ಕ್ರೀಡೆ

ಅಭಿಮಾನಿಗಳಿಗೆ ಆರ್‌ಸಿಬಿ ಉಚಿತ ಇಂಟರ್ನೆಟ್

Published On :

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುವ ತನ್ನ ಪಂದ್ಯಗಳನ್ನು ನೋಡಲು ಆಗಮಿಸುವ ಅಭಿಮಾನಿಗಳಿಗೊಂದು ಸಂತಸದ ಸುದ್ದಿ ನೀಡಿದೆ. ಪಂದ್ಯವನ್ನು ವೀಕ್ಷಿಸಲು ಆಗಮಿಸುವ ಅಭಿಮಾನಿಗಳು ಕ್ರೀಡಾಂಗಣದಲ್ಲಿ ವೈ-ಫೈ ಉಚಿತ ಇಂಟರ್‌ನೆಟ್ ಸೌಲಭ್ಯವನ್ನು ನೀಡಿದೆ.
ಇದು ಈ ವರ್ಷ ಬೆಂಗಳೂರಿನಲ್ಲಿ ನಡೆಯುವ ಎಲ್ಲ ಪಂದ್ಯಗಳಿಗೂ ಆಗಮಿಸುವ ಅಭಿಮಾನಿಗಳಿಗೆ ಆರ್‌ಸಿಬಿ ನೀಡಿದ ಉಚಿತ ಕೊಡುಗೆಯಾಗಿದೆ. ಈ ಕುರಿತು ಆರ್‌ಸಿಬಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದರೊಂದಿಗೆ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಉಚತ ವೈ-ಫೈ ಸಂಪರ್ಕ ಒದಗಿಸಿದ ವಿಶ್ವದ ಮೊದಲ ಕ್ರಿಕೆಟ್ ತಂಡ ಮತ್ತು ಐಪಿಎಲ್‌ನ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 'ಪಂದ್ಯ ನೋಡಲು ಕ್ರೀಡಾಂಗಣಕ್ಕೆ 34,000 ಅಭಿಮಾನಿಗಳು ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಅವರೆಲ್ಲರೂ ಕ್ರೀಡಾಂಗಣದ ಯಾವುದೇ ಮೂಲೆಯಲ್ಲಿ ಕುಳಿತು ಇಂಟರ್‌ನೆಟ್ ಸೇವೆಯನ್ನು ಪಡೆಯಬಹುದಾಗಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕ್ರೀಡಾಂಗಣಕ್ಕೆ ಆಗಮಿಸುವ ಅಭಿಮಾನಿಗಳು ತಮ್ಮ ಹೆಸರು ಅಥವಾ ಮೊಬೈಲ್ ನಂಬರ್ ನೀಡುವ ಮೂಲಕ ಒಂದು ಸಮಯದ ಪಾಸ್‌ವರ್ಡ್ ಪಡೆಯಬಹುದಾಗಿದೆ. ನೋಂದಾಯಿತ ನಂಬರ್‌ಗಳಿಗೆ ಮತ್ತು ಅಭಿಮಾನಿಗಳು ಮಾತ್ರ ಪಂದ್ಯದ ಸಂದರ್ಭ ಇಂಟರ್‌ನೆಟ್ ಉಪಯೋಗಿಸಬಹುದಾಗಿದೆ.
'ಈ ಸೌಲಭ್ಯವನ್ನು ಒದಗಿಸಿರುವ ಆರ್‌ಸಿಬಿ, 'ಅಭಿಮಾನಿಗಳಿಗೇ ಮೊದಲ ಆದ್ಯತೆ' ಎಂದು ನಮ್ಮ ತಂಡ ನಂಬುತ್ತದೆ. ಅಲ್ಲದೆ, ಆರ್‌ಸಿಬಿ ಸವ್ಯಾ ಸೇರಿದಂತೆ, ಜನರೊಂದಿಗೆ ಸಕ್ರಿಯವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುವುದಾಗಿ' ಸಹ ಅದು ತಿಳಿಸಿದೆ. ಪಂದ್ಯವನ್ನು ನೋಡುವಾಗ ಚಿನ್ನಸ್ವಾಮಿಯಲ್ಲಿ ನೆರೆಯುವ ಅಭಿಮಾನಿಗಳು ತಮ್ಮ ಅನುಭವವನ್ನು ವಿಶ್ವದಲ್ಲಿ ಇತರರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿ ಎಂಬುದು ತಂಡದ ಮುಖ್ಯ ಉದ್ದೇಶವಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.