಆಟಗಾರರನ್ನು ಹೊಂದಿದೆ ಎಂದು ಸಿಡೆಕ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

