ಏಷ್ಯನ್ ಕಾಂಟಿನೆಂಟಲ್ ಚೆಸ್ ಚಾಂಪಿಯನ್‌ಶಿಪ್: ಅಧಿಬನ್‌ಗೆ ಬೆಳ್ಳಿ ಪದಕ
ಶಾರ್ಜಾ: ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಬಿ. ಅಧಿಬನ್ ಏಷ್ಯನ್ ಕಾಂಟಿನೆಂಟಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಆ ಮೂಲಕ ಅವರು ಮುಂದಿನ ವರ್ಷ ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆಯಲಿರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ಗೂ ಅರ್ಹತೆ ಪಡೆದುಕೊಂಡಿದ್ದಾರೆ.
ಶನಿವಾರ ನಡೆದ 9ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಅಧಿಬನ್ ಅವರು ಚೀನಾದ ಯೂ ಯಾಂಗೈ ವಿರುದ್ಧ ಡ್ರಾ ಸಾಧಿಸಿದರು. ಆ ಮೂಲಕ ಒಟ್ಟು 6.5 ಅಂಕಗಳ ಗಳಿಕೆಯೊಂದಿಗೆ ಎರಡನೇ ಸ್ಥಾನದ ಗೌರವ ಪಡೆದರು.
ಈ ಮಧ್ಯೆ ವಿಶ್ವ ಜೂನಿಯರ್ ಚಾಂಪಿಯನ್ ಯೂ ಯಾಂಗೈ ಚಿನ್ನದ ಪದಕ ಗೆದ್ದುಕೊಂಡರೆ, ಚೀನಾದ ನೀ ಹುವಾ ಮೂರನೇ ಸ್ಥಾನಗಳಿಸಿ ಕಂಚಿನ ಪದಕಕ್ಕೆ ಅರ್ಹರಾದರು. ವಿಶ್ವದ ಮಾಜಿ ಚಾಂಪಿಯನ್ ರುಸ್ತಂ ಕಾಸಿಮ್‌ಝನೋವಾ ನಾಲ್ಕನೇ ಸ್ಥಾನ ಪಡೆದರು. ಭಾರತದ ಇತರೆ ಆಟಗಾರರ ಪೈಕಿ ಎಸ್.ಪಿ. ಸೇತುರಾಮನ್ ಮತ್ತು ಪರಿಮ್‌ರಾಜನ್ ನೇಗಿ ಕ್ರಮವಾಗಿ 9 ಮತ್ತು 10ನೇ ಸ್ಥಾನಗಳಿಗೆ ತೃಪ್ತಿ ಹೊಂದಿದರು. ಮಹಿಳೆಯರ ವಿಭಾಗದಲ್ಲಿ ಇಂಡೊನೇಶಿಯಾದ ಐರಿನ್ ಖರೀಷ್ಮಾ ಸುಕಂದರ್ ಚಿನ್ನದ ಪದಕಕ್ಕೆ ಭಾಜನರಾದರು. ಮಾಜಿ ಚಾಂಪಿಯನ್ ಇರಾನ್‌ನ ಅಟೊಸಾ ಪೌರಕಾಶಿಯನ್ ಬೆಳ್ಳಿ ಮತ್ತು ಚೀನಾದ ಟಾನ್ ಝೋಂಗೈ ಕಂಚಿನ ಪದಕ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

