ಪ್ರಶಸ್ತಿ ಸುತ್ತು ತಲುಪಿದ ಇಂಗ್ಲೆಂಡ್ ವನಿತೆಯರು
ಮೀರ್ಪುರ: ಹಿರಿಯ ಆಟಗಾರ್ತಿ ಚಾರ್ಲೊಟೆ ಎಡ್ವರ್ಡ್ಸ್ ಮತ್ತು ಸಾರಾ ಟೇಲರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ವನಿತೆಯರ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್ಗೆ ಪ್ರವೇಶಿಸಿದೆ.
ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ಗಳ ಸುಲಭ ಗೆಲವು ದಾಖಲಿಸಿದ ಆಂಗ್ಲ ವನಿತೆಯರು, ನಿರಾಯಾಸವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಟಾಸ್ ಗೆದ್ದ ಆಂಗ್ಲರು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು.
ಹಾಗಾಗಿ ಮೊದಲು ಬ್ಯಾಟಿಂಗ್ ಮಾಡಲು ಇಳಿದ ದಕ್ಷಿಣ ಆಫ್ರಿಕಾ ತಂಡ 19.5 ಓವರ್ಗಳಲ್ಲಿ 101 ರನ್ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 16.5 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 102 ರನ್ ದಾಖಲಿಸಿ ಗೆಲವಿನ ನಗೆ ಬೀರಿತು.
ದಕ್ಷಿಣ ಆಫ್ರಿಕಾ ತಂಡದ ಪರ ಡು ಪ್ರೆಜ್ 23 ಹಾಗೂ ಕ್ಲೊ ಟ್ರಿಯಾನ್ 40 ರನ್ ದಾಖಲಿಸಿದರು. ಉಳಿದ ಯಾವುದೇ ಆಟಗಾರ್ತಿಯರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದೇ, ಎರಡಂಕಿ ರನ್ ದಾಖಲಿಸಲಿಲ್ಲ. ಹಾಗಾಗಿ ಹರಿಣಗಳ ಪಡೆ ಅಲ್ಪ ಮೊತ್ತಕ್ಕೆ ಕುಸಿಯಿತು. ಇಂಗ್ಲೆಂಡ್ ತಂಡದ ಪರ ಸಾರಾ ಟೇಲರ್ ಅಜೇಯ 44 ಹಾಗೂ ಎಡ್ವರ್ಡ್ಸ್ 36 ರನ್ ದಾಖಲಿಸಿ ತಂಡವನ್ನು ಗೆಲವಿನ ದಡ ಸೇರಿಸಿದರು.
ಇಂಗ್ಲೆಂಡ್ ಪರ ಅನ್ಯ ಶ್ರುಬ್ಸೋಲೆ ಹಾಗೂ ರೆಬೆಕ್ಕಾ ಗ್ರುಂಡೈ ತಲಾ 2 ವಿಕೆಟ್ ಪಡೆದರು. ಆದರೆ ಅನ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ದ.ಆಫ್ರಿಕಾ 19.5 ಓವರ್ಗಳಲ್ಲಿ 101 (ಕ್ಲೊ ಟ್ರಿಯಾನ್ 40, ಡು ಪ್ರೆಜ್ 23, ಅನ್ಯ 12ಕ್ಕೆ2). ಇಂಗ್ಲೆಂಡ್ 16.5 ಓವರ್ಗಳಲ್ಲಿ 1 ವಿಕೆಟ್ಗೆ 102 (ಸಾರಾ ಟೇಲರ್ ಅಜೇಯ 44, ಎಡ್ವರ್ಡ್ಸ್ 36, ಸುನೆ ಲೂಸ್ 15ಕ್ಕೆ1).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

