ಟಿ20: ಅಗ್ರಸ್ಥಾನಕ್ಕೇರಿದ ಭಾರತ
ದುಬೈ: ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡ, ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಹೀಗಾಗಿ ಅಗ್ರಸ್ಥಾನಲ್ಲಿದ್ದ ಶ್ರೀಲಂಕಾ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಲೀಗ್ ಹಂತದ ನಾಲ್ಕು ಪಂದ್ಯಗಳಲ್ಲಿ ಆಕರ್ಷಕ ಜಯ ಸಾಧಿಸಿ, ಅಜೇಯವಾಗಿ ಉಳಿದ ಭಾರತ ತಂಡ 7 ರೇಟಿಂಗ್ ಪಾಯಿಂಟ್ ಗಳಿಸಿಕೊಂಡಿದ್ದು, ಒಟ್ಟು 130 ರೇಟಿಂಗ್ ಪಾಯಿಂಟ್ ಹೊಂದಿದೆ.
ಇನ್ನು ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾ ಸಹ 130 ಅಂಕಗಳನ್ನು ಹೊಂದಿದೆ. ಆದರೆ, ದಶಮಾಂಶ ಲೆಕ್ಕಾಚಾರದಲ್ಲಿ ಭಾರತ ಅಗ್ರಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ.ಈಗ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಶ್ರೀಲಂಕಾ ಎರಡೂ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಹೀಗಾಗಿ ಈಗ ನಂಬರ್ ಸ್ಥಾನ ಉಳಿಸಿಕೊಳ್ಳಲು ಉಭಯ ತಂಡಗಳಿಗೂ ಅವಕಾಶವಿದೆ. ರ್ಯಾಂಕಿಂಗ್ನಲ್ಲಿ ಇನ್ನೊಂದು ಬದಲಾವಣೆ ಎಂದರೆ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ತಮ್ಮ ಸ್ಥಾನವನ್ನು ಅದಲುಬದಲು ಮಾಡಿಕೊಂಡಿವೆ. ಐದು ರೇಟಿಂಗ್ ಪಾಯಿಂಟ್ ಗಳಿಸಿಕೊಂಡು, ಒಟ್ಟು 115 ರೇಟಿಂಗ್ ಪಾಯಿಂಟ್ಗಳನ್ನು ಹೊಂದಿರುವ ವೆಸ್ಟ್ ಇಂಡೀಸ್ ಈಗ 5ನೇ ಸ್ಥಾನದಲ್ಲಿದೆ. ಇನ್ನು 5 ರೇಟಿಂಗ್ ಪಾಯಿಂಟ್ ಕಳೆದುಕೊಂಡಿರುವ ಆಸ್ಟ್ರೇಲಿಯಾ ಒಟ್ಟು 110 ರೇಟಿಂಗ್ ಪಾಯಿಂಟ್ಗಳೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದೆ.ಒಟ್ಟು 16 ತಂಡಗಳ ಪೈಕಿ 13 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಪಂದ್ಯಾವಳಿ ಒಟ್ಟು ಮೂರು ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಮೊತ್ತವನ್ನು ಹೊಂದಿದೆ. ಗೆದ್ದ ತಂಡ 1.1 ಮಿಲಿಯನ್ ಅಮೆರಿಕನ್ ಡಾಲರ್ ಹಣ ಪಡೆಯಲಿದೆ. ರನ್ನರ್ ಅಪ್ ಆದ ತಂಡ 550,000 ಅಮೆರಿಕನ್ ಡಾಲರ್ ಬಹುಮಾನ ಪಡೆಯಲಿದೆ. ಕೊಹ್ಲಿಗೆ 3ನೇ ಸ್ಥಾನ: ಬ್ಯಾಟಿಂಗ್ ವಿಭಾಗದ ವೈಯಕ್ತಿಕ ರ್ಯಾಂಕಿಂಗ್ನಲ್ಲಿ ವಿರಾಟ್ ಕೊಹ್ಲಿ ಅವರು 1 ಸ್ಥಾನ ಮೇಲಕ್ಕೇರಿದ್ದು, 3ನೇ ಸ್ಥಾನದಲ್ಲಿದ್ದಾರೆ. 16 ಸ್ಥಾನ ಮೇಲಕ್ಕೇರಿರುವ ಆರ್. ಅಶ್ವಿನ್ 6ನೇ ಸ್ಥಾನದಲ್ಲಿದ್ದು, ಟಾಪ್ ಟೆನ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ವೆಸ್ಟ್ ಇಂಡೀಸ್ನ ಸ್ಪಿನ್ನರ್ ಸ್ಯಾಮುಯಲ್ ಬದ್ರಿಅವರು 1 ಸ್ಥಾನ ಮೇಲಕ್ಕೇರಿದ್ದು. ಅವರದೇ ತಂಡದ ಇನ್ನೊಬ್ಬ ಆಟಗಾರ ಸುನಿಲ್ ನಾರಾಯಣ ಅವರನ್ನು ಹಿಂದಿಕ್ಕುವ ಮೂಲಕ ಅಗ್ರಸ್ಥಾನ ಅಲಂಕರಿಸಿದ್ದಾರೆ. ನಾಲ್ಕು ಪಂದ್ಯಗಳಿಂದ 10 ವಿಕೆಟ್ ಪಡೆದಿರುವ ಬದ್ರಿ ಪಂದ್ಯಾವಳಿಯಲ್ಲಿ 3ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. 109 ರೇಟಿಂಗ್ ಪಾಯಿಂಟ್ ಗಳಿಸಿಕೊಂಡಿರುವ ಬದ್ರಿ ಒಟ್ಟು 855 ಅಂಕಗಳನ್ನ ಹೊಂದಿದ್ದು, ಸುನಿಲ್ ನಾರಾಯಣ ಅವರಿಗಿಂತ 1 ರೇಟಿಂಗ್ ಪಾಯಿಂಟ್ ಹೆಚ್ಚು ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

