ಐಪಿಎಲ್ ಕಳ್ಳಾಟದಲ್ಲಿ ಆರಲ್ಲ, ಹನ್ನೆರಡು ಆಟಗಾರರು ಭಾಗಿಯಾದ ಶಂಕೆ..!
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ನಡೆದಿದೆ ಎನ್ನಲಾಗಿರುವ ಫಿಕ್ಸಿಂಗ್ ಪ್ರಕರಣದಲ್ಲಿ ಭಾರತ ತಂಡದಲ್ಲಿ ಆಡಿದ 6 ಮಂದಿ ಭಾಗಿಯಾಗಿದ್ದಾರೆ ಎಂದು ನ್ಯಾ. ಮುಕುಲ್ ಮುದ್ಗಲ್ ಸಮಿತಿ ವರದಿಯಲ್ಲಿ ಕೇಳಿಬಂದಿತ್ತು.
ಆದರೆ, ಈಗ ಸೋರಿಕೆಯಾಗಿರುವ ವರದಿಯಲ್ಲಿನ ಮಾಹಿತಿ ಪ್ರಕಾರ ಅದು 6 ಆಟಗಾರರಲ್ಲ 12 ಎಂದು ಬಹಿರಂಗವಾಗಿದೆ. ಎಲ್ಲ ಆಟಗಾರರೂ ಭಾರತ ತಂಡಕ್ಕೆ ಆಡಿದವರೇ ಎಂಬುದು ಹೊಸ ವರದಿಯಲ್ಲಿ ಪ್ರಸ್ತಾಪವಾಗಿಲ್ಲ.
ಹೀಗಾಗಿ ಐಪಿಎಲ್ ಫಿಕ್ಸಿಂಗ್ ಪ್ರಕರಣದ ಕುರಿತು ದಿನಕ್ಕೊಂದು ಸುದ್ದಿ ಹೊರಬೀಳುತ್ತಿರುವುದು, ಮತ್ತಷ್ಟು ಸಂಶಯಕ್ಕೆ ಎಡೆಮಾಡಿದೆ. ಅಲ್ಲದೆ, ಐಪಿಎಲ್ ಹಗರಣದ ಕುರಿತು ಆಳವಾದ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂಬುದು ಇದರಿಂದ ಸಾಬೀತಾದಂತಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಸೇರಿದಂತೆ ಒಟ್ಟು 5 ಫ್ರಾಂಚೈಸಿಗಳ ಆಟಗಾರರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಸುಪ್ರೀಂ ಕೋರ್ಟ್ಗೆ ರಹಸ್ಯವಾಗಿ ಸಲ್ಲಿಸಲಾಗಿರುವ ಮುದ್ಗಲ್ ಸಮಿತಿ ವರದಿಯಲ್ಲಿ ಈ ಎಲ್ಲ ಅಂಶಗಳು ಅಡಕವಾಗಿ ಎಂದು ತಿಳಿದು ಬಂದಿದೆ. 'ಆದರೆ, ಉಳಿದ 3 ತಂಡಗಳು ಯಾವವು ಎಂಬುದು ಮಾತ್ರ ರಹಸ್ಯ ವಿಷಯವಾಗಿದೆ. ಕನಿಷ್ಠ ಮೂವರು ಐಪಿಎಲ್ ಅಧಿಕಾರಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ, ಎಲ್ಲ ಆರೋಪಗಳ ವಿರುದ್ಧ ಸೂಕ್ತ ದಾಖಲೆಗಳಿವೆ' ಎನ್ನಲಾಗಿದೆ.ಈ ಮೂವರು ಅಧಿಕಾರಿಗಳು ಐಪಿಎಲ್ನಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಹಾಗೂ ಹಲವಾರು ವರ್ಷಗಳಿಂದ ಐಪಿಎಲ್ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನಲಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

