ಕರ್ನಾಟಕಕ್ಕೆ 2ನೇ ಆಘಾತ
ವಿಶಾಖಪಟ್ಟಣ: ಮತ್ತೊಮ್ಮೆ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಕಳಪೆ ಪ್ರದರ್ಶನ ನೀಡಿದ ಕರ್ನಾಟಕದ ಆಟಗಾರರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ದಕ್ಷಿಣ ವಲಯ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸದದ ಎರಡನೇ ಸೋಲನುಭವಿಸಿದ್ದಾರೆ.
ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 20 ರನ್ಗಳಿಂದ ಕೇರಳ ವಿರುದ್ಧ ಸೋಲನುಭವಿಸಿತು. ಗೆಲ್ಲಲು 125 ರನ್ಗಳ ಸಾಧಾರಣ ಗುರಿ ಪಡೆದಿದ್ದ ಕರ್ನಾಟಕಕ್ಕೆ 18.4 ಓವರುಗಳಲ್ಲಿ 104 ರನ್ಗಳಿಸಲಷ್ಟೇ ಸಾಧ್ಯವಾಯಿತು. ಮಧ್ಯಮ ಕ್ರಮಾಂಕದ ಆಟಗಾರ ಆರ್. ಸಮರ್ಥ್ 29 ಎಸೆತಗಳಲ್ಲಿ 19 ರನ್ಗಳಿಸಿದ್ದೇ ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತವಾಯಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೇರಳ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 124 ರನ್ಗಳಿಸಿತು. ರೋಹನ್ ಪ್ರೇಮ್ ಅಜೇಯ 44 ರನ್ಗಳಿಸಿದರು. ಕರ್ನಾಟಕದ ಪರ ನಾಯಕ ವಿನಯಕುಮಾರ್ 3 ವಿಕೆಟ್ ಪಡೆದರು. ಮೊದಲ ಪಂದ್ಯದಲ್ಲಿ ಆಂಧ್ರ ವಿರುದ್ಧ ಜಯಗಳಿಸಿದ್ದ ಕರ್ನಾಟಕ, ಎರಡನೇ ಪಂದ್ಯದಲ್ಲಿ ಹೈದರಾಬಾದ್ ವಿರುದ್ದ ಸೋಲನುಭವಿಸಿತ್ತು. ಇಂದು ಮೂರನೇ ಪಂದ್ಯದಲ್ಲೂ ಕೂಡ ಸೋಲಿನಿಂದ ಹೊರಬರಲಿಲ್ಲ.
ಸಂಕ್ಷಿಪ್ತ ಸ್ಕೋರ್:
ಕೇರಳ 20 ಓವರುಗಳಲ್ಲಿ 6 ವಿಕೆಟ್ಗೆ124 (ರೋಹನ್ ಪ್ರೇಮ್ ಅಜೇಯ 44, ವಿಷ್ಣು ವಿನೋದ್
33, ಪಲ್ಲಂ ಅನ್ಫಾಲ್ 25, ವಿನಯಕುಮಾರ್ 18ಕ್ಕೆ3, ಶ್ರೀನಾಥ್ ಅರವಿಂದ್ 16ಕ್ಕೆ1, ಎಚ್.ಎಸ್. ಶರತ್ 24ಕ್ಕೆ1). ಕರ್ನಾಟಕ 18.4 ಓವರುಗಳಲ್ಲಿ 104 (ಆರ್. ಸಮರ್ಥ್ 19, ಮನೀಷ್ ಪಾಂಡೆ 15, ಕರುಣ್ ನಾಯರ್ 15, ಕೆ. ಗೌತಮ್ 12, ಅಬ್ರಾರ್ ಖಾಜಿ ಅಜೇಯ 12, ಜಿ. ಪ್ರಶಾಂತ್ 14ಕ್ಕೆ2, ಯು. ಮನುಕೃಷ್ಣನ್ 18ಕ್ಕೆ2, ಕೆ. ರಾಕೇಶ್ 22ಕ್ಕೆ2).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

