ವಿಶ್ವ ತಂಡಕ್ಕೆ ಧೋನಿ ನಾಯಕ

ದುಬೈ: ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎದುರು ಸೋಲನುಭವಿಸಿದರೂ ನಾಯಕ ಮಹೇಂದ್ರ ಸಿಂಗ್ ಧೋನಿ ಐಸಿಸಿ ವಿಶ್ವ ಟಿ-20 ತಂಡದಲ್ಲೂ ನೇತೃತ್ವ ವಹಿಸಲಿದ್ದಾರೆ.
ಐಸಿಸಿ ಸೋಮವಾರ 2014ರ ವಿಶ್ವ ಟಿ-20 ತಂಡ ಪ್ರಕಟಿಸಿದ್ದು, ಧೋನಿ ನಾಯಕರಾಗಿದ್ದಾರೆ. ಧೋನಿ ಸೇರಿದಂತೆ ಭಾರತದ ಒಟ್ಟು ನಾಲ್ವರು ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲೇ ಅತ್ಯಧಿಕ ರನ್ಗಳಿಸಿದ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಉಳಿದ ಮೂವರು ಆಟಗಾರರಾಗಿದ್ದಾರೆ.
ಕೊಹ್ಲಿ 4 ಅರ್ಧಶತಕ ಒಳಗೊಂಡಂತೆ ಒಟ್ಟು 319 ರನ್ ಸಂಪಾದಿಸಿದ್ದಾರೆ. ಅದರಲ್ಲೂ ಸೆಮಿಫೈನಲ್ (72) ಮತ್ತು ಫೈನಲ್ (77) ಪಂದ್ಯಗಳಲ್ಲಿ ಅವರು ಸ್ಫೋಟಕ ಅರ್ಧಶತಕಗಳನ್ನು ಸಿಡಿಸಿದ್ದರು.
ಉಳಿದಂತೆ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ನ ತಲಾ ಇಬ್ಬರು ಆಟಗಾರರು ಹಾಗೂ ಆಸ್ಟ್ರೇಲಿಯಾ, ನೆದರ್ಲ್ಯಾಂಡ್ಸ್ ಮತ್ತು ಚಾಂಪಿಯನ್ ಶ್ರೀಲಂಕಾ ತಂಡದ ತಲಾ ಒಬ್ಬ ಆಟಗಾರ ಈ ವಿಶ್ವಕಪ್ ತಂಡದಲ್ಲಿ ಸ್ಥಾನ ಹೊಂದಿದ್ದಾರೆ.
ಟೂರ್ನಿಯಲ್ಲಿ ಆಟಗಾರರ ಪ್ರದರ್ಶನ ಗಮನಿಸಿ ಒಟ್ಟು 11 ಆಟಗಾರರನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸವಾಗಿತ್ತು ಎಂದು ಆಯ್ಕೆ ಸಮಿತಿಯ ಅಧ್ಯಕ್ಷರೂ ಆದ ಐಸಿಸಿ ಮ್ಯಾಚ್ ರೆಫರಿಗಳ ಎಮಿರೇಟ್ಸ್ ಎಲೈಟ್ ಸಮಿತಿಯ ಸದಸ್ಯ ಡೇವಿಡ್ ಬೂನ್ ಹೇಳಿದ್ದಾರೆ.
ಐಸಿಸಿ ವಿಶ್ವ ಟಿ-20 ತಂಡ ಹೀಗಿದೆ (ಬ್ಯಾಟಿಂಗ್ ಕ್ರಮಾಂಕದ ಅನುಗುಣವಾಗಿ): ರೋಹಿತ್ ಶರ್ಮಾ (ಭಾರತ), ಸ್ಟೀಫನ್ ಮೈಬರ್ಗ್ (ನೆದರ್ಲ್ಯಾಂಡ್ಸ್), ವಿರಾಟ್ ಕೊಹ್ಲಿ, ಜೀನ್ ಪಾಲ್ ಡುಮಿನಿ (ದಕ್ಷಿಣ ಆಫ್ರಿಕಾ), ಗ್ಲೆನ್ ಮ್ಯಾಕ್ಸ್ವೆಲ್ (ಆಸ್ಟ್ರೇಲಿಯಾ), ಮಹೇಂದ್ರ ಸಿಂಗ್ ಧೋನಿ (ಭಾರತ-ನಾಯಕ), ಡಾರೆನ್ ಸಾಮಿ (ವೆಸ್ಟ್ ಇಂಡೀಸ್), ರವಿಚಂದ್ರನ್ ಅಶ್ವಿನ್ (ಭಾರತ), ಡೇಲ್ ಸ್ಟೇಯ್ನ್ (ದಕ್ಷಿಣ ಆಫ್ರಿಕಾ), ಸ್ಯಾಮುಯೆಲ್ ಬದ್ರಿ (ವೆಸ್ಟ್ ಇಂಡೀಸ್), ಲಸಿತ್ ಮಾಲಿಂಗ (ಶ್ರೀಲಂಕಾ). 12ನೇ ಆಟಗಾರ-ಕ್ರಿಷ್ಮಾರ್ ಸ್ಟಾಂಟೋಕಿ (ವೆಸ್ಟ್ ಇಂಡೀಸ್).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


