ಸ್ಕ್ವಾಷ್ ಬೆಳವಣಿಗೆಗೆ ನನ್ನ ಕೊಡುಗೆ ನೆರವಾಗಿಲ್ಲ
ನವದೆಹಲಿ: ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ದೀರ್ಘಾವಧಿಯಿಂದ ಭಾರತದ ತ್ರಿವರ್ಣಧ್ವಜ ಹಿಡಿದು ಸಾಗುತ್ತಿರುವ ದೇಶದ ಅಗ್ರಮಾನ್ಯ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ, ತಮ್ಮ ಕೊಡುಗೆ ದೇಶದಲ್ಲಿ ಈ ಆಟದ ಅಭಿವೃದ್ಧಿಗೆ ನೆರವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಇದು ನಿಜಕ್ಕೂ ದುಃಖದ ಸಂಗತಿ. ಭವಿಷ್ಯದಲ್ಲಿ ಯಾರೊಬ್ಬ ಆಟಗಾರರೂ ಬರುವುದು ನನಗೆ ಕಾಣಿಸುತ್ತಿಲ್ಲ. ಈಗಿರುವ ಯುವ ಆಟಗಾರರು ವಿದೇಶದ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ಉದ್ದೇಶಕ್ಕೆ ಮಾತ್ರ ಸ್ಕ್ವಾಷ್ ಆಡುತ್ತಿದ್ದಾರೆ ಎಂದು ಚಿನ್ನಪ್ಪ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ವಾರ ಜೀವನದ ಒಂಬತ್ತನೇ ಪ್ರಶಸ್ತಿ ಗೆದ್ದುಕೊಂಡಿರುವ ಭಾರತದ ಸ್ಕ್ವಾಷ್ ಬೆಡಗಿ ಜೋಶ್ನಾ, ಅವೆರಿಕದ ರಿಚ್ಮಂಡ್ನಿಂದ ತವರಿಗೆ ವಾಪಸಾದ ನಂತರ ನೀಡಿದ ಸಂದರ್ಶನದಲ್ಲಿ ಸ್ಕ್ವಾಷ್ ಅಭಿವೃದ್ಧಿಗೊಳ್ಳದಿರುವುದಕ್ಕೆ ಭಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವದರ್ಜೆಯ ಟೂರ್ನಿಗಳನ್ನು ಸಂಘಟಿಸಿದಾಗ ಮಾತ್ರ ಕ್ರೀಡೆಯ ಜನಪ್ರಿಯತೆ ಹೆಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

