ಕ್ರೀಡೆ

ಭಾರತದ ಮುಂದೆ ಕಠಿಣ ಲಕ್ಷ್ಯ

ಭಾರತದ ಮುಂದೆ ಕಠಿಣ ಲಕ್ಷ್ಯ
Published On :

ಮೀರ್ಪುರ: ಭಾರತದ ಬೌಲಿಂಗ್ ದಾಳಿಯನ್ನು ಉತ್ತಮವಾಗಿ ಎದುರಿಸುವಲ್ಲಿ ಯಶಸ್ವಿಯಾದ ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಸವಾಲಿನ ಗುರಿ ನೀಡುವಲ್ಲಿ ಸಫಲವಾಗಿದೆ.
ಶುಕ್ರವಾರ ಇಲ್ಲಿನ ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹರಿಣಗಳ ಪಡೆ ನಾಯಕ ಡುಪ್ಲೆಸಿಸ್ (58) ಹಾಗೂ ಡುಮಿನಿ (ಅಜೇಯ 45) ಅವರ ಜವಾಬ್ದಾರಿಯುತ ಬ್ಯಾಟಿಂಗ್ನಿಂದ ಭಾರತಕ್ಕೆ 173 ರನ್ಗಳ ಗುರಿ ನೀಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಕಲೆ ಹಾಕಿತು. ಈ ಪಂದ್ಯಾವಳಿಯಲ್ಲಿ ಭಾರತದ ಸ್ಪಿನ್ನರ್ಗಳು ಅತ್ಯುತ್ತಮ ಫಾರ್ಮ್ನಲ್ಲಿರುವ ಹಿನ್ನಲೆಯಲ್ಲಿ ಹರಿಣಗಳು ಯಾವ ರೀತಿ ರಣತಂತ್ರ ರೂಪಿಸಿವೆ ಎಂಬ ಪ್ರಶ್ನೆ ಮೂಡಿತ್ತು. ಅಮಿತ್ ಮಿಶ್ರಾ ಬಗ್ಗೆ ಹೆಚ್ಚಿನ ರಣತಂತ್ರ ರೂಪಿಸಿದ್ದ ಹರಿಣಗಳು, ಮಿಶ್ರಾ ವಿರುದ್ಧ ಮೇಲುಗೈ ಸಾಧಿಸಿದರು. ಆದರೆ ಅಶ್ವಿನ್ ಸ್ಪಿನ್ ಮೊಡಿಯನ್ನು ಅರಿಯುವಲ್ಲಿ ವಿಫಲರಾದರು.
ಆರಂಭಿಕ ಆಘಾತ: ಬೃಹತ್ ಮೊತ್ತವನ್ನು ಪೇರಿಸುವ ಉದ್ದೇಶದೊಂದಿಗೆ ಮೊದಲು ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರೀಕ್ಷಿತ ಮಟ್ಟದಲ್ಲಿ ಆರಂಭ ಸಿಗಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ಖಿಂಟಾನ್ ಡಿ ಕಾಕ್ (6) ಹಾಗೂ ಹಶೀಂ ಆಮ್ಲಾ (22) ಜೋಡಿ ಕೇವಲ 9 ರನ್ ದಾಖಲಿಸಿತು. ಈ ವೇಳೆ ಭುವನೇಶ್ವರ್ ಸ್ವಿಂಗ್ಗೆ ಬಲಿಯಾದ ಕಾಕ್ ಪೆವಿಲಿಯನ್ ಸೇರಿಕೊಂಡರು. ಆಮ್ಲಾ ಸಹ ಉತ್ತಮ ಆರಂಭ ಪಡೆದರಾದರೂ ಅಶ್ವಿನ್ ಸ್ಪಿನ್ ಮೋಡಿ ಅರಿಯಲು ವಿಫಲರಾದರು.  ಈ ವೇಳೆ ಭಾರತದ ಸ್ಪಿನ್ ವಿಭಾಗವನ್ನು ಸಮರ್ಥವಾಗಿ ಎದುರಿಸಿ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದ್ದು, ನಾಯಕ ಡುಪ್ಲೆಸಿಸ್ ಹಾಗೂ ಜೆ.ಪಿ ಡುಮಿನಿ.  ಡುಪ್ಲೆಸಿಸ್ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 58 ರನ್ ದಾಖಲಿಸಿದರು. ಈ ವೇಳೆ ಅಶ್ವಿನ್ ಸ್ಪಿನ್ಗೆ ಬಲಿಯಾದರು. ಡುಪ್ಲೆಸಿಸ್ ಅವರ ಈ ಜವಾಬ್ದಾರಿಯುತ ಇನಿಂಗ್ಸ್ ತಂಡ 13.5 ಓವರ್ಗಳಲ್ಲಿ 115 ರನ್ ದಾಖಲಿಸಿತ್ತು. ಹಾಗಾಗಿ ತಂಡ 180ರ ಗಡಿಗೆ ತಲುಪುವ ಲಕ್ಷಣ ಗೋಚರಿಸಿತು.
ಡುಪ್ಲೆಸಿಸ್ ಔಟಾದ ನಂತರ ಬಂದ ಡಿವಿಲಿಯರ್ಸ್, ನಿರೀಕ್ಷಿತ ಮಟ್ಟದಲ್ಲಿ ರನ್ ಕಲೆ ಹಾಕಲಿಲ್ಲ. ಕೇವಲ 10 ರನ್ ಗಳಿಸಿದ ಡಿವಿಲಿಯರ್ಸ್, ಅಶ್ವಿನ್ ಎಸೆತದಲ್ಲಿ ದುಬಾರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿದರು. ನಂತರ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತ ಡುಮಿನಿ ಅಂತಿಮದವರೆಗೂ ಅಜೇಯರಾಗುಳಿದರು. 40 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ 45 ರನ್ ದಾಖಲಿಸಿದರು. ಡುಮಿನಿ ಜತೆಗೆ ಡೇವಿಡ್ ಮಿಲ್ಲರ್ 12 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 23 ರನ್ಗಳಿಸಿ ಅಜೇಯರಾಗುಳಿದರು. ಹಾಗಾಗಿ ದಕ್ಷಿಣ ಆಫ್ರಿಕಾ ತಂಡ 170ರ ಗಡಿ ದಾಟುವ ಮೂಲಕ ಸವಾಲಿನ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು. ಇನ್ನು ಭಾರತದ ಪರ ಗಮನಾರ್ಹ ಬೌಲಿಂಗ್ ಮಾಡಿದ್ದು, ಆರ್.ಅಶ್ವಿನ್. 4 ಓವರ್ಗಳಲ್ಲಿ 22 ರನ್ ನೀಡಿದ ಅಶ್ವಿನ್ 3 ವಿಕೆಟ್ ಕಬಳಿಸಿದರು. ಉಳಿದಂತೆ ಭುವನೇಶ್ವರ್ ಕುಮಾರ್ 1 ವಿಕೆಟ್ ಕಬಳಿಸಿದರು. ಇನ್ನು ಹೆಚ್ಚು ನಿರೀಕ್ಷೆ ಮೂಡಿಸಿದ್ದ ಅಮಿತ್ ಮಿಶ್ರಾ ಜತೆಗೆ ಜಡೇಜಾ ಹಾಗೂ ಸುರೇಶ್ ರೈನಾ ದುಬಾರಿಯಾಗಿ ಪರಿಣಮಿಸಿದರು.





ಸ್ಕೋರ್ ವಿವರ


ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 4 ವಿಕೆಟ್ಗೆ 172
ಖಿಂಟಾನ್ ಡಿ ಕಾಕ್ ಸಿ ಧೋನಿ ಬಿ ಭುವನೇಶ್ವರ್     6 (4)
ಹಶೀಂ ಆಮ್ಲಾ ಬಿ ಅಶ್ವಿನ್     22 (16)
ಡುಪ್ಲೆಸಿಸ್ ಬಿ ಅಶ್ವಿನ್     58 (41)
ಡುಮಿನಿ ಅಜೇಯ     45 (40)
ಡಿವಿಲಿಯರ್ಸ್ ಸಿ ರೋಹಿತ್ ಬಿ ಅಶ್ವಿನ್     10 (8)
ಡೇವಿಡ್ ಮಿಲ್ಲರ್ ಅಜೇಯ     23 (12)
ಇತರೆ: (ಬೈ1, ಎಲ್ಬಿ3, ವೈಡ್3, ನೊಬಾಲ್1) ಒಟ್ಟು 8
ವಿಕೆಟ್ ಪತನ:  1-9, 2-44, 3-115, 4-129.



ಬೌಲಿಂಗ್ ವಿವರ: ಭುವನೇಶ್ವರ್ ಕುಮಾರ್ 4-0-33-1, ಮೋಹಿತ್ ಶರ್ಮಾ 3-0-34-0, ಆರ್.ಅಶ್ವಿನ್ 4-0-22-3, ರವಿಂದ್ರ ಜಡೇಜಾ 2-0-8-0, ಸುರೇಶ್ ರೈನಾ 4-0-35-0, ಅಮಿತ್ ಮಿಶ್ರಾ 3-0-36-0.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.